ಕಾರವಾರ, ಫೆ.21: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಜ್ಯೋತಿಷಿ ಕಮಲಾಕರ ಭಟ್ ಗುರೂಜಿಗೆ (Kamalakar Bhat Case) ಮತ್ತೊಂದು ಸಂಕಷ್ಟ ಎದುರಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದ್ದು, ಇದರಿಂದ ಸದ್ಯಕ್ಕೆ ಜೈಲಿನಿಂದ ಹೊರಬರುವುದು ಅಸಾಧ್ಯವಾಗಿದೆ.
ವಸಂತ್ ನಾಯ್ಕ ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್, ಸುಚಿತ್ರಾ ಸೇರಿ ಐವರು ಜೈಲು ಸೇರಿದ್ದರು. ಈ ನಡುವೆ ಜ್ಯೋತಿಷಿ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೈ ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಶಿವಮೊಗ್ಗ ಜಿಲ್ಲೆಯ ತುಂಗಾನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಇನ್ನು ಕಳೆದ ಕೆಲ ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಕಮಲಾಕರ ಭಟ್, ಕೊಲೆಯ ವಿಚಾರವಾಗಿ ಪೊಲೀಸ್ ಹತ್ತಾರು ಪ್ರಶ್ನೆಗಳನ್ನ ಕೇಳಿದ್ದಾರೆ. ಈ ವೇಳೆ ಕೊಲೆಯಾದ ಸ್ಥಳದಲ್ಲಿ ತಾನು ಇರಲಿಲ್ಲ, ಕೊಲೆ ಆದ ಸಂದರ್ಭದಲ್ಲಿ ನಾನು ಬೇರೆ ಕಡೆ ಇದ್ದೆ. ಬೇಕಾದರೆ ನನ್ನ ಮೊಬೈಲ್ ಲೊಕೇಶನ್ ಚೆಕ್ ಮಾಡಿ ಎಂದಿದ್ದರು.
ಲೊಕೇಶನ್ ಚೆಕ್ ಮಾಡಿದಾಗ ಕೊಲೆಯಾದ ಸಂದರ್ಭದಲ್ಲಿ ಅಲ್ಲಿ ಇರಲಿಲ್ಲ. ಸಿದ್ದಾಪುರದಲ್ಲಿ ಇದ್ದರು, ಆದರೆ ಅವರಗುಪ್ಪಗೆ ಹೋಗಿರಲಿಲ್ಲ. ಪೊಲೀಸ್ ತನಿಖೆ ವೇಳೆ ಅವರಗುಪ್ಪಗೆ ಹೊಗದೆ ಇರುವುದು ಕಂಡುಬಂದಿತ್ತು. ಇದರಿಂದ ಇನ್ನೇನು ಜೈಲಿನಿಂದ ಹೊರ ಬರುತ್ತೇನೆ ಎಂಬ ಆಸೆಯಲ್ಲಿದ್ದ ಕಮಲಾಕರ ಭಟ್ಗೆ, ಇದೀಗ ಈ ಪೋಕ್ಸೋ ಕೇಸ್ ದಾಖಲಾಗಿರುವುದು ಇನ್ನಷ್ಟು ಸಂಕಷ್ಟ ತಂದೊಡ್ಡಿದೆ.
9 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ಆರೆಸ್ಟ್
ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಚಾಕೊಲೇಟ್ ನೀಡುವುದಾಗಿ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಂಗಳೂರಿನ (Bengaluru crime news) ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಷ್ಟೆ ಅಲ್ಲದೇ ಈತನ ವಿರುದ್ಧ 9 ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ಪೊಲೀಸರು ಬಂದಿಸಿದ್ದು, ಆತನ ಮೇಲೆ ಪೋಕ್ಸೋ ಕೇಸ್ (pocso case) ದಾಖಲಿಸಲಾಗಿದೆ.
ಎಟಿಎಂಗಳಿಗೆ ತುಂಬಬೇಕಿದ್ದ 3.40 ಕೋಟಿ ರೂ. ವಂಚನೆ; ಸಿಎಂಎಸ್ ಕಂಪನಿಯ ಇಬ್ಬರ ವಿರುದ್ಧ ಎಫ್‌ಐಆರ್
ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ ಬಂಧಿತ ಆರೋಪಿ. ಶಾಲಾ ಆವರಣ ಮತ್ತು ಶೌಚಾಲಯದಲ್ಲಿ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರಂಭದಲ್ಲಿ ಒಬ್ಬ ಬಾಲಕಿ ಆರೋಪಿಯ ನೀಚತನದ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ತದನಂತರ 9 ವಿದ್ಯಾರ್ಥಿಗಳ ಜತೆಗೆ ಈತ ಅಸಭ್ಯವಾಗಿ ವರ್ತಿಸಿರುವುದು ಗೊತ್ತಾಗಿದೆ. ಆರೋಪಿ ಕೃತ್ಯದ ಬಗ್ಗೆ ಪೋಷಕರ ಬಳಿ ಮಕ್ಕಳು ಎಲ್ಲ ವಿಚಾರ ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ಆರೋಪಿ ಕೃಷ್ಣಮೂರ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ.