ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

​ಪಾರಂಪರಿಕ ಭತ್ತ ಮತ್ತು ಆಹಾರ ಬೆಳೆಗಳ ವಿನಾಶಕ್ಕೆ ರಾಘವೇಶ್ವರ ಶ್ರೀ ಬೇಸರ

Sri Raghaveshwara Bharathi Swamiji: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ಮಾತನಾಡಿದ್ದು, ತಳಿ ಅಭಿವೃದ್ಧಿಯ ಹೆಸರಿನಲ್ಲಿ ಪಾರಂಪರಿಕ ಭತ್ತದ ತಳಿಗಳು ನಾಶವಾಗುತ್ತಿರುವುದಕ್ಕೆ ಬೇಸರ ಹೊರಹಾಕಿದ್ದಾರೆ.

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ.

ಗೋಕರ್ಣ, ಆ.29: ವಾಹನ ಚಲಿಸಲು ಇಂಧನ ಶಕ್ತಿ ಹಾಗೂ ಚಾಲನಾ ನಿಯಂತ್ರಣ ಬೇಕು. ಹಾಗೆಯೇ, ದೇಹವೆಂಬ ವಾಹನವು ಚಲಿಸಲು ಮನಸ್ಸು ಮತ್ತು ಓಜಸ್ಸುಗಳೆಂಬ ಶಕ್ತಿ ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Sri Raghaveshwara Bharathi Swamiji) ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಶನಿವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಮನಸ್ಸು ನಮ್ಮ ನಿಯಂತ್ರಣ ಶಕ್ತಿಯಾಗಿದ್ದು, ಅನ್ನದ ಸೂಕ್ಷ್ಮಾಂಶದಿಂದ ಮನಸ್ಸು ನಿರ್ಮಿತವಾಗಿದೆ ಮತ್ತು ದೇಹದ ಶಕ್ತಿ ದ್ರವವಾದ ಓಜಸ್ಸು ಕೂಡ ಅನ್ನದಿಂದಲೇ ಪೋಷಿಸಲ್ಪಟ್ಟಿದೆ. ಹೀಗೆ ದೇಹದ ನಿಯಂತ್ರಣಾ ಶಕ್ತಿ ಹಾಗೂ ಪೋಷಕ ಶಕ್ತಿಗಳೆರಡೂ ಆಹಾರವನ್ನೇ ಅವಲಂಬಿಸಿದೆ ಎಂದು ಆಹಾರದ ಮಹತ್ವವನ್ನು ವಿವರಿಸಿದರು.

Gokarna News

ಉಪವಾಸದಿಂದ ದೇಹದ ಧಾತುಗಳು ಕ್ಷೀಣವಾಗುತ್ತದೆ ಎನ್ನಲಾಗುತ್ತದೆ. ಆದರೆ ಆತ್ಮಸಾಧನೆಯ ಕಾರಣದಿಂದ ಉಪವಾಸವಾದರೆ, ಓಜಸ್ಸು ದೇಹದಲ್ಲಿ ವೃದ್ಧಿಸುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ. ಹಾಗಾಗಿ ಆತ್ಮಸಾಧನೆಯ ಜತೆಗೆ ಉಪವಾಸ ಮಾಡಿದಾಗ ಊಟವಿಲ್ಲದೆಯೂ ಜೀವಿಸಬಹುದು ಎಂದು ಹೇಳಿದರು.

Annabrahma Chaturmasya

ಜೀವನಕ್ಕೆ ಬೇಕಾದ ಎಲ್ಲವನ್ನೂ ಇಂದಿನ ವ್ಯವಸ್ಥೆ ಹುಡುಕಿ ಹುಡುಕಿ ನಾಶ ಮಾಡುವ ಕಾರ್ಯ ಮಾಡುತ್ತಿದ್ದು, ಒಂದೆಡೆ ಗೋಸಂತತಿ ಕ್ಷೀಣಿಸುತ್ತಿದ್ದರೆ, ತಳಿ ಅಭಿವೃದ್ಧಿಯ ಹೆಸರಿನಲ್ಲಿ ಪಾರಂಪರಿಕ ಭತ್ತ ಹಾಗೂ ಆಹಾರ ಬೆಳೆಗಳ ವಿನಾಶ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Shri Raghaveshwara Bharathi Swamiji

ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅವಿನಾಶ್ ಭಟ್, ಕೇಂದ್ರ ಸಾಂಬಾರು ಮಂಡಳಿಯ ಪ್ರಸನ್ನ ಕೆರೆಕೈ, ಧಾರವಾಡ ಜಿಲ್ಲಾ ರೋಟರಿ ಗವರ್ನರ್ ಗಣೇಶ್ ಭಟ್ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು.

ಅನ್ನವೇ ದೇವರು, ಓಜಸ್ಸೇ ಜೀವಾಳ: ರಾಘವೇಶ್ವರ ಭಾರತೀ ಶ್ರೀ

ಮಂಗಳೂರು ಹವ್ಯಕ ಮಂಡಲದ ಬಾಯಾರು, ಕೇಪು, ಕನ್ಯಾನ, ಮುಡಿಪು,ಕುಂದಾಪುರ, ಕೋಳ್ಯೂರು ವಲಯಗಳ ಪರವಾಗಿ ಮೂಡಂಬಿಕಾನ ಸುಬ್ರಹ್ಮಣ್ಯ ಭಟ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಶ್ರೀಮಠದ ಮಾಧ್ಯಮ ಶ್ರೀಸಂಯೋಜಕ ಸಂದೇಶ ತಲಕಾಲಕೊಪ್ಪ, ರಮೇಶ ಭಟ್ ಸರವು, ಉಮೇಶ ಭಟ್ ಕೊಣಮ್ಮೆ, ಮಲ್ಲಿಕಾ ಭಟ್, ಸುಮಾ ರಮೇಶ್, ಕೃಷ್ಣಪ್ರಮೋದ, ದಿನಪ್ರಧಾನರಾದ ಶ್ರೀಕಾಂತ ಕಾಳಮಂಜಿ ದಂಪತಿಗಳು ಉಪಸ್ಥಿತರಿದ್ದರು.

image

ಇಂದು 'ಜಿಮ್' ಸಂಸ್ಕೃತಿ ವ್ಯಾಪಿಸಿದ್ದು, ವಿಪರೀತವಾದ ವ್ಯಾಯಾಮವನ್ನು ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ವ್ಯಾಯಾಮವನ್ನು ಕ್ರಮವಾಗಿ ಮಾಡದೇ, ಒಮ್ಮೆಲೇ ವಿಪರೀತ ಶ್ರಮವನ್ನು ಹಾಕಿದಾಗ ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ ಎಂದು ಅಧುನಿಕ ಪರಿಭಾಷೆಯಲ್ಲಿ ಕಾಣುತ್ತೇವೆ. ಇದನ್ನೇ ಆಯುರ್ವೇದ ಆಚಾರ್ಯರು ಹೇಳಿದ್ದು, ಅತಿಯಾದ ವ್ಯಾಯಾಮದಿಂದ ಓಜಸ್ಸು ನಷ್ಟವಾಗಿ ಸಾವನ್ನಪ್ಪುತ್ತಾರೆ ಎಂದು ಹೇಳಲಾಗಿದೆ.

- ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ