ಹೊಸಪೇಟೆ, ಅ.14: ಐತಿಹಾಸಿಕ ಕಿತ್ತೂರು ಉತ್ಸವದ ನಿಮಿತ್ತ ನಾಡಿನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜ್ಯೋತಿ ರಥಯಾತ್ರೆ ಬುಧವಾರ ಹೊಸಪೇಟೆ ನಗರಕ್ಕೆ (Vijayanagara News) ಆಗಮಿಸಿತು. ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ ಕೋರಿ, ಬಳಿಕ ವಿಧ್ಯುಕ್ತವಾಗಿ ಬೀಳ್ಕೊಟ್ಟರು.
ನಗರಕ್ಕೆ ಆಗಮಿಸಿದ ಜ್ಯೋತಿ ರಥಕ್ಕೆ ಪೂಜೆ ಸಲ್ಲಿಸಿ ಗೌರವ ನಮನಗಳನ್ನು ಅರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಪ್ರಮುಖರು, ಪದಾಧಿಕಾರಿಗಳು, ಮಹಿಳೆಯರು ಹಾಗೂ ಹಕ್ಕಿಪಿಕ್ಕಿ ಮತ್ತು ವಿವಿಧ ಸಮಾಜದ ಗಣ್ಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಣಿ ಚನ್ನಮ್ಮನವರ ಜ್ಯೋತಿಯನ್ನು ಕಣ್ತುಂಬಿಕೊಂಡರು. ಜೈಕಾರಗಳೊಂದಿಗೆ ರಥಯಾತ್ರೆಯನ್ನು ಮುಂದಿನ ಮಾರ್ಗಕ್ಕೆ ಗೌರವಪೂರ್ವಕವಾಗಿ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ್ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಅವರು ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿ ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ಇತಿಹಾಸ ಮತ್ತು ವೀರಾವೇಷದ ಹೋರಾಟದ ನೆನಪುಗಳನ್ನು ಯುವ ಪೀಳಿಗೆಗೆ ತಿಳಿಸಲು ಇಂತಹ ರಥಯಾತ್ರೆಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವಂತಹ ಚರಿತ್ರೆ ನಮ್ಮದಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ 3ನೇ ಅನಿವಾಸಿ ಕನ್ನಡಿಗರ ಸಮ್ಮೇಳನ
ವೀರಶೈವ ಲಿಂಗಾಯತ ಪಂಚಮಸಾಲಿ ಯುವ ಘಟಕ ರಾಜ್ಯಾಧ್ಯಕ್ಷ ಕಿಚಿಡಿ ಕೊಟ್ರೇಶ್, ಮುಖಂಡರಾದ ನೀಲಕಂಠ ಗೌಡ, ಕೊರಿಶೆಟ್ಟಿ ಲಿಂಗಪ್ಪ, ಎಸ್.ಎಂ. ರೇಖಾ ಪ್ರಕಾಶ್, ಮಧುರಚನ್ನಶಾಸ್ತ್ರೀ, ಸಿಲಿಂಗಪ್ಪ, ದೇವರಾಜ್ ಹನುವಳ್, ವೀರೇಶ್ ಸಿದ್ದನಗೌಡ, ವೀರಬಸವ, ಒಪ್ಪತ್ತೆಪ್ಪ, ರೇವಣಸಿದ್ದಪ್ಪ, ಗೌಳಿ ರುದ್ರಪ್ಪ, ಚಂದ್ರಶೇಖರ, ಶಂಭು ಇತರರಿದ್ದರು.