ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Child Death: ಜೋಕಾಲಿಯಲ್ಲಿ ಆಡುವಾಗ ಶಾಲು ಕುತ್ತಿಗೆಗೆ ಸುತ್ತಿಕೊಂಡು ಮಗು ಸಾವು

Child Death: ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಜೋಕಾಲಿ ಆಟ ಆಡುತ್ತಿದ್ದಳು. ಆಡುವಾಗ ಪ್ರಣಿತಾ ಕುತ್ತಿಗೆಯಲ್ಲಿದ್ದ ವೇಲ್‌ ಜೋಕಾಲಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗಲೇ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.

ಜೋಕಾಲಿಯಲ್ಲಿ ಆಡುವಾಗ ಶಾಲು ಕುತ್ತಿಗೆಗೆ ಸುತ್ತಿಕೊಂಡು ಮಗು ಸಾವು

ಮೃತ ಪ್ರಣಿತಾ

ಹರೀಶ್‌ ಕೇರ ಹರೀಶ್‌ ಕೇರ Jul 18, 2025 2:50 PM

ಉತ್ತರ ಕನ್ನಡ : ಉತ್ತರ ಕನ್ನಡದ (Uttara Kannada) ಭಟ್ಕಳ ತಾಲೂಕಿನಲ್ಲಿ ಆಕಸ್ಮಿಕವಾಗಿ ಮಗು ಸತ್ತ ಘೋರವಾದ ದುರಂತ ಸಂಭವಿಸಿದೆ. ಮನೆಯಲ್ಲಿ ಜೋಕಾಲಿ ಆಡುವ ವೇಳೆ ಚೂಡಿದಾರದ ಶಾಲು ಕುತ್ತಿಗೆಗೆ ಸಿಲುಕಿ 12 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ (Child death) ಘಟನೆ, ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ. ತೆರ್ನಮಕ್ಕಿ ಸಬ್ಬತ್ತಿ ನಿವಾಸಿ ಪ್ರಣಿತಾ ಜಗನ್ನಾಥ ನಾಯ್ಕ (12) ಮೃತ ಬಾಲಕಿ.

ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲಿ ಜೋಕಾಲಿ ಆಟ ಆಡುತ್ತಿದ್ದಳು. ಆಡುವಾಗ ಪ್ರಣಿತಾ ಕುತ್ತಿಗೆಯಲ್ಲಿದ್ದ ವೇಲ್‌ ಜೋಕಾಲಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗಲೇ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷಿಹೊಂಡ ವಿಚಾರವಾಗಿ ಎರಡು ತಂಡಗಳ ನಡುವೆ ಮಾರಾಮಾರಿ

ಚಿಂತಾಮಣಿ: ಕೃಷಿಹೊಂಡ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿ ಆಸ್ಪತ್ರೆಗೆ ಸೇರಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದ್ವಾರಪಲ್ಲಿ ಗ್ರಾಮದಲ್ಲಿ ನಡೆದಿದೆ. ದ್ವಾರಪಲ್ಲಿ ಗ್ರಾಮದ ನಾರಾಯಣಮ್ಮ ಕೋಂ ಲೇಟ್ ಹನುಮಪ್ಪ(60 ವರ್ಷ) ರವರ ಗ್ರಾಮದ ಸರ್ವೆ ನಂ:13 ರ 1-25 ಗುಂಟೆ ಜಮೀನಿನಲ್ಲಿ ಕೃಷಿ ಹೊಂಡವಿದ್ದು ಪಕ್ಕದ ಜಮೀನವರಾದ ಕದಿರಪ್ಪ ಎಂಬುವರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾರಾಯಣಮ್ಮ ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದೆ ಕೃಷಿ ಹೊಂಡ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರ ಮಾರಿಯಾಗಿ ಎರಡೂ ಗುಂಪುಗಳು ಸಹ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಎರಡು ಗುಂಪಿನವರು ಗ್ರಾಮಾಂತರ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಎರಡು ಗುಂಪುಗಳಿಂದ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: Road Accident: ರಸ್ತೆ ಬದಿ ನಿಂತಿದ್ದವರಿಗೆ ಅಪ್ಪಳಿಸಿದ ಬಿಎಂಟಿಸಿ, ಒಬ್ಬ ಸಾವು, ನಾಲ್ವರಿಗೆ ಗಾಯ