ಶಿರಸಿ/ಭಟ್ಕಳ: ಪರಕೀಯರು ನಮ್ಮಿಂದ ನಾಗರೀಕತೆಯನ್ನು ಕಲಿತಿದ್ದರೂ, ನಮ್ಮ ಇತಿಹಾಸದಲ್ಲಿ ಅಕ್ಬರ್ ಮತ್ತು ಸಿಕಂದರ ಬಗ್ಗೆಯೇ ವೈಭವೀಕರಿಸಲಾಗಿದೆ ಎಂದು ಮಾಜಿ ಸಂಸದ ಅನಂತ ಕುಮಾರ ಹೆಗಡೆ (Anant Kumar Hegde) ವಿಷಾದಿಸಿದರು. ಭಟ್ಕಳ ನಗರದಲ್ಲಿ ಭಾನುವಾರ ನಡೆದ ʼಹಿಂದೂ ಸಂಗಮ' (Bhatkal Hindu Sangama) ಕಾರ್ಯಕ್ರಮದಲ್ಲಿ ಮಾಜಿ ಸಂಸದ ದಿಕ್ಸೂಚಿ ಭಾಷಣ ಮಾಡಿದರು.
ಗಂಗಾ ಸಾಗರದ ಗಂಗೆಗೂ ಗೋಮುಖದ ಗಂಗೆಗೂ ಇರುವ ಪಾವಿತ್ರ್ಯದ ವ್ಯತ್ಯಾಸವನ್ನು ಆರ್‌ಎಸ್‌ಎಸ್ ಶಕ್ತಿಗೆ ಹೋಲಿಸಿದ ಅವರು, ಹಿಂದೂಗಳು ಒಂದಾಗಬೇಕೆಂಬ ಈ ಪ್ರಯತ್ನವು ಒಂದು ಜಾಗತಿಕ ದಾಖಲೆಯಾಗಿದ್ದು, ಇಡೀ ವಿಶ್ವವೇ ಇಂದು ಹಿಂದೂ ಸಮಾಜಕ್ಕೆ ತಲೆಬಾಗುತ್ತಿದೆ ಎಂದರು. ಜಾತಿ, ಭಾಷೆ ಮತ್ತು ಪಕ್ಷಗಳ ಭೇದ ಮರೆತು ಹಿಂದುತ್ವದ ಕಿಚ್ಚಿನಿಂದ ನಾವೆಲ್ಲರೂ ಒಂದಾಗಿದ್ದೇವೆ ಎಂದು ಅವರು ಪ್ರತಿಪಾದಿಸಿದರು.
ಜಗತ್ತು ನಮ್ಮನ್ನು ಮುಗಿಸುವ ಹುನ್ನಾರ ನಡೆಸುತ್ತಿದ್ದರೂ ಇಲ್ಲಿನ ಹಿಂದುತ್ವದ ಶಕ್ತಿ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದ ಅವರು, ಸ್ವಾತಂತ್ರ್ಯಾ ನಂತರದ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಮತ್ತು ವಿಜ್ಞಾನದ ಸಾಧನೆಗಳನ್ನು ಮರೆಮಾಚುವ ಕೆಲಸ ನಡೆದಿದೆ. ನವಗ್ರಹಗಳನ್ನು ಪೂಜಿಸುವ ಜ್ಞಾನ ನಮಗಿದ್ದರೂ, ಗುಲಾಮಿ ಶಿಕ್ಷಣದ ಪರಿಣಾಮವಾಗಿ ನಾವು ಹಿನ್ನಡೆಯಲ್ಲಿದ್ದೇವೆ ಎಂದು ವಿಶ್ಲೇಷಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಧ್ವನಿಯನ್ನು ಅಣಕಿಸುವ ಮೂಲಕ ಆರ್‌ಎಸ್‌ಎಸ್ ಮತ್ತು ಹಿಂದೂ ಸಮಾಜವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಗುಡುಗಿದರು.
ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ, ಯಾವುದೇ ಧರ್ಮಗ್ರಂಥಗಳಲ್ಲಿ ಜಾತಿಯ ಉಲ್ಲೇಖವಿಲ್ಲ. ಇಂದು ಜಾತಿ ಸಮಾವೇಶಗಳನ್ನು ಮಾಡುವುದು ಒಂದು ಪ್ಯಾಷನ್ ಆಗಿದ್ದು, ಇಂತಹ ಸಣ್ಣ ಯೋಚನೆಗಳೇ ಸಮಾಜದ ಏಕತೆಯನ್ನು ಹಾಳುಮಾಡುತ್ತಿವೆ. ಅಂದಿನ ಶೇ. 90ರಷ್ಟು ಋಷಿಗಳು ಬ್ರಾಹ್ಮಣರಲ್ಲದಿದ್ದರೂ ಅವರನ್ನು ಯೋಗ್ಯತೆಯಿಂದ ಗುರುತಿಸಲಾಗುತ್ತಿತ್ತು. ಹಿಂದೂಗಳ ಒಗ್ಗಟ್ಟನ್ನು ಒಡೆಯಲು ಅನ್ಯ ಧರ್ಮದವರು ಪ್ರಯತ್ನಿಸುತ್ತಿದ್ದಾರೆ, ಆದರೆ ಹಿಂದುತ್ವವೇ ನಿಜವಾದ ಜಾತ್ಯತೀತತೆ ಎಂದು ಅವರು ಸ್ಪಷ್ಟಪಡಿಸಿದರು.
Pralhad Joshi: ಬೇಕಂತಲೇ ರಾಷ್ಟ್ರಪತಿ ಕಡೆಗಣಿಸಿದ ಮಮತಾ ಬ್ಯಾನರ್ಜಿ ಸರ್ಕಾರ: ಜೋಶಿ ಕಿಡಿ
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಬಂಟ್ವಾಳ ಮೋಹನದಾಸ ಪರಮಹಂಸ ಶ್ರೀಗಳು, ಸಂಸ್ಕಾರವು ತಾಯಿಯ ಗರ್ಭದಿಂದಲೇ ಆರಂಭವಾಗಬೇಕು ಮತ್ತು ಹಿಂದೂ ಎನ್ನುವ ವಿಚಾರ ಮೂಡಬೇಕು ಎಂದು ಕರೆ ನೀಡಿದರು. ಕೆಟ್ಟವರನ್ನು ಒಳ್ಳೆಯವರನ್ನಾಗಿ ಮಾಡುವ ಸತ್ಪ್ರೇರಣೆ ಸಮಾಜದಲ್ಲಿ ಬೆಳೆಯಬೇಕು. ಹಿಂದೂಗಳು ದ್ವೇಷ ಮತ್ತು ಅಸೂಯೆಯನ್ನು ಮರೆತು, ಜಾತಿಗಿಂತ ನೀತಿಗೆ ಪ್ರಾಮುಖ್ಯತೆ ನೀಡಿ ಬದುಕಬೇಕು ಎಂದು ಅವರು ಆಶೀರ್ವದಿಸಿದರು.
![]()
ಯಾವುದೋ ಕನಸನ್ನು, ಅರ್ಥವನ್ನು ಹುಡುಕಿ ಬಂದ ಜನರಿಗೆ ನಿರಾಸೆಯಾಗಿದೆ. ಕ್ಷಮೆ ಇರಲಿ. ಧರ್ಮದ ಕೆಲಸಲ್ಲಿ ಯಾವತ್ತೂ ನಾನಿರುತ್ತೇನೆ.
ಅನಂತ ಕುಮಾರ್ ಹೆಗಡೆ, ಮಾಜಿ ಸಂಸದ