#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Earthquake: ಮಣಿಪುರ ಗಡಿ ಸಮೀಪ ಭೂಕಂಪ; ಬೆಚ್ಚಿ ಬಿದ್ದ ಜನ

ಮ್ಯಾನ್ಮರ್‌ ಮತ್ತು ಮಣಿಪುರ ಗಡಿಪ್ರದೇಶದಲ್ಲಿ ಪ್ರಬಲ ಭೂಕಂಪ(Earthquake) ಸಂಭವಿಸಿದ್ದು, ಬೆಳ್ಳಂ ಬೆಳಗ್ಗೆ ಜನ ಬೆಚ್ಚಿ ಬಿದ್ದಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ದಾಖಲಾಗಿದ್ದು, ಈ ಬಗೆ ಮಣಿಪುರ ವಿಶ್ವವಿದ್ಯಾಲಯದ ಭೂಕಂಪ ವೀಕ್ಷಣಾಲಯದ ಮಾಹಿತಿ ನೀಡಿದೆ.

ಮ್ಯಾನ್ಮರ್‌-ಮಣಿಪುರ ಗಡಿ ಸಮೀಪ 5.1 ತೀವ್ರತೆಯ ಭೂಕಂಪ

Earthquake

Profile Rakshita Karkera Jan 24, 2025 10:22 AM

ಇಂಫಾಲ್‌: ಮ್ಯಾನ್ಮರ್‌ ಮತ್ತು ಮಣಿಪುರ ಗಡಿಪ್ರದೇಶದಲ್ಲಿ ಪ್ರಬಲ ಭೂಕಂಪ(Earthquake) ಸಂಭವಿಸಿದ್ದು, ಬೆಳ್ಳಂ ಬೆಳಗ್ಗೆ ಜನ ಬೆಚ್ಚಿ ಬಿದ್ದಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ದಾಖಲಾಗಿದ್ದು, ಈ ಬಗೆ ಮಣಿಪುರ ವಿಶ್ವವಿದ್ಯಾಲಯದ ಭೂಕಂಪ ವೀಕ್ಷಣಾಲಯದ ಮಾಹಿತಿ ನೀಡಿದೆ. ಇನ್ನು ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಭೂಕಂಪವು ಬೆಳಗಿನ ಜಾವ 12:53 ರ ಸುಮಾರಿಗೆ (ಅಕ್ಷಾಂಶ: 24.621 ಉತ್ತರ ಮತ್ತು ಉದ್ದ: 95.116 E, ಆಳ: 130 ಕಿ.ಮೀ) ಸಂಭವಿಸಿದೆ ಮತ್ತು ರಿಕ್ಟರ್ ಮಾಪಕದಲ್ಲಿ 5.1 ರಷ್ಟು ದಾಖಲಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನ ಉತ್ತರ ಸಾಗಿಂಗ್ ವಿಭಾಗದ ಹಕಾಮ್ಟಿ ಜಿಲ್ಲೆಯ ಹೋಮಾಲಿನ್ ಪಟ್ಟಣದಲ್ಲಿದೆ ಎಂದು ಹೇಳಲಾಗುತ್ತದೆ.



ಈ ಸುದ್ದಿಯನ್ನೂ ಓದಿ: Earthquake: ತೆಲಂಗಾಣದಲ್ಲಿ ಬೆಳ್ಳಂಬೆಳಿಗ್ಗೆ ಕಂಪಿಸಿದ ಭೂಮಿ, 5.3 ತೀವ್ರತೆಯ ಭೂಕಂಪಕ್ಕೆ ಬೆಚ್ಚಿ ಬಿದ್ದ ಜನ

ಘಟನೆ ಬಗ್ಗೆ ಮಣಿಪುರ ವಿಶ್ವವಿದ್ಯಾಲಯದ ಭೂಕಂಪ ವೀಕ್ಷಣಾಲಯದ ಮಣಿಚಂದ್ರ ಸನೌಜಮ್ ಮಾಹಿತಿ ನೀಡಿದ್ದು, "ಈ ವರ್ಷ ಜನವರಿ 3 ರಂದು ರಾತ್ರಿ 10:02 ರ ಸುಮಾರಿಗೆ ಮ್ಯಾನ್ಮಾರ್‌ನ ಅದೇ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು" ಎಂದು ಹೇಳಿದ್ದಾರೆ.

ಜನವರಿ 22 ರ ರಾತ್ರಿ ಮಣಿಪುರದಲ್ಲಿಯೂ ಇದೇ ರೀತಿಯ ಲಘು ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಆದಾಗ್ಯೂ, ಯಾವುದೇ ಹಾನಿಯ ವರದಿಯಾಗಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ರಾತ್ರಿ 9:46 ರ ಸುಮಾರಿಗೆ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.3 ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರಬಿಂದು ಮಣಿಪುರದ ಚುರಚಂದ್‌ಪುರ ಎಂದು ಹೇಳಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಟೆಬೆಟ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ126 ಜನ ಬಲಿಯಾಗಿದ್ದರು. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪ ದಾಖಲಾಗಿದ್ದು, ಸುಮಾರು 200 ಮಂದಿ ಗಾಯಗೊಂಡಿದ್ದಾರೆ. ಹಲವು ಮನೆಗಳಿಗೆ, ಕಟ್ಟಡಗಳಿಗೆ ಹಾನಿಯಾಗಿದೆ.ಈ ಭೂಕಂಪವು 16 ಕಿ.ಮೀ. ಆಳದಲ್ಲಿ ಸಂಭವಿಸಿದೆ.