Shakib Al Hasan: ಬಾಂಗ್ಲಾ ಕ್ರಿಕೆಟಿಗ ಶಕೀಬ್ ಆಸ್ತಿ ಸ್ವಾಧೀನಕ್ಕೆ ಆದೇಶ
ಶಕೀಬ್ ಅಲ್ ಹಸನ್ ಅವರ ಮೇಲೆ ಅಂತಾರಾಷ್ಟ್ರೀಯ ಫೈನಾನ್ಸ್ ಇನ್ವೆಸ್ಟ್‌ಮೆಂಟ್ ಮತ್ತು ಕಾಮರ್ಸ್ (ಐಎಫ್‌ಐಸಿ) ಬ್ಯಾಂಕ್ ಪ್ರಕರಣಗಳನ್ನು ದಾಖಲಿಸಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶಕೀಬ್ ಅವರ ಹೆಸರಿನಲ್ಲಿರುವ ಕೃಷಿ ಉದ್ಯಮವೊಂದರ ಚೆಕ್‌ಗಳು ಬೌನ್ಸ್ ಆಗಿದ್ದವು.


ಢಾಕಾ: ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ(cheque bounce case) ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್(Shakib Al Hasan) ಅವರ ಆಸ್ತಿ ಸ್ವಾಧೀನಕ್ಕೆ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ. ಒಂದು ತಿಂಗಳ ಹಿಂದೆ ಶಕೀಬ್ ಅವರನ್ನು ಬಂಧಿಸಲು ಢಾಕಾ ನ್ಯಾಯಾಲಯವು ವಾರಂಟ್ ಜಾರಿ ಮಾಡಿತ್ತು. ದೇಶದಲ್ಲಿನ ರಾಜಕೀಯ ಅಶಾಂತಿಯಿಂದಾಗಿ ಮತ್ತು ಅವಾಮಿ ಲೀಗ್‌ನೊಂದಿಗೆ ತೊಡಗಿಸಿಕೊಂಡಿದ್ದರಿಂದ ಜೀವ ಬೆದರಿಕೆಯನ್ನು ಎದುರಿಸಿದ ನಂತರ ಶಕೀಬ್ ಬಾಂಗ್ಲಾದೇಶಕ್ಕೆ ಹಿಂತಿರುಗಿಲ್ಲ.
ಶಕೀಬ್ ಅವರ ಮೇಲೆ ಅಂತಾರಾಷ್ಟ್ರೀಯ ಫೈನಾನ್ಸ್ ಇನ್ವೆಸ್ಟ್‌ಮೆಂಟ್ ಮತ್ತು ಕಾಮರ್ಸ್ (ಐಎಫ್‌ಐಸಿ) ಬ್ಯಾಂಕ್ ಪ್ರಕರಣಗಳನ್ನು ದಾಖಲಿಸಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಶಕೀಬ್ ಅವರ ಹೆಸರಿನಲ್ಲಿರುವ ಕೃಷಿ ಉದ್ಯಮವೊಂದರ ಚೆಕ್‌ಗಳು ಬೌನ್ಸ್ ಆಗಿದ್ದವು.
ಶಕೀಬ್ ಅವರು, ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ಮಾಜಿ ಸಂಸದರಾಗಿದ್ದು, ಹಸೀನಾ ಅವರಿಗೆ ನಿಷ್ಠೆ ಹೊಂದಿದ್ದರು. ಹೀಗಾಗಿ ಶಕೀಬ್ ಅವರನ್ನು ಕೂಡ ಟಾರ್ಗೆಟ್ ಮಾಡಲಾಗಿದೆ. ಸದ್ಯ ಶಕೀಬ್ ಲಂಡನ್‌ನಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ IPL 2025: ಸ್ಪೋಟಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ರನ್ನು ಕೈ ಬಿಟ್ಟು ತಪ್ಪು ಮಾಡಿತಾ ಮುಂಬೈ ಇಂಡಿಯನ್ಸ್?
ಬಾಂಗ್ಲಾ ಪರ ಶಕೀಬ್ 71 ಟಿ20 ಪಂದ್ಯಗಳನ್ನು ಆಡಿ 2551 ರನ್ ಮತ್ತು 149 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. 20 ರನ್‌ಗೆ 5 ವಿಕೆಟ್ ಕಿತ್ತದ್ದು ವೈಯಕ್ತಿಕ ಸಾಧನೆಯಾಗಿದೆ. 70 ಟೆಸ್ಟ್ ಪಂದ್ಯಗಳನ್ನಾಡಿರುವ ಶಕೀಬ್ 128 ಇನಿಂಗ್ಸ್‌ಗಳಿಂದ 4,600 ರನ್ ಕಲೆಹಾಕಿದ್ದಾರೆ. ಈ ವೇಳೆ 5 ಶತಕ, 1 ದ್ವಿಶತಕ ಹಾಗೂ 31 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಬೌಲಿಂಗ್‌ನಲ್ಲಿ 242 ವಿಕೆಟ್ಗಳನ್ನು ಕಬಳಿಸಿದ್ದಾರೆ. 19 ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಅನುಭವಿ ಕ್ರಿಕೆಟಿಗ ಶಕೀಬ್ 2007 ರಿಂದ ಆರಂಭಗೊಂಡು 2024ರ ತನಕ ನಡೆದ ಎಲ್ಲ ಆವೃತ್ತಿಯ ಟಿ20 ವಿಶ್ವಕಪ್ ಆಡಿದ ಹಿರಿಮೆ ಇವರದ್ದಾಗಿದೆ. ಜತೆಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಸಾಧಕನೂ ಹೌದು. ಒಟ್ಟು 43 ವಿಶ್ವಕಪ್ ಪಂದ್ಯಗಳಿಂದ 50 ವಿಕೆಟ್ ಕಿತ್ತಿದ್ದಾರೆ.