Shishir Hegde Column: ಸಮತೋಲನದ ಸಮಾಜಕ್ಕೆ ವೇಶ್ಯಾವಾಟಿಕೆ

ನಲವತ್ತು ದಾಟಿದ ಇಬ್ಬರು ಗಂಡಸರು ಆ ಮಗುವನ್ನು ರೇಪ್‌ಮಾಡಿ ಸುಟ್ಟುಹಾಕು ತ್ತಾರೆ ಎಂದರೆ? ದಿನ ಬೆಳಗಾದರೆ ಭಾರತ, ಹಿಂದೂ ಸಂಸ್ಕಾರ

Profile Ashok Nayak December 27, 2024
ಶಿಶಿರಕಾಲ
ಶಿಶಿರ್‌ ಹೆಗಡೆ
ಛೇ, ಇವರೆಲ್ಲಾ ಮನುಷ್ಯರೇ ಹೌದೇ?! ಅಥವಾ ರಾಕ್ಷಸರೇ? ಇವರನ್ನೆಲ್ಲ ‘ರಾಕ್ಷಸರು’ ಎಂದೆನ್ನುವಂತೆಯೂ ಇಲ್ಲ.ಏಕೆಂದರೆ, ಪೌರಾಣಿಕ ರಕ್ಕಸರು ಕೂಡ ಇವರ ಮುಂದೆ ತೀರಾ ಸಾಚಾ ಅನ್ನಿಸಿ ಬಿಡುತ್ತಾರೆ!
ದೆಹಲಿ. 9 ವರ್ಷದ ಕೂಸು, ಹೆಣ್ಣು ಮಗು. ನಲವತ್ತು ದಾಟಿದ ಇಬ್ಬರು ಗಂಡಸರು ಆ ಮಗುವನ್ನು ರೇಪ್‌ಮಾಡಿಸುಟ್ಟುಹಾಕುತ್ತಾರೆ ಎಂದರೆ? ದಿನ ಬೆಳಗಾದರೆ ಭಾರತ, ಹಿಂದೂ ಸಂಸ್ಕಾರ, ಸನಾತನ ಧರ್ಮ, ಪುರಾಣ, ಉಪನಿಷತ್ತು, ಭಗವದ್ಗೀತೆ ಎಂದೆಲ್ಲಾ ಬೊಂಬಡಾ ಹೊಡೆದುಕೊಳ್ಳುವವರಲ್ಲಿಯೇ ಇದನ್ನು ಪ್ರಶ್ನಿಸಬೇಕು! ಎಲ್ಲಿದೆ ಸ್ವಾಮಿಈ ನೆಲದ ಸಂಸ್ಕಾರ, ಸಂಸ್ಕೃತಿ ಇತ್ಯಾದಿ ಇತ್ಯಾದಿ? ನಾವು ಇಂಥ ಅಮಾನುಷ ಸುದ್ದಿಯನ್ನು ಕೇಳಿದಾಗೆಲ್ಲ, ರಾಕ್ಷಸರೂ ತೀರಾ ಸಾಚಾ, ಡಿಗ್ನಿಫೈಡ್ ಎನಿಸಿಬಿಡುತ್ತಾರೆ.
ನರಭಕ್ಷಕ ಹುಲಿ-ಸಿಂಹಗಳು ಕೂಡ ಸಹ್ಯವಾಗಿಬಿಡಬಹುದು, ಆದರೆ ಇಂಥ ಹೆಣ್ಣುಬಾಕ ‘ಮೃಗೀಯ’ ಗಂಡಸರು? ಮಾನವೀಯತೆಯ ಪರಮದಾರಿದ್ರ್ಯವಿರುವ ಇಂಥವರನ್ನು ಕಂಡಾಗ, ಮರಣದಂಡನೆ ಕೂಡ ಕಡಿಮೆ ಅನ್ನಿಸಿ ಬಿಡುತ್ತದೆ.
ಪತ್ರಿಕೆಯಲ್ಲಿ ಒಂದೆಡೆ, ಪಿ.ವಿ.ಸಿಂಧು ಎಂಬ ಸಾಧಕಿಯ ಮದುವೆಯ ಫೋಟೋಗಳು; ಅದರ ಪಕ್ಕದಲ್ಲೇ, 9 ವರ್ಷದ ಮಗುವಿನ ಅತ್ಯಾಚಾರವಾದ ಸುದ್ದಿ. ಇದೆಂಥ ವೈರುದ್ಧ್ಯ?! ವರದಿಯಾಗುವ ಅತ್ಯಾಚಾರಗಳ ಸಂಖ್ಯೆಯ ಪ್ರಕಾರ,ಜಗತ್ತಿನ ದೇಶಗಳ ಪಟ್ಟಿಯಲ್ಲಿ ಭಾರತವು ೬೦ನೇ ಸ್ಥಾನದಲ್ಲಿದೆ.
ಇದರರ್ಥ, ನಮ್ಮಲ್ಲಾಗುವ ಅತ್ಯಾಚಾರಗಳಿಗೆ ನೇರ ಅನುಪಾತವನ್ನು ಕಲ್ಪಿಸುವಂತಿಲ್ಲ, ‘ನಾವು ಇಲ್ಲಿದ್ದೇವೆ, ಅವರುಅಲ್ಲಿದ್ದಾರೆ’ ಎಂದೆಲ್ಲ ತಾಳೆಲೆಕ್ಕ ಹಾಕುವಂತಿಲ್ಲ. ವರದಿಯಾಗುವ ಅತ್ಯಾಚಾರ ಪ್ರಕರಣಗಳ ಸಂಖ್ಯೆಯು ಸಮಾಜ,ಕಾನೂನುಸ್ಥಿತಿ, ಅದು ವ್ಯವಹರಿಸುವ ರೀತಿ ಹೀಗೆ ಹತ್ತಾರು ವಿಚಾರಗಳನ್ನು ಅವಲಂಬಿಸಿರುತ್ತದೆ ಎಂಬುದನ್ನು ನಿಮಗೆ ಬಿಡಿಸಿ ಹೇಳಬೇಕಿಲ್ಲ. ಅತ್ಯಾಚಾರ ಎಂಬುದು ನಮ್ಮ ದೇಶವೊಂದರದ್ದೇ ಕಥೆ-ವ್ಯಥೆ ಅಂದುಕೊಳ್ಳಬೇಡಿ; ಮಧ್ಯಪ್ರಾಚ್ಯ ವಲಯವನ್ನು ಬಿಟ್ಟು ಉಳಿದ ದೇಶಗಳದ್ದೂ ಇದೇ ಹಣೆಬರಹ. ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಇರುತ್ತದೆಯಷ್ಟೇ.
ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಸ್ವೀಡನ್, ಬೆಲ್ಜಿಯಂ, ಸ್ಪೇನ್ ಮೊದಲಾದ ದೇಶಗಳಲ್ಲಿನ ‘ಅತ್ಯಾಚಾರದಅಂಕಿ-ಅಂಶ’ಗಳನ್ನು ಒಮ್ಮೆ ನೋಡಿದರೆ ಬೆಚ್ಚಿ ಬೀಳಬೇಕಾಗುತ್ತದೆ! ಕೆಲವು ದೇಶಗಳಂತೂ ತಮ್ಮಲ್ಲಾಗುವ ಅತ್ಯಾಚಾರಗಳ ಲೆಕ್ಕವನ್ನು ಸಾರ್ವಜನಿಕವಾಗಿ ಪ್ರಕಟಿಸುವುದೇ ಇಲ್ಲ!
‘ಸಭ್ಯ’ ಎನಿಸಿಕೊಂಡ ಎಲ್ಲ ದೇಶಗಳಲ್ಲೂ ಇಂಥ ತೀರಾ ಅಮಾನವೀಯ ಕೃತ್ಯ ನಡೆದಾಗ, ಒಂದಿಷ್ಟು ಸುದ್ದಿ ಯಾಗುತ್ತದೆ, ಚರ್ಚೆ ನಡೆಯುತ್ತದೆ, ಸಭ್ಯ ಜನರ ಅಸಹಾಯಕತೆ ಮತ್ತು ಹತಾಶೆ ಮುನ್ನೆಲೆಗೆ ಬರುತ್ತವೆ. ಸಂಖ್ಯೆಹೆಚ್ಚಿದಾಗಲೆಲ್ಲ ಜನರಲ್ಲಿ ‘ಇನ್‌ಸೆನ್ಸಿಟಿವಿಟಿ’ ಹೆಚ್ಚುತ್ತಾ ಹೋಗುತ್ತದೆ. ‘ನಿರ್ಭಯಾ’ ಪ್ರಕರಣ ನಡೆದ ಸಮಯದಲ್ಲಿ,ಅದಕ್ಕಿಂತ ಮೊದಲು ಹಾಗೂ ನಂತರವೂ ಇಂಥ ಅದೆಷ್ಟೋ ಅಮಾನವೀಯ ಕೃತ್ಯಗಳು ನಡೆದಿವೆ- ಆದರೆ ಅವೆಲ್ಲವೂ ಅಷ್ಟು ಪ್ರಚಾರ ಪಡೆದುಕೊಂಡಿಲ್ಲ.
ಕೆಲವು ಫಕ್ಕನೆ ಸುದ್ದಿಯಾಗಿ ಮಾರನೆಯ ದಿನವೇ ಮಸುಕಾಗಿಹೋಗಿವೆ. ಹೀಗಾದಾಗಲೆಲ್ಲ, ‘ಇದೆಲ್ಲ ಇರುವುದೇ ಹೀಗೆ, ಏನೂ ಮಾಡಲಿಕ್ಕೆ ಸಾಧ್ಯವಿಲ್ಲ’ ಎಂಬಿತ್ಯಾದಿ ಮಾತುಗಳು ಹೊಮ್ಮಿ ನಾಗರಿಕರ ‘ಸಹೃದಯ’ವನ್ನು ಹಿಂಡುತ್ತವೆ. ಅತ್ಯಾಚಾರವೆಂಬುದು ಮಹಿಳೆಯರ ಮೇಲಷ್ಟೇ ಆಗುವುದಲ್ಲ, ಪುರುಷರ ಮೇಲೆ, ಅದರಲ್ಲೂ ಅಪ್ರಾಪ್ತ ಬಾಲಕರ ಮೇಲೆ ಕೂಡ ಆಗುತ್ತದೆ ಎನ್ನುವುದೆಲ್ಲ ತಿಳಿದ ವಿಚಾರವೇ. ಆದರೆ ಹೆಣ್ಣಿನ ಮೇಲಾಗುವ ಅತ್ಯಾಚಾರ ಪ್ರಮಾಣವು, ಯಾವುದೇ ದೇಶ/ರಾಜ್ಯವನ್ನು ತೆಗೆದುಕೊಂಡರೂ, ಐದಾರು ಪಟ್ಟು ಹೆಚ್ಚು. ಸಾಮಾನ್ಯವಾಗಿ ಇಂಥ ಘಟನೆ ಯಾದಾಗ, ಎಲ್ಲ ಸಮಾಜಗಳಲ್ಲಿ, ದೇಶಗಳಲ್ಲಿ ಇದರ ಪರಿಹಾರೋಪಾಯದ ಬಗ್ಗೆ ಒಂದಿಷ್ಟು ಚರ್ಚೆ ಯಾಗುತ್ತದೆ.
“ದುಬೈ, ಮಧ್ಯಪ್ರಾಚ್ಯ ದೇಶಗಳಲ್ಲಿರುವಂಥ ಕಠಿಣ ಕಾನೂನು ನಮ್ಮಲ್ಲೂ ಇರಬೇಕು; ತ್ವರಿತ ನ್ಯಾಯ ವಿಲೇವಾರಿ, ಸ್ಪೆಷಲ್ ಕೋರ್ಟ್ ಬೇಕು" ಎಂಬಿತ್ಯಾದಿ ಹೇಳುವುದು, ‘ಕಾನೂನು ಬದಲಾವಣೆಯ ಮಾರ್ಗವೇ ಸರಿ’ ಎನ್ನುವುದು ಒಂದು ವರ್ಗದ ಮಂದಿಯ ವಾಡಿಕೆ. ಇನ್ನು ಕೆಲವರ ವಾದವು ಸಮಾಜದಲ್ಲಿನ ಮೌಲ್ಯಕ್ಕೆ ಸಂಬಂಧಿಸಿದ್ದು; “ವೇಶ್ಯಾವಾಟಿಕೆಯನ್ನು ಸಮಾಜ ಒಪ್ಪಿಕೊಳ್ಳಬೇಕು, ಅದುವೇ ಪರಿಹಾರ" ಎಂಬುದು ಮತ್ತೊಂದು ವರ್ಗದ ವಾದ. ಒಟ್ಟಾರೆ, ನಮ್ಮ ಸುತ್ತಲೂ ಆಗಿಹೋಗುವ ಅತ್ಯಾಚಾರಗಳಿಗೆ ಪರಿಹಾರ ಹುಡುಕಿ ಹೊರಟಾಗ, ಎದುರಿಗೆ ಸಿಗುವ ಎಲ್ಲ ವಿಚಾರಗಳಲ್ಲೂ ಒಂದೊಂದು ನ್ಯೂನತೆಗಳು ಪುನಃ ಮುನ್ನೆಲೆಗೆ ಬಂದು, ಒಂದಿಷ್ಟು ಗೊಂದಲಗಳಾಗುತ್ತವೆ.
“ಎಲ್ಲವೂ ಆಗಬೇಕು, ಕಾನೂನು ಬದಲಾಯಿಸಿಕೊಳ್ಳುವುದರ ಜತೆಜತೆಗೆ ವೇಶ್ಯಾವಾಟಿಕೆ ಕೂಡ ಇರಬೇಕು" ಎಂಬ ‘ಮಿಶ್ರವಾದ’ ಮಂಡಿಸುವ ಇನ್ನೊಂದು ವರ್ಗವೂ ಇದೆ. ವೇಶ್ಯಾವಾಟಿಕೆಯ ಜಾಗತಿಕ ಇತಿಹಾಸವನ್ನು ಬಿಚ್ಚಿಡುವಒಂದೊಳ್ಳೆ ಪುಸ್ತಕ- ‘ಲವ್ ಫಾರ್ ಸೇಲ್’. ಇದನ್ನು ಬರೆದವರು ನಾರ್ವೆ ದೇಶದ ಬರಹಗಾರ ನೀಲ್ಸ್ ಜೋಹಾನ್ರಿಂಗ್‌ದಾಲ್.
ಇದರಲ್ಲಿ ನೀಲ್ಸ್ ಒಂದು ಕಡೆ, “ಯಾರೇ ತಮ್ಮ ದೇಹವನ್ನು ಕಾಮಕ್ಕಾಗಿ ಮಾರಿಕೊಳ್ಳ ಬಯಸಿದಲ್ಲಿ ಮತ್ತು ಅದು ಒತ್ತಾಯಪೂರ್ವಕವಾಗಿಲ್ಲದಿದ್ದಲ್ಲಿ, ಕಾಮವನ್ನು ಬಯಸುವ ಮತ್ತು ಒದಗಿಸುವ- ಹೀಗೆ ಇಬ್ಬರನ್ನೂ ಶಿಕ್ಷೆಗೆ ಗುರಿಪಡಿಸುವುದು ಎಷ್ಟು ಸರಿ?" ಎಂದು ಪ್ರಶ್ನಿಸುತ್ತಾರೆ. “ಈ ರೀತಿ, ಒತ್ತಾಯವಲ್ಲದ ವೇಶ್ಯಾವಾಟಿಕೆ ಒಂದುರೀತಿಯ ಖಾಸಗಿ ವ್ಯವಹಾರ; ಇದನ್ನು ಪ್ರಶ್ನಿಸಲು ಸರಕಾರಕ್ಕೆ ಅಧಿಕಾರವಿಲ್ಲ" ಎಂದು ಪ್ರತಿಪಾದಿಸುತ್ತಾರೆ.
ಭಾರತವೂ ಸೇರಿದಂತೆ ಹತ್ತು ಹಲವು ದೇಶಗಳ ವೇಶ್ಯಾವಾಟಿಕೆಯ ಇತಿಹಾಸವನ್ನು ನೀಲ್ಸ್ ಇದೇ ಪುಸ್ತಕದಲ್ಲಿ ಬಿಚ್ಚಿಡುತ್ತಾರೆ. ಈ ಪುಸ್ತಕವನ್ನು ಓದಿದಾಗ, ವೇಶ್ಯಾವಾಟಿಕೆಯ ಬಗೆಗಿನ ಒಂದು ಹೊಸ ಆಯಾಮವೇ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ. ಮನುಷ್ಯ ಸಮಾಜದ ಅತಿಹಳೆಯ ಮತ್ತು ಲಾಭದಾಯಕ ವೃತ್ತಿಯಲ್ಲಿ ವೇಶ್ಯಾವಾಟಿಕೆ ಕೂಡ ಒಂದು. ಎಷ್ಟು ಹಳೆಯದು ಎನ್ನುವುದಕ್ಕೆ ಯಾವುದೇ ಇತಿಹಾಸದ ಪುಟ ತೆರೆದು ನೋಡಿದರೂ ಅಲ್ಲಿರುವ ಉಲ್ಲೇಖಗಳು, ಕಥೆಗಳೇ ಸಾಕ್ಷಿಯಾಗುತ್ತವೆ. ಇನ್ನು, ಅದೆಷ್ಟು ಲಾಭದಾಯಕ ಎಂಬ ಪ್ರಶ್ನೆ. ‘ಅರ್ಬನ್ ಇನ್‌ಸ್ಟಿ ಟ್ಯೂಟ್’ ಸಂಸ್ಥೆಯು ಅಮೆರಿಕದ ೧೦ ನಗರಗಳಲ್ಲಿ ನಡೆಸಿದ ಸಮೀಕ್ಷೆ ಈ ನಿಟ್ಟಿನಲ್ಲಿ ಒಂದಿಷ್ಟು ಬೆಳಕು ಚೆಲ್ಲುತ್ತದೆ. ಅಮೆರಿಕದ ಅಟ್ಲಾಂಟಾ ಪ್ರದೇಶದ ಅತ್ಯಂತ ದುಬಾರಿ ವೇಶ್ಯೆಯು ಪ್ರತಿ ವಾರಕ್ಕೆ ಸುಮಾರು 33000 ಡಾಲರ್ ಸಂಪಾದಿಸುತ್ತಾಳಂತೆ.
ಇದನ್ನು ವರ್ಷಕ್ಕೆ ಅನ್ವಯಿಸಿದರೆ ರುಪಾಯಿ ಲೆಕ್ಕದಲ್ಲಿ 12 ಕೋಟಿ! ಈ ಮೊತ್ತವನ್ನು ಮೊದಲಿಗೆ ನೋಡಿದಾಗ ನಾನು ಕೂಡ ಕಣ್ಣುಜ್ಜಿ ಕೊಂಡು ಸೊನ್ನೆಗಳನ್ನು ಇನ್ನೊಮ್ಮೆ ಲೆಕ್ಕಹಾಕಿದ್ದೆ. ಹಾಗಂತ ಅಮೆರಿಕದ ವೇಶ್ಯೆಯರೆಲ್ಲ ಇಷ್ಟೇ ದುಡ್ಡು ಮಾಡುತ್ತಾ ರೆಂದಲ್ಲ. “ಇಷ್ಟು ಲಾಭವೇ! ಈಗ ಕಾಲ ಕೆಟ್ಟುಹೋಗಿದೆ, ಹಾಗಾಗಿ ಇದು ಇಷ್ಟು ಲಾಭ ತರುವ ವೃತ್ತಿಯಾಗಿದೆ" ಎಂದು ಮೂಗು ಮುರಿಯಬೇಕಿಲ್ಲ. ಬಹಳ ಹಿಂದಿನ ಕಾಲದಿಂದಲೂ, ವೇಶ್ಯಾವಾಟಿಕೆ ಎಂಬುದು ಅತ್ಯಂತ ಲಾಭ ತರುವ ವೃತ್ತಿ ಎಂಬ ಸಂಗತಿಯು ‘ಲವ್ ಫಾರ್ ಸೇಲ್’ ಪುಸ್ತಕದಿಂದ ತಿಳಿಯುತ್ತದೆ.
‘ಫ್ರೀಕಾನೊಮಿಕ್ಸ್’ ಖ್ಯಾತಿಯ ಸ್ಟೀವನ್ ಲೆವಿಟ್ ಮತ್ತು ಕಿನ್ಸ್ಲೆ ಇನ್‌ಸ್ಟಿಟ್ಯೂಟ್‌ನ ವರದಿಯ ಪ್ರಕಾರ, ೧೯೦೦ರಲ್ಲಿ ಅಂದಿನ ಹಣದ ಬೆಲೆಯನ್ನು ಇಂದಿಗೆ ಹೋಲಿಸಿಕೊಂಡಲ್ಲಿ ವೇಶ್ಯೆಯೊಬ್ಬಳು ಇಂದಿಗಿಂತ ಎರಡು ಪಟ್ಟು ಹೆಚ್ಚು ಹಣವನ್ನು ಅಂದು ಸಂಪಾದಿಸುತ್ತಿದ್ದಳು. ಇದನ್ನು ಅರ್ಥಶಾಸಜ್ಞರು ‘ಬೇಡಿಕೆ ಮತ್ತು ಪೂರೈಕೆ’ಯ ಮಸೂರದಡಿ ಇಟ್ಟು ನೋಡುತ್ತಾರೆ! 1948ರಲ್ಲಿ ಹಣ ಕೊಟ್ಟು ಸೆಕ್ಸ್ ಪಡೆವ ಪುರುಷರ ಸಂಖ್ಯೆಯು ಅಮೆರಿಕದಲ್ಲಿ ಶೇ.69 ರಷ್ಟಿದ್ದರೆ, ಉಳಿದ ರಾಷ್ಟ್ರಗಳಲ್ಲಿನ ಪ್ರಮಾಣವೂ ಬಹುತೇಕ ಇಷ್ಟೇ ಇತ್ತು. ಈಗ ಅದರ ಪ್ರಮಾಣ ಶೇ.10-12ಕ್ಕೆ ಇಳಿದಿದೆ. ಅಂದಿನ ಕಾಲದಲ್ಲಿ ಸಾಮಾಜಿಕ ಕಾರಣಗಳಿಂದಾಗಿ ಹಣ ಪಡೆದು ಸೆಕ್ಸ್ ಅನ್ನು ನೀಡುವ ವೇಶ್ಯೆಯರ ಸಂಖ್ಯೆ ಕಡಿಮೆಯಿದ್ದುದರಿಂದಾಗಿ, ಸೆಕ್ಸ್ ಪಡೆಯಲು ಸಹಜವಾಗಿ ಹೆಚ್ಚಿನ ಹಣ ತೆರಬೇಕಾಗಿತ್ತು.
ಇಂದು ವೇಶ್ಯಾವಾಟಿಕೆಗೆ ಇಂಟರ್ನೆಟ್ ಬಜಾರಿದೆ, ದಂಧೆಗೆ ಹತ್ತಾರು ಮಾರ್ಗಗಳಿವೆ. ಇಂಟರ್ನೆಟ್‌ನಲ್ಲಿ ಸುಲಭದಲ್ಲಿ ಸೆಕ್ಸ್ ಅನ್ನು ಮಾರಲು ಅವಕಾಶಗಳಿವೆ. ಇಂಟರ್ನೆಟ್ ಕಾರಣದಿಂದಾಗಿಯೇ ಕಾನೂನುಬಾಹಿರ ವೇಶ್ಯಾವಾಟಿಕೆ ಯನ್ನು ನಿಲ್ಲಿಸುವುದು, ಬಂಧಿಸುವುದು ಇವೆಲ್ಲ ಇನ್ನಷ್ಟು ಕಷ್ಟಕರವಾಗಿದೆ.
ಹಾಗಂತ, ಕಾನೂನುಬಾಹಿರ ವೇಶ್ಯಾವಾಟಿಕೆ ಇಂದಿನ ದಿನದಲ್ಲಿ ಅಂದುಕೊಂಡಷ್ಟು ಸುಲಭದ್ದಲ್ಲ; ಮುಂದುವರಿದಪೊಲೀಸ್ ವ್ಯವಸ್ಥೆ ಮತ್ತು ಕಠಿಣ ಶಿಕ್ಷೆಗಳಿಂದಾಗಿ ಅದು ಇನ್ನಷ್ಟು ಕಷ್ಟಸಾಧ್ಯವಾಗಿದೆ. ಈ ಕಾರಣಕ್ಕೆ ‘ಕಾನೂನು ಬದ್ಧ ವೇಶ್ಯಾವಾಟಿಕೆ’ಯ ಬೇಡಿಕೆ ಹೆಚ್ಚುತ್ತಿದೆ ಅಂತ ನೀವಂದುಕೊಂಡಿದ್ದರೆ ಅದೂ ತಪ್ಪು. ಅದಕ್ಕೆ ಕೆಲವೊಂದು ವಿಚಿತ್ರ ಕಾರಣಗಳಿವೆ. ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರ ಗಳಲ್ಲಿಂದು ಕಾನೂನುಬದ್ಧ ವೇಶ್ಯಾಗೃಹಗಳು ಸಂಕಷ್ಟದಲ್ಲಿವೆ.
ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದ್ದಲ್ಲಿ ಸರಕಾರವೇ ಒಂದಿಷ್ಟು ನೀತಿ-ನಿಯಮಗಳನ್ನು ರೂಪಿಸ ಬೇಕಾಗುತ್ತದೆ. ಸಾಮಾನ್ಯವಾಗಿ ಸರಕಾರವು ವೇಶ್ಯಾವಾಟಿಕೆಗೆಂದೇ ಒಂದಿಷ್ಟು ಪ್ರದೇಶವನ್ನು ಗೊತ್ತುಮಾಡಿರುತ್ತದೆ, ಅಲ್ಲಿ ಮಾತ್ರವೇ ಈ ಬಾಬತ್ತಿಗೆ ಒಪ್ಪಿಗೆಯಿರುತ್ತದೆ. ಇಂಥ ಕಾನೂನುಬದ್ಧ ವೇಶ್ಯಾವಾಟಿಕೆಗೆ ನೂರೆಂಟು ಕಟ್ಟಳೆ ಗಳಿರುತ್ತವೆ. ಅಂದರೆ- ಅಲ್ಲಿ ಕೆಲಸ ಮಾಡುವವರು ವಾರಕ್ಕೊಮ್ಮೆ ಗುಪ್ತರೋಗಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು, ಇಲ್ಲಿ ದಕ್ಕುವ ಆದಾಯಕ್ಕೆ ತೆರಿಗೆ ಕಟ್ಟಬೇಕು, ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷಿಸಿಕೊಳ್ಳಬೇಕು, ಗ್ರಾಹಕನಿಗೆ ಗುಪ್ತ ರೋಗ ಅಮರಿಕೊಂಡರೆ ವೇಶ್ಯಾಗೃಹವೇ ಅದರ ಹೊಣೆಹೊರಬೇಕು- ಹೀಗೆ ಕಾನೂನಿನ ಹತ್ತಾರು ಕಿರಿಕಿರಿಗಳು. ಅಲ್ಲದೆ ವೇಶ್ಯಾಗೃಹಕ್ಕೆ ಅನುಮತಿ ಪಡೆಯಬೇಕೆಂದರೆ ಅದಕ್ಕೆ ಬೃಹತ್ ಮೊತ್ತ ತೆರಬೇಕು. ಇದೆಲ್ಲದರ ಹೊರೆ ಬೀಳುವುದು ಗ್ರಾಹಕನ ಮೇಲೆಯೇ. ಈ ಕಾರಣಕ್ಕೆ ಕಾನೂನುಬದ್ಧ ವೇಶ್ಯಾವಾಟಿಕೆಯು ಯಾವತ್ತೂ ತುಟ್ಟಿ ಮತ್ತು ರಗಳೆಯ ಬಾಬತ್ತು.
ಇಂಥ ವೇಶ್ಯಾಗೃಹಗಳು ಇವೆಲ್ಲವನ್ನೂ ನೋಡಿಕೊಳ್ಳುವುದರಿಂದ, ವೇಶ್ಯೆಯು ತನ್ನ ಆದಾಯದ ಅರ್ಧದಷ್ಟು ಮೊತ್ತ ವನ್ನು ಅವಕ್ಕೆ ಕೊಡಬೇಕು. ಇದು ಆಕೆಗೆ ಸಮ್ಮತವಾಗುವ ಮಾತಲ್ಲ. ಹೀಗಾಗಿ, ಕಾನೂನುಬದ್ಧವಾಗಿಸಿದರೂ, ಅದರ ಪಕ್ಕದಲ್ಲೇ, ಅದಕ್ಕಿಂತ ಜೋರಾಗಿಯೇ ಕಾನೂನುಬಾಹಿರ ವೇಶ್ಯಾವಾಟಿಕೆ ನಡೆಯುತ್ತದೆ. ಕಾನೂನಾತ್ಮಕ ಗೊಳಿಸಿದ ಎಲ್ಲ ದೇಶಗಳ ಕಥೆಯೂ ಹೆಚ್ಚು-ಕಡಿಮೆ ಇದೇ ಆಗಿದೆ!
ಈ ಕಾರಣಕ್ಕೆ, ಸಾಮಾನ್ಯವಾಗಿ ಮೊದಲು ಕಾನೂನುಬದ್ಧ ವೇಶ್ಯಾವಾಟಿಕೆಯಲ್ಲಿ ಕೆಲಸ ಶುರುಮಾಡುವಾಕೆ ಕ್ರಮೇಣ ಅದರಿಂದ ಹೊರಬಂದು, ತನ್ನ ಗ್ರಾಹಕರನ್ನು ನೇರವಾಗಿ ಸಂಧಿಸಲು ಶುರುಮಾಡುತ್ತಾಳೆ. ಇಲ್ಲೊಂದು ಅಂಶವನ್ನು ಗಮನಿಸಬೇಕು- ಕಾನೂನುಬದ್ಧ ವೇಶ್ಯಾವಾಟಿಕೆಯೇ ಬೇರೆ, ‘ವೇಶ್ಯಾವಾಟಿಕೆ ಕಾನೂನುಬಾಹಿರವಲ್ಲ’ ಎನ್ನುವ ಕಾನೂನು ವ್ಯವಸ್ಥೆಯೇ ಬೇರೆ. ಎರಡನೆಯ ಕಾನೂನು ವ್ಯವಸ್ಥೆಯಲ್ಲಿ ವೇಶ್ಯಾವಾಟಿಕೆ ನಡೆಸುವುದು ಕಾನೂನುಬಾಹಿರವಲ್ಲ, ಆದರೆ ಸರಕಾರ ಈ ವ್ಯವಸ್ಥೆಯ ತಂಟೆಗೆ ಹೋಗುವುದಿಲ್ಲ- ಅದರಷ್ಟಕ್ಕೆ ಅದನ್ನು ಬಿಟ್ಟುಬಿಡುವ ಸ್ಥಿತಿ. ಇದು ಇನ್ನೊಂದು ಕಾರಣಕ್ಕೆ ಡೇಂಜರ್. ಇದರಿಂದಾಗಿ ವೇಶ್ಯಾವಾಟಿಕೆಯ ಸುತ್ತ ಹತ್ತಾರು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಈ ‘ನೋಡಿಯೂ ಸುಮ್ಮನಿರುವ’ ಪದ್ಧತಿ ಇರುವಲ್ಲಿ ಅಲ್ಲಿನ ಸರಕಾರವು ಕೆಲವೊಂದು ಪ್ರದೇಶದಲ್ಲಿ ವೇಶ್ಯಾವಾ ಟಿಕೆಗೆ ಅನುವು ಮಾಡಿಕೊಟ್ಟು, ಆ ಗಡಿದಾಟಿ ವ್ಯವಹಾರವಾದರೆ ಮಾತ್ರವೇ ಶಿಕ್ಷಿಸಲು ಮುಂದಾಗುತ್ತದೆ. ಮುಂಬೈನ ಕಾಮಾಟಿಪುರ ಪ್ರದೇಶದ ಬಗ್ಗೆ ನೀವು ಕೇಳಿರಬಹುದು.
ಹಿಂದೊಮ್ಮೆ ಮುಂಬೈನ ವೇಶ್ಯಾವಾಟಿಕೆ ಇಲ್ಲಿಯೇ ಕೇಂದ್ರಿತವಾಗಿತ್ತು. ಈಗಿನ ಅಸ್ಪಷ್ಟ ಕಾನೂನಿನಿಂದಾಗಿ ಅದೀಗಉಳಿದ ಪ್ರದೇಶಗಳಿಗೂ ಹಬ್ಬಿದೆ. ಕೊಲ್ಕತ್ತಾದ ಸೋನಾಗಾಚಿ, ಪುಣೆಯ ಬುಧವಾರಪೇಟೆ, ಅಲಹಾಬಾದಿನ ವೀರ ಗಂಜ್, ದೆಹಲಿಯ ಜಿಬಿ ರಸ್ತೆ, ನಾಗಪುರದ ಇತ್ವಾರಿ, ಕಾಶಿಯ ಶಿವದಾಸಪುರ ಹೀಗೆ ಉತ್ತರದ ಬಹುತೇಕ ನಗರಗಳಲ್ಲಿ ವೇಶ್ಯಾವಾಟಿಕೆ ಖುಲ್ಲಂಖುಲ್ಲಾ! ಅಲ್ಲೆಲ್ಲಾ ಸರಕಾರಗಳದ್ದು ಒತ್ತಾಯದ, ಆದರೆ ಅನಿವಾರ್ಯದ ಕುರುಡು.
ಇಲ್ಲಿಯವರೆಗೆ ಆಳಿದ ಎಲ್ಲ ಸರಕಾರಗಳಿಗೂ ಈ ವೇಶ್ಯಾವಾಟಿಕೆ ಬಗ್ಗೆ ‘ಇದಮಿತ್ಥಮ್’ ಎಂಬ ಗಟ್ಟಿ ನಿಲುವನ್ನುತೆಗೆದುಕೊಳ್ಳಲಾಗಿಲ್ಲ. ಅದು ಅಂದುಕೊಂಡಷ್ಟು ಸುಲಭದ್ದಲ್ಲ. ಈ ಕಾರಣಕ್ಕೇ, ಕಾಲಕಾಲಕ್ಕೆ ಗದ್ದುಗೆಯೇರುವ ಸರಕಾರಗಳು/ಪಾರ್ಟಿಗಳು ಇದರ ತಂಟೆಗೇ ಹೋಗುವುದಿಲ್ಲ. ಏಕೆಂದರೆ, ಇದೊಂದು ಸಮಸ್ಯೆಯೇ ಅಥವಾ ಅಲ್ಲವೇ?ಇದು ಸಮಾಜಕ್ಕೆ ಬೇಕೇ, ಬೇಡವೇ? ಎಂಬಿತ್ಯಾದಿ ಪ್ರಶ್ನೆಗಳು ಅಥವಾ ಗೊಂದಲಗಳೇ ಜಾಸ್ತಿ. ನಮ್ಮ ಸಮಾಜ ಕ್ಕಾಗಲೀ, ವೋಟು ಮಾಡುವವರಿಗಾಗಲೀ ಇದೊಂದು ಚರ್ಚೆ ಮಾಡುವ ವಿಷಯವೇ ಹೊರತು, ಅದಕ್ಕಿಂತ ಮಿಗಿಲಾದ ಸ್ಪಷ್ಟತೆಯಿಲ್ಲ. ಆ ಕಾರಣಕ್ಕೆ ಬಹುತೇಕ ಸರಕಾರಗಳಿಗೆ ವೇಶ್ಯಾವಾಟಿಕೆಯು ಒಂದು ‘ಅಸ್ಪೃಶ್ಯ ವಿಭಾಗ’. “ಅದು ಹೇಗಿದೆಯೋ ಹಾಗೆಯೇ ಇದ್ದುಬಿಡಲಿ ಬಿಡಿ" ಎಂಬ ನಿಲುವು!
ವೇಶ್ಯಾವಾಟಿಕೆಗೆ ಕಾನೂನಿನಲ್ಲಿ ಅವಕಾಶ ಮಾಡಿಕೊಡುವುದು ಎಷ್ಟು ಕಷ್ಟವೋ, ಅದನ್ನು ತಡೆದು ನಿಲ್ಲಿಸುವುದೂ ಅಷ್ಟೇ ಕಷ್ಟ. ವೇಶ್ಯಾವಾಟಿಕೆಯನ್ನು ನಿಲ್ಲಿಸಲು ಹೊರಟ ದೇಶಗಳೂ ಸೋತಿವೆ, ಮುಕ್ತಗೊಳಿಸಿ ಒಪ್ಪಿಕೊಂಡ ದೇಶಗಳೂ ನಂತರದಲ್ಲಿ ಇದಕ್ಕೊಂದು ರೂಪುರೇಷೆ ಕೊಡುವಲ್ಲಿಯೂ ಎಡವಿವೆ. ವೇಶ್ಯಾವಾಟಿಕೆ ಯನ್ನು ನಿಲ್ಲಿಸಲು ಸ್ವೀಡನ್ ಹೊಸಮಾದರಿ ಕಾನೂನೊಂದನ್ನು 1999ರಲ್ಲಿ ಜಾರಿಮಾಡಿತು.
ಇದರ ಪ್ರಕಾರ ವೇಶ್ಯೆಯರಿಗೆ ಶಿಕ್ಷೆಯಿಲ್ಲ, ಅಲ್ಲಿ ಗ್ರಾಹಕ ಮಾತ್ರ ಅಪರಾಧಿ. ಮುಂದೆ ಹಲವು ದೇಶಗಳು ಇಂಥದೇಕಾನೂನನ್ನು ಜಾರಿಮಾಡಿ ನಿಯಂತ್ರಿಸುವಲ್ಲಿ ಕೊಂಚ ಯಶಸ್ಸನ್ನು ಕಂಡಿವೆ. ಡೆನ್ಮಾರ್ಕ್‌ನಲ್ಲಿ ವೇಶ್ಯಾವಾಟಿಕೆ, ಸೆಕ್ಸ್- ದೇಹವನ್ನು ಮಾರುವುದು ಮತ್ತು ಖರೀದಿಸುವುದು- ಎರಡೂ ಅಪರಾಧವಲ್ಲ; ಆದರೆ ವ್ಯವಸ್ಥಿತ ಸಂಸ್ಥೆಯಂತೆ ಇದರ ದಂಧೆ ನಡೆಸುವುದು ಅಪರಾಧ. ಅಲ್ಲಿ ವೇಶ್ಯೆಯರಿಗೆ ಅವಕಾಶವಿದೆಯೇ ವಿನಾ, ವೇಶ್ಯಾಗೃಹಗಳಿಗಲ್ಲ. ಹೀಗೆ ಜಗದ ವಿವಿಧ ದೇಶಗಳಲ್ಲಿ ಹತ್ತಾರು ರೀತಿಯ ಕಾನೂನುಗಳಿವೆ.
ದಕ್ಷಿಣ ಅಮೆರಿಕದ ದೇಶಗಳಲ್ಲಿ ಈ ವೇಶ್ಯಾವಾಟಿಕೆ ಒಂದು ನಿರಂಕುಶ ಸಾಮ್ರಾಜ್ಯ; ಯಾವುದೇ ಕಾನೂನುಗಳು ಅದನ್ನು ಸಂಪೂರ್ಣ ನಿಲ್ಲಿಸುವಲ್ಲಿ ಅಥವಾ ಅದರ ಸುತ್ತ ನಡೆವ ಅನ್ಯ ಅಪರಾಧಗಳನ್ನು ನಿಗ್ರಹಿಸುವಲ್ಲಿ ಯಶಸ್ವಿ ಯಾಗಿಲ್ಲ. ಹಾಗಾದರೆ, ಕೊನೆಯಲ್ಲಿ ಮೂಡುವುದು ಮತ್ತದೇ ಪ್ರಶ್ನೆಗಳು- ಅತ್ಯಾಚಾರದ ಸಮಸ್ಯೆಗೆ ವೇಶ್ಯಾವಾಟಿಕೆ ಯು ಪರಿಹಾರವೇ? ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ, ಸಮಾಜ ಒಪ್ಪಿಕೊಂಡರೆ ಇಂಥ ಅತ್ಯಾ ಚಾರಗಳು ಕಮ್ಮಿಯಾಗುತ್ತವೆಯೇ? ಇವಕ್ಕೆ ಅಂಕಿ-ಸಂಖ್ಯೆಗಳು ಕೂಡ ಅಷ್ಟೇ ಗೊಂದಲದ ಉತ್ತರ ನೀಡುತ್ತವೆ. ಹಾಗಾಗಿ ‘ಸಮಸ್ಯೆಗೆ ಇದೇ ಪರಿಹಾರ’ ಅಂತ ಒಪ್ಪಿಕೊಳ್ಳಲು ಸಾಧ್ಯವಾಗದು.
ಒಂದೊಮ್ಮೆ ಅದು ಸಾಬೀತಾದರೂ, ಅದನ್ನು ‘ಲಾಗು’ ಮಾಡುವ ಮೊದಲು, ಅದರ ಸುತ್ತ ನಡೆವ ಅಪರಾಧ ಗಳನ್ನೂ ಪರಿಗಣಿಸಬೇಕಾಗುತ್ತದೆ. ಈ ಎಲ್ಲ ಕಾರಣ ಮತ್ತು ಕ್ಲಿಷ್ಟತೆಗಳಿಂದಾಗಿಯೇ ನಮ್ಮ ಆಡಳಿತ ವ್ಯವಸ್ಥೆ ಇದರ ತಂಟೆಗೇ ಹೋಗುವುದಿಲ್ಲ. ಮೋದಿಯವರಿಂದ ರಾಹುಲ್ ವರೆಗೆ, ‘ದೀದಿ’ಯಿಂದ ‘ದಾದಿ’ಯವರೆಗೆ ಯಾರೂ ಇದರ ಬಗ್ಗೆ ಮಾತನಾಡುವುದಿಲ್ಲ.
ಅತ್ಯಾಚಾರ ಎನ್ನುವುದು ನೇರವಾಗಿ ಸಾಮಾಜಿಕ ಮೌಲ್ಯದ ಮಟ್ಟಕ್ಕೆ, ಶಿಕ್ಷಣಕ್ಕೆ ಮತ್ತು ಕಾನೂನಿನ ಗಟ್ಟಿತನಕ್ಕೆಹಿಡಿದ ಕನ್ನಡಿ ಎಂಬುದರಲ್ಲಿ ಎರಡನೇ ಮಾತಿಲ್ಲ. ಎಲ್ಲೆಲ್ಲಿ ಈ ಮೂರು ಗಟ್ಟಿಯಾಗಿವೆಯೋ, ಅಲ್ಲೆಲ್ಲ ಅತ್ಯಾಚಾರಕಮ್ಮಿಯಿರುವುದು ಕಾಣುತ್ತದೆ. ಈ ಕಾರಣದಿಂದಲೇ ಭಾರತದ ದಕ್ಷಿಣ ಭಾಗದಲ್ಲಿ ಅತ್ಯಾಚಾರದ ಸಂಖ್ಯೆ ಕಮ್ಮಿ.ಉಳಿದದ್ದು ನಿಮ್ಮ ವಿವೇಚನೆಗೆ…
ಇದನ್ನೂ ಓದಿ: Shishir Hegde Column: ನಂಬಿಕೆ- ಎರಡು ಕಥೆಗಳು
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ