ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sirsi News: ಬಾವಿಗೆ ಬಿದ್ದು ಯಮನನ್ನು ಗೆದ್ದು ಬಂದ 2ರ ಬಾಲೆ; ಜೀವದ ಹಂಗು ತೊರೆದು ರಕ್ಷಿಸಿದ ವ್ಯಕ್ತಿ!

ಮನೆಯಲ್ಲಿ ಮಗು ಕಾಣದಿದ್ದಾಗ ಆತಂಕಗೊಂಡ ಅಜ್ಜಿ ಸುತ್ತಮುತ್ತ ಹುಡುಕಾಡಿದ್ದಾರೆ. ಬಾವಿಯ ಹತ್ತಿರ ಹೋದಾಗ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಈ ಬಗ್ಗೆ ಹತ್ತಿರದಲ್ಲೇ ವಾಸವಿದ್ದ ವ್ಯಕ್ತಿಗೆ ಮಾಹಿತಿ ನೀಡಿದ್ದು, ಆತ ಜೀವದ ಹಂಗು ತೊರೆದು ಮಗುವನ್ನು ರಕ್ಷಣೆ ಮಾಡಿದ್ದಾರೆ.

ಶಿರಸಿಯಲ್ಲಿ ಬಾವಿಗೆ ಬಿದ್ದ ಬಾಲಕಿಯ ರಕ್ಷಣೆ.

ಶಿರಸಿ: ಮನೆ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಎರಡು ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬರು ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ಶಿರಸಿ (Sirsi News) ನಗರದ ಕಸ್ತೂರಬಾ ನಗರದಲ್ಲಿ ನಡೆದಿದೆ.

ಮನೆಯಲ್ಲಿ ಮಗು ಭುವಿ (2) ಕಾಣದಿದ್ದಾಗ ಆತಂಕಗೊಂಡ ಅಜ್ಜಿ ಸುತ್ತಮುತ್ತ ಹುಡುಕಾಡಿದ್ದಾರೆ. ಬಾವಿಯ ಹತ್ತಿರ ಹೋದಾಗ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಆತಂಕದೊಂದಿಗೆ ಬಾವಿಯೊಳಗೆ ಇಣುಕಿ ನೋಡಿದಾಗ, ಮಗು ನೀರಿಗೆ ಇಳಿಸಲಾಗಿದ್ದ ಪಂಪ್ ಪೈಪ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತಿರುವುದು ಕಂಡುಬಂದಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಹತ್ತಿರದಲ್ಲೇ ವಾಸವಿರುವ ಫಯಾಜ್ ಚೌಟಿ (ಪಯ್ಯು) ಎಂಬುವವರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಆ ಸಮಯದಲ್ಲಿ ಬೆಂಗಳೂರಿಗೆ ಹೊರಡುವ ಸಿದ್ಧತೆಯಲ್ಲಿದ್ದ ಅವರು, ಘಟನೆಯ ತೀವ್ರತೆ ಕಂಡು ಕ್ಷಣಾರ್ಧವೂ ತಡಮಾಡದೆ ಬಾವಿಗೆ ಇಳಿಯಲು ಸಿದ್ಧರಾದರು. ಜನರ ಸಹಾಯದೊಂದಿಗೆ ಬಾವಿಗಿಳಿದ ಅವರು, ಸುರಕ್ಷಿತವಾಗಿ ಬಾಲೆಯನ್ನು ಮೇಲಕ್ಕೆತ್ತಿ ತರುವಲ್ಲಿ ಯಶಸ್ವಿಯಾದರು.

ಮಗುವನ್ನು ಕಾಪಾಡಿದ ವ್ಯಕ್ತಿ ನನ್ನ ಪಾಲಿನ ದೇವರೆಂದು ಬಾಲಕಿಯ ಅಜ್ಜಿ ಹೇಳುತ್ತಾ ಭಾವುಕರಾಗಿದ್ದಾರೆ. ಇದಕ್ಕ ಪ್ರತಿಕ್ರಿಯಿಸಿದ ಪಯ್ಯು, ಆ ಕ್ಷಣದಲ್ಲಿ ಯಾರೇ ಬಿದ್ದರೂ ಇದನ್ನೇ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಇವರ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

25 ಲಕ್ಷ ಕೊಡು, ಇಲ್ಲವೇ ನನ್ನ ಜತೆ ಮಲಗು; ಗಂಡನ ಬಂಧಿಸಿ ಹೆಂಡತಿಗೆ ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಲೈಂಗಿಕ ಕಿರುಕುಳ!