Shishir Hegde Column: ವೃದ್ಧಾಪ್ಯದಲ್ಲಿ ಮನಸ್ಥಿತಿ ಹೇಗಿರುತ್ತದೆಂಬ ಪ್ರಯೋಗ
ನನ್ನ ದೇಹಕ್ಕೆ ಮುಪ್ಪು ಆವರಿಸಿಬಿಡುತ್ತದೆ ಎಂಬ ಯೋಚನೆ ಅವನನ್ನು ಖಿನ್ನನನ್ನಾಗಿಸುತ್ತದೆ. ಹೀಗಿರು ವಾಗ ಒಂದು ದಿನ ಅವನಿಗೆ ದೆವ್ವವೊಂದು ಎದುರಾಗುತ್ತದೆ. ದೆವ್ವವು “ಏನು ವರ ಬೇಕು?" ಎಂದು ಕೇಳುತ್ತದೆ. “ಇಲ್ಲಿಂದ ಮುಂದೆ ನನಗೆ ವಯಸ್ಸಾಗಬಾರದು- ನನ್ನ ಬದಲು ನನ್ನ ತೈಲಚಿತ್ರಕ್ಕೆ ವಯಸ್ಸಾ ಗಬೇಕು" ಎನ್ನುತ್ತಾನೆ.

ಅಂಕಣಕಾರ ಶಿಶಿರ್ ಹೆಗಡೆ

ಶಿಶಿರಕಾಲ
ನೀವು ಇನ್ನೆಷ್ಟು ವರ್ಷ ಬದುಕಬಹುದು?- ಇದೆಂಥ ಪ್ರಶ್ನೆಯಿಂದ ಲೇಖನ ಆರಂಭಿಸುವುದು ಎಂದು ನೀವು ಮೂಗುಮುರಿಯಬಹುದು. ಆದರೆ ಒಂದಿಂದು ಸಮಯ ಸಂದರ್ಭದಲ್ಲಿ ಆಂತರ್ಯದಲ್ಲಿ ಏಳುವ ಇಂಥದ್ದೊಂದು ಪ್ರಶ್ನೆಯನ್ನು ಎಲ್ಲರೂ ಎದುರಿಸಲೇಬೇಕು. ಕ್ರಮೇಣ ಆ ಪ್ರಶ್ನೆಯೇ ಬದು ಕಿನ ಹಲವು ನಿರ್ಣಯಗಳನ್ನು ನಿರ್ದೇಶಿಸುತ್ತದೆ ಎನ್ನುವುದೂ ಅಷ್ಟೇ ಸತ್ಯ. ಕೆಲ ದಿನಗಳ ಹಿಂದೆ 1976ರ ಚಲನಚಿತ್ರವೊಂದನ್ನು ನೋಡುತ್ತಿದ್ದೆ. ಹತ್ತೊಂಬತ್ತನೇ ಶತಮಾನದ, ಆಸ್ಕರ್ ವೈಲ್ಡ್ ಬರೆದ The Picture of Dorian Gray ಎಂಬ ಕಾದಂಬರಿಯನ್ನು ಆಧರಿಸಿದ ಸಿನಿಮಾ ಅದು. ಈ ಕಥೆಯ ಹೀರೋ ಡೋರಿಯನ್ ಒಬ್ಬ ಯುವಕ, ಶ್ರೀಮಂತ. ಒಮ್ಮೆ ಡೋರಿ ಯನ್ ಒಬ್ಬ ಪ್ರಸಿದ್ಧ ಚಿತ್ರಕಾರ ನನ್ನು ಮನೆಗೆ ಕರೆಸಿ ತನ್ನದೊಂದು life size ತೈಲಚಿತ್ರ ಬಿಡಿಸುವಂತೆ ಕೇಳಿಕೊಳ್ಳುತ್ತಾನೆ.
ಕ್ರಮೇಣ ಡೋರಿಯನ್‌ಗೆ ತನ್ನದೇ ತೈಲಚಿತ್ರದ ಮೇಲೆ ವಿಚಿತ್ರ ಮೋಹ ಶುರುವಾಗುತ್ತದೆ. ನಿತ್ಯ ತನ್ನದೇ ಚಿತ್ರವನ್ನು ಹತ್ತಾರು ಬಾರಿ ನೋಡಲು ಶುರುಮಾಡುತ್ತಾನೆ. ಒಂದು ದಿನ ಹೀಗೇ ನೋಡು ತ್ತಿರುವಾಗ ಅವನಂದು ಯೋಚನೆ, ಚಿಂತೆ ಶುರುವಾಗುತ್ತದೆ. ವರ್ಷಗಳು ಕಳೆದಂತೆ ನನಗೆ ವಯ ಸ್ಸಾಗಿಬಿಡುತ್ತದೆ, ಈ ತೈಲಚಿತ್ರದಲ್ಲಿರುವ ಯೌವನ, ಆ ಹೊಳಪು ಇವೆಲ್ಲವೂ ಹೀಗೆಯೇ ಉಳಿಯುವು ದಿಲ್ಲ.
ಇದನ್ನೂ ಓದಿ: Shishir Hegde Column: ಸಮತೋಲನದ ಸಮಾಜಕ್ಕೆ ವೇಶ್ಯಾವಾಟಿಕೆ
ನನ್ನ ದೇಹಕ್ಕೆ ಮುಪ್ಪು ಆವರಿಸಿಬಿಡುತ್ತದೆ ಎಂಬ ಯೋಚನೆ ಅವನನ್ನು ಖಿನ್ನನನ್ನಾಗಿಸುತ್ತದೆ. ಹೀಗಿರುವಾಗ ಒಂದು ದಿನ ಅವನಿಗೆ ದೆವ್ವವೊಂದು ಎದುರಾಗುತ್ತದೆ. ದೆವ್ವವು “ಏನು ವರ ಬೇಕು?" ಎಂದು ಕೇಳುತ್ತದೆ. “ಇಲ್ಲಿಂದ ಮುಂದೆ ನನಗೆ ವಯಸ್ಸಾಗಬಾರದು- ನನ್ನ ಬದಲು ನನ್ನ ತೈಲಚಿತ್ರಕ್ಕೆ ವಯಸ್ಸಾಗಬೇಕು" ಎನ್ನುತ್ತಾನೆ.
“ತಥಾಸ್ತು" ಎನ್ನುತ್ತದೆ ದೆವ್ವ. ವರ್ಷಗಳು ಕಳೆದಂತೆ ಡೋರಿಯನ್ ಇದ್ದ ಹಾಗೆಯೇ ಇರುತ್ತಾನೆ, ಅವನ ಬದಲು ಅವನ ತೈಲಚಿತ್ರಕ್ಕೆ ವಯಸ್ಸಾಗುತ್ತದೆ. ಅಷ್ಟೇ ಅಲ್ಲ, ಆತ ಮಾಡುವ ಪಾಪಕಾರ್ಯ ಗಳೆಲ್ಲ ಅವನ ತೈಲಚಿತ್ರದ ಮುಖದಲ್ಲಿ, ದೇಹದಲ್ಲಿ ಕಾಣಲು ಶುರುವಾಗುತ್ತವೆ. ಕ್ರಮೇಣ ಚಿತ್ರ ದೊಳಗಿನ ಡೋರಿಯನ್ ರಾಕ್ಷಸಕಾರ ಪಡೆಯುತ್ತಾನೆ. ನಿಜ ಡೋರಿಯನ್ ಮಾತ್ರ ಸದಾ ಯುವಕ ನಾಗಿಯೇ ಉಳಿಯುತ್ತಾನೆ.
ಕಥೆ ಸಾಕಷ್ಟು ತಿರುವುಗಳೊಂದಿಗೆ ಬಹಳ ಮಜವಾಗಿದೆ. ಯೂಟ್ಯೂಬ್‌ನಲ್ಲಿದೆ, ಹುಡುಕಿ ನೋಡ ಬಹುದು. ಇದು ಹತ್ತೊಂಬತ್ತನೇ ಶತಮಾನದ ಕಾದಂಬರಿ. ಇಪ್ಪತ್ತನೇ ಶತಮಾನದಲ್ಲಿ ಚಲನ ಚಿತ್ರವಾದದ್ದು. ಇದನ್ನು ಯಯಾತಿ-ಪುರುವಿನ ಕಥೆಗೆ ಕೂಡ ಹೋಲಿಸಬಹುದು. ಇಂಥ ಕಥೆಗಳು ಇಂದು ನಿನ್ನೆಯದಲ್ಲ.
ಸ್ವಲ್ಪ ಗ್ರಹಿಸಿದರೆ ಈಗ ಇಪ್ಪತ್ತೊಂದನೇ ಶತಮಾನದಲ್ಲಿಯೂ ಇದೇ ಕಥೆ ಅನ್ಯರೂಪಗಳನ್ನು ತಾಳುವುದನ್ನು ಕೂಡ ಕಾಣಬಹುದು. ನಮ್ಮೆಲ್ಲರೊಳಗೊಬ್ಬ ಯಯಾತಿ ಅಡಗಿ ಕೂತಿರುತ್ತಾನೆ. ಆ ಕಾರಣಕ್ಕೇ ನಮ್ಮ ಚಲನಚಿತ್ರಗಳಲ್ಲಿ ಯೌವನದ ಕಾಲವನ್ನು ಪರಮೋಚ್ಚ ಎಂದು ಚಿತ್ರೀಕರಿಸಿ ಒಪ್ಪಿಸಿದರೆ ನಮಗೆಲ್ಲ ಇಷ್ಟವಾಗುತ್ತದೆ. ಹೀರೋ ವಯಸ್ಸಾದರೂ ಹದಿನೆಂಟರ ಹೆಣ್ಣನ್ನು ಪ್ರೀತಿಸು ವುದು ರಂಜಿಸುತ್ತದೆ.
ತಲೆ ಕೂದಲಿಗೆ ಬಣ್ಣ, ಈ ಸೋಪನ್ನು ಬಳಸಿದರೆ ಯೌವನಭರಿತ ತ್ವಚೆ, ಚರ್ಮದ ಸುಕ್ಕಿಗೆ ಮುಲಾ ಮು ಇತ್ಯಾದಿ ಜಾಹೀರಾತುಗಳು. ಅವೆಲ್ಲ ಯೌವನವನ್ನು ಮರು ಪಡೆಯುವ, ನಮ್ಮೊಳಗಿನ ಯಯಾತಿ/ಡೋರಿಯನ್ ಮನಸ್ಥಿತಿಯನ್ನು ಹಂಬಲಗಳಾಗಿ ಪರಿವರ್ತಿಸಿ ಮಾರಾಟವಾಗುವ ಸರಕುಗಳು. ಆದರೆ ಯಾವುದಕ್ಕೂ, ಜಪ್ಪಯ್ಯ ಅಂದರೂ, ಆಗುವ ವಯಸ್ಸನ್ನು ಹಿಂದೆ-ಮುಂದೆ ಮಾಡಲಿಕ್ಕಾಗುವುದಿಲ್ಲ.
ಹೆಚ್ಚೆಂದರೆ ವಯೋಸಹಜ ದೇಹಬದಲಾವಣೆಯನ್ನು ಸ್ವಲ್ಪ ಕಾಲ ಮರೆಮಾಚಬಹುದು. ವಯಸ್ಸ ನ್ನು ಅಡಗಿಸುವ ಇಂಜೆಕ್ಷನ್, ಸೌಂದರ್ಯವರ್ಧಕ ಪ್ಲಾಸ್ಟಿಕ್ ಸರ್ಜರಿ ಇವೆಲ್ಲ ಇಂದು ಲಕ್ಷ ಕೋಟಿ ರುಪಾಯಿಯ ವ್ಯವಹಾರ. ಅದಕ್ಕೇ ಹೇಳಿದ್ದು- ಎಲ್ಲರೊಳಗೂ ಡೋರಿಯನ್- ಯಯಾತಿ ಇzನೆ ಎಂದು. ವಯಸ್ಸಾಗುವುದು, ಮುದುಕರಾಗುವುದು ಎಂದರೆ ಅದೊಂದು ಭಯಾನಕ ಸಂಗತಿ ಎನ್ನು ವುದು ಸಾಮಾಜಿಕ ಸಾಮಾನ್ಯ ನಂಬಿಕೆ. ಯಾರಿಗೂ ವೃದ್ಧರಾಗುವುದು ಬೇಡ.
ವೃದ್ಧರಾಗುವುದೆಂದರೆ ಸಮಾಜಕ್ಕೆ ಬೇಡವಾಗುವುದು, ಬೆಲೆಯಿಲ್ಲದಂತಾಗುವುದು, ಕ್ರಮೇಣ ಅಪ್ರಸ್ತುತವಾಗುವುದು, ಸಾವಿಗೆ ಇನ್ನಷ್ಟು ಹತ್ತಿರವಾಗುವುದು, ದಿನ ಲೆಕ್ಕ ಹಾಕುವುದು. ಮುದುಕ ರಾಗುವುದೆಂದರೆ ಅದು ದೈಹಿಕವಷ್ಟೇ ಅಲ್ಲ ಮಾನಸಿಕ, ಸಾಮಾಜಿಕ, ಆರ್ಥಿಕ ಇವೆಲ್ಲದರ ಬದಲಾ ವಣೆ. ಯಾವುದೇ ಪ್ರಾಣಿಯಿರಲಿ- ವಯಸ್ಸಾದಂತೆ ದುರ್ಬಲವಾಗುತ್ತದೆ, ಬದುಕು ಇನ್ನಷ್ಟು ದುಸ್ತರ ವಾಗುತ್ತದೆ.
ಹಾಗಾದರೆ ಮನುಷ್ಯನಿಗೂ ಹಾಗೆಯೇ? ವೃದ್ಧಾಪ್ಯ ಮಾನಸಿಕವಾಗಿ ಖಿನ್ನರಾಗುವ, ನೆನಪಿನ ಶಕ್ತಿ ಕಳೆದುಕೊಳ್ಳುವ, ದುರ್ಬಲರಾಗುವ ದುಃಖದ ವಿಷಯವೇ? ವೃದ್ಧಾಪ್ಯ ಅಸಲಿಗೂ ಭಯಾನಕವೇ?ಇತ್ತೀಚೆಗೆ ಅಮೆರಿಕದ ಸ್ಟಾನರ್ಡ್ ವಿಶ್ವವಿದ್ಯಾಲಯದ ಲೌರಾ ಕಾರ್ಟೆನ್ಸೆನ್ ಮತಿತ್ತರ ಮನಃಶಾಸ್ತ್ರ ಜ್ಞರು 18 ರಿಂದ 94 ವಯಸ್ಸಿನ ಲಕ್ಷಾಂತರ ಮಂದಿಯನ್ನು ಸೇರಿಸಿ ಒಂದು ಪ್ರಯೋಗ ಮಾಡಿ ಮುಗಿಸಿದ್ದಾರೆ. ಹತ್ತು ವರ್ಷಗಳ ಕಾಲ ನಡೆದ ಪ್ರಯೋಗ ಅದು. ಅದರಲ್ಲಿ ಪ್ರತಿಯೊಂದು ಖಂಡದಿಂದ ಎಲ್ಲ ವಯಸ್ಸಿನ, ಸ್ಥಿತಿಗತಿಯ ಸಾವಿರಾರು ಮಂದಿ ಭಾಗವಹಿಸಿದ್ದರು.
ಪ್ರಯೋಗದ ಭಾಗವಾಗಿ ಎಲ್ಲರೂ ಬೇರೆ ಬೇರೆ ನಿಗದಿತ ಸಮಯದ ಮಾನಸಿಕ ಸ್ಥಿತಿಯನ್ನು, ಭಾವನೆ ಗಳನ್ನು ತಮಗೆ ಕೊಟ್ಟ ಉಪಕರಣದಲ್ಲಿ ದಾಖಲಿಸಬೇಕಿತ್ತು. ಇದೇ ತೆರನಾದ ಏನೇನೋ ಉಪ ಪ್ರಯೋಗಗಳು, ದಾಖಲೆಗಳು. PMC3332527 ಎಂದು ಗೂಗಲ್‌ನಲ್ಲಿ ಹುಡುಕಿದರೆ ಈ ಪ್ರಯೋಗದ ಆಳ-ಅಗಲದ ವಿವರಗಳು ಸಿಗುತ್ತವೆ. ಈ ಪ್ರಮಾಣದಲ್ಲಿ ನಡೆಸಿರುವುದರಿಂದ ಇದೊಂದು ತೀರ್ಮಾ ನಕ್ಕೆ ಬರಬಹುದಾದ ಪ್ರಯೋಗ ಎಂಬುದಷ್ಟೇ ಇಲ್ಲಿ ಪ್ರಸ್ತುತ.
ಈ ಪ್ರಯೋಗದ ಫಲಿತಾಂಶ ವೃದ್ಧಾಪ್ಯದೆಡೆಗಿನ ಸಾಮೂಹಿಕ ನಂಬಿಕೆಯನ್ನು ತಲೆಕೆಳಗಾಗಿಸಿದೆ. ಇದರ ಪ್ರಕಾರ ನೆನಪಿನ ಶಕ್ತಿ ಕಳೆದುಕೊಳ್ಳುವ ಸಮಸ್ಯೆಯೊಂದನ್ನು ಹೊರತುಪಡಿಸಿ ಉದ್ವೇಗ, ತುಮುಲಗಳು, ಖಿನ್ನತೆ, ಬೇಸರ, ಭಯ, ಮುಂಗೋಪ, ಸಿಟ್ಟು ಇತ್ಯಾದಿ ಸಾವಿರದೆಂಟು ಮಾನಸಿಕ ಏರಿಳಿತ, ಸಮಸ್ಯೆಗಳು ಯುವಕರಲ್ಲಿಯೇ ಜಾಸ್ತಿ. ಇದರ ಭಾಗವಾಗಿ ಇನ್ನೊಂದು ಪ್ರಯೋಗ ನಡೆಯಿತು.
ಅದರಲ್ಲಿ ಧನಾತ್ಮಕ ಮತ್ತು ಋಣಾತ್ಮಕ, ಖುಷಿಯ-ಹಿಂಸೆಯ, ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ಫೋಟೋ ಮತ್ತು ವಿಡಿಯೋಗಳನ್ನು ಅವರಿಗೆಲ್ಲ ತೋರಿಸಲಾಯಿತು. ಫಲಿತಾಂಶದಲ್ಲಿ ಯುವಕರು ಋಣಾತ್ಮಕ ಫೋಟೋ, ವಿಡಿಯೋಗಳನ್ನು ಮಾತ್ರ ನೆನಪಿಟ್ಟುಕೊಂಡಿದ್ದರು. ಅವರಿಗೆ ಒಳ್ಳೆಯ ವಿಚಾರಗಳು ಕಾಲ ಕಳೆದಂತೆ ಮರೆತು ಕೆಟ್ಟ ವಿಚಾರಗಳಷ್ಟೇ ನೆನಪಿನಲ್ಲುಳಿದಿದ್ದವು. ಆದರೆ ವೃದ್ಧ ರಿಗೆಲ್ಲ ಧನಾತ್ಮಕ ವಿಡಿಯೋ, ಫೋಟೋಗಳಷ್ಟೇ ನೆನಪಿದ್ದವು.
ಪ್ರಯೋಗದ ಪ್ರಕಾರ ನಿತ್ಯ ಬದುಕಿನಲ್ಲಿ ವೃದ್ಧರೇ ಹೆಚ್ಚು ಧನಾತ್ಮಕವಾಗಿರುವುದು ಸ್ಪಷ್ಟವಾಯಿತು. ಯುವಕರ ಬದುಕನ್ನು ದುಃಖ, ಬೇಸರ, ಸಿಟ್ಟು ಕಾಡಿದಷ್ಟು ವೃದ್ಧರನ್ನು ಬಾಧಿಸುವುದು ಕಾಣಿಸಲಿಲ್ಲ. ಮಧ್ಯ ವಯಸ್ಕರಲ್ಲಿ ಒಳ್ಳೆಯ ಮತ್ತು ಕೆಟ್ಟ ಭಾವನೆಗಳು ಹದವಾಗಿದ್ದವು. ಒಟ್ಟಾರೆ, ವಯಸ್ಸಾಗುತ್ತಿದ್ದಂತೆ ಮನುಷ್ಯ ಇನ್ನಷ್ಟು ಧನಾತ್ಮಕವಾಗಿ ಬದಲಾಗುತ್ತಾ ಹೋಗುತ್ತಾನೆ ಎಂಬು ದನ್ನು ಈ ಪ್ರಯೋಗ ಸ್ಪಷ್ಟಪಡಿಸಿದೆ.
ನನಗೆ ಬಿಡುವಾದಾಗಲೆಲ್ಲ ಇಲ್ಲಿನ ವೃದ್ಧಾಶ್ರಮವೊಂದಕ್ಕೆ ಸೇವೆಗೆಂದು ಹೋಗುತ್ತೇನೆ. ಅಲ್ಲಿ ಒಂದು ಅಮೆರಿಕನ್ ವೃದ್ಧ ದಂಪತಿ ನನಗೆ ಪರಿಚಯ, ಆಪ್ತ. ಅವರಿಬ್ಬರೂ ಉತ್ಸಾಹದ ಚಿಲುಮೆ. ಇಲ್ಲಿಯ ತನಕ ಅವರ ಬಾಯಲ್ಲಿ ಸದಾ ಧನಾತ್ಮಕ ವಿಚಾರಗಳನ್ನಷ್ಟೇ ನಾನು ಕೇಳಿದ್ದು. ಇತ್ತೀಚೆಗೆ ಅವರ ಜತೆ ಲೋಕಾಭಿರಾಮವಾಗಿ ಮಾತನಾಡುವಾಗ “ನಿಮಗೆ ವಯಸ್ಸಾಗುತ್ತಿದೆಯಲ್ಲ, ಅದರ ಬಗ್ಗೆ ನಿಮ್ಮ ಅನಿಸಿಕೆ ಏನು?" ಎಂದು ಕೇಳಿದೆ.
ಸ್ವಲ್ಪ ಹೊತ್ತು ಯೋಚಿಸಿ, “ನನಗೆ ಈಗ 80 ವಯಸ್ಸಾಗಿದೆ. ಇಷ್ಟು ಕಾಲ ಬದುಕಿರುವ ಸಮಸ್ಯೆ ಯೆಂದರೆ ನನ್ನ ಎಲ್ಲಾ ಆಪ್ತ ಸ್ನೇಹಿತರು ಈಗ ಉಳಿದಿಲ್ಲ. ಅದು ನನ್ನನ್ನು ಆಗೀಗ ಕಾಡುವುದಿದೆ" ಎಂದರು. “ನೀವು ಇರುವುದು ವೃದ್ಧಾಶ್ರಮದಲ್ಲಿ- ಇಲ್ಲಿ ಇಷ್ಟೊಂದು ಮಂದಿಯಿದ್ದಾರೆ. ಅವರನ್ನೇಕೆ ಸ್ನೇಹಿತರನ್ನಾಗಿಸಿಕೊಳ್ಳಬಾರದು?" ಎಂದು ಮರುಪ್ರಶ್ನಿಸಿದೆ.
ಅದಕ್ಕೆ ಅವರು “ಅವರಿಗೆ ಕೊಡಲು ನನ್ನಲ್ಲಿ ಸಮಯವಿಲ್ಲ" ಎಂದರು. ಮನೆಗೆ ಬಂದ ನಂತರವೂ ಅವರ ಮಾತು ಕಿವಿಯ ಉಳಿದಿತ್ತು. ವೃದ್ಧಾಶ್ರಮದಲ್ಲಿ ಇರುವ ಅವರಿಗೆ ಸಮಯವಿಲ್ಲ ಎನ್ನುವುದು ಅದೇಕೋ ಸಮಂಜಸವೆನಿಸಲಿಲ್ಲ. ಅವರು ಹೇಳಿದ ಸೂಕ್ಷ್ಮ ಆಮೇಲೆ ಅರ್ಥವಾಯಿತು. ಇನ್ನು ಕೆಲವೇ ದಿನ-ತಿಂಗಳ ಆಯಸ್ಸು ಬಾಕಿಯಿರುವುದರಿಂದ ಅವರ ಸ್ನೇಹಕ್ಕೆ ಭವಿಷ್ಯ, ಸಮಯ ಇಲ್ಲ ಎನ್ನುವುದು ಅವರ ಮಾತಿನ ಸೂಕ್ಷ್ಮವಾಗಿತ್ತು.
‘ದಸ್ ವಿದಾನಿಯಾ’ ಎಂಬ ಹಿಂದಿ ಚಲನಚಿತ್ರವೊಂದಿದೆ. ಅದರಲ್ಲಿನ ಹೀರೋಗೆ ಏನೋ ಒಂದು ಮಾರಣಾಂತಿಕ ರೋಗವಿದೆ ಎಂದು ತಿಳಿಯುತ್ತದೆ. ಅದು ತಿಳಿದದ್ದೇ ತಡ, ಆ ವ್ಯಕ್ತಿಯ ಬದುಕಿನ ಅವಶ್ಯಕತೆಗಳೆಲ್ಲ ಉಲ್ಟಂಪಲ್ಟಾ ಆಗಿ ಬಿಡುತ್ತವೆ. ಅಲ್ಲಿಯವರೆಗೆ ದೊಡ್ಡ ವಿಷಯವಾಗಿದ್ದ ಎಲ್ಲಾ ವಿಷಯಗಳು, ಹಣ ಗಳಿಸಬೇಕೆಂಬ ಹಪಾಹಪಿ ಇವೆಲ್ಲವೂ ಏಕಾಏಕಿ ಪ್ರಾಮುಖ್ಯವನ್ನು ಕಳೆದು ಕೊಂಡುಬಿಡುತ್ತವೆ.
ಹಿಂದೇನಾಯಿತು, ಮುಂದೇನಾಗುತ್ತದೆ ಎಂಬ ಯಾವುದೇ ಚಿಂತೆಗಳು ಚಿಂತೆಗಳಾಗಿಯೇ ಉಳಿ ಯುವುದಿಲ್ಲ. ಅವನ ಬದುಕು ಎರಡೇ ದಿನದಲ್ಲಿ ಸಂಪೂರ್ಣ ಬದಲಾಗಿಬಿಡುತ್ತದೆ. ಇನ್ನಿರುವುದು ಕೆಲವೇ ದಿನಗಳ ಬದುಕು ಎಂದಾಕ್ಷಣ ಆತನ ಬದುಕು ಸಂಪೂರ್ಣ ವರ್ತಮಾನಕ್ಕೆ ತಿರುಗಿ ಕೊಳ್ಳು ತ್ತದೆ. ತಿಳಿಹಾಸ್ಯದ ಆದರೆ ಬಹಳ ಭಾವನಾತ್ಮಕವಾದ ಚಿತ್ರವಿದು. ಹದಿಹರೆಯದ ವಯಸ್ಸಿ ನಲ್ಲಿ, ಯೌವನದಲ್ಲಿ ಬದುಕಲು ಉಳಿದ ಸಮಯ ಹೇರಳವಾಗಿದೆ ಎಂದೆನಿಸುತ್ತಿರುತ್ತದೆ.
ಆ ಕಾರಣಕ್ಕೆ 30-35 ವಯಸ್ಸಿನವರೆಗೆ ಆಯಸ್ಸು ಸರಿಯುತ್ತಿದೆ, ನಮ್ಮ ಬದುಕಿಗೆ ಸಮಯಮಿತಿ ಇದೆ ಎಂಬ ಆಲೋಚನೆಯೇ ಹತ್ತಿರ ಸುಳಿಯುವುದಿಲ್ಲ. ಆಗೀಗ, ಸಂಬಂಧಿಕರಲ್ಲಿ ಯಾರೋ ತೀರಿ ಕೊಂಡಾಗ ಅಥವಾ ಸಾವನ್ನು ಸಮೀಪದಿಂದ ಕಂಡಾಗ ಒಂದಿಷ್ಟು ಸ್ಮಶಾನ ವೈರಾಗ್ಯ ಹುಟ್ಟಿ ಕೊಳ್ಳಬಹುದು- ಆದರೆ ಅವು ನಿರಂತರವಲ್ಲ.
ಆದರೆ ವಯಸ್ಸಾಗುತ್ತಿದ್ದಂತೆ, ಮಧ್ಯವಯಸ್ಸಿಗೆ ಬರುವಾಗ ನಮ್ಮಲ್ಲಿ ಉಳಿದಿರುವ ಸಮಯದ ಬಗ್ಗೆ ನಿಧಾನಕ್ಕೆ ಯೋಚನೆ ಆರಂಭವಾಗುತ್ತದೆ. ಕೆಲವರಲ್ಲಿ ಈ ವಿಚಾರ ಒಮ್ಮೆಲೇ ತೀವ್ರಗೊಂಡ Mid-life crisis (ನಡುವಯಸ್ಸಿನ ಬಿಕ್ಕಟ್ಟು) ಗೆ ಕಾರಣವಾಗುತ್ತದೆ. ಒಟ್ಟಾರೆ ವಯಸ್ಸು ಹೆಚ್ಚಾಗು ತ್ತಿದ್ದಂತೆ, ಉಳಿದ ಸಮಯವೆಷ್ಟು ಎಂಬ ಭಾವ ನಮ್ಮ ಹಲವಾರು ಕೆಲಸಗಳನ್ನು ನಿರ್ದೇಶಿಸಲು ಆರಂಭಿಸುತ್ತದೆ.
ವಯಸ್ಸಾಗುವುದೆಂದರೆ ದೇಹ ದುರ್ಬಲಗೊಳ್ಳುವುದು, ಕೌಟುಂಬಿಕ ಸಮೀಕರಣಗಳು ಬದಲಾಗು ವುದು, ರೋಗಗಳು ಆವರಿಸುವುದು, ಏಕಾಗ್ರತೆ ಕಳೆದುಕೊಳ್ಳುವುದು, ಮೈಕೈ ನೋವು, ಪ್ರತಿರೋಧಕ ಶಕ್ತಿ, ನೆನಪಿನ ಶಕ್ತಿ ಕುಗ್ಗುವುದು ಇತ್ಯಾದಿ ದೈಹಿಕ ಸಮಸ್ಯೆಗಳಿzಗ್ಯೂ ಸಮಾಧಾನ, ನೆಮ್ಮದಿ, ಖುಷಿ ಇತ್ಯಾದಿಗಳು ಹೆಚ್ಚಾಗುವುದೆಂದರೆ ಅದೊಂದು ವಿರೋಧಾಭಾಸವೇ ಅಲ್ಲವೇ? ಅದು ಹೇಗೆ? ವಯಸ್ಸಾದಂತೆ ನೆನಪಿನ ಶಕ್ತಿ ಕುಂಠಿತವಾಗುವುದರಿಂದ- ನಿನ್ನೆ ನಡೆದದ್ದು ಇವತ್ತು ಮರೆಯುವು ದರಿಂದ ಒದಗಿದ ನೆಮ್ಮದಿಗಳೇ ಇವು? ವಯಸ್ಸಾದಂತೆ ಸ್ನೇಹವರ್ಗ ಚಿಕ್ಕದಾಗುತ್ತದೆ, ಸಾಮಾಜಿಕ ಚಟುವಟಿಕೆಗಳು ತಗ್ಗುತ್ತವೆ.
ಆದರೂ ಭಾವನಾತ್ಮಕವಾಗಿ, ಮಾನಸಿಕವಾಗಿ, ಆಂತರ್ಯದಲ್ಲಿ ವೃದ್ಧರೇ ಗಟ್ಟಿಯಾಗುವುದಾದರೂ ಹೇಗೆ?ವಯಸ್ಸಾದಂತೆ ವ್ಯಕ್ತಿಯು ಉಪಯೋಗಕ್ಕೆ ಬಾರದ ಸಂಬಂಧಗಳನ್ನು ಒಂದೊಂದಾಗಿ ಕಳಚಿ ಕೊಳ್ಳುತ್ತಾ ಹೋಗುತ್ತಾನೆ. ಅದೇ ಸಮಯದಲ್ಲಿ ಇರುವ ಕೆಲವೇ ಸಂಬಂಧಗಳು ಇನ್ನಷ್ಟು ಅರ್ಥ ಪೂರ್ಣವಾಗುತ್ತವೆ.
ಸ್ನೇಹವರ್ಗ, ಸಂಬಂಧಗಳು, ಬಳಗದ ಸಂಖ್ಯೆಯಲ್ಲಿ ಕ್ಷೀಣಿಸುವುದು ಸಹಜ. ಆದರೆ ವೃದ್ಧಾಪ್ಯದಲ್ಲಿ ಉಳಿಯುವುದು ಪರಿಷ್ಕೃತ ಸಂಬಂಧಗಳು ಮಾತ್ರ. ಅವು ಬದುಕಿನ ಎಲ್ಲ ಪರೀಕ್ಷೆಗಳನ್ನು ದಾಟಿ, ಮೆಟ್ಟಿ ನಿಂತು, ಬದುಕುಳಿದ ಸಂಬಂಧಗಳು. ಇಲ್ಲವೇ ಎರಡೂ ಕಡೆಯಿಂದ ತೀರಾ ಅನಿವಾರ್ಯ ವೆನಿಸುವ ಸಂಬಂಧಗಳು. ಹಾಗಾಗಿ ಬಂಧಗಳ ಸಂಖ್ಯೆ ಕಡಿಮೆಯಾದರೂ ಇರುವ ಕೆಲವೇ ಕೆಲವು ತೀರಾ ಭಾವನಾತ್ಮಕವಾದವು.
ನಿತ್ಯ ಬದುಕಿನಲ್ಲಿ ನಮ್ಮ ಮನಸ್ಥಿತಿಯನ್ನು ಸುತ್ತಲಿನ ಘಟನೆ, ವ್ಯಕ್ತಿ, ಪರಿಸ್ಥಿತಿಗಳು ನಿರ್ಧರಿಸುತ್ತವೆ ಅಲ್ಲವೇ? ಸಾಮಾನ್ಯವಾಗಿ ನಾಲ್ಕು ಕೆಟ್ಟದ್ದು ಕಂಡರೆ ಒಂದು ಒಳ್ಳೆಯದು ಕಾಣುವುದು ಎಳೆಯ ಪ್ರಾಯದಲ್ಲಿ. ಕ್ರಮೇಣ ಮಧ್ಯವಯಸ್ಸಿನಲ್ಲಿ ಎರಡು ಒಳ್ಳೆಯದು, ಎರಡು ಕೆಟ್ಟದ್ದು ಕಾಣಿಸುತ್ತದೆ. ಆದರೆ ಈ ಮೇಲಿನ ಪ್ರಯೋಗದ ಪ್ರಕಾರ ಐವತ್ತು ದಾಟುತ್ತಿದ್ದಂತೆ, ನಮ್ಮಲ್ಲಿ ವಯಸ್ಸಾಗುತ್ತಿದೆ ಎನ್ನುವ ವಿಚಾರ ಗಾಢವಾಗುತ್ತಿದ್ದಂತೆ, ಬದುಕಿನ ಸಮಯ ಅಮಿತವಲ್ಲ ಎನ್ನುವುದು ಮನದಟ್ಟಾ ದಾಗ ಮನಸ್ಸು ಎಲ್ಲವನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳಲು ಆರಂಭಿಸುತ್ತದೆ.
ಎಲ್ಲದರಲ್ಲೂ ಒಳ್ಳೆಯದು ಕಾಣಲು ಶುರುವಾಗುತ್ತದೆ. ಎಂಥದೇ ಸ್ಥಿತಿಯಿರಲಿ, ಕ್ರಮೇಣ ಸಂತೃಪ್ತಿ ಆವರಿಸಿಕೊಳ್ಳುತ್ತದೆ. ನಾಲ್ಕರಲ್ಲಿ ಮೂರು ಒಳ್ಳೆಯದು ಕಾಣಿಸುವುದು ಮಾನಸಿಕ ಬದಲಾವಣೆ. ಎಲ್ಲವನ್ನೂ ಸಮಚಿತ್ತದಿಂದ ನೋಡುವ ಶಕ್ತಿ ವೃದ್ಧಿಸುತ್ತದೆ. ವಯಸ್ಸಾಗುವುದು ಎಂದರೆ ಪಕ್ವ ಗೊಳ್ಳುವ ಪ್ರಕ್ರಿಯೆ. ಬುಟ್ಟಿಯ ಎಲ್ಲ ಹಣ್ಣು ಹೇಗೆ ಪಕ್ವವಾಗುವುದಿಲ್ಲವೋ, ಹಾಗೆಯೇ ಇಲ್ಲಿ ಹೇಳುವ ಪಕ್ವತೆ ಎಲ್ಲರಲ್ಲೂ ಬರದಿರಬಹುದು.
ಆದರೆ ಪಕ್ವತೆ ಹೇಗೆಯೇ ಇರಲಿ- ಒಳನೆಮ್ಮದಿ ಮಾತ್ರ ಪಕ್ಕಾ. ಮಧ್ಯವಯಸ್ಸಿನ ಆತಂಕಗಳೆಲ್ಲ ಅಷ್ಟಾಗಿ ಬಾಧಿಸುವುದಿಲ್ಲ. ಅದೆಂಥದ್ದೇ ಬದುಕಿರಲಿ, ಹಣ, ಆಸ್ತಿಪಾಸ್ತಿ ಇವೆಲ್ಲವೂ ಅಷ್ಟಾಗಿ ಬಾಧಿ ಸಿದ ಸ್ಥಿತಿಯೇ ನಿಜವಾದ ವೃದ್ಧಾಪ್ಯ. ಪ್ರಯೋಗದ ಪ್ರಕಾರ ವೃದ್ಧಾಪ್ಯದಲ್ಲಿ ಯಾರೂ ತನ್ನಿಡೀ ಜೀವನವನ್ನು ಮೆಲಕು ಹಾಕಿಕೊಂಡು, ‘ಅದಾಯಿತು, ಇದಾಗಲಿಲ್ಲ’ ಎಂದು ಕೊರಗುತ್ತಾ ಕೂರು ವುದಿಲ್ಲ.
ಯೋಚಿಸಿದರೂ ದಿನದ ಕೆಲವೇ ಕೆಲವು ನಿಮಿಷ ಮಾತ್ರ. ಅಷ್ಟೇ ಅಲ್ಲ, ತೀರಾ ಇನ್ನೈವತ್ತು ವರ್ಷದ ಭವಿಷ್ಯದ ಬಗ್ಗೆಯೂ ಯೋಚನೆ ಇರುವುದಿಲ್ಲ, ಬೇಕಿಲ್ಲ. ಐವತ್ತರ ನಂತರ ಬದುಕು ಹೆಚ್ಚೆಚ್ಚು ವರ್ತಮಾನವಾಗುತ್ತದೆ. ವಯಸ್ಸಾದಂತೆ ಇರುವ ಕೆಲವೇ ಸಂಬಂಧಗಳು ಸ್ನೇಹಿತರೆಡೆಗೆ, ಮಡದಿ-ಗಂಡ-ಮಕ್ಕಳೆಡೆಗೆ ಒಲವು ಹೆಚ್ಚುತ್ತಿದೆ. ಜೀವಮಾನವಿಡೀ ಜಗಳವಾಡುತ್ತಲೇ ಕಾಲ ಕಳೆದ ದಂಪತಿ ಗಳು ವಯಸ್ಸಾದಂತೆ ಹತ್ತಿರವಾಗುತ್ತಾರೆ.
ಇನ್ನುಳಿದಿರುವುದು ಕೆಲವೇ ಕೆಲವು ವರ್ಷಗಳು ಎಂಬ ವಿಚಾರ ನಮ್ಮನ್ನು ಖಿನ್ನರನ್ನಾಗಿಸುವ ಬದಲಿಗೆ ಆ ಬದುಕನ್ನು ಬದುಕುವುದು, ಪೂರ್ಣಗೊಳಿಸುವುದು ಹೇಗೆ ಎನ್ನುವ ವಿಚಾರದತ್ತ ಮನಸ್ಸು ಕೇಂದ್ರೀಕೃತವಾಗುತ್ತದೆ. ಒಬ್ಬ ಯುವಕ ತನ್ನ ಬಾಲ್ಯವನ್ನು ಯೋಚಿಸುವಾಗ ಮಾಡಿದ ತಪ್ಪುಗಳೇ ಹೆಚ್ಚಾಗಿ ನೆನಪಿಗೆ ಬರುತ್ತವೆ. ಹಾಗಂತ ವೃದ್ಧಾಪ್ಯ ಹಾಗಲ್ಲ, ಅಲ್ಲಿ ನೆನಪು ಮಾಡಿ ಕೊಳ್ಳಲಿಕ್ಕೆ ಬೇಕಾದಷ್ಟಿದ್ದರೂ ನೆನಪಾಗುವುದು ಒಳ್ಳೆಯ ವಿಚಾರಗಳು ಮಾತ್ರ. ಒಟ್ಟಾರೆ ಬದುಕು ವೃದ್ಧಾಪ್ಯದಲ್ಲಿ ವ್ಯಕ್ತಿಗತವಾಗಿ ಹೆಚ್ಚೆಚ್ಚು ಅರ್ಥಪೂರ್ಣವಾಗುತ್ತದೆ.
ಯುವಕರು ಹಿಂದೆ ಕಳೆದ ಸಮಯ ಮತ್ತು ಭವಿಷ್ಯದ ಬಗ್ಗೆ ನಿರಂತರ ಯೋಚಿಸುತ್ತಾರೆ. ಪ್ರಸ್ತುತ ಸ್ಥಿತಿಯ ಬಗ್ಗೆ ಯೋಚನೆ ಕಡಿಮೆ. ಆದರೆ ದೀರ್ಘ ಬದುಕಿನ ಇತಿಹಾಸವನ್ನು ಕಟ್ಟಿಕೊಂಡ ವೃದ್ಧ ವ್ಯಕ್ತಿ ಭೂತದ ಬಗ್ಗೆ ಯೋಚಿಸುವುದು, ನೆನಪುಮಾಡಿಕೊಂಡು ‘ಹಾಗಾಯಿತು, ಹಾಗಾಗಲಿಲ್ಲ’ ಎಂದು ಯೋಚಿಸುವುದು ತೀರಾ ಕಡಿಮೆ. ಅವರಲ್ಲಿ ಭವಿಷ್ಯದ ಬಗ್ಗೆಯೂ ಯೋಚನೆ ಕಡಿಮೆ. ಹಾಗಾಗಿ ವರ್ತಮಾನ ಬದುಕಿನ ಪೂರ್ಣತೆಯ ಅನುಭವ ವಯಸ್ಸಾದಂತೆ ಜಾಸ್ತಿಯಾಗುತ್ತಾ ಹೋಗುತ್ತದೆ. ಅದೇ ಕಾರಣಕ್ಕಲ್ಲವೇ- ‘ವರ್ತಮಾನದಲ್ಲಿ ಬದುಕಿ’ ಎಂದು ಎಲ್ಲರೂ ಎಲ್ಲರಿಗೂ ಹೇಳುತ್ತಲೇ ಇರುವುದು?