ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gurumatkal RSS March: ಅ.31ಕ್ಕೆ ಗುರುಮಠಕಲ್‌ನಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ; ಅನುಮತಿಗಾಗಿ ಡಿಸಿಗೆ ಅರ್ಜಿ

Yadgir News: ಗುರುಮಠಕಲ್‌ನಲ್ಲಿ ಅ.25 ರಂದು ನಡೆಯಬೇಕಿದ್ದ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದರಿಂದ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಆರ್‌ಎಸ್‌ಎಸ್ ಮುಖಂಡರು‌ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ನಾಲ್ಕೈದು ದಿನಗಳ ಬಳಿಕ ಪಥ ಸಂಚಲನಕ್ಕೆ ಪ್ಲ್ಯಾನ್ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಯಾದಗಿರಿ, ಅ.27: ಗುರುಮಠಕಲ್ ಪಟ್ಟಣದಲ್ಲಿ (Gurumatkal RSS March) ಅ.31 ರಂದು ಆರ್‌ಎಸ್‌ಎಸ್ ಪಥ ಸಂಚಲನಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಈ ಮೊದಲು ಅ.25 ರಂದು ಪಥ ಸಂಚಲನ ನಿಗದಿಯಾಗಿತ್ತು. ಆದರೆ, ಡಿಸಿ ಅನುಮತಿ ನಿರಾಕರಿಸಿದ್ದರಿಂದ ಪಥ ಸಂಚಲನ ರದ್ದಾಗಿತ್ತು. ಇದೀಗ ಅ.31 ರಂದು ಪಥ ಸಂಚಲನದ ದಿನಾಂಕ ನಿಗದಿ ಮಾಡಿ, ಅನುಮತಿಗಾಗಿ ಡಿಸಿಗೆ ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರ ಪ್ರಮುಖ್ ಬಸಪ್ಪ ಸಂಜನೋಳ್ ಅರ್ಜಿ ಸಲ್ಲಿಸಿದ್ದಾರೆ.

ಅ.25 ರಂದು ನಡೆಯಬೇಕಿದ್ದ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಿದ್ದರಿಂದ ನೇರವಾಗಿ ಜಿಲ್ಲಾಧಿಕಾರಿಗಳಿಗೆ ಆರ್‌ಎಸ್‌ಎಸ್ ಮುಖಂಡರು‌ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ನಾಲ್ಕೈದು ದಿನಗಳ ಬಳಿಕ ಪಥ ಸಂಚಲನಕ್ಕೆ ಪ್ಲ್ಯಾನ್ ಮಾಡಲಾಗಿದೆ.

ಪಥ ಸಂಚಲನಕ್ಕೂ ಮೂರು ದಿನ ಮೊದಲು ಅರ್ಜಿ ಸಲ್ಲಿಬೇಕಿತ್ತು ಎಂದು ಅನುಮತಿ ನಿರಾಕರಿಸಲಾಗಿತ್ತು. ಇದರಿಂದಾಗಿ ಕೊನೆ ಘಳಿಗೆಯಲ್ಲಿ ಅನುಮತಿ ಸಿಗದ್ದಕ್ಕೆ ಪಥ ಸಂಚಲನ ರದ್ದಾಗಿತ್ತು. ಪಥ ಸಂಚಲನ ರದ್ದಾಗಿದ್ದಕ್ಕೆ ತಹಶೀಲ್ದಾರ್ ವಿರುದ್ಧ ಆರ್‌ಎಸ್‌ಎಸ್ ಮುಖಂಡರು ಆಕ್ರೋಶ ಹೊರ ಹಾಕಿದ್ದರು. ಈಗ ಅನುಮತಿ ಪಡೆದು ದೊಡ್ಡ ಮಟ್ಟದಲ್ಲಿ ಪಥ ಸಂಚಲನ ಮಾಡಲು ಆರ್‌ಎಸ್‌ಎಸ್ ಸಿದ್ಧತೆ ನಡೆಸಿದೆ.

ಈ ಸುದ್ದಿಯನ್ನೂ ಓದಿ | Sedam News: ಸೇಡಂನಲ್ಲಿ ಪಥ ಸಂಚಲನಕ್ಕೆ ಮುಂದಾದ ಆರ್‌ಎಸ್‌ಎಸ್‌ ಗಣವೇಷಧಾರಿಗಳು ವಶಕ್ಕೆ

ಮನವಿ ಪತ್ರದಲ್ಲಿ ಏನಿದೆ?

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಕಾರ್ಯಕ್ರಮದ ನಿಮಿತ್ತವಾಗಿ ಗುರುಮಠಕಲ್ ನಗರದಲ್ಲಿ ಅ.31ಕ್ಕೆ ಪಥಸಂಚಲನಕ್ಕೆ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಹರ್ಷಲ್ ಬೋಯರ್‌ ಮನವಿ ಪತ್ರ ಸಲ್ಲಿಸಲಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಹಿನ್ನಲೆಯಲ್ಲಿ ಇಡೀ ದೇಶಾದ್ಯಾಂತ ಜಿಲ್ಲೆ, ತಾಲೂಕು ಮತ್ತು ಪಟ್ಟಣ ಕೇಂದ್ರಗಳಲ್ಲಿ ಪಥ ಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಅಕ್ಟೋಬರ್ 31ರಂದು ಶುಕ್ರವಾರದಂದು ಗುರುಮಠಕಲ್ ಪಟ್ಟಣದ ಪ್ರಮುಖ ರಸ್ತೆ, ಮಾರ್ಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಂದ ಪಥಸಂಚಲನ ಮಾಡಲು ನಿಶ್ಚಯಿಸಲಾಗಿದೆ. ಆದ ಕಾರಣ ಈ ಪಥ ಸಂಚಲನ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ.

ಈ ಸುದ್ದಿಯನ್ನೂ ಓದಿ | RSS procession: ನ.2ರಂದು ‘RSS’ ಪಥಸಂಚಲನಕ್ಕೆ ಹೈಕೋರ್ಟ್‌ನಿಂದ ಗ್ರೀನ್ ಸಿಗ್ನಲ್

ಈ ಪಥಸಂಚಲನ ಮಾರ್ಗವು ಗುರುಮಠಕಲ್‌ನ ಸ.ನಂ 12 ಶ್ರೀಮತಿ ಲಕ್ಷ್ಮೀಬಾಯಿ ನರೇಂದ್ರ ರಾಠೋಡ್ ಲೇಔಟ್‌ನಲ್ಲಿ ಸಂಜೆ 5 ಗಂಟೆಗೆ ಪಥ ಸಂಚಲನ ಪ್ರಾರಂಭವಾಗುತ್ತದೆ. ಸಾಮ್ರಾಟ್ ವೃತ್ತ, ಎಪಿಎಂಸಿ ವೃತ್ತ, ಹನುಮಾನ್ ದೇವಸ್ಥಾನ (ಬಸ್ ನಿಲ್ದಾಣದ ಹತ್ತಿರ), ಮಲ್ಲಯಕಟ್ಟಾ, ನೀರೆಟಿ ಓಣಿ, ಬಡಿಗೇರ್ ಓಣಿ, ನಗರೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ನಾನಾಪೂರ್ ಓಣಿ, ಕುಂಬಾರವಾಡಿ, ಮರಾಠವಾಡಿ, ಪೊಲೀಸ್ ಠಾಣೆ ರಸ್ತೆ, ಮಿಲನ ಚೌಕ್, ಸಿಹಿ ನೀರಿನ ಬಾವಿ, ಮಾರ್ಕೆಟ್ ಮುಖ್ಯರಸ್ತೆಯ ಮುಖಾಂತರ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಮಾರ್ಗವಾಗಿ, ಗುರುಮಠಕಲ್‌ನ ಸ.ನಂ 11 ರತ್ನಮ್ಮ -2 ದಿ.ಈರಾರೆಡ್ಡಿ ಚಪೇಟ್ಲಾ ರಾಮನಗರ ಲೇಔಟ್‌ನಲ್ಲಿ ಪಥ ಸಂಚಲಕ ಮುಕ್ತಾಯವಾಗಲಿದೆ ಎಂದು ಆರ್‌ಎಸ್‌ಎಸ್‌ ಜಿಲ್ಲಾ ಪ್ರಚಾರ ಪ್ರಮುಖ್ ಬಸಪ್ಪ ಸಂಜನೋಳ್ ತಿಳಿಸಿದ್ದಾರೆ.