ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶೇ.16 ಡಿವಿಡೆಂಡ್ ಘೋಷಿಸಿದ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್

Vijayanagara News: ಕಳೆದ ನವೆಂಬರ್‌ನಲ್ಲಿ ಹೊಸಪೇಟೆಯಲ್ಲಿ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯಗಳ ಸ್ವಂತ ಕಟ್ಟಡ ಹೊಂದಿರುವ ಬ್ಯಾಂಕ್, ಸದ್ಯದಲ್ಲೇ ದಿನದ 24 ಗಂಟೆಗಳ ಕಾಲ ಸೇವೆ ನೀಡುವ ಆಟೋವಾಲ್ಟ್ ಲಾಕರ್ ಸೇವಾ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲಿದೆ. ಅತ್ಯಂತ ಸುರಕ್ಷಿತವಾದ ಈ ಡಿಜಿಟಲ್ ಲಾಕರ್ ಸೇವೆಯನ್ನು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಕಾಸ ಬ್ಯಾಂಕ್ ನೀಡುತ್ತಿರುವುದು ಹೆಮ್ಮೆಯ ಸಂಗತಿ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದ್ದಾರೆ.

ಹೊಸಪೇಟೆ, ಆ.26: ಹೊಸಪೇಟೆಯಲ್ಲಿ ಸ್ಥಾಪನೆಗೊಂಡು ಮೂರು ದಶಕಗಳಿಂದ ಗ್ರಾಹಕರಿಗೆ ವರ್ಷದ 365 ದಿನಗಳೂ ನಿರಂತರ ಸೇವೆ ನೀಡುತ್ತಾ ಬಂದಿರುವ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಲಿ., ತನ್ನ 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಶೇ. 16 ರಷ್ಟು ಡಿವಿಡೆಂಡ್ ಘೋಷಿಸಿದೆ ಎಂದು ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.

ನಗರದ (Vijayanagara News) ಮಲ್ಲಿಗೆ ಸಭಾಂಗಣದಲ್ಲಿ ನಡೆದ ಬ್ಯಾಂಕಿನ 31ನೇ ಸರ್ವ ಸದಸ್ಯರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ 18 ಶಾಖೆಗಳ ಮೂಲಕ ನಾಡಿನ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿಕಾಸ ಬ್ಯಾಂಕ್ ನಿರಂತರವಾಗಿ ಗ್ರಾಹಕಸ್ನೇಹಿ ಸೇವೆ ನೀಡುತ್ತಾ ಬಂದಿದೆ ಎಂದರು.

ಕಳೆದ ನವೆಂಬರ್‌ನಲ್ಲಿ ಹೊಸಪೇಟೆಯಲ್ಲಿ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯಗಳ ಸ್ವಂತ ಕಟ್ಟಡ ಹೊಂದಿರುವ ಬ್ಯಾಂಕ್, ಸದ್ಯದಲ್ಲೇ ದಿನದ 24 ಗಂಟೆಗಳ ಕಾಲ ಸೇವೆ ನೀಡುವ ಆಟೋವಾಲ್ಟ್ ಲಾಕರ್ ಸೇವಾ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲಿದೆ. ಅತ್ಯಂತ ಸುರಕ್ಷಿತವಾದ ಈ ಡಿಜಿಟಲ್ ಲಾಕರ್ ಸೇವೆಯನ್ನು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಕಾಸ ಬ್ಯಾಂಕ್ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ನಿರಂತರ ಪ್ರಗತಿಯ ಹಿನ್ನೆಲೆಯಲ್ಲಿ ವಿಕಾಸ ಬ್ಯಾಂಕ್ ಸದ್ಯದಲ್ಲೇ ಶೆಡ್ಯೂಲ್ಡ್ ಬ್ಯಾಂಕ್ ಸ್ಥಾನಮಾನ ಪಡೆಯಲು ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿ ಹೆಚ್ಚಿನ ವ್ಯಾಪಕ ಸೇವೆ ನೀಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಬ್ಯಾಂಕಿನ ಭವಿಷ್ಯದ ದೃಷ್ಟಿಯಿಂದ ಹೊಸ ಚಿಂತನೆ ಮತ್ತು ಹೊಸ ಪೀಳಿಗೆಯನ್ನು ಒಳಗೊಳ್ಳುವ ಹಿನ್ನೆಲೆಯಲ್ಲಿ ಈ ಬಾರಿಯ ನಿರ್ದೇಶಕ ಮಂಡಳಿಯಲ್ಲಿ ಅನುಭವಿ ಮತ್ತು ಯುವ ಸದಸ್ಯರು ಆಯ್ಕೆಯಾಗಿದ್ದಾರೆ. ಈ ರೀತಿ ನಿರ್ದೇಶಕ ಮಂಡಳಿಯನ್ನು ರಿಸರ್ವ್ ಬ್ಯಾಂಕ್ ಆಶಯದಂತೆ ಪುನಾರಚಿಸಿದ ವಿಕಾಸ ಬ್ಯಾಂಕ್, ಸದಾ ಹೊಸ ಆಶಯಗಳಿಗೆ ತೆರೆದುಕೊಳ್ಳುವ ಮತ್ತು ನೀತಿ-ನಿಯಮಗಳನ್ನು ಪಾಲಿಸುವ ಸಹಕಾರಿ ಸಂಸ್ಥೆಯಾಗಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ವಿಕಾಸ ವಿಹಾರ ಮತ್ತು ಸೈಬರ್ ವಿಜಲೆ ಮಾಸ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು. 25-26 ನೇ ಆರ್ಥಿಕ ವರ್ಷದಲ್ಲಿ ಎಲ್ಲಾ ರೀತಿಯ ಮಾನದಂಡದಲ್ಲಿ ಉತ್ತಮವಾಗಿ ಸಾಧನೆ ಮಾಡಿದ ಹೊಸಪೇಟೆ ಶಾಖೆಯನ್ನು ವರ್ಷದ ಅತ್ಯುತ್ತಮ ಉತ್ತಮ ಶಾಖೆ ಎಂಬ ಪುರಸ್ಕಾರವನ್ನು ವ್ಯವಸ್ಥಾಪಕಿ ಅನುಪಮಾ ಹಾಗೂ ತಂಡಕ್ಕೆ ನೀಡಿ ಗೌರವಿಸಲಾಯಿತು.

ನಮ್ಮ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್ ಕೌಂಟರ್‌ಗಳಿಲ್ಲ, ಅನ್ನ, ಅಕ್ಷರ, ಆರೋಗ್ಯ ವಾಣಿಜ್ಯಕ್ಕೆ ಬಳಕೆಯಾಗದಿರಲಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ವ್ಯವಸ್ಥಾಪನ ಮಂಡಳಿ ಅಧ್ಯಕ್ಷ ಬಿ.ಜೆ. ಕುಲಕರ್ಣಿ, ನಿರ್ದೇಶಕರಾದ ದೊಡ್ಡ ಬೋರಯ್ಯ, ಅನಂತ ಜೋಶಿ, ಬೇಳೂರು ಸುದರ್ಶನ, ಗಂಗಾಧರ ಪತ್ತಾರ್, ಉಷಾ ಕೆ, ಜಗದೀಶ್ ಹಿರೇಮಠ, ಶಿವಕುಮಾರ್ ಶೆಟಗಾರ್, ಸುನಿಲ್ ಕುಮಾರ್, ನವ್ಯಶ್ರೀ ಹಿರೇಮಠ, ರಾಘವೇಂದ್ರ ಎಂ, ಲಲಿತ ಪ್ರಸನ್ನ, ಶಂಕರ್ ಜಾದವ್, ಜಿ. ಚಾಂದ್ ಹುಸೇನ್, ಅಚ್ಯುತರಾವ್, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಸೇರಿದಂತೆ ಇತರರಿದ್ದರು.