Actor Darshan: ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ: ಅಭಿಮಾನಿಗಳಿಗೆ ನಟ ದರ್ಶನ್ ವಿಡಿಯೊ ಸಂದೇಶ
ಜೈಲಿನಿಂದ ಬಂದ ಬಳಿಕ ಮೊದಲ ಬಾರಿ ಅಭಿಮಾನಿಗಳಿಗೆ ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಇದೊಂದು ಬಾರಿ ದಯಮಾಡಿ ನನ್ನನ್ನ ಕ್ಷಮಿಸಿ. ಹೊಟ್ಟೆಗೆ ಹಾಕಿಕೊಳ್ಳಿ. ಈ ಬಾರಿ ಜನ್ಮದಿನದಂದು ಅಭಿಮಾನಿಗಳನ್ನು ಭೇಟಿಯಾಗಲು ದರ್ಶನ್‌ರಿಂದ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಮೂವರಿಗೆ ಅವರು ಪ್ರತ್ಯೇಕವಾಗಿ ಧನ್ಯವಾದ ತಿಳಿಸಿದ್ದಾರೆ. ನಟ ಧನ್ವೀರ್, ನಟಿಯರಾದ ರಚಿತಾ ರಾಮ್, ರಕ್ಷಿತಾ ಹಾಗೂ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
![ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ: ನಟ ದರ್ಶನ್](https://cdn-vishwavani-prod.hindverse.com/media/original_images/Darshan_6.jpg)
![Profile](https://vishwavani.news/static/img/user.png)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ನಟ ದರ್ಶನ್ (Actor Darshan) ಅವರು ಅಭಿಮಾನಿಗಳಿಗೆ ವಿಡಿಯೋ ಸಂದೇಶ ನೀಡಿದ್ದಾರೆ. ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ. ಎಲ್ಲರನ್ನೂ ಭೇಟಿಯಾಗಲು ನನಗೂ ಆಸೆ ಇತ್ತು. ಆದರೆ. ಆರೋಗ್ಯ ಕಾರಣದಿಂದ ಈ ಬಾರಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ. ದಯಮಾಡಿ ಕ್ಷಮೆ ಇರಲಿ. ಇದೊಂದು ಸಲ ನನ್ನನ್ನ ಕ್ಷಮಿಸಿಬಿಡಿ. ನಾನು ನಿಮ್ಮೆಲ್ಲರಿಗೂ ಸಿಕ್ಕೇ ಸಿಗ್ತೇನೆ ಎಂದು ತಿಳಿಸಿದ್ದಾರೆ. ಇದೇ ತಿಂಗಳು ಫೆಬ್ರವರಿ 16 ರಂದು ದರ್ಶನ್ ಅವರ ಹುಟ್ಟುಹಬ್ಬ ಇತ್ತು. ಹೀಗಾಗಿ ಅಭಿಮಾನಿಗಳಿಗೆ ದರ್ಶನ್ ವಿಡಿಯೊ ಸಂದೇಶ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಇದೊಂದು ಬಾರಿ ದಯಮಾಡಿ ನನ್ನನ್ನ ಕ್ಷಮಿಸಿ. ಹೊಟ್ಟೆಗೆ ಹಾಕಿಕೊಳ್ಳಿ. ಈ ಬಾರಿ ಜನ್ಮದಿನದಂದು ಅಭಿಮಾನಿಗಳನ್ನು ಭೇಟಿಯಾಗಲು ದರ್ಶನ್‌ರಿಂದ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದೇ ವೇಳೆ ಮೂವರಿಗೆ ಅವರು ಪ್ರತ್ಯೇಕವಾಗಿ ಧನ್ಯವಾದ ತಿಳಿಸಿದ್ದಾರೆ. ನಟ ಧನ್ವೀರ್, ನಟಿಯರಾದ ರಚಿತಾ ರಾಮ್, ರಕ್ಷಿತಾ ಹಾಗೂ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ?
ನನ್ನೆಲ್ಲಾ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ನಮಸ್ಕಾರ ಹೇಳಲಾ? ಥ್ಯಾಂಕ್ಸ್ ಹೇಳಲಾ? ಧನ್ಯವಾದ ಹೇಳಲಾ? ನಾನು ಏನೇ ಹೇಳಿದರೂ ತುಂಬಾ ಅದು ಚಿಕ್ಕ ಪದ ಆಗುತ್ತದೆ. ಯಾಕೆಂದರೆ, ನೀವು ತೋರಿಸಿರುವ ಪ್ರೀತಿ, ಅಭಿಮಾನ ಅಂಥದ್ದು. ಆ ಋಣವನ್ನ ನಾನು ತೀರಿಸೋಕೆ ಆಗಲ್ಲ.
ನನ್ನ ಹುಟ್ಟುಹಬ್ಬ ಬರ್ತಿದೆ. ನೀವುಗಳು ತುಂಬಾ ಆಸೆ ಪಟ್ಟಿದ್ದಿರಿ. ನಗೂ ತುಂಬಾ ಆಸೆ ಇತ್ತು. ಪ್ರತಿಯೊಬ್ಬರನ್ನೂ ಮೀಟ್ ಮಾಡಿ, ಥ್ಯಾಂಕ್ಸ್ ಹೇಳಬೇಕು ಅಂತ. ಪ್ರತಿ ಬಾರಿಯೂ ನಾನು ನಿಂತುಕೊಂಡೇ ಪ್ರತಿಯೊಬ್ಬರಿಗೂ ಥ್ಯಾಂಕ್ಸ್ ಹೇಳುತ್ತಿದ್ದೆ. ಆದರೆ, ಈ ಬಾರಿ ನನಗೆ ಆರೋಗ್ಯ ಸಮಸ್ಯೆ ಇದೆ. ನನಗೆ ತುಂಬಾ ಹೊತ್ತು ನಿಲ್ಲೋಕೆ ಆಗಲ್ಲ. ಏನು ಪ್ರಾಬ್ಲಂ ಅನ್ನೋದು ನಿಮ್ಮೆಲ್ಲರಿಗೂ ಚೆನ್ನಾಗಿ ಗೊತ್ತು. ಇಂಜೆಕ್ಷನ್ ತಗೊಂಡ್ರೆ 15-20 ದಿನ ಸರಿ ಇರುತ್ತೆ. ಆಮೇಲೆ ಅದರ ಪವರ್ ಕಮ್ಮಿ ಆದ್ಮೇಲೆ ಮತ್ತೆ ನೋವು ಶುರುವಾಗುತ್ತದೆ. ಆಪರೇಷನ್ ಅನ್ನೋದು ಕಟ್ಟಿಟ್ಟಬುತ್ತಿ. ಅದನ್ನ ನಾನು ಮಾಡಿಸಲೇಬೇಕು.
ನಾನು ಕೆಲ ಸಿನಿಮಾಗಳನ್ನ ಒಪ್ಪಿಕೊಂಡಿದ್ದೇನೆ. ನನ್ನೆಲ್ಲಾ ನಿರ್ಮಾಪಕರಿಗೂ ನಾನು ಥ್ಯಾಂಕ್ಸ್ ಹೇಳಲೇಬೇಕು. ಯಾಕಂದ್ರೆ, ಅವರೆಲ್ಲಾ ನನಗಾಗಿ ಕಾದಿದ್ದಾರೆ. ನಾನು ನಿರ್ಮಾಪಕರಿಗೆ ಅನ್ಯಾಯ ಮಾಡಬಾರದು. ಹೀಗಾಗಿ, ಸಿನಿಮಾಗಳ ಕಡೆ ಗಮನ ಹರಿಸುತ್ತಿದ್ದೇನೆ. ನಿಮ್ಮೆಲ್ಲರ ಅಭಿಮಾನ, ಪ್ರೋತ್ಸಾಹ ಹೀಗೇ ಇರಲಿ ಅಂತ ನಾನು ಕೇಳಿಕೊಳ್ಳುತ್ತೇನೆ. ಆದಷ್ಟು ಬೇಗ ನಾನು ನಿಮ್ಮೆಲ್ಲರಿಗೂ ಸಿಗ್ತೀನಿ. ಈ ಸಲ ಬರ್ತ್‌ಡೇಗೆ ಸಿಗಲ್ಲ ಎಂದಿದ್ದಕ್ಕೆ ದಯಮಾಡಿ ಕ್ಷಮೆ ಇರಲಿ ಎಂದು ದರ್ಶನ್ ತಿಳಿಸಿದ್ದಾರೆ.