ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿದ್ಯುತ್‌ ಸಂಬಂಧಿತ ದೂರುಗಳಿಗೆ 1912 ಅಥವಾ ವಾಟ್ಸ್‌ಆ್ಯಪ್‌ ಸಹಾಯವಾಣಿ ಬಳಸಿ: ಬೆಸ್ಕಾಂ

Bescom Helpline: ವಿದ್ಯುತ್‌ ಪೂರೈಕೆ ಸೇರಿದಂತೆ ವಿದ್ಯುತ್‌ ಸಂಬಂಧಿತ ದೂರುಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಿಗೆ ಸಂಬಂಧಿಸಿದಂತೆ 11 ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿ ಸಂಖ್ಯೆಗಳು ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಸ್ಕಾಂ ತಿಳಿಸಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು, ಮಾ.03: ವಿದ್ಯುತ್‌ ಪೂರೈಕೆ ಸೇರಿದಂತೆ ವಿದ್ಯುತ್‌ ಸಂಬಂಧಿತ ದೂರುಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಿಗೆ ಸಂಬಂಧಿಸಿದಂತೆ 11 ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿ ಸಂಖ್ಯೆಗಳು (BESCOM Helpline) ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬೆಸ್ಕಾಂ (BESCOM) ತಿಳಿಸಿದೆ.

ಬೆಸ್ಕಾಂನ 1912 ಸಹಾಯವಾಣಿ ಸಂಖ್ಯೆಯು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದೆ. ಕರೆಗಳ ಒತ್ತಡದಿಂದಾಗಿ ಕೆಲವೊಮ್ಮೆ 1912 ಸಂಪರ್ಕ ಲಭ್ಯವಾಗದಿದ್ದಲ್ಲಿ ಗ್ರಾಹಕರು ಬೆಸ್ಕಾಂನ 11 ವಾಟ್ಸ್‌ ಆಪ್‌ ಸಹಾಯವಾಣಿ ಸಂಖ್ಯೆಗಳಿಗೆ ಸಂದೇಶ ಕಳುಹಿಸುವ ಮೂಲಕ ವಿದ್ಯುತ್‌ ಸಂಬಂಧಿತ ದೂರುಗಳಿಗೆ ಪರಿಹಾರ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ʼವಾಟ್ಸ್‌ ಆ್ಯಪ್‌ʼ ಸಹಾಯವಾಣಿ ಸಂಖ್ಯೆಗಳ ವಿವರ

ಬೆಂಗಳೂರು ನಗರ ಜಿಲ್ಲೆ: ದಕ್ಷಿಣ ವೃತ್ತ: 8277884011, ಪಶ್ಚಿಮ ವೃತ್ತ: 8277884012, ಪೂರ್ವ ವೃತ್ತ: 8277884013, ಉತ್ತರ ವೃತ್ತ :8277884014,

ಕೋಲಾರ ಜಿಲ್ಲೆ: 8277884015, ಚಿಕ್ಕಬಳ್ಳಾಪುರ ಜಿಲ್ಲೆ: 8277884016, ಬೆಂಗಳೂರು ಗ್ರಾಮಾಂತರ ಜಿಲ್ಲೆ: 8277884017, ರಾಮನಗರ ಜಿಲ್ಲೆ: 8277884018, ತುಮಕೂರು ಜಿಲ್ಲೆ: 8277884019, ಚಿತ್ರದರ್ಗ ಜಿಲ್ಲೆ: 8277884020 ಮತ್ತು ದಾವಣಗೆರೆ ಜಿಲ್ಲೆ: 8277884021.

BESCOM Recruitment: ಬೆಸ್ಕಾಂನಲ್ಲಿದೆ ಉದ್ಯೋಗಾವಕಾಶ; ಬಿಇ, ಡಿಪ್ಲೊಮಾ, ಪದವೀಧರರು ಅಪ್ಲೈ ಮಾಡಿ

ಗ್ರಾಹಕರು ವಾಟ್ಸ್‌ ಆಪ್‌ ಸಹಾಯವಾಣಿ ಸಂಖ್ಯೆಗಳಿಗೆ ಸಂದೇಶದ ಜೊತೆಗೆ ವಿದ್ಯುತ್‌ ಸಂಬಂಧಿತ ದೂರಗಳ ಪೋಟೋ ಹಾಗೂ ವಿಡಿಯೋಗಳನ್ನು ಸಹ ಕಳುಹಿಸಬಹುದಾಗಿದೆ. ಗ್ರಾಹಕರು ತಮ್ಮ ಪ್ರದೇಶದ ವ್ಯಾಪ್ತಿಗೆ ಸಂಬಂಧಿತ ವಾಟ್ಸ್‌ಪ್‌ ಸಹಾಯವಾಣಿ ಸಂಖ್ಯೆಗಳಿಗೆ ದೂರುಗಳನ್ನು ನೀಡಿದರೆ ಅವುಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.