ಕಾರವಾರ: ಬೆಂಗಳೂರಲ್ಲಿ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಘಟನೆ ನಡೆದ ಬೆನ್ನಲ್ಲೇ ಹೊನ್ನಾವರದ ಸಾಲ್ಕೋಡಿನ ಕೊಂಡಕುಳಿಯಲ್ಲಿ ದುರುಳರು, ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ವಿಕೃತಿ ಮರೆದಿರುವುದು ನಡೆದಿದೆ.
ಕೊಂಡಕುಳಿ ಕೃಷ್ಣ ಆಚಾರಿ ಎಂಬುವವರ ಹಸು ಮೇವಿಗಾಗಿ ಹೊರಗಡೆ ಹೋಗಿತ್ತು. ಆದರೆ ರಾತ್ರಿ ಹಸು ಬಾರದ ಹಿನ್ನೆಲೆಯಲ್ಲಿ ಮಾಲೀಕ ಹುಡುಕಾಡಿದ್ದಾರೆ. ಆಗ ಹಸು ಹುಡುಕಲು ಹೋದ ಮಾಲೀಕನಿಗೆ ಆಘಾತ ಕಾದಿತ್ತು. ಕಿರಾತಕರು ಹಸುವಿನ ರುಂಡ ಬೇರ್ಪಡಿಸಿ, ಕಾಲು ಕತ್ತರಿಸಿ, ದೇಹ ತೆಗೆದುಕೊಂಡು ಹೋಗಿದ್ದಾರೆ. ತನ್ನ ಹಸುವಿನ ರುಂಡ ನೋಡಿದ ಮಾಲೀಕ ಆಘಾತಕ್ಕೊಳಗಾಗಿದ್ದು, ಈ ಬಗ್ಗೆ ಹೊನ್ನಾವರ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Self Harming: ಬೆಂಗಳೂರಲ್ಲಿ ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ
DySP Arrested: ಮತ್ತೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ಬಿಡುಗಡೆ ಬೆನ್ನಲ್ಲೇ ಮಧುಗಿರಿ ಡಿವೈಎಸ್ಪಿ ಮತ್ತೆ ಬಂಧನ

ಮಧುಗಿರಿ: ದೂರು ನೀಡಲು ಬಂದಿದ್ದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಆರೋಪದಲ್ಲಿ ಜೈಲು ಸೇರಿದ್ದ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಬಂಧನಕ್ಕೊಳಪಟ್ಟಿರುವ ಘಟನೆ ನಡೆದಿದೆ.
ದೂರು ನೀಡಲು ಬಂದಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೈಲು ಸೇರಿದ್ದ ಡಿವೈಎಸ್‌ಪಿ ಎ.ರಾಮಚಂದ್ರಪ್ಪಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ, ಮತ್ತೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮತ್ತೆ ಡಿವೈಎಸ್‌ಪಿಯನ್ನು ಮಧುಗಿರಿ ಪೊಲೀಸರು ಬಂಧಿಸಿ ತುಮಕೂರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೂರು ನೀಡಲು ಡಿವೈಎಸ್‌ಪಿ ಕಚೇರಿಗೆ ಬಂದಿದ್ದ ಮಹಿಳೆಯ ಮೇಲೆ ಕಚೇರಿಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಧೀಶ ಕೆ.ಯಾದವ್ ಅವರು ಡಿವೈಎಸ್‌ಪಿ ಎ.ರಾಮಚಂದ್ರಪ್ಪಗೆ 2 ಲಕ್ಷ ಮೌಲ್ಯದ ಬಾಂಡ್, ಇಬ್ಬರ ಜಾಮೀನು ಮತ್ತಿತರೆ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದ್ದರು. ಎಲ್ಲ ಷರತ್ತುಗಳೊಂದಿಗೆ ಬಿಡುಗಡೆಯಾದ ತಕ್ಷಣವೇ ಮಧುಗಿರಿ ಪೊಲೀಸರು ಮತ್ತೊಂದು ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಬಂಧಿಸಿದರು. ಡಿವೈಎಸ್‌ಪಿಯನ್ನು ಮಧುಗಿರಿ ಕಾರಾಗೃಹದಲ್ಲಿಡಲಾಗಿದೆ.