ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಮೈಸೂರಿನ ಮನೆಯಲ್ಲಿ ಚಾಮುಂಡಿ ಪೂಜೆ ನೆರವೇರಿಸಿದ ನಟ ದರ್ಶನ್‌

Actor Darshan: ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಹಬ್ಬ ಮಾಡುವ ನಟ ದರ್ಶನ್ ಅವರು, ಮೈಸೂರಿನ ಸಿದ್ಧಾರ್ಥ ಲೇಔಟ್‌ನಲ್ಲಿ ನಿವಾಸದಲ್ಲಿ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರನೊಂದಿಗೆ ಪೂಜೆ ನೆರವೇರಿಸಿದ್ದಾರೆ. ಅಲ್ಲದೇ ಚಾಮುಂಡಿ ಬೆಟ್ಟಕ್ಕೂ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ.

ಮೈಸೂರಿನ ಮನೆಯಲ್ಲಿ ಚಾಮುಂಡಿ ಪೂಜೆ ನೆರವೇರಿಸಿದ ನಟ ದರ್ಶನ್‌

Profile Prabhakara R Jul 5, 2025 8:55 PM

ಮೈಸೂರು: ನಟ ದರ್ಶನ್‌ (Actor Darshan) ಅವರು ಮೈಸೂರಿನ ನಿವಾಸದಲ್ಲಿ ಕುಟುಂಬಸ್ಥರ ಜತೆ ಸೇರಿ ಚಾಮುಂಡಿ ತಾಯಿ ಪೂಜೆ ನೆರವೇರಿಸಿದ್ದಾರೆ. ಎರಡನೇ ಆಷಾಡ ಶುಕ್ರವಾರ ಹಿನ್ನೆಲೆಯಲ್ಲಿ ಕುಟುಂಬಸ್ಥರ ಜತೆಯಲ್ಲಿ ಪೂಜೆ ನೆರವೇರಿಸಿದ್ದಾರೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಹಬ್ಬ ಮಾಡುವ ನಟ ದರ್ಶನ್, ಈ ಬಾರಿ ಕುಟುಂಬಸ್ಥರು ಜತೆಯಲ್ಲಿ ಚಾಮುಂಡಿ ತಾಯಿ ಪೂಜೆ ನೆರವೇರಿಸಿದ್ದಾರೆ.

ಮೈಸೂರಿನ ಸಿದ್ಧಾರ್ಥ ಲೇಔಟ್‌ನಲ್ಲಿ ನಿವಾಸದಲ್ಲಿ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರನೊಂದಿಗೆ ಪೂಜೆ ನೆರವೇರಿಸಿದ್ದಾರೆ. ಪ್ರತಿ ವರ್ಷ ಸ್ನೇಹಿತರ ಜತೆ ಫಾರ್ಮ್‌ ಹೌಸ್‌ನಲ್ಲಿ ಚಾಮುಂಡಿ ಹಬ್ಬ ಮಾಡುತ್ತಿದ್ದರು. ಈ ಬಾರಿ ಚಾಮುಂಡಿ ಬೆಟ್ಟಕ್ಕೆ ಕುಟುಂಬಸ್ಥರ ಜತೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು. ತೋಟದ ಮನೆಯಲ್ಲಿ ದರ್ಶನ್‌ ಅವರ ಆಪ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

Darshan (11)

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜಾಮೀನಿನ ಮೇಲಿರುವ ದರ್ಶನ್‌, ಇತ್ತೀಚೆಗೆ ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು 57ನೇ ಸಿಸಿಎಚ್ ಕೋರ್ಟ್ ಅನುಮತಿ ನೀಡಿತ್ತು. ಜೂನ್ 1ರಿಂದ 25ರವರೆಗೆ ಡೆವಿಲ್ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಅನುಮತಿ ನೀಡಲಾಗಿತ್ತು. ‌

Darshan (12)

ಎರಡು ಹಾಡುಗಳ ಶೂಟಿಂಗ್‌ ಹೊರತುಪಡಿಸಿದರೆ ದರ್ಶನ್‌ ನಟನೆಯ ‘ದಿ ಡೆವಿಲ್‌’ ಸಿನಿಮಾದ ಉಳಿದ ಭಾಗಗಳ ಶೂಟಿಂಗ್‌ ಬಹುತೇಕ ಸಂಪೂರ್ಣವಾಗಿದೆ. ದರ್ಶನ್‌ ನಟನೆಯ ‘ದಿ ಡೆವಿಲ್‌’ ಸಿನಿಮಾದ ಉದಯಪುರ ಶೂಟಿಂಗ್‌ ಗ್ಲಿಂಪ್ಸ್‌ ಬಿಡುಗಡೆಯಾಗಿದೆ. ಇದರಲ್ಲಿ ದರ್ಶನ್‌ ಅವರ ನಟನೆಯ ತುಣುಕುಗಳೂ ಕಾಣಿಸಿಕೊಂಡಿವೆ. ಜತೆಗೆ ನಾಯಕಿ ರಚನಾ ರೈ, ಕಲಾವಿದರಾದ ಅಚ್ಯುತ ಕುಮಾರ್‌, ಶರ್ಮಿಳಾ ಮಾಂಡ್ರೆ, ಮಹೇಶ್‌ ಮಂಜ್ರೇಕರ್‌, ಚಂದನ್‌ ಗೌಡ ಅವರ ಲುಕ್‌ ರಿವೀಲ್‌ ಆಗಿದೆ. ಆದರೆ ದಸರಾ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಚಿತ್ರತಂಡ ತಿಳಿಸಿತ್ತು. ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ | Actor Darshan: ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿಯ ಆಶೀರ್ವಾದ ಪಡೆದ ನಟ ದರ್ಶನ್‌