ಹೊಸಪೇಟೆ: 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನೀಡಲಾಗುವ 2026ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಯನ್ನು ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಪಡೆದುಕೊಂಡಿದೆ. ಬೆಂಗಳೂರಿನ ಶ್ರೀರಾಮ ಮಂದಿರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕ್ಗಳ ಮಹಾಮಂಡಳವು ಬ್ಯಾಂಕಿನ ಸಾಧನೆ ಹಾಗೂ ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಕಳೆದ ಆರ್ಥಿಕ ವರ್ಷದಲ್ಲಿ ಗಳಿಸಿದ ಅತ್ಯುತ್ತಮ ಲಾಭಕ್ಕೆ 73ನೇ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಸೋಮವಾರ ಬೆಂಗಳೂರಿನ ಶ್ರೀರಾಮ ಮಂದಿರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಬೆಂಗಳೂರಿನ ಎನ್.ಆರ್. ಕಾಲೊನಿಯ ಶ್ರೀ ರಾಮ ಮಂದಿರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಎಚ್.ಕೆ. ಪಾಟೀಲ್, ಉಪಾಧ್ಯಕ್ಷ ಪರಶಿವಮೂರ್ತಿ ಸೇರಿದಂತೆ ಹಲವು ಸಹಕಾರ ಕ್ಷೇತ್ರದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಜೆಎಸ್ಡಬ್ಲ್ಯು ಫೌಂಡೇಶನ್ನಿಂದ ‘ಸ್ಕಿಲ್ ಸ್ಪಾರ್ಕ್ʼ ಕಾರ್ಯಕ್ರಮದಡಿ ಮೊಬೈಲ್ ಅಸೆಂಬ್ಲಿ ತರಬೇತಿ
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರಾದ ಅನಂತ ಜೋಶಿ, ಶಿವಕುಮಾರ್ ಶೆಟಕಾರ ಪ್ರಶಸ್ತಿ ಸ್ವೀಕರಿಸಿದರು. ಮಾಜಿ ನಿರ್ದೇಶಕ ಎಂ. ವೆಂಕಪ್ಪ, ವಿಕಾಸ ಪರಿವಾರದ ಹಿರಿಯರಾದ ವಿ. ಶಂಕರಾಚಾರ್ ಪಾಲ್ಗೊಂಡಿದ್ದರು.