Electric Shock: ಮನೆ ಮುಂದೆ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು
Electric Shock: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಅವಘಡ ನಡೆದಿದೆ. ಮನೆ ಮುಂದೆ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತಪಟ್ಟಿದ್ದಾನೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶಾಸಕ ಸಿ.ಬಿ.ಸುರೇಶಬಾಬು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.


ಚಿಕ್ಕನಾಯಕನಹಳ್ಳಿ: ಮನೆ ಮುಂದೆ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಮೃತಪಟ್ಟಿರುವ ಘಟನೆ (Electric Shock) ಪಟ್ಟಣದಲ್ಲಿ ನಡೆದಿದೆ. ಅಚ್ಯುತ್ ಕುಮಾರ್ (13) ಮೃತ ಬಾಲಕ. ಮನೆಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ತಂತಿ, ಚಾವಣಿಗೆ ಹಾಕಿದ್ದ ಕಬ್ಬಿಣದ ಕಂಬಕ್ಕೆ ತಗುಲಿದ್ದು, ಈ ವೇಳೆ ಕಂಬ ಸ್ಪರ್ಶಿಸಿದ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ.
ಘಟನೆ ಕುರಿತು ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಶಾಸಕ ಸಿ.ಬಿ.ಸುರೇಶಬಾಬು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಹಳೆ ದ್ವೇಷ, ಚೂರಿಯಿಂದ ಇರಿದು ಯುವಕನ ಭೀಕರ ಹತ್ಯೆ

ರಾಯಚೂರು: ಹಳೆ ವೈಷಮ್ಯದ (vengeance) ಹಿನ್ನೆಲೆ ಯುವಕನೋರ್ವನನ್ನು ಇನ್ನಿಬ್ಬರು ಯುವಕರು ಭೀಕರವಾಗಿ ಹತ್ಯೆ (Murder case) ಮಾಡಿರುವ ಘಟನೆ ನಗರದಲ್ಲಿ (Raichur) ಭಾನುವಾರ ನಡೆದಿದೆ. ಇಲ್ಲಿನ ಮಾಣಿಕ್ ನಗರದಲ್ಲಿ ಪ್ರಕರಣ ನಡೆದಿದ್ದು, ಮಹ್ಮದ್ ಆರೀಫ್(21) ಕೊಲೆಯಾದ ಯುವಕನೆಂದು ಗುರುತಿಸಲಾಗಿದೆ. 19 ವರ್ಷ ಮುಜಾಯಿದ್ದೀನ್ ಹಾಗೂ ಮಹ್ಮದ್ ಗೌಸ್ ಕೊಲೆ ಮಾಡಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕ ಜಾಹೀರಾಬಾದ್ ಬಡಾವಣೆ ನಿವಾಸಿಯಾಗಿದ್ದು, ಹತ್ಯೆಗೈದ ಆರೋಪಿಗಳು ಮಾಣಿಕ್ ನಗರದ ನಿವಾಸಿಗಳು ಎಂದು ಅವರು ಮಾಹಿತಿ ನೀಡಿದ್ದಾರೆ.
ಭಾನುವಾರ ಮಧ್ಯಾಹ್ಮದ ವೇಳೆ ಹಳೆ ದ್ವೇಷದ ಹಿನ್ನೆಲೆ ಇಬ್ಬರು ಯುವಕರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಮಹ್ಮದ್ ಆರೀಫ್ ತೀವ್ರವಾಗಿ ಗಾಯಗೊಂಡಿದ್ದರಿಂದ ಹೆಚ್ಚಿನ ರಕ್ತಸ್ರಾವ ಉಂಟಾಗಿತ್ತು. ಬಳಿಕ ನವೋದಯ ಆಸ್ಪತ್ರೆಗೆ ಆತನನ್ನು ಚಿಕಿತ್ಸೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಬಳಿಕ ರಿಮ್ಸ್ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಮೃತ ಯುವಕ ಹಾಗೂ ಆರೋಪಿಗಳು ಗೆಳೆಯರಾಗಿದ್ದರು. ಕೊಲೆ ಮಾಡಿದ ಆರೋಪಿಯ ಅಣ್ಣನೊಂದಿಗೆ ಈ ಹಿಂದೆ ಜಗಳ ಉಂಟಾಗಿತ್ತು. ನಿಮ್ಮಣ್ಣನಿಗೂ ಹೊಡೆಯಲಾಗಿದ್ದು, ನಿನಗೂ ಸಹ ಹೊಡೆಯುತ್ತಾರೆ ಎನ್ನುವ ಮಾತುಗಳನ್ನು ಕೊಲೆಗೀಡಾದ ಮಹ್ಮದ್ ಆರೀಫ್ ಹೇಳಿದ್ದ. ಈ ಮಾತಿನಿಂದ ಕೆರಳಿದ ಆರೋಪಿಗಳು ತಮ್ಮಲ್ಲಿದ್ದ ಚಾಕುವಿನಿಂದ ಆರೀಫ್ಗೆ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೇತಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರದಲ್ಲಿ ಬ್ಯಾಂಕ್ ದರೋಡೆಗೆ ಯತ್ನ, ಬೀಗ ಮುರಿದ ಕಳ್ಳರು
ವಿಜಯಪುರ: ರಾಜ್ಯದಲ್ಲಿ ಬ್ಯಾಂಕ್ ಹಾಗೂ ಎಟಿಎಂ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ .ಇದೀಗ ವಿಜಯಪುರದ ಕೆನರಾ ಬ್ಯಾಂಕ್‌ನ ಮುಂಭಾಗದ ಕೀ ಮುರಿದು ಕಳ್ಳರು ಒಳನುಗ್ಗಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ಈ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಶನಿವಾರ ತಡರಾತ್ರಿ ಕಳ್ಳರು ಬ್ಯಾಂಕ್‌ನ ಮುಂಭಾಗದ ಬಾಗಿಲಿನ ಕೀಯನ್ನು ಮುರಿದು ಒಳನುಗ್ಗಿರುವ ಘಟನೆ ಭಾನುವಾರ ಗೊತ್ತಾಗಿದೆ.
ಭಾನುವಾರ ರಜಾದಿನವಾದ ಕಾರಣ ಬ್ಯಾಂಕ್‌ಗೆ ಸಿಬ್ಬಂದಿ ಆಗಮಿಸಿರಲಿಲ್ಲ. ಘಟನೆಯ ಮಾಹಿತಿ ತಿಳಿದ ಕೂಡಲೇ ಬ್ಯಾಂಕ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣವೇ ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಶ್ವಾನದಳ ತಂಡವು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಪೊಲೀಸರು ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಕಳ್ಳತನದ ವಿವರಗಳನ್ನು ತನಿಖೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಶ್ವಾನದಳದ ಸಹಾಯದಿಂದ ಘಟನಾ ಸ್ಥಳದಲ್ಲಿ ಸುಳಿವುಗಳನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಶೀಘ್ರವೇ ಆರೋಪಿಗಳನ್ನು ಪತ್ತೆಹಚ್ಚುವ ವಿಶ್ವಾಸ ವ್ಯಕ್ತವಾಗಿದೆ.
ಇದನ್ನೂ ಓದಿ: Chaithra Kundapura: ಸ್ವಂತ ತಂದೆಯನ್ನೇ ಕೊಲೆ ಮಾಡಲು ಸುಪಾರಿ ಕೊಟ್ರಾ ಚೈತ್ರಾ ಕುಂದಾಪುರ: ಹೊಸ ಆರೋಪ
ಇತ್ತೀಚೆಗೆ ಬ್ಯಾಂಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿಯೇ ಕೇಳಿಬರುತ್ತಿದೆ. ಜನವರಿ 16 ರಂದು ಬೀದರ್ನನಲ್ಲಿ ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ಹಣ ದರೋಡೆ ಮಾಡಿದ ಪ್ರಕರಣದ ಬೆನ್ನಲ್ಲೇ ಮಂಗಳೂರಿನಲ್ಲಿ ಜನವರಿ 17 ರಂದು ಹಾಡ ಹಗಲೇ ಬ್ಯಾಂಕ್ ಸಿಬ್ಬಂದಿಗೆ ಬಂದೂಕು ತೋರಿಸಿ ಆಗಂತುಕರು ಸುಮಾರು 12 ಕೋಟಿ ಹಣ ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಆ ಘಟನೆಯ ಬೆನ್ನಲ್ಲೇ ಹುಬ್ಬಳ್ಳಿ ಬ್ಯಾಂಕ್‌ನಲ್ಲೂ ದರೋಡೆಗೆ ಯತ್ನಿಸಿದ್ದರು. ಆದರೆ ಅದು ವಿಫಲವಾಗಿತ್ತು.