ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Uttara Kannada News: ಭಟ್ಕಳದಲ್ಲಿ ಜಾನುವಾರು ಮೂಳೆಗಳ ರಾಶಿ ಪತ್ತೆ; ಗೋವುಗಳ ಮಾರಣ ಹೋಮದ ಶಂಕೆ: ಭುಗಿಲೆದ್ದ ಆಕ್ರೋಶ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಗುಡ್ಡದಲ್ಲಿ ಜಾನುವಾರುಗಳ ರಾಶಿ ರಾಶಿ ಮೂಳೆ ಪತ್ತೆಯಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಟ್ಕಳದ ಮುಗ್ದಂ ಕಾಲೋನಿ ಬಳಿಯ ಅರಣ್ಯ ಇಲಾಖೆಗೆ ಸೇರಿದ ಸ್ಥಳದಲ್ಲಿ ಮೂಳೆಗಳು ಕಂಡು ಬಂದಿದ್ದು, 2-3 ದಿನಗಳ ಹಿಂದೆಯೇ ಗೋಹತ್ಯೆ ನಡೆದ ಕುರುಹು ಎಂಬಂತೆ ರಕ್ತದ ಕಲೆಯೂ ಇದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಗುಡ್ಡದಲ್ಲಿ ಜಾನುವಾರುಗಳ ರಾಶಿ ರಾಶಿ ಮೂಳೆ ಪತ್ತೆಯಾಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ (Uttara Kannada News). ಭಟ್ಕಳದ ಮುಗ್ದಂ ಕಾಲೋನಿ ಬಳಿಯ ಅರಣ್ಯ ಇಲಾಖೆಗೆ ಸೇರಿದ ಸ್ಥಳದಲ್ಲಿ ಮೂಳೆಗಳು ಕಂಡು ಬಂದಿದ್ದು, 2-3 ದಿನಗಳ ಹಿಂದೆಯೇ ಗೋಹತ್ಯೆ ನಡೆದ ಕುರುಹು ಎಂಬಂತೆ ರಕ್ತದ ಕಲೆಯೂ ಇದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಹೀಗಾಗಿ ಭಟ್ಕಳದಲ್ಲಿ ಸೈಲೆಂಟಾಗಿ ದನಗಳ ಮಾರಣಹೋಮ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.

ಅರಣ್ಯ ಇಲಾಖೆಗೆ ಸೇರಿದ ಸ್ಥಳದಲ್ಲಿ ದನಗಳ ಮೂಳೆಗಳ ರಾಶಿ ಪತ್ತೆಯಾಗಿರುವುದಕ್ಕೆ ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದು, ʼʼದನಗಳ್ಳರನ್ನು ಬಂಧಿಸಿದ್ದರೂ ಅಕ್ರಮ ಗೋಸಾಗಣೆ ಮುಂದುವರಿದಿದೆ. ಕೆಲವು ಪೊಲೀಸರು ಕೂಡ ಜಾನುವಾರು ಸಾಗಣೆಯಲ್ಲಿ ಶಾಮೀಲಾಗಿರುವ ಶಂಕೆ ಇದೆʼʼ ಎಂದಿದ್ದಾರೆ. ಹಿಂದೂ ಸಂಘಟನೆಗಳ ಮುಖಂಡರು ಸ್ಥಳಕ್ಕೆ ತೆರಳುವ ಮೊದಲೇ ಮೂಳೆಗಳನ್ನು ಸಾಗಿಸಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಸಾಕಷ್ಟು ಮೂಳೆಗಳನ್ನು ಪುರಸಭೆ ಸಿಬ್ಬಂದಿ ವೇಸ್ಟೇಜ್ ಟ್ಯಾಂಕ್​ಗೆ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ: Bengaluru News: ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ ಖಾಸಗಿ ಬಸ್‌ ಚಾಲಕ ಆರೀಫ್‌ಗೆ ಬಿತ್ತು ಗೂಸಾ; ಬಟ್ಟೆ ಬಿಚ್ಚಿಸಿ ಹಲ್ಲೆ

ಭುಗಿಲೆದ್ದ ಆಕ್ರೋಶ

ರಾಶಿ ರಾಶಿ ಜಾನುವಾರು ಮೂಳೆ ಪತ್ತೆಯಾದ ಹಿನ್ನೆಲೆಯಲ್ಲಿ ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼಈ ಹಿಂದೆ ದನ ಕೊಂದವರನ್ನು ಕಂಡಲ್ಲಿ ಗುಂಡಿಕ್ಕುವುದಾಗಿ ಹೇಳಿದ್ದ ಸಚಿವ ಮಂಕಾಳು ವೈದ್ಯ ಕ್ಷೇತ್ರದಲ್ಲೇ ರಾಶಿ ಮೂಳೆ ಪತ್ತೆಯಾಗಿದೆʼʼ ಎಂದು ಹಿಂದೂ ಸಂಘಟನೆಯ ನಾಯಕರು ತಿಳಿಸಿದ್ದಾರೆ. ಗುಡ್ಡದ ಮೇಲೆ ಅಪಾರ ಪ್ರಮಾಣದ ಮೂಳೆ ಪತ್ತೆಯಾದರೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಪೊಲೀಸರು ಮೌನವಾಗಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೂಳೆಗಳು ಪತ್ತೆಯಾದ ಸ್ಥಳದಲ್ಲಿ ಜೆಸಿಬಿ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ನೂರಾರು ಗೋವುಗಳ ಮೂಳೆ ಇರುವ ವಿಡಿಯೊ ವೈರಲ್ ಆಗುತ್ತಿದ್ದಂತೆ ಅಲರ್ಟ್ ಆದ ಉತ್ತರ ಕನ್ನಡ ಜಿಲ್ಲೆಯ ಪೊಲೀಸರು ಸ್ಥಳವನ್ನ ಜೆಸಿಬಿ ಮೂಲಕ ಸ್ವಚ್ಛಗೊಳಿಸಲು ಮುಂದಾಗಿದೆ. ಜನರಿಗೆ ಮತ್ತೆ ಅನುಮಾನ ಬಾರದಿರಲೆಂದು ಸ್ವಚ್ಛ ಮಾಡುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಈಗ ವೈರಲ್ ಆಗಿರುವ ವಿಡಿಯೊ 2 ವರ್ಷಗಳ ಹಿಂದೆ ಬಕ್ರಿದ್ ಸಂದರ್ಭದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.