ಬೆಂಗಳೂರು: ಗುರುಕುಲ ಪದ್ಧತಿಯ ಉತ್ತಮ ಅಂಶಗಳು ಮತ್ತು ಆಧುನಿಕ ವಿಜ್ಞಾನದ ಶಿಕ್ಷಣ ಪದ್ಧತಿಗಳನ್ನು ಸಮ್ಮಿಳಿತಗೊಳಿಸಿ ವಿದ್ಯಾರ್ಥಿಗಳಲ್ಲಿ ಹೊಸತನದಿಂದ ಯೋಚಿಸುವ ಪಠ್ಯಕ್ರಮ ಅಳವಡಿಸುವ ನೂತನ ಸಂಸ್ಥೆಯಾಗಿ ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ (Astrid world school) ಸಂಸ್ಥೆಯು ನವೆಂಬರ್ 15 ರಂದು ಉದ್ಘಾಟನೆಗೊಳ್ಳಲಿದೆ. ಒಟ್ಟು ಒಂಬತ್ತು ಸ್ಥಳಗಳಲ್ಲಿ ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ ಪ್ರಾರಂಭಿಸಲಾಗುತ್ತಿದ್ದು, ಬೆಂಗಳೂರಿನ ವಸಂತನಗರದ ಶಾಂಗ್ರಿ-ಲಾ ಹೋಟೆಲ್ನಲ್ಲಿ (ಆರ್ಟೆಜಿಯಾ) ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಬಗ್ಗೆ ಆಸ್ಟ್ರಿಡ್ ಗ್ರೂಪ್ ಆಫ್ ಸ್ಕೂಲ್ಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮತ್ತು ನಿರ್ದೇಶಕ ಎ.ಆರ್. ನಾಯಕ್ ಅವರು ಮಾಹಿತಿ ನೀಡಿದ್ದಾರೆ. ಶಿಕ್ಷಣ ತಜ್ಞರು ಮತ್ತು ಶೈಕ್ಷಣಿಕ ಉನ್ನತಿಗೆ ಕೊಡುಗೆ ಸಲ್ಲಿಸಲು ಬಯಸುವ ಉದ್ಯಮಿಗಳು ಸೇರಿ ಈ ಆಸ್ಟ್ರಿಡ್ ವರ್ಲ್ಡ್ ಸ್ಕೂಲ್ ಎಂಬ ಹೊಸ ಪರಿಕಲ್ಪನೆಯ ಸಂಪೂರ್ಣ ಶೈಕ್ಷಣಿಕ ಉದ್ದೇಶದ ಸಂಸ್ಥೆ ಪ್ರಾರಂಭಿಸುತ್ತಿದ್ದು, ಈ ಸಂಸ್ಥೆಯ ಆಶ್ರಯದಲ್ಲಿ ಒಟ್ಟು ಒಂಬತ್ತು ಸ್ಥಳಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಲಾಗುತ್ತಿದೆ.

ಈ ನೂತನ ವಿದ್ಯಾಸಂಸ್ಥೆಗಳು ಬೆಂಗಳೂರಿನ ಉತ್ತರ ಯಲಹಂಕ, ಪೂರ್ವ ಸರ್ಜಾಪುರ, ದಕ್ಷಿಣ–ಕಗ್ಗಲೀಪುರ, ಪಶ್ಚಿಮ–ಮಾಕಳಿ, ಗಿರಿನಗರ, ಉತ್ತರ ಕನ್ನಡದ ಮಂಕಿ–ಮುರುಡೇಶ್ವರ, ಅತ್ತಿಬೆಲೆ, ಹೊಸಕೋಟೆ ಮತ್ತು ಕನಕಪುರದಲ್ಲಿ ಕಾರ್ಯಾರಂಭಗೊಳ್ಳಲಿವೆ. ಈ ವಿದ್ಯಾ ಸಂಸ್ಥೆಗಳಲ್ಲಿ ಸಿ.ಬಿ.ಎಸ್.ಸಿ ಪಠ್ಯಕ್ರಮಗಳನ್ನು ಅಳವಡಿಸಲಾಗುತ್ತಿದೆ.
ಗುರುಕುಲ ಪದ್ಧತಿಯ ಉತ್ತಮ ಅಂಶಗಳೊಂದಿಗೆ ಕೇಂದ್ರಿತವಾಗಿರುವ ಆಸ್ಟ್ರಿಡ್ ಶಿಕ್ಷಣ ಸಂಸ್ಥೆಗಳು, ಪಠ್ಯ ಪುಸ್ತಕ ಮತ್ತು ಪರೀಕ್ಷೆಗಳನ್ನು ಮೀರಿ ಮಕ್ಕಳ ವೈಜ್ಞಾನಿಕ ಕಲಿಕಾ ಕ್ರಮ ಮತ್ತು ಜ್ಞಾನವನ್ನು ಒಗ್ಗೂಡಿಸುವ ವಿಶೇಷ ವ್ಯವಸ್ಥೆಯನ್ನು ಇಲ್ಲಿ ಜಾರಿಗೊಳಿಸಲಾಗುತ್ತಿದೆ.
ಕುತೂಹಲ ಆಧಾರಿತ ಕಲಿಕೆ, ಏಕಾಗ್ರತೆ, ಭಾವನಾತ್ಮಕ ವಿಕಾಸ, ನೈತಿಕ ಮೌಲ್ಯಗಳು ಹಾಗೂ ಮಕ್ಕಳ ಸಂಘಟನಾತ್ಮಕ ಮನಸ್ಥಿತಿಯನ್ನು ಉದ್ದೀಪನಗೊಳಿಸಲು ಇಲ್ಲಿ ಹೆಚ್ಚಿನ ಗಮನ ವಹಿಸಲಾಗುತ್ತದೆ.
ಶೈಕ್ಷಣಿಕ ಶ್ರೇಷ್ಠತೆಯ ಜತೆಗೆ ಮಕ್ಕಳಲ್ಲಿ ಭಾವನಾತ್ಮಕ ಸ್ಥೈರ್ಯ, ಆಂತರಿಕ ಸ್ಪಷ್ಟತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವುದು ಇಲ್ಲಿಯ ಇತರ ಉದ್ದೇಶಗಳಾಗಿವೆ. ಒಟ್ಟಾರೆ ಮಕ್ಕಳ ಭವಿಷ್ಯ ಉಜ್ವಲವಾಗಲು ಮತ್ತು ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಅಗತ್ಯವಾದ ಪಠ್ಯಕ್ರಮ ಮತ್ತು ಪ್ರಾಯೋಗಿಕ ತರಬೇತಿ ನೀಡುವ ಹಲವು ಅವಕಾಶಗಳನ್ನು ಈ ವಿದ್ಯಾಕೇಂದ್ರಗಳಲ್ಲಿ ಸೃಷ್ಟಿಸಲಾಗುತ್ತಿದೆ.
“ಗುಣಾತ್ಮಕವಾಗಿ ಸಮಾಜದಲ್ಲಿ ಮಕ್ಕಳನ್ನು ಮುಂದೆ ಹೇಗೆ ಬೆಳೆಸಬೇಕು ಎಂಬ ಸಕಾರಾತ್ಮಕ ಭೂಮಿಕೆಯನ್ನು ಆಸ್ಟ್ರಿಡ್ ಶಿಕ್ಷಣ ಸಂಸ್ಥೆಗಳಲ್ಲಿ ರೂಪಿಸಲಾಗುತ್ತದೆ. ಆಸ್ಟ್ರಿಡ್ನಲ್ಲಿ ನಾವು ಅರ್ಥಪೂರ್ಣ ಶೈಕ್ಷಣಿಕ ಕಲಿಕೆ, ಭಾವನಾತ್ಮಕ ವಿಕಾಸ, ಉನ್ನತ ಮೌಲ್ಯಗಳನ್ನು ಮತ್ತು ಪ್ರಶ್ನಿಸುವ ಮನೋಭಾವವನ್ನು ಬೆಳೆಸಲು ಪ್ರಯತ್ನಿಸಲಾಗುವುದು. ಇದರಿಂದ ಪ್ರತಿಯೊಂದು ಮಗುವೂ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಬೆಳೆಯಲು ಸಾಧ್ಯವಾಗುತ್ತದೆ.”
ಆಸ್ಟ್ರಿಡ್ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಎ.ಆರ್ ನಾಯಕ್, ಲೋಕೇಶ್ ಎನ್, ವನಿತಾ ಲೋಕೇಶ್, ಲಕ್ಷ್ಮಿ ರಾಜು ಕೆ.ಕೆ, ತೃಪ್ತಿ ನಾಯಕ್, ಬಸವರಾಜ್, ಹನುಮಂತರಾಯಪ್ಪ, ಬಿ.ಎಂ ಶ್ರೀನಿವಾಸ, ಸುರೇಂದ್ರ ಹೆಗಡೆ ಅವರು ನಿರ್ದೇಶಕರಾಗಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ:
ಬೆಂಗಳೂರಿನ ವಸಂತನಗರದ ಶಾಂಗ್ರಿ-ಲಾ ಹೋಟೆಲ್ನಲ್ಲಿ (ಆರ್ಟೆಜಿಯಾ) ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮತ್ತು ಶಾಸಕ ಆರ್.ವಿ. ದೇಶಪಾಂಡೆ, ಸಂಸದ ಡಾ.ಸಿ.ಎನ್. ಮಂಜುನಾಥ್, ಮಾಜಿ ಸಚಿವೆ ಡಾ. ಜಯಮಾಲ ರಾಮಚಂದ್ರ, ಎಂ.ಎಲ್.ಸಿ. ಎನ್. ರವಿಕುಮಾರ್, ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
Media contact: 98453 66229
Website: astridworldschool.com