Shishir Hegde Column: ಚಿನ್ನದ ಇತಿಹಾಸ- ಚಿನ್ನದಂತಹ ಇತಿಹಾಸ
ಮದುವೆಯಲ್ಲಿ ಅಷ್ಟು ಚಿನ್ನ ಹಾಕಿದರಂತೆ ಎನ್ನುವ ಮಾತು ಇಡೀ ಮದುವೆಯ ಎಕಾನೊಮಿಕ್ಸ್ ಅನ್ನು ಸಾದೃಶಗೊಳಿಸುತ್ತದೆ. ಹೀಗೆ ನಮ್ಮ ದೈನಂದಿನ ಜೀವನದಲ್ಲಿ ಚಿನ್ನವೆಂದರೆ ಎಲ್ಲಿಲ್ಲದ ಮಹತ್ವ. ಚಿನ್ನವೆಂದರೆ ಮೋಹ. ಹುಬ್ಬೇರುವುದು, ಹುಬ್ಬು ಗಂಟಿಕ್ಕುವುದು ಇವೆಲ್ಲವಕ್ಕೆ ಚಿನ್ನ ಕಾರಣ. ಹೇಗೆ ಎಲ್ಲ ದುರಂತಕ್ಕಿಂತ ವಿಮಾನ ದುರಂತದ ಸುದ್ದಿಗೆ ಹೆಚ್ಚಿನ ಮೈಲೇಜ್ ಸಿಗುತ್ತದೋ ಹಾಗೇ ಎಲ್ಲ ದರೋಡೆಗಿಂತ ಚಿನ್ನದ ದರೋಡೆ ಎಲ್ಲಿಲ್ಲದ ಸುದ್ದಿ ಮಾಡುತ್ತದೆ.