ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿಜಯಪುರ
ಬಿಜೆಪಿ ನಗರ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಅಪಘಾತದಲ್ಲಿ ಸಾವು

ಬಸನಗೌಡ ಪಾಟೀಲ್‌ ಯತ್ನಾಳ ಉಚ್ಛಾಟನೆಗೆ ವಿರೋಧ

ಬಿಜೆಪಿಯ ಪ್ರಮುಖ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟನೆ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಬುಧವಾರ ರಾಜೀನಾಮೆ ನೀಡಿದ್ದ ಪದಾಧಿಕಾರಿ ಅಪಘಾತದಲ್ಲಿ ಮೃತಪಟ್ಟಿದ್ದಾರ. ಬಿಜೆಪಿ ನಗರ ಎಸ್ಟಿ ಮೋರ್ಚಾದ ಕಾರ್ಯದರ್ಶಿ ಸಂತೋಷ ತಟಗಾರ ಪ್ರಯಾಣಿಸುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಯಾಗಿ ಈ ಘಟನೆ ನಡೆದಿದೆ.

Basangouda Patil Yatnal: ಯತ್ನಾಳ್ ಉಚ್ಛಾಟನೆ ವಿರೋಧಿಸಿ ಲಿಂಗಾಯತ ಶಾಸಕರು ಬಿಜೆಪಿಯಿಂದ ಹೊರಬರಲು ಮಠಾಧೀಶರ ಕರೆ

ಯತ್ನಾಳ್ ಉಚ್ಛಾಟನೆ ವಿರೋಧಿಸಿ ಲಿಂಗಾಯತ ಶಾಸಕರು ಬಿಜೆಪಿಯಿಂದ ಹೊರಬರಲು ಕರೆ

ಯತ್ನಾಳ್ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಛಾಟನೆ ಮಾಡುವಂತೆ ಮಾಡಿವೆ. ಬಿಜೆಪಿ ಪಕ್ಷದ ವರಿಷ್ಠರು ಯತ್ನಾಳ್ ಅವರ ಉಚ್ಛಾಟನೆ ಆದೇಶವನ್ನು ವಾಪಸ್ ಪಡೆಯದೇ ಹೋದರೆ ಲಿಂಗಾಯತ ಸಮುದಾಯದ ಎಲ್ಲಾ ಶಾಸಕರು ಬಿಜೆಪಿ ಬಿಟ್ಟು ಹೊರಬರಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

Basanagouda Patil Yatnal: ಬಿಜೆಪಿಯಿಂದ ಯತ್ನಾಳ್‌ ಉಚ್ಚಾಟನೆಗೆ ಇದೇ ಕಾರಣ!

ಬಿಜೆಪಿಯಿಂದ ಯತ್ನಾಳ್‌ ಉಚ್ಚಾಟನೆಗೆ ಇದೇ ಕಾರಣ!

ನಿರಂತರವಾಗಿ ಬಿಎಸ್‌ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಅವರ ವಿರುದ್ಧ ವಾಗ್ದಾಳಿ, ಬಿಜೆಪಿಯಲ್ಲೇ ಪ್ರತ್ಯೇಕ ಬಣ ರಚಿಸಲು ಯತ್ನ, ಹೈಕಮಾಂಡ್‌ ಹಲವು ಬಾರಿ ನೋಟೀಸ್‌ ನೀಡಿದ್ದರೂ ಉಡಾಫೆ ತೋರಿಸಿದ್ದು ಇವು ಯತ್ನಾಳ್‌ ಅವರಿಗೆ ಮುಳುವಾಗಿವೆ.

Basangouda Patil Yatnal: ಯತ್ನಾಳ್‌ ಉಚ್ಚಾಟನೆ ಬೆನ್ನಲ್ಲೇ ಬೆಂಬಲಿಗರ ರಾಜೀನಾಮೆ ಪರ್ವ

ಯತ್ನಾಳ್‌ ಉಚ್ಚಾಟನೆ ಬೆನ್ನಲ್ಲೇ ಬೆಂಬಲಿಗರ ರಾಜೀನಾಮೆ ಪರ್ವ

Basangouda Patil Yatnal: ಶಾಸಕ ಯತ್ನಾಳ್ ಉಚ್ಚಾಟನೆ ಖಂಡಿಸಿ, ಬಿಜೆಪಿಗೆ ತಕ್ಕ ಪಾಠ ಕಲಿಸಲು ಶಾಸಕ ಬಸನಗೌಡ ಯತ್ನಾಳ್ ಅವರ ಬೆಂಬಲಿಗರು ಹೋರಾಟಕ್ಕೆ ಕರೆ ನೀಡಿದ್ದಾರೆ. ಷಢ್ಯಂತ್ರ ರೂಪಿಸಿರುವ ವೈರಿಗಳಿಗೆ ನಮ್ಮ ತಾಕತ್ತು ಏನೆಂದು ಸಾಬೀತು ಮಾಡೋಣ. ಎಲ್ಲರೂ ಒಂದಾಗಿ ರಾಜ್ಯವ್ಯಾಪಿ ಹೋರಾಟ ಶುರು ಮಾಡಬೇಕು ಎಂದು ಬೆಂಬಲಿಗರು ಕರೆ ನೀಡಿದ್ದಾರೆ.

Road Accident: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಲಾರಿ ಡಿಕ್ಕಿ, ಒಬ್ಬ ಸಾವು, ಮೂವರಿಗೆ ಗಾಯ

ಲಾರಿ ಡಿಕ್ಕಿ, ಒಬ್ಬ ಸಾವು, 3 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗಾಯ

ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ತೆಲಂಗಾಣ ಮೂಲದ ಲಾರಿ ಡಿಕ್ಕಿಯಾದ ಪರಿಣಾಮ ವೆಂಕು ಚವ್ಹಾಣ್ (42) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿನಿಯರಾದ ಐಶ್ವರ್ಯ, ಪ್ರೀತಿ, ಶ್ವೇತಾ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೊಲಿಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Car Accident: ವಿಜಯಪುರದಲ್ಲಿ ಭೀಕರ ಅಪಘಾತ; ಮರಕ್ಕೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

ವಿಜಯಪುರದಲ್ಲಿ ಮರಕ್ಕೆ ಕಾರು ಡಿಕ್ಕಿಯಾಗಿ ಮೂವರ ದುರ್ಮರಣ

Car Accident: ವಿಜಯಪುರ ತಾಲೂಕಿನ ಹೆಗಡಿಹಾಳ ಕ್ರಾಸ್ ಬಳಿ ಘಟನೆ ನಡೆದಿದೆ. ಉಕ್ಕಲಿ ಗ್ರಾಮದಿಂದ ವಿಜಯಪುರಕ್ಕೆ ತೆರಳುತ್ತಿದ್ದಾಗ ಸ್ವಿಫ್ಟ್ ಡಿಸೈರ್ ಕಾರು ಅಪಘಾತಕ್ಕೀಡಾಗಿದೆ. ಕಾರು ಮರಕ್ಕೆ ಡಿಕ್ಕಿಯಾದ ಹಿನ್ನೆಲೆ ಗಂಭೀರವಾಗಿ ಗಾಯಗೊಂಡ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Vijayapura News: ನೀರು ಕುಡಿಯಲು ಹೋಗಿ ಬಾವಿಗೆ ಬಿದ್ದ ಬಾಲಕ, ರಕ್ಷಿಸಲು ಹೋದ ಅಜ್ಜಿಯೂ ನೀರುಪಾಲು!

ಬಾವಿಯಲ್ಲಿ ಮುಳುಗಿದ ಬಾಲಕ, ರಕ್ಷಿಸಲು ಹೋದ ಅಜ್ಜಿಯೂ ನೀರುಪಾಲು!

Vijayapura News: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ತೋಟದಲ್ಲಿ ಘಟನೆ ನಡೆದಿದೆ. ನೀರು ಕುಡಿಯಲು ಬಾವಿಗೆ ಇಳಿದಿದ್ದ ಬಾಲಕ ಜಾರಿ ನೀರಿಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಅಜ್ಜಿ ತೆರಳಿದ್ದು, ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

Upper Krishna Project: ರೈತರಿಗೆ ಸಿಹಿಸುದ್ದಿ; ನಾಳೆಯಿಂದ ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ

ನಾಳೆಯಿಂದ ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ

Upper Krishna Project: ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ 2024-25ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದೆ. ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ಸೇರಿ ಪ್ರತಿ ದಿನ 0.8ಂಟಿ.ಎಂ.ಸಿ ದರದಂತೆ ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Vishwavani Impact: ವಿಶ್ವವಾಣಿ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ: ಯಂತ್ರೋಪಕರಣ ಬಾಡಿಗೆ ಬಾಕಿ ಚುಕ್ತಾ

ಕೊಳಬೆ ಬಾವಿಗೆ ಬಿದ್ದ ಮಗು ರಕ್ಷಣೆ: ಬಿಲ್‌ ಪಾವತಿ

2024ರ ಏಪ್ರಿಲ್ 3ರಂದು ಲಚ್ಯಾಣ ಗ್ರಾಮದಲ್ಲಿ ಕೊಳೆಬಾವಿಗೆ ಬಿದ್ದಿದ್ದ ಮಗು ಸಾತ್ವಿಕ ಗುಜ ಗೊಂಡನನ್ನು ಸ್ಥಳೀಯರ ಜೆಸಿಬಿ, ಹಿಟ್ಯಾಚಿ, ಟ್ರ್ಯಾಕ್ಟರ್ ಬ್ರೇಕರ್ಸ್, ಬೋರ್‌ವೆಲ್ ಕ್ಯಾಮೆರಾ ಹೀಗೆ ವಿವಿಧ ಯಂತ್ರೋಪಕರಣಗಳನ್ನು ಬಳಸಿಕೊಂಡು ರಕ್ಷಣಾ ತಂಡವು ಸತತ 22 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕ ಸಾತ್ವಿಕನನ್ನು ಸಾವಿನ ದವಡೆಯಿಂದ ಪಾರುಮಾಡಿ ಹೊರಗೆ ತರುವಲ್ಲಿ ಯಶಸ್ವಿ ಯಾಗಿತ್ತು.

ಒಂದು ವರ್ಷವಾದರೂ ಯಂತ್ರೋಪಕರಣ ಬಿಲ್‌ ಬಾಕಿ

ಒಂದು ವರ್ಷವಾದರೂ ಯಂತ್ರೋಪಕರಣ ಬಿಲ್‌ ಬಾಕಿ

ಮಗುವಿನ ರಕ್ಷಣೆಗೆ ಯಂತ್ರೋಪಕರಣ ಪೂರೈಸಿ ಸತತ 22 ತಾಸು ಕೆಲಸ ಮಾಡಿ ಕಾರ್ಯಾಚರಣೆ ಯಶಸ್ವಿಗೊಳಿಸುವಲ್ಲಿ ನೆರವಾಗಿದ್ದೇವೆ. ಆದರೆ ನಮ್ಮ ಕೂಲಿ ಹಾಗೂ ಯಂತ್ರೋಪಕರಣಗಳ ಬಾಡಿಗೆ 3 ಲಕ್ಷದಷ್ಟು ಇನ್ನೂ ಪಾವತಿಯಾಗಿಲ್ಲ. ಬಿಲ್ ಮೊತ್ತ ಕ್ಕಾಗಿ ಗ್ರಾಪಂ ಪಿಡಿಓ ಅವರಿಂದ ಹಿಡಿದು, ತಹಸೀ ಲ್ದಾರ್, ಎಸಿ, ಡಿಸಿವರೆಗೂ ಭೇಟಿಯಾಗಿ ಕೇಳುತ್ತಲೇ ಬಂದಿದ್ದರೂ ವರ್ಷವಾದರೂ ಬಿಲ್ ಪಾವತಿ ಯಾಗಿಲ್ಲ

Godambi Kaka: ಹಾಸ್ಯ ಕಲಾವಿದ, ಸೋಶಿಯಲ್ ಮೀಡಿಯಾ ಸ್ಟಾರ್ ಗೋಡಂಬಿ ಕಾಕಾ ಇನ್ನಿಲ್ಲ

Godambi Kaka: ಸೋಶಿಯಲ್ ಮೀಡಿಯಾ ಸ್ಟಾರ್ ಗೋಡಂಬಿ ಕಾಕಾ ಇನ್ನಿಲ್ಲ

Godambi Kaka: ಬಾಗೇವಾಡಿ ಸಮೀಪದ ನಾಗೂರ ಗ್ರಾಮದ ರಂಗಭೂಮಿ ಕಲಾವಿದನಾಗಿದ್ದ ಬಸಲಿಂಗಯ್ಯ ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ʼಗೊಡಂಬಿ ಕಾಕಾʼ ಎಂಬ ಹೆಸರಿನಿಂದಲೇ ಚಿರಪರಿಚಿತನಾಗಿದ್ದರು. ಯೂಟ್ಯೂಬ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಪಾಲೋವರ್ಸ, ಇನ್ಸ್ಟಾಗ್ರಾಂನಲ್ಲಿ ಎರಡು ಲಕ್ಷ ಪಾಲೋವರ್ಸ ಹೊಂದಿರುವ ಗೊಡಂಬಿ ಕಾಕಾನ ಕಾಮಿಡಿ ವಿಡಿಯೋಗಳು 1 ಕೋಟಿಗೂ ಅಧಿಕ ವೀಕ್ಷಣೆ ಕಂಡಿವೆ

Vijayapura Breaking: ಆದಾಯ ಮೀರಿ ಆಸ್ತಿ ಗಳಿಕೆ: ಕೆಎಚ್‌ಬಿ ಎಫ್ ಡಿ ಎ ಶಿವಾನಂದ ಕೆಂಬಾವಿಗೆ ಲೋಕಾಯುಕ್ತ ಬಿಸಿ

ಕೆಎಚ್‌ಬಿ ಎಫ್ ಡಿ ಎ ಶಿವಾನಂದ ಕೆಂಬಾವಿಗೆ ಲೋಕಾಯುಕ್ತ ಬಿಸಿ

ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರೋ ನಿವಾಸ ವಿಜಯಪುರ ತಾಲೂಕಿನ ತಿಡಗುಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ದಾಖಲೆಗಳ ಪರಿಶೀಲನೆ ಮಾಡು ತ್ತಿರುವ ಅಧಿಕಾರಿಗಳು ಲೋಕಾಯುಕ್ತ ಎಸ್ಪಿ ಡಿ ಮಲ್ಲೇಶ ನೇತೃತ್ವದಲ್ಲಿ ಡಿವೈಎಸ್ಪಿ ಸುರೇಶ ರೆಡ್ಡಿ, ಸಿಪಿಐ ಆನಂದ ಟಕ್ಕಣ್ಣನವರ, ಸಿಬ್ಬಂದಿಗಳಿಂದ ದಾಳಿ ನಡೆಸಿದರು.

Vijayapura News: ಕೌಟುಂಬಿಕ ಕಲಹ- ಮೊಬೈಲ್ ಟವರ್ ಏರಿ ಕುಳಿತ ಯುವಕ!

ಕೌಟುಂಬಿಕ ಕಲಹ-ಮೊಬೈಲ್ ಟವರ್ ಏರಿ ಕುಳಿತ ಯುವಕ!

Vijayapura News: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಯುವಕನೋರ್ವ ಮೊಬೈಲ್ ಟವರ್ ಏರಿದ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳದಲ್ಲಿ ಜರುಗಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆಯಲ್ಲಿ ಗಲಾಟೆ ಮಾಡಿಕೊಂಡ ಯುವಕ ಟವರ್ ಮೇಲೆ ಕುಳಿತು ಗೊಂದಲ ಸೃಷ್ಟಿಸಿದ್ದಾನೆ.

Vijayapura (Indi) News: ಕೈಬಾಯಿ ಪರಿಶುದ್ದವಾಗಿರಿಸಿಕೊಂಡು ನಿವೃತ್ತಿ ಹೊಂದುತ್ತಿರುವ ಸುಭಾಷ ರುದ್ರವಾಡಿ ಜನಮಾನಸದಲ್ಲಿದ್ದಾರೆ

ಸುಭಾಷ ರುದ್ರವಾಡಿ ಪರಿಶುದ್ದ ಅಧಿಕಾರಿ: ಎಂ.ಆರ್ ಪಾಟೀಲ

ಸುಭಾಷ ರುದ್ರವಾಡಿ ಅಧ್ಯಾತ್ಮಿಕ ಜೀವಿ ದೇವರ ಬಗ್ಗೆ ನಂಬಿಕೆ ಇರುವ ಒಳ್ಳೆಯ ಸಜ್ಜನ ಅಧಿಕಾರಿ ಕಳೆದ 35 ವರ್ಷಗಳ ಸುದೀರ್ಘ ಒಂದೇ ತಾಲೂಕಿನಲ್ಲಿ ನೌಕರಿ ಮಾಡುತ್ತಿರುವುದು ಅವರ ಒಳ್ಳೇತನವೇ ಕಾರಣ ಅನೇಕ ಶಾಸಕರು, ಸಂಸದರು ಜನಪ್ರತಿನಿಧಿಗಳು ಬಂದಿದ್ದಾರೆ ಹೋಗಿದ್ದಾರೆ ಆದರೆ ಯಾರ ಕಣ್ಣಿನಲ್ಲಿಯೂ ವಕ್ರದೃಷ್ಠಿಯಿಂದ ಇವರನ್ನು ಕಂಡಿಲ್ಲ ಬಂದವ ರೆಲ್ಲರೂ ರುದ್ರವಾಡಿಯನ್ನು ಗೌರವದಿಂದ ಕಂಡಿದ್ದಾರೆ

ದೇವಾನು ದೇವತೆಗಳಿಗೆ ಕ್ಷೀರಾಭಿಷೇಕ, ನೀರಾಭಿಶೇಕ, ಹಣ್ಣುಗಳ ಅಭಿಷೇಕ ಮಾಡುವುದನ್ನು ನೋಡಿದ್ದೇವೆ..!

ಇಲ್ಲೊಂದು ದೇವರಿಗೆ ಮದ್ಯವನ್ನೇ (ಸಾರಾಯಿ) ಅಭಿಷೇಕ ಮಾಡಲಾಗುತ್ತದೆ

ಇಂಡಿ ನಗರದಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಈ ಗ್ರಾಮ ದಲ್ಲಿ ಮರುಳಸಿಧ್ಧೇಶ್ವರ ಹಾಗೂ ನಿಜಲಿಂಗ ತಾಯಿ ಎಂಬ ದೇವತೆಗಳಿವೆ. ಈ ದೇವತೆಗಳ ಜಾತ್ರೆ ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಾದ ಮೊದಲ ಸೋಮವಾರ ಧರ್ಮರ ದೇವರ ಜಾತ್ರೆ, ಅಮವಾಸ್ಯೆಯಾದ ಮೊದಲ ಗುರುವಾರರಂದು ನಿಜಲಿಂಗತಾಯಿ (ಸೀತಮ್ಮ) ದೇವರ ಜಾತ್ರೆ ನಡೆಯುತ್ತದೆ

ಭೀಮಾತೀರ ಶರಣ, ಸಂತರ ಸಾಹಿತಿಗಳ, ದಾರ್ಶನಿಕರ ಯುಗ ಪುರುಷರು ನಡೆದಾಡಿ ಈ ಭೂಮಿ ಪಾವನ

ಜನರ ಹೃದಯ ಶ್ರೀಮಂತಿ ಕೆಗೆ ಮಠ, ಮಾನ್ಯಗಳೇ ಕಾರಣ

ಭೂಗರ್ಭದ ಕೆಳಂತಸ್ಥಿನಲ್ಲಿ (ಗವಿ) ಶ್ರೀಸಿದ್ದಲಿಂಗ ಎಕಾಂತವಾಗಿ ಧ್ಯಾನ ಮಗ್ನರಾದ ಸ್ಥಳ ಸುಮಾರು 4.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು ಶ್ರೀಸಿದ್ದಲಿಂಗ ಮಹಾರಾಜರ ಮಹಾಮಂಟಪ ಸುಮಾರು ೭.೫೦ ಕೋಟಿ ರೂ ದಲ್ಲಿ ಅಂದರೆ ಗವಿ ಹಾಗೂ ಮಹಾಮಂಟಪ ಎರಡೂ ಸೇರಿ ೧೨ ಕೋಟಿ ರೂ ವೆಚ್ಚದಲ್ಲಿ ಭಕ್ತರು ನೂತನ ಶ್ರೀಮಠದ ನಿರ್ಮಾಣ ಕಾರ್ಯ ಮುಂದು ವರೆದಿದೆ

Viral News: 24 ವರ್ಷ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಕುಂಭ ಮೇಳದಲ್ಲಿ ಸನ್ಯಾಸಿಯಾಗಿ ಪತ್ತೆ!

24 ವರ್ಷ ಹಿಂದೆ ಕಾಣೆಯಾಗಿದ್ದವನು ಕುಂಭ ಮೇಳದಲ್ಲಿ ಸನ್ಯಾಸಿಯಾಗಿ ಪತ್ತೆ!

ರಮೇಶ ದುಂಡಪ್ಪ ಚೌಧರಿ 24 ವರ್ಷಗಳ ಹಿಂದೆ ಅಂದರೆ 2001ರಲ್ಲಿ ಗ್ರಾಮದಿಂದ ಏಕಾಏಕಿ ನಾಪತ್ತೆಯಾಗಿದ್ದರು. ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ಕುಟುಂಬಸ್ಥರು ಸಾಕುಷ್ಟು ಹುಡುಕಾಟ ನಡೆಸಿದ್ದರು. ಆದರೆ ರಮೇಶ ಚೌಧರಿ ಪತ್ತೆಯಾಗಿರಲಿಲ್ಲ. ಆಕಸ್ಮಿಕವಾಗಿ ಗ್ರಾಮದ ಯಾತ್ರಿಕರ ಕಣ್ಣಿಗೆ ಬಿದ್ದು ಮತ್ತೆ ಊರಿಗೆ ಮರಳುವಂತಾಗಿದೆ.

Road Accident: ಕುಂಭ ಮೇಳಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ವಿಜಯಪುರದ ಇಬ್ಬರ ಸಾವು

ಕುಂಭ ಮೇಳಕ್ಕೆ ತೆರಳುತ್ತಿದ್ದ ವಾಹನ ಅಪಘಾತ, ವಿಜಯಪುರದ ಇಬ್ಬರ ಸಾವು

ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಮ್ಯಾಕ್ಸಿ ಕ್ಯಾಬ್‌ ವಾಹನ ಸೋಮವಾರ ತಡರಾತ್ರಿ ಹೊತ್ತಿಗೆ ಗುಜರಾತ್ ರಾಜ್ಯದ ಪೋರಬಂದರ್ ಸಮೀಪ ನಿಂತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಟ್ಟಣದ ಇಬ್ಬರು ಯಾತ್ರಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದರು. ಚಾಲಕ ಸಮೇತ ಒಟ್ಟು 17 ಮಂದಿ ಮ್ಯಾಕ್ಸಿ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದರು.

Lawrence Bishnoi: ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಗ್ಯಾಂಗ್‌ಸ್ಟರ್‌ ಬಿಷ್ಣೋಯಿ ಭಾವಚಿತ್ರ

ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಗ್ಯಾಂಗ್‌ಸ್ಟರ್‌ ಬಿಷ್ಣೋಯಿ ಭಾವಚಿತ್ರ

ವಿಜಯಪುರ ನಗರದಲ್ಲಿ ನಿನ್ನೆ ನಡೆದ ಶಿವಾಜಿ ಜಯಂತಿ ಉತ್ಸವದ ನಿಮಿತ್ತವಾಗಿ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಕೆಲವು ಯುವಕರು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಫೋಟೊ ಹಿಡಿದು ಹೆಜ್ಜೆ ಹಾಕಿದರು. ಒಂದು ಕಡೆ ಕೇಸರಿ ಧ್ವಜ, ಇನ್ನೊಂದೆಡೆ ಶಿವಾಜಿ ಮಹಾರಾಜರ ಭಾವಚಿತ್ರವಿರುವ ಕೇಸರಿ ಧ್ವಜಗಳ ನಡುವೆ ಗ್ಯಾಂಗ್‌ಸ್ಟರ್ ಫೋಟೋವನ್ನು ಕೂಡ ಪ್ರದರ್ಶಿಸಲಾಯಿತು.

Vijayapura News: ಇಂಡಿ ಪುರಸಭೆಯಲ್ಲಿ ಸಾಮಾನ್ಯ ಸಭೆ

ಇಂಡಿ ಪುರಸಭೆಯಲ್ಲಿ ಸಾಮಾನ್ಯ ಸಭೆ

24*7 ನೀರಿನ ಮನೆಗಳಿಗೆ ಜೋಡಣೆ ಮಾಡುವಾಗ ಪಟ್ಟಣದ ಒಳ ಸಿ.ಸಿ ರಸ್ತೆಗಳು ಸಂಪೂ‌ ರ್ಣ ಹಾಳಾಗಿವೆ, ಮಣ್ಣು ಮುಚ್ಚಿ ಹೋಗಿದ್ದಾರೆ ಕೂಡಲೆ ಕ್ರಮ ಕೈಗೊಳ್ಳಿ ಪಟ್ಟಣದಲ್ಲಿ 24*7 ನೀರು ಪ್ರತಿ ಮನೆಗಳಿಗೆ ನೀರು ನಿರ್ವಹಣೆಯ ಬಾಕಿ ಉಳಿದ ಬಿಲ್ಲು ಎಷ್ಟು ? ಬಿಲ್ಲ ಪಾವತಿಸದಿದ್ದರೆ ಠರಾವು ಮಾಡಿ ಒಂದೇ ಅವಧಿಯಲ್ಲಿ ಅರ್ಧ ಬಿಲ್ ಪಾವತಿಸುವಂತೆ ಆದೇಶ ಮಾಡಿ ಸಾರ್ವ‌ ಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಸದಸ್ಯ ಅಯೂ್ ಬಾಗವಾನ ಹಾಗೂ ಮುಸ್ತಾಕ ಇಂಡಿಕರ್ ಜಂಟಿ ಸಭೆಯಲ್ಲಿ ತಿಳಿಸಿದರು

Ragging  Case: ವಿಜಯಪುರ  ಮೆಡಿಕಲ್‌ ಕಾಲೇಜಿನಲ್ಲಿ ರ‍್ಯಾಗಿಂಗ್ ; ಜಮ್ಮು ಕಾಶ್ಮೀರ ವಿದ್ಯಾರ್ಥಿ ಮೇಲೆ ಹಲ್ಲೆ

ಕರ್ನಾಟದಲ್ಲಿಯೂ ರ‍್ಯಾಗಿಂಗ್ ಭೂತ ! ವಿದ್ಯಾರ್ಥಿ ಮೇಲೆ ಹಲ್ಲೆ

ವಿಜಯಪುರದ ವೈದ್ಯಕೀಯ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯ ಮೇಲೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕ್ಷುಲಕ ಕಾರಣಕ್ಕೆ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರ ಕುಮ್ಮಕ್ಕಿನಿಂದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ರಮವೆಸಗಿದ್ದಾರೆ

ಪ್ರಜಾಪ್ರಭುತ್ವ ದೇಶದಲ್ಲಿ ಬಲಾಢ್ಯರೇ ಅಧಿಕಾರ ಹಿಡಿಯುವಂತಾಗಿದೆ

ಚುನಾವಣೆ ಪ್ರಕ್ರಿಯೆ ಫೆ.15ರಿಂದ ಆರಂಭವಾಗಿದ್ದು ಅದಕ್ಕಿಂತಲೂ ಒಂದು ದಿನ ಮುಂಚೆ ಯೇ ನೋಟಿಸ್ ಬೋರ್ಡಿಗೆ ಅರ್ಹ ಮತದಾರರ ಯಾದಿ ಹಾಗೂ ಚುನಾವಣೆ ಮಾಹಿತಿ ಅಂಟಿಸ ಬೇಕಿತ್ತು. ಆದರೆ ಅಂದು ನೋಟಿಸ್ ಬೋರ್ಡಿಗೆ ಹಚ್ಚದ ಕಾರಣ ಸಾರ್ವಜನಿಕರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಫೆ.15 ರಂದು ಕೇಳಿದಾಗ ಅಂದು ಬೆಳಿಗ್ಗೆ ನೋಟಿಸ್ ಬೋರ್ಡಿಗೆ ಮಾಹಿತಿ ಅಂಟಿಸಿದ್ದಾರೆ

ನ್ಯಾಯವಾದಿಗಳ ಸಮುದಾಯ ಭವನಕ್ಕೆ ಹೈಕೋರ್ಟ ನ್ಯಾಯಮೂರ್ತಿ, ಜಿಲ್ಲಾ ನ್ಯಾಯಾಧೀಶ ಭೇಟಿ, ಸತ್ಕಾರ

ಸ್ಥಳೀಯ ನ್ಯಾಯವಾದಿಗಳಿಂದ ಸತ್ಕಾರ ಸ್ವೀಕಾರ

ಸತ್ಕಾರ ಸ್ವೀಕರಿಸಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಂ.ಐ.ಅರುಣ್ ಅವರು ಮಾತನಾಡಿ, ಇಂಡಿ ವಕೀಲರ ಸಂಘದ ಪದಾಧಿಕಾರಿಗಳು ಇಂಡಿಗೆ ಜಿಲ್ಲಾ ನ್ಯಾಯಾ ಲಯದ ಬೇಂಚ್ ಬೇಡಿಕೆ ಇಟ್ಟಿದ್ದು ಅದಕ್ಕೆ ಸಂಬಂಧಿಸಿದಂತೆ ಕೂಲಂಕಶವಾಗಿ ಪರಿಶೀಲಿಸಿ ಮಂಜೂ ರಾತಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು

Kolhar News: ಅಲೆಮಾರಿ ಸಮುದಾಯದ ಜನರು ಈ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು

ಅಲೆಮಾರಿ ಜನಾಂಗದ ಕಲ್ಯಾಣಕ್ಕೆ ಅನೇಕ ಯೋಜನೆಗಳು: ಪಲ್ಲವಿ ಜಿ.

ಅಲೆಮಾರಿ ಸಮುದಾಯ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿ ದಿದ್ದು ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಸಮುದಾಯಕ್ಕೆ ತಲುಪುತ್ತಿಲ್ಲ ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಮನವಿ ಮಾಡಿಕೊಂಡರು. ಅಲ್ಲದೆ ಪಟ್ಟಣದ ಭಾಗಶ: ಅಲೆಮಾರಿ ಸಮುದಾಯದವರಿಗೆ ಸ್ವಂತ ನಿವೇಶನಗಳು ಇಲ್ಲದೆ ಸ್ವಂತ ಸೂರು ಗಗನ ಕುಸುಮವಾಗಿದೆ ಹಾಗಾಗಿ ನಿವೇಶನಗಳನ್ನು ಮಂಜೂರು ಮಾಡಿಸುವುದ ಸಹಿತ ವಿವಿಧ ಸಮಸ್ಯೆ ಗಳನ್ನು ಅಧಿಕಾರಿಗಳನ್ನು ಪರಿಹರಿಸಲು ಮನವಿ ಮಾಡಿಕೊಂಡರು