ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೃಷ್ಣೆಗೆ ಶನಿವಾರ ಮುಖ್ಯಮಂತ್ರಿ ಬಾಗಿನ

ರೈತರು, ಸಾರ್ವಜನಿಕರಿಗೆ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಪ್ರವಾಸಿ ಮಂದಿರದ ಬಲ ಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮನವಿ ಸಲ್ಲಿಸುವವರು ಮೊದಲೇ ಸ್ಥಳೀಯ ಠಾಣೆಯಲ್ಲಿ ಅನುಮತಿ ಪಡೆಯಬೇಕು, ಒಂದು ‌ಮನವಿಗೆ ನಾಲ್ವರಿಗೆ ಅವಕಾಶ ನೀಡಲಾಗುತ್ತದೆ. ಈ ಬಾರಿ ಭದ್ರತೆ ಹೆಚ್ಚಿಸಲಾಗಿದ್ದು ಸಾರ್ವಜನಿಕ ಪ್ರವೇಶ ನಿಷೇಧವಿದೆ ಎಂದರು. ಮಧ್ಯಾಹ್ನ 3 ಕ್ಕೆ ಆಲಮಟ್ಟಿಯಿಂದ ಅವರು ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.

ಆಲಮಟ್ಟಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಸೆ.6 ಶನಿವಾರ ಮಧ್ಯಾಹ್ನ 12 ಕ್ಕೆ ಕೃಷ್ಣೆಗೆ ಆಲಮಟ್ಟಿ ಯಲ್ಲಿ ಬಾಗಿನ ಅರ್ಪಿಸಲಿದ್ದಾರೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ಗುರುವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬಾಗಿನ ಅರ್ಪಣೆಯ ನಂತರ ಪ್ರವಾಸಿ ಮಂದಿರಕ್ಕೆ ಬಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದರು.

ರೈತರು, ಸಾರ್ವಜನಿಕರಿಗೆ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಪ್ರವಾಸಿ ಮಂದಿರದ ಬಲ ಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮನವಿ ಸಲ್ಲಿಸುವವರು ಮೊದಲೇ ಸ್ಥಳೀಯ ಠಾಣೆಯಲ್ಲಿ ಅನುಮತಿ ಪಡೆಯಬೇಕು, ಒಂದು ‌ಮನವಿಗೆ ನಾಲ್ವರಿಗೆ ಅವಕಾಶ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ: Chikkaballapur News: ಮುಚ್ಚಿ ಹೋಗಿರುವ ಪುರಾತನ ಕಲ್ಯಾಣಿ ಮರುಜೀವಕ್ಕೆ ಯತ್ನ : ಸಾರ್ವಜನಿಕರಲ್ಲಿ ಗರಿಗೆದರಿದ ಕುತೂಹಲ

ಈ ಬಾರಿ ಭದ್ರತೆ ಹೆಚ್ಚಿಸಲಾಗಿದ್ದು ಸಾರ್ವಜನಿಕ ಪ್ರವೇಶ ನಿಷೇಧವಿದೆ ಎಂದರು. ಮಧ್ಯಾಹ್ನ 3 ಕ್ಕೆ ಆಲಮಟ್ಟಿಯಿಂದ ಅವರು ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.

ಬೆಳಗಾವಿ ಐಜಿಪಿ ಬಂದೋಬಸ್ತ ನೇತೃತ್ವ ವಹಿಸಲಿದ್ದಾರೆ. ಇಬ್ಬರು ಎಸ್.ಪಿ, ಆರು ಜನ ಡಿವೈಎಸ್ ಪಿ, 13 ಸಿಪಿಐ, 32 ಪಿಎಸ್ಐ, 24 ಎಎಸ್ಐ, 90 ಜನ ಹೆಡ್ ಕಾನ್ಸಟೇಬಲ್, 242 ಪೊಲೀಸ್ ಕಾನ್ಸಟೇಬಲ್, 24 ಜನ ಮಹಿಳಾ ಕಾನ್ಸಟೇಬಲ್ ‌ಜತೆಗೆ ಕೆಎಸ್ಐಎಸ್ ಎಫ್ ಪೊಲೀಸರು ಬಂದೋ ಬಸ್ತಗಾಗಿ ನಿಯೋಜನೆಗೊಳಿಸಲಾಗುತ್ತಿದೆ ಎಂದರು.

ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂರ್ಣ ಕುಂಭ ಸ್ವಾಗತ ಇಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಇ ಡಿ.ಬಸವರಾಜ, ಎಸ್ ಇ ವಿ.ಆರ್. ಹಿರೇಗೌಡರ, ಹೆಚ್ಚುವರಿ ಎಸ್ ಪಿ ರಾಮನಗೌಡ ಹಟ್ಟಿ, ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ರವಿ ಚಂದ್ರಗಿರಿಯವರ, ಅಶೋಕ ಚವ್ಹಾಣ ಮತ್ತಿತರರು ಇದ್ದರು.