ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಂಕೋಲಾದಲ್ಲಿ ಗುಂಡು ಹಾರಿಸಿಕೊಂಡು ಫಾರ್ಮಾಸಿಸ್ಟ್ ಆತ್ಮಹತ್ಯೆ; ವೈರಲ್‌ ವಿಡಿಯೋದಿಂದ ಮನನೊಂದು ಸಾವಿಗೆ ಶರಣು

Ankola News: ಕಾರವಾರದ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿದ್ದ ರಾಜೀವ ಪಿಕಳೆ ಅವರು ಕೆಲ ದಿನಗಳ ಹಿಂದೆ ಅವಧಿ ಮೀರಿದ ಮಾತ್ರೆ ನೀಡಿದ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಈ ಘಟನೆಯಿಂದ ನೊಂದಿದ್ದ ರಾಜೀವ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ರಾಜೀವ್‌ ಪಿಕಳೆ.

ಅಂಕೋಲಾ: ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್‌ ಆದ ಹಿನ್ನೆಲೆಯಲ್ಲಿ ಕೇರಳದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬೆನ್ನಲ್ಲೇ ಅಂತಹುದೇ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಅಂಕೋಲಾ ತಾಲೂಕಿನ ಹಟ್ಟಿಕೇರಿಯ ಫಾರ್ಮಾಸಿಸ್ಟ್ ರಾಜೀವ ಪಿಕಳೆ (Rajeev Pikle) ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಬಗ್ಗೆ ವಿಡಿಯೊ ವೈರಲ್‌ ಆಗಿದ್ದರಿಂದ ನೊಂದಿದ್ದ ಫಾರ್ಮಾಸಿಸ್ಟ್, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಹಟ್ಟಿಕೇರಿಯ ತಮ್ಮ ನಿವಾಸದ ಎದುರು ತುಳಸಿಕಟ್ಟೆ ಬಳಿ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಾಗಿದೆ.

ಕಾರವಾರದ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಾಸಿಸ್ಟ್ ಆಗಿರುವ ರಾಜೀವ ಪಿಕಳೆ ಅವರು ಕೆಲ ದಿನಗಳ ಹಿಂದೆ ಅವಧಿ ಮೀರಿದ ಮಾತ್ರೆ ನೀಡಿದ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಈ ಘಟನೆಯಿಂದ ನೊಂದಿದ್ದ ರಾಜು ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಇದೇ ವಿಚಾರವಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಡೆತ್ ನೋಟ್ ಪತ್ತೆ:

ಮನೆಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದಷ್ಟೇ ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.

ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿರಾಯ ಅರೆಸ್ಟ್‌

ಗಂಡನೊಂದಿಗೆ ಹಳ್ಳಿಯಲ್ಲಿರಲು ಇಷ್ಟವಿಲ್ಲದೆ ನವವಿವಾಹಿತೆ ಆತ್ಮಹತ್ಯೆ

young woman ends life in Kalaburagi

ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ (Kalaburagi News) ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ. ಮೃತಳನ್ನು ಅನಸೂಯಾ ಅವಿನಾಶ್ ಆಕಡೆ (26) ಎಂದು ಗುರುತಿಸಲಾಗಿದೆ. ಅನಸೂಯಾ ತನ್ನ ಅತ್ತೆ ಮಗ ಅವಿನಾಶ್ ಅವರನ್ನು ಪ್ರೀತಿಸಿ, ಎರಡು ತಿಂಗಳ ಹಿಂದೆ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು.

ಮದುವೆಯ ನಂತರ ಗಂಡನೊಂದಿಗೆ ಹಳ್ಳಿಯಲ್ಲಿ ವಾಸಿಸುವುದಕ್ಕೆ ಅನಸೂಯಾಗೆ ಇಷ್ಟವಿರಲಿಲ್ಲ. ಆಕೆಯ ಮೂವರು ಸಹೋದರಿಯರು ಮದುವೆ ಬಳಿಕ ಬೆಂಗಳೂರು ಹಾಗೂ ಮುಂಬೈ ಮುಂತಾದ ಮಹಾನಗರಗಳಲ್ಲಿ ವಾಸವಾಗಿದ್ದರೆ, ತಾನು ಚಿಕ್ಕಹಳ್ಳಿಯಲ್ಲಿ ಜೀವನ ನಡೆಸಬೇಕಾಗಿದೆಯಲ್ಲ ಎಂದು ಬೇಸರಗೊಂಡಿದ್ದಳು ಎನ್ನಲಾಗಿದೆ.