ಉತ್ತರಾಖಂಡ: ಕೇದಾರನಾಥ ಧಾಮಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಕಾಡಿನಲ್ಲಿ ಪತನಗೊಂಡು(Kedarnath Chopper Crashes) ಐದು ಜನರು ಸಾವನ್ನಪ್ಪಿದ್ದಾರೆ. ಆರ್ಯನ್ ಏವಿಯೇಷನ್ ಹೆಲಿಕಾಪ್ಟರ್ ಗುಪ್ತಕಾಶಿಯಿಂದ ಕೇದಾರನಾಥ ಧಾಮಕ್ಕೆ ಯಾತ್ರಿಕ ಹೊತ್ತೊಯ್ಯುತ್ತಿತ್ತು. 10 ನಿಮಿಷಗಳ ಪ್ರಯಾಣದ ಸಮಯದಲ್ಲಿ, ಹೆಲಿಕಾಪ್ಟರ್ ಗೌರಿಕುಂಡ್ ಮತ್ತು ಸೋನ್‌ಪ್ರಯಾಗ್ ನಡುವೆ ಅಪಘಾತಕ್ಕೀಡಾಯಿತು. ಇನ್ನು ಈ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ಏಳು ಯಾತ್ರಿಕರು ದಾರುಣ ಸಾವನ್ನಪ್ಪಿದ್ದಾರೆ.
🚨Breaking
— Memer Girl (@Memergirl__) June 15, 2025
केदारनाथ धाम में सुबह सुबह बड़ा हादसा , हेलीकॉप्टर हो गया क्रैश, 5–7 लोगो की मौत की आशंका।#helicoptercrash #kedarnath #केदारनाथ #planecrash pic.twitter.com/E2Zzo0iLll
ಅಪಘಾತದಲ್ಲಿ ಮೃತಪಟ್ಟವರಲ್ಲಿ ಪೈಲಟ್ ಕೂಡ ಸೇರಿದ್ದಾರೆ. ತೆರೆದ ಮೈದಾನದಲ್ಲಿ ಹೆಲಿಕಾಪ್ಟರ್ ನ ಅವಶೇಷಗಳು ಬೆಂಕಿಗೆ ಆಹುತಿಯಾಗಿರುವುದನ್ನು ದೃಶ್ಯಗಳು ತೋರಿಸಿವೆ. ದೇವಾಲಯಕ್ಕೆ ಹೋಗುವಾಗ ಗೌರಿಕುಂಡ್ ಮತ್ತು ತ್ರಿಯುಗಿನಾರಾಯಣ ನಡುವೆ ಅಪಘಾತ ಸಂಭವಿಸಿದೆ.