ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

KKCCI Award: ಉದ್ಯಮಿ ಗೊಗ್ಗ ಚನ್ನಬಸವರಾಜ್‌ಗೆ ಕೆಕೆಸಿಸಿಐ ವಾಣಿಜ್ಯೋದ್ಯಮಿ ರತ್ನ ಪ್ರಶಸ್ತಿ ಪ್ರದಾನ

Gogga Channabasavaraj: ಉದ್ಯಮಶೀಲ ಸಾಧನೆಗಳು, ಸಮಾಜ ಸೇವೆ, ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಹೊಸಪೇಟೆ ಮೂಲದ ಉದ್ಯಮಿ ಗೊಗ್ಗ ಚನ್ನಬಸರಾಜ್ (ರಾಜಣ್ಣ) ಅವರಿಗೆ ಕೆಕೆಸಿಸಿಐ ವಾಣಿಜ್ಯೋದ್ಯಮಿ ರತ್ನ ಪ್ರಶಸ್ತಿ-2026 ನೀಡಿ ಗೌರವಿಸಲಾಗಿದೆ.

ಹೊಸಪೇಟೆ: ಕಲಬುರಗಿಯಲ್ಲಿ ನವೆಂಬರ್ 29 ರಂದು ನಡೆದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ವಜ್ರ ಮಹೋತ್ಸವದಲ್ಲಿ ಹೊಸಪೇಟೆ ಮೂಲದ ಉದ್ಯಮಿ ಗೊಗ್ಗ ಚನ್ನಬಸರಾಜ್ (ರಾಜಣ್ಣ) ಅವರಿಗೆ ಕೆಕೆಸಿಸಿಐ ವಾಣಿಜ್ಯೋದ್ಯಮಿ ರತ್ನ ಪ್ರಶಸ್ತಿ-2026 (KKCCI Vanijyodyami ratna Award-2026) ಪ್ರದಾನ ಮಾಡಲಾಯಿತು. ಉದ್ಯಮಶೀಲ ಸಾಧನೆಗಳು, ಸಮಾಜ ಸೇವೆ, ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಇವರಿಗೆ ಪ್ರಶಸ್ತಿ ನೀಡಲಾಗಿದೆ.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಅಶ್ವಿನ್ ಕೊತಂಬರಿ, ಉಪಾಧ್ಯಕ್ಷ ಭರ್ಮಣ್ಣ, ಖಜಾಂಚಿ ವಿಜಯ್ ಸಿಂಡ್ಗಿ ಉಪಸ್ಥಿತರಿದ್ದರು.

KKCCI Award (1)

ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶಗಳಿವೆ: ಸಚಿವ ಪ್ರಿಯಾಂಕ್‌ ಖರ್ಗೆ

KKCCI Award (2)

ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗೆ ವಿಪುಲ ಅವಕಾಶಗಳಿವೆ. ಪ್ರತಿಯೊಂದು ಪ್ರದೇಶದ ಆರ್ಥಿಕ ಸಾಮರ್ಥ್ಯ ಹಾಗೂ ವಿಶೇಷ ಸಂಪನ್ಮೂಲಗಳನ್ನು ಗುರುತಿಸಿ, ಅವುಗಳ ಆಧಾರದ ಮೇಲೆ ಉದ್ಯಮಗಳನ್ನು ಸ್ಥಾಪಿಸಬೇಕು. ನಮ್ಮ ಭಾಗದ ಉತ್ಕೃಷ್ಟ ಗುಣಮಟ್ಟದ ತೊಗರಿ, ಸಿರಿಧಾನ್ಯಗಳು, ಕಮಲಾಪುರದ ಬಾಳೆಹಣ್ಣು ಸೇರಿದಂತೆ ಸ್ಥಳೀಯ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಬೇಕು. ಕಲ್ಯಾಣ ಕರ್ನಾಟಕದ ಪ್ರತಿಭೆಗಳಿಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಆಯೋಜಿಸಿದ್ದ ಸಂಸ್ಥೆಯ ವಜ್ರ ಮಹೋತ್ಸವ ಹಾಗೂ ಕೈಗಾರಿಕಾ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಲಬುರಗಿಯಲ್ಲಿ ಐಟಿ ಪಾರ್ಕ್, ಕರ್ನಾಟಕ ಡಿಜಿಟಲ್ ಮಿಷನ್ ಹಾಗೂ ಇನ್‌ಕ್ಯುಬೇಷನ್ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಎಕನಾಮಿಕ್ ಮಿಷನ್ ಮೂಲಕ ಈ ಭಾಗದ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಅಲ್ಲದೆ, ಲೀಪ್ ಯೋಜನೆಯಡಿ ನವೋದ್ಯಮಿಗಳಿಗೆ ಸಹಾಯಧನ ಹಾಗೂ ಅಗತ್ಯ ಪ್ರೋತ್ಸಾಹ ನೀಡುವ ಮೂಲಕ ಸ್ಥಳೀಯ ಉದ್ಯಮಿಗಳ ಬೆಳವಣಿಗೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.