ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Road Accident: ಬೈಕ್‌ಗೆ ಬೊಲೆರೋ ಡಿಕ್ಕಿ, ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಸಾವು

ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೊಲೆರೋ ಡಿಕ್ಕಿಯಾಗಿದೆ. ಸದ್ಯ ಗೂಡ್ಸ್ ವಾಹನ ಹಿಡಿದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಕೃಷ್ಣ, ಹನುಮಂತಪ್ಪ

ವಿಜಯನಗರ, ಏ. 06 : ಬೈಕ್‌ನಲ್ಲಿ (bike) ಪ್ರಯಾಣಿಸುತ್ತಿದ್ದ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿಗಳು (forest watchers) ಬೊಲೇರೋ ಗೂಡ್ಸ್ ವಾಹನ ಡಿಕ್ಕಿಯಾಗಿ (Road Accident) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯನಗರ (vijayanagara) ಜಿಲ್ಲೆಯ ಹೊಸಪೇಟೆ (hosapete) ತಾಲೂಕಿನ ವೆಂಕಟಾಪುರ ಗ್ರಾಮದ ಬಳಿ ಇಂದು ನಡೆದಿದೆ. ಕಮಲಾಪುರದ ಕೃಷ್ಣ (26) ಹಾಗೂ ವೆಂಕಟಪುರದ ಹನುಮಂತಪ್ಪ (50) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೊಲೆರೋ ಡಿಕ್ಕಿಯಾಗಿದೆ. ಸದ್ಯ ಗೂಡ್ಸ್ ವಾಹನ ಹಿಡಿದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಂಪಿ ಸಿಪಿಐ ರಾಜೇಶ್ ಬಟಕುರ್ಕಿ ಭಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ತೆರಳಿದ ಕ್ಯಾಬ್‌ ಚಾಲಕರು ನೀರುಪಾಲು

ಚಿಕ್ಕಬಳ್ಳಾಪುರ: ಈಜಾಡಲು ತೆರಳಿದ್ದ ಇಬ್ಬರು ಕ್ಯಾಬ್ ಚಾಲಕರು (Cab Driver) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ (Shidlaghatta) ತಾಲೂಕಿನ ರಾಮಸಮುದ್ರ ಕೆರೆಯಲ್ಲಿ ನಡೆದಿದೆ. ಮೃತರನ್ನು ಬೆಂಗಳೂರು (Bengaluru) ಮೂಲದ ಕಿಶೋರ್ ಹಾಗೂ ಗಿರೀಶ್ ಎಂದು ಗುರುತಿಸಲಾಗಿದೆ.

Road Accident: ಓವರ್‌ಟೇಕ್‌ ವೇಳೆ ಕೆಎಸ್‌ಆರ್‌ಟಿಸಿ- ಖಾಸಗಿ ಬಸ್‌ ಡಿಕ್ಕಿ, ಇಬ್ಬರು ಸಾವು

8 ಮಂದಿ ಸ್ನೇಹಿತರು ತಮ್ಮ ಎರಡು ಕಾರುಗಳಲ್ಲಿ ಗಡಿಮಿಂಚೇನಹಳ್ಳಿ ಗ್ರಾಮದ ಸ್ನೇಹಿತರ ಮನೆಗೆ ಜಾತ್ರೆಗೆ ಬಂದಿದ್ದರು. ಜಾತ್ರೆಗೆ ಬಂದವರು ಕೆರೆಯಲ್ಲಿ ಈಜಾಡಲು ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಇಬ್ಬರ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಪೇರೆಸಂದ್ರ ಹಾಗೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಹರೀಶ್‌ ಕೇರ

View all posts by this author