ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sirsi Doctor Murder Case: 2ನೇ ಮದುವೆಗೆ ರೆಡಿಯಾಗಿದ್ದ ಶಿರಸಿ ವೈದ್ಯನ ಹತ್ಯೆಗೆ ಕಾರಣ ಬಹಿರಂಗ; ಸ್ನೇಹಿತನೇ ಕೊಲೆಗಾರ!

ಶಿರಸಿ ಕೆಎಚ್‌ಬಿ ಕಾಲೋನಿಯ ಹೊಸ ಬಡಾವಣೆಯಲ್ಲಿ ವಾಸವಿದ್ದ ಡಾ. ರಮೇಶ್ ಎಫ್. ಕಲ್ಗುಟ್ಕರ್ ಅವರು ಶನಿವಾರ ರಾತ್ರಿ ಮನೆಯಲ್ಲೇ ಕ್ರೂರವಾಗಿ ಹತ್ಯೆಗೀಡಾಗಿದ್ದರು. ಇದೀಗ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣ ಕೂಡ ಬಹಿರಂಗವಾಗಿದೆ.

ಕೊಲೆಯಾದ ವೈದ್ಯ ಡಾ. ರಮೇಶ್ ಎಫ್. ಕಲ್ಗುಟ್ಕರ್.

ಶಿರಸಿ: ನಗರದ ಆಯುರ್ವೇದ ವೈದ್ಯನ ಹತ್ಯೆ ಪ್ರಕರಣವನ್ನು (Sirsi Doctor Murder Case) ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿರಸಿ ಕೆಎಚ್‌ಬಿ ಕಾಲೋನಿಯ ಹೊಸ ಬಡಾವಣೆಯಲ್ಲಿ ವಾಸವಿದ್ದ ಡಾ. ರಮೇಶ್ ಎಫ್. ಕಲ್ಗುಟ್ಕರ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಆದರೆ, ಸ್ನೇಹಿತನೇ ವೈದ್ಯನನ್ನು ಕೊಲೆ ಮಾಡಿರುವ ವಿಚಾರ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಡಾ. ರಮೇಶ್ ಅವರು ಹುಬ್ಬಳ್ಳಿ ರಸ್ತೆಯಲ್ಲಿ ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದರು. ಐದು ತಿಂಗಳ ಹಿಂದೆ ಅವರ ಪತ್ನಿ ಹೃದಯಾಘಾತದಿಂದ ನಿಧನರಾಗಿದ್ದರು. ನಂತರ ತಮ್ಮ ಪತ್ನಿಯ ತಂಗಿಯೊಂದಿಗೆ ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು. ಮಂಜಗುಣಿಯ ದೇವಸ್ಥಾನದಲ್ಲಿ ವಿವಾಹ ನಿಗದಿಯಾಗಿತ್ತು. ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಈ ದಾರುಣ ಘಟನೆ ನಡೆದಿತ್ತು.

ಶನಿವಾರ ರಾತ್ರಿ ವೈದ್ಯನ ಕೊಲೆ ನಡೆದಿತ್ತು. ಭಾನುವಾರ ಬೆಳಗ್ಗೆ ಸಂಬಂಧಿಕರು ಮನೆಗೆ ಭೇಟಿ ನೀಡಿದಾಗ, ವೈದ್ಯನ ಮೃತದೇಹ ಪತ್ತೆಯಾಗಿತ್ತು. ಶಿರಸಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು.

ವೈದ್ಯನ ಹತ್ಯೆಗೆ ಕಾರಣವೇನು?

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತ್ವರಿತವಾಗಿ ತನಿಖೆ ಆರಂಭಿಸಿ, ಹತ್ಯೆಯ ರಹಸ್ಯವನ್ನು ಭೇದಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಡಾ. ರಮೇಶ್ ಅವರು ಮದುವೆಗೆಂದು ಚಿನ್ನಾಭರಣ ಖರೀದಿ ಮಾಡಿದ್ದರು. ಈ ವಿಷಯ ತಿಳಿದಿದ್ದ ಅವರ ಸ್ನೇಹಿತನೇ ಹಣದ ಆಸೆಗಾಗಿ ಹತ್ಯೆ ನಡೆಸಿರುವುದು ಬಹಿರಂಗವಾಗಿದೆ. ಹತ್ಯೆ ಮಾಡಿದ ನಂತರ ಆರೋಪಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

Murder Case: ಹೆಂಡತಿಯ ತಂಗಿಯ ಜೊತೆ ನಾಳೆ ಮದುವೆಯಾಗಬೇಕಿದ್ದ ವ್ಯಕ್ತಿಯ ಹತ್ಯೆ

ಆರೋಪಿ ಹೆಸರು ಇನ್ನೂ ಅಧಿಕೃತವಾಗಿ ಪೊಲೀಸರು ಬಹಿರಂಗಪಡಿಸದಿದ್ದರೂ, ಪೊಲೀಸರು ಅವನನ್ನು ಬಂಧಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಶಿರಸಿಯ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.