ಹೊಸಪೇಟೆ, ಜು.20: ನಗರದ ರಾಣಿಪೇಟೆಯಲ್ಲಿ (Vijayanagara News) ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಜಯಶ್ರೀ ಚೈಲ್ಡ್ ಕೇರ್ ಮಕ್ಕಳ ಹಾಗೂ ನವಜಾತ ಶಿಶುಗಳ ಆರೈಕೆ ಆಸ್ಪತ್ರೆ ಉದ್ಘಾಟನೆಯಾಯಿತು. ಈ ಆಸ್ಪತ್ರೆಯನ್ನು ಡಾ. ಹರ್ಷಿತಾ ಜೈನ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾಗಿದ್ದು, ನವಜಾತ ಶಿಶುಗಳು, ಶಿಶುಗಳು, ಮಕ್ಕಳು ಹಾಗೂ ಹದಿಹರೆಯದವರಿಗೆ ವಿಶ್ವಮಟ್ಟದ ಆರೋಗ್ಯ ಸೇವೆಯನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶವನ್ನು ಹೊಂದಿದೆ.
ಆಸ್ಪತ್ರೆಯನ್ನು ಜಿಪಂ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ, ಬಲ್ಡೋಟಾ ಗ್ರೂಪ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿದೇರ್ಶಕ ನರೇಂದ್ರ ಬಲ್ಡೋಟಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ. ಲಲಿತ್ ಜೈನ್, ಡಾ. ಪ್ರಫುಲ್ ಜೈನ್, ಡಾ. ರಾಜೀವ್, ವ್ಯವಸ್ಥಾಪಕ ನಿದೇರ್ಶಕ ರಾಜೇಂದ್ರ ಭೂರತ್ ಇದ್ದರು.
ವಿಜಯಶ್ರೀ ಚೈಲ್ಡ್ ಕೇರ್ ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ಅನುಭವಿ ಮಕ್ಕಳ ತಜ್ಞರು ಹಾಗೂ ನುರಿತ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿದ್ದು, ಮಕ್ಕಳಿಗೆ ಸುರಕ್ಷಿತ, ಗುಣಮಟ್ಟದ ಮತ್ತು ಕರುಣಾಮಯ ಆರೋಗ್ಯ ಸೇವೆಗಳನ್ನು ನೀಡಲು ಬದ್ಧವಾಗಿದೆ ಎಂದು ಡಾ. ಹರ್ಷಿತಾ ಜೈನ್ ತಿಳಿಸಿದರು.
ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಹೊರರೋಗಿ ವಿಭಾಗ, ನವಜಾತ ಶಿಶುಗಳ ಆರೈಕೆ, ಲಸಿಕಾ ಸೇವೆಗಳು, ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿ ಮೌಲ್ಯಮಾಪನ, ಪೌಷ್ಟಿಕಾಂಶ ಹಾಗೂ ಆಹಾರ ಸಲಹೆ, ತುರ್ತು ಮಕ್ಕಳ ವೈದ್ಯಕೀಯ ಸೇವೆ, ತಡೆಗಟ್ಟುವ ಆರೋಗ್ಯ ಸೇವೆಗಳು, ಪೋಷಕರಿಗೆ ಮಕ್ಕಳ ಆರೋಗ್ಯ ಜಾಗೃತಿ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದರು.
ಪ್ರತಿಯೊಬ್ಬ ಮಗುವಿಗೂ ವಿಶ್ವಾಸ, ಕಾಳಜಿ ಮತ್ತು ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ. ಹೊಸಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಕುಟುಂಬಗಳಿಗೆ ವಿಶ್ವಮಟ್ಟದ ಮಕ್ಕಳ ಆರೋಗ್ಯ ಸೇವೆಯನ್ನು ನೀಡಲು ವಿಜಯಶ್ರೀ ಚೈಲ್ಡ್ ಕೇರ್ ಸದಾ ಬದ್ಧವಾಗಿದೆ ಎಂದು ಹೇಳಿದರು.
Health Tips: ರೋಗ ನಿರೋಧಕ ಶಕ್ತಿಯಿಂದ ಕೂದಲಿನ ಆರೈಕೆಯವರೆಗೆ...ನೆಲ್ಲಿಕಾಯಿಯ 14 ಲಾಭಗಳು ಇಲ್ಲಿವೆ
ವಿಜಯಶ್ರೀ ಚೈಲ್ಡ್ ಕೇರ್ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿದ್ದು, ಗುಣಮಟ್ಟದ ಮತ್ತು ವಿಶ್ವಾಸಾರ್ಹ ವೈದ್ಯಕೀಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.