ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅನೈತಿಕ ಸಂಬಂಧ ವಿಚಾರಕ್ಕೆ ವ್ಯಕ್ತಿಯ ಕೊಲೆ; ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಗುರೂಜಿ ಸೇರಿ 7 ಮಂದಿ ಬಂಧನ

Siddapura Murder Case: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಕೊಲೆ ಘಟನೆ ನಡೆದಿದೆ. ಜ್ಯೋತಿಷಿ ಕಮಲಾಕರ ಭಟ್‌ ಗುರೂಜಿ ಜತೆ ತಾಯಿಗೆ ಅನೈತಿಕ ಸಂಬಂಧ ಇದ್ದ ಬಗ್ಗೆ ಮಗಳು ತಂದೆಗೆ ತಿಳಿಸಿದ್ದಳು. ಈ ಬಗ್ಗೆ ದೂರು ನೀಡಿದ್ದಕ್ಕೆ ವ್ಯಕ್ತಿಯೊಬ್ಬರ ಕೊಲೆಯಾಗಿದೆ. ಈ ಸಂಬಂಧ ಏಳು ಮಂದಿಯ ಬಂಧನವಾಗಿದೆ.

ಜ್ಯೋತಿಷಿ ಕಮಲಾಕರ ಭಟ್‌ ಗುರೂಜಿ, ಮಹಿಳೆ ಸುಚಿತ್ರಾ ಮತ್ತು ಮೃತ ವಸಂತ್‌ ನಾಯ್ಕ್‌.

ಕಾರವಾರ: ಖ್ಯಾತ ಜ್ಯೋತಿಷಿಯೊಂದಿಗೆ ಮಹಿಳೆ ಅನೈತಿಕ ಸಂಬಂಧ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಕೊಲೆಯಾಗಿ, ಇಬ್ಬರು ಗಾಯಗೊಂಡಿರುವ ಘಟನೆ (Siddapura Murder Case) ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗ ಮೂಲದ ಜ್ಯೋತಿಷಿ ಕಮಲಾಕರ ಭಟ್ ಗುರೂಜಿ (Kamalakar Bhat Guruji) ಸೇರಿ 7 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ವಸಂತ್ ನಾಯ್ಕ (41) ಮೃತ ವ್ಯಕ್ತಿಯಾಗಿದ್ದು, ಮಹೇಶ್ ಹಾಗೂ ಕುಮಾರ್‌ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಚಿತ್ರಾ ಎಂಬ ಮಹಿಳೆ ಗಂಡನಿಂದ ಬೇರ್ಪಟ್ಟು ಶಿವಮೊಗ್ಗದದಲ್ಲಿ ಜ್ಯೋತಿಷಿ ಕಮಲಾಕಾರ ಭಟ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಈಕೆಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ತಾಯಿ ಸುಚಿತ್ರಾಗೆ ಜ್ಯೋತಿಷಿ ಕಮಲಾಕರ್ ಭಟ್ ಜತೆ ಅಕ್ರಮ ಸಂಬಂಧವಿರುವ ವಿಚಾರ ಮಗಳಿಗೆ ಗೊತ್ತಾಗಿತ್ತು. ಈ ವಿಚಾರವನ್ನು ತಂದೆ ಮಹೇಶ್‌ ನಾಯ್ಕ್‌ಗೆ ತಿಳಿಸಿದ್ದ ಮಗಳು, ಬಳಿಕ ಸಿದ್ದಾಪುರದ ಅವರಗುಪ್ಪ ಗ್ರಾಮದ ಚಿಕ್ಕಪ್ಪ ವಸಂತ್ ನಾಯ್ಕ್‌ ಮನೆಗೆ ಬಂದಿದ್ದಳು.

ಮಗಳನ್ನು ಹುಡುಕಿಕೊಂಡು ಸುಚಿತ್ರಾ, ಜ್ಯೋತಿಷಿ ಕಮಲಾಕರ್ ಭಟ್ ವಾಹನದಲ್ಲಿ ತಂದೆ ಜತೆ ಕೆಲವು ಯುವಕರೊಂದಿಗೆ ವಸಂತ್ ನಾಯ್ಕ್‌ ಅವರ ಮನೆಗೆ ಬಂದಿದ್ದು, ಆಕೆಯ ಪತಿ ಮಹೇಶ್ ಕೂಡ ಇದ್ದರು. ಈ ವೇಳೆ ಸುಚಿತ್ರಾ ಮತ್ತು ಪತಿ ಮಹೇಶ್ ನಡುವೆ ವಾಗ್ವಾದ ನಡೆದಿದೆ.

ಈ ವೇಳೆ ಗಲಾಟೆ ತಾರಕಕ್ಕೆ ಹೋಗಿ ಸುಚಿತ್ರ ಜತೆ ಬಂದಿದ್ದ ಯುವಕರು, ಗಲಾಟೆ ಬಿಡಿಸಲು ಮಧ್ಯ ಪ್ರವೇಶಿಸಿದ್ದ ವಸಂತ್‌ಗೆ ಚಾಕು ಇರಿದಿದ್ದಲ್ಲದೇ, ಸುಚಿತ್ರ ಪತಿ ಮಹೇಶ್ ಹಾಗೂ ಪಕ್ಕದ ಮನೆಯ ಕುಮಾರ್ ಎಂಬುವವರಿಗೂ ಚಾಕು ಇರಿದಿದ್ದಾರೆ.

ವಸಂತ್ ಆಸ್ಪತ್ರೆ ಮಾರ್ಗದಲ್ಲೇ ಮೃತಪಟ್ಟಿದ್ದು, ಮಹೇಶ್ ಹಾಗೂ ಕುಮಾರ್ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಘಟನೆ ಸಂಬಂಧ ವಸಂತ್ ಅತ್ತಿಗೆ ಸಂಧ್ಯ ನಾಯ್ಕ ದೂರು ನೀಡಿದ್ದು, ಈ ಹಿನ್ನೆಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು 6 ವರ್ಷದ ಪುತ್ರಿಯನ್ನೇ ಕೊಲೆ ಮಾಡಿದ ಪಾಪಿ ತಂದೆ

ಪ್ರಕಕರದಲ್ಲಿ ಸಂಬಂಧಿಸಿ ಎ1 ಸುಚಿತ್ರಾ, ಎ2 ಲೋಕನಾಥ ಚೌಡಪ್ಪ ನಾಯ್ಕ್, ಎ3 ಅಪರಿಚಿತರು ಹಾಗೂ ಎ4 ಕಮಲಾಕರ ಭಟ್​​ ಸ್ವಾಮೀಜಿ ಆಗಿದ್ದು, ಒಟ್ಟು ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಸ್.ಪಿ ದೀಪನ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.