IND vs AUS 4th T20: ಆಸ್ಟ್ರೇಲಿಯಾ ವಿರುದ್ಧದ 4ನೇ ಟಿ20ಗೆ ಭಾರತದ ಸಂಭಾವ್ಯ ಆಡುವ ಬಳಗ
ವಾಷಿಂಗ್ಟನ್ ಸುಂದರ್ ಅವರ ತಂಡಕ್ಕೆ ಮರಳುವುದರೊಂದಿಗೆ ಭಾರತವು ಸ್ಥಿರ ಸಮತೋಲನವನ್ನು ಕಂಡುಕೊಂಡಂತೆ ಕಂಡುಬರುತ್ತಿದೆ. ಅವರ ವಿಶ್ವಾಸಾರ್ಹ ಕೆಳ ಕ್ರಮಾಂಕದ ಬ್ಯಾಟಿಂಗ್ ಮತ್ತು ಆಫ್-ಸ್ಪಿನ್ ತಂಡಕ್ಕೆ ನೆರವಾಗುತ್ತಿದೆ. ಹೀಗಾಗಿ ಹರ್ಷಿತ್ ರಾಣಾ ಅವರನ್ನು ಬೆಂಚ್‌ನಲ್ಲಿ ಕೂರಿಸುವ ಸಾಧ್ಯತೆಯಿದೆ. ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಕೂಡ ಸ್ಥಾನ ಉಳಿಸಿಕೊಳ್ಳಲಿದ್ದಾರೆ.
ಕೋಚ್ ಗೌತಮ್ ಗಂಭೀರ್ ಜತೆ ಉಪನಾಯಕ ಶುಭಮನ್ ಗಿಲ್ ಮಾತುಕತೆ -
Abhilash BC
Nov 5, 2025 2:44 PM
ಸಿಡ್ನಿ: ಸೂರ್ಯಕುಮಾರ್ ಯಾದವ್(Suryakumar Yadav) ನೇತೃತ್ವದ ಭಾರತ ತಂಡವು ನವೆಂಬರ್ 6, ಗುರುವಾರ ಕ್ವೀನ್ಸ್‌ಲ್ಯಾಂಡ್‌ನ ಕ್ಯಾರಾರಾ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟಿ20(IND vs AUS 4th T20) ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದೆ. ಇದೀಗ ನಾಲ್ಕನೇ ಪಂದ್ಯವನ್ನು ಗೆದ್ದು ಗಬ್ಬಾದಲ್ಲಿ ನಡೆಯುವ ಅಂತಿಮ ಪಂದ್ಯಕ್ಕೂ ಮುನ್ನ 2-1 ಮುನ್ನಡೆ ಸಾಧಿಸುವ ಗುರಿಯನ್ನು ಭಾರತ ಹೊಂದಿದೆ.
ಮೂರನೇ ಟಿ20 ಪಂದ್ಯದಲ್ಲಿ ಭಾರತದ ಗೆಲುವು ಸಂಪೂರ್ಣ ಸರ್ವತೋಮುಖ ಪ್ರದರ್ಶನವನ್ನು ನೀಡಿತು. ಮೊದಲ ಎರಡು ಪಂದ್ಯಗಳಲ್ಲಿ ಅವಕಾಶ ವಂಚಿತರಾಗಿದ್ದ ಅರ್ಶ್‌ದೀಪ್ ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್ ಮೂರನೇ ಪಂದ್ಯದಲ್ಲಿ ಅತ್ಯಮೋಘ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅರ್ಶ್‌ದೀಪ್ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಸುಂದರ್ ಕೇವಲ 23 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ಭಾರತದ ಯಶಸ್ವಿ ಚೇಸಿಂಗ್‌ಗೆ ಆಧಾರವಾಗಿದ್ದರು.
ಸಂಜುಗೆ ಸಿಗಲಿದೆಯೇ ಅವಕಾಶ?
ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಆಯ್ಕೆಯಲ್ಲಿ ಪ್ರಮುಖ ಚರ್ಚೆಯ ಅಂಶವೆಂದರೆ ಸಂಜು ಸ್ಯಾಮ್ಸನ್ ಅವರ ಸಂಭಾವ್ಯ ಮರಳುವಿಕೆ. ಒಂದು ವರ್ಷದ ಹಿಂದೆ, ಭಾರತದ ಟಿ20 ತಂಡದಲ್ಲಿ ಸ್ಯಾಮ್ಸನ್ ಅವರ ಸ್ಥಾನ ಭದ್ರವಾಗಿತ್ತು. ಐದು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಬಾರಿಸಿದ್ದರು. ಆದರೆ ಆಸೀಸ್ ಸರಣಿಯಲ್ಲಿ ಅವರು ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಹೀಗಾಗಿ ಮೂರನೇ ಪಂದ್ಯದಿಂದ ಕೈಬಿಡಲಾಗಿತ್ತು. ಅವರ ಬದಲು ಜಿತೇಶ್ ಶರ್ಮಾಗೆ ಸ್ಥಾನ ನೀಡಲಾಗಿತ್ತು. ಭಾರತವು ಗೆಲುವಿನ ಸಂಯೋಜನೆಯನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ಆದ್ದರಿಂದ ಸ್ಯಾಮ್ಸನ್ ತನ್ನ ಮುಂದಿನ ಅವಕಾಶಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗಬಹುದು.
ವಾಷಿಂಗ್ಟನ್ ಸುಂದರ್ ಅವರ ತಂಡಕ್ಕೆ ಮರಳುವುದರೊಂದಿಗೆ ಭಾರತವು ಸ್ಥಿರ ಸಮತೋಲನವನ್ನು ಕಂಡುಕೊಂಡಂತೆ ಕಂಡುಬರುತ್ತಿದೆ. ಅವರ ವಿಶ್ವಾಸಾರ್ಹ ಕೆಳ ಕ್ರಮಾಂಕದ ಬ್ಯಾಟಿಂಗ್ ಮತ್ತು ಆಫ್-ಸ್ಪಿನ್ ತಂಡಕ್ಕೆ ನೆರವಾಗುತ್ತಿದೆ. ಹೀಗಾಗಿ ಹರ್ಷಿತ್ ರಾಣಾ ಅವರನ್ನು ಬೆಂಚ್‌ನಲ್ಲಿ ಕೂರಿಸುವ ಸಾಧ್ಯತೆಯಿದೆ. ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಕೂಡ ಸ್ಥಾನ ಉಳಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ IND vs AUS 4th T20: ಭಾರತ vs ಆಸೀಸ್ 4ನೇ ಟಿ20 ಪಂದ್ಯ ಯಾವಾಗ?
ಭಾರತ ಸಂಭಾವ್ಯ ತಂಡ
ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿ.ಕೀ.), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.
ಹೋಬರ್ಟ್‌ನಿಂದ ಪ್ರಯಾಣ ಬೆಳೆಸಿದ ಟೀಮ್ ಇಂಡಿಯಾ
Hello, The Gold Coast 👋
— BCCI (@BCCI) November 4, 2025
𝗧𝗿𝗮𝘃𝗲𝗹 𝗗𝗶𝗮𝗿𝗶𝗲𝘀, ft. our next stop in the #AUSvIND T20I Series 📍#TeamIndia pic.twitter.com/MdlQLtPsR9
ಆಸ್ಟ್ರೇಲಿಯಾ ಸಂಭಾವ್ಯ ತಂಡ
ಮಿಚೆಲ್ ಮಾರ್ಷ್ (ಸಿ), ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ್ ಡೇವಿಡ್, ಮಿಚೆಲ್ ಓವನ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್, ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್.
ಭಾರತ vs ಆಸ್ಟ್ರೇಲಿಯಾ ಮುಖಾಮುಖಿ ಅಂಕಿಅಂಶಗಳು
ಒಟ್ಟು ಪಂದ್ಯಗಳು: 36
ಭಾರತ ಗೆಲುವು: 21
ಆಸ್ಟ್ರೇಲಿಯಾ ಗೆಲುವು: 12
ಫಲಿತಾಂಶವಿಲ್ಲ: 3