Bengaluru News: ಬಾಲಕಿ ಜತೆ ಅನುಚಿತವಾಗಿ ವರ್ತಿಸಿದ ಖಾಸಗಿ ಬಸ್ ಚಾಲಕ ಆರೀಫ್‌ಗೆ ಬಿತ್ತು ಗೂಸಾ; ಬಟ್ಟೆ ಬಿಚ್ಚಿಸಿ ಹಲ್ಲೆ
ಹೈದರಬಾದ್‌ನಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ಬರುತ್ತಿದ್ದ ಅಪ್ರಾಪ್ತೆ ಜತೆ ಚಾಲಕ ಆರೀಫ್ ಅನುಚಿತವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ಮನೆಯವರು ಆರೀಫ್‌ನ ಬಟ್ಟೆ ಬಿಚ್ಚಿಸಿ ಸಾರ್ವಜನಿಕವಾಗಿ ಥಳಿಸಿ ತಕ್ಕ ಪಾಠ ಕಲಿಸಿದ್ದಾರೆ. ಸದ್ಯ ಈ ಘಟನೆ ವ್ಯಾಪಕ ಆಕ್ರೋಸಕ್ಕೆ ಕಾರಣವಾಗಿದೆ.

ಆರೀಫ್ -

ಬೆಂಗಳೂರು: ಖಾಸಗಿ ಬಸ್‌ನಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಅಪ್ರಾಪ್ತೆ ಜತೆ ಅನುಚಿತವಾಗಿ ವರ್ತಿಸಿದ ಚಾಲಕನಿಗೆ ಸ್ಥಳೀಯರು, ಆಕೆಯ ಕುಟುಂಬಸ್ಥರು ಸರಿಯಾದ ಪಾಠ ಕಲಿಸಿದ್ದಾರೆ. ಆತನ ಬಟ್ಟೆ ಬಿಚ್ಚಿಸಿ ಗೂಸಾ ಕೊಟ್ಟಿದ್ದಾರೆ. ಹೀಗೆ ಹೊಡೆತ ತಿಂದ ಬಸ್ ಚಾಲಕನ್ನು ಆರೀಫ್ ಎಂದು ಗುರುತಿಸಲಾಗಿದೆ (Bengaluru News). ಹೈದರಾಬಾದ್‌ನಿಂದ ಬೆಂಗಳೂರು ಆಗಮಿಸಿದ ಬಸ್ ಅನ್ನು ಚಾಲುಕ್ಯ ಸರ್ಕಲ್ ಬಳಿ ತಡೆದು ನಿಲ್ಲಿಸಿ ಬಾಲಕಿ ಮನೆಯವರು ಆರೀಫ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಬಾಲಕಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾಗ ಹೆಚ್ಚುವರಿ ಚಾಲಕ ಆರೀಫ್ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಬಾಲಕಿಯ ಕುಟುಂಬಸ್ಥರು ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ಬಸ್ ನಿಲ್ಲಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ: Actor Pratham: ನಟ ಪ್ರಥಮ್‌ಗೆ ಬೆದರಿಕೆ ಹಾಕಿದ್ದ ರೌಡಿಶೀಟರ್ ಬೇಕರಿ ರಘು, ಯಶಸ್ವಿನಿ ಅರೆಸ್ಟ್
ಘಟನೆಯ ವಿವರ
ಹೈದರಾಬಾದ್‌ನ ಅಕ್ಕನ ಮನೆಯಿಂದ ಬೆಂಗಳೂರಿಗೆ ಹೊರಟ 15 ವರ್ಷದ ಬಾಲಕಿ ಖಾಸಗಿ ಬಸ್ ಹತ್ತಿದ್ದಳು. ಮೊಬೈಲ್ ಸ್ವಿಚ್ ಆಫ್ ಅಗುತ್ತದೆ ಎನ್ನುವ ಕಾರಣಕ್ಕೆ ಆಕೆ ಬಸ್ ಡ್ರೈವರ್ ಪಕ್ಕದಲ್ಲಿ ತನ್ನ ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಿದ್ದಳು. ಚಾರ್ಜ್ ಬಳಿಕ ಮೊಬೈಲ್ ಹಿಂಪಡೆಯಲು ಹೋದಾಗ ಸ್ಪೇರ್ ಚಾಲಕ ಆರೀಫ್ ಕಿಸ್ ಕೊಡುವಂತೆ ಒತ್ತಾಯಿಸಿದ್ದಾನೆ. ಮೊಬೈಲ್ ಬೇಕೆಂದ್ರೆ ಮುತ್ತು ಕೊಡಬೇಕೆಂದು ಬಾಲಕಿಗೆ ಪೀಡಿಸಿದ್ದಾನೆ.
ಕೊನೆಗೆ ಬಾಲಕಿ ಹೇಗೋ ಫೋನ್ ತೆಗೆದುಕೊಂಡು ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಪೋಷಕರು ಬಸ್ ಚಾಲುಕ್ಯ ಸರ್ಕಲ್ ಬಳಿ ಬರುತ್ತಿದ್ದಂತೆಯೇ ನಿಲ್ಲಿಸಿ ಆರೀಫ್‌ನನ್ನು ಹೊರಗೆಳೆದು ಆತನ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಈ ಘಟನೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ.