IPL 2025: ಸ್ಪೋಟಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ರನ್ನು ಕೈ ಬಿಟ್ಟು ತಪ್ಪು ಮಾಡಿತಾ ಮುಂಬೈ ಇಂಡಿಯನ್ಸ್?
Why Mumbai Indians left Ishan Kishan: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು ಉಳಿಸಿಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಟೀಮ್ ಮ್ಯಾನೇಜ್‌ಮೆಂಟ್ ಆಸಕ್ತಿ ತೋರಿರಲಿಲ್ಲ. ಆದರೆ, ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ 11.25 ಕೋಟಿ ರೂ. ಗಳಿಗೆ ಖರೀದಿಸಿತ್ತು.

ರಾಜಸ್ಥಾನ್ ರಾಯಲ್ಸ್ ಎದುರು ಶತಕ ಸಿಡಿಸಿ ಸಂಭ್ರಮಿಸಿದ ಇಶಾನ್ ಕಿಶನ್.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಇತಿಹಾಸದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡ ಕೂಡ ಅತ್ಯಂತ ಯಶಸ್ವಿ ತಂಡವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮುಂಬೈ ತಂಡದ ಟೂರ್ನಿಯಲ್ಲಿನ ಪ್ರದರ್ಶನ ಕುಸಿಸಿದೆ. ಇದರ ನಡುವೆ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ತಂಡ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು ಉಳಿಸಿಕೊಳ್ಳದೆ ನಿರಾಕರಿಸಿದ ಕಾರಣ ಮುಂಬೈ ಫ್ರಾಂಚೈಸಿಯನ್ನು ಅಭಿಮಾನಿಗಳು ತೀರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದ ಹಾಗೆ ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 11.25 ಕೋಟಿ ರೂ.ಗಳಿಗೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅನ್ನು ಖರೀದಿಸಿತ್ತು.
ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿಯಾಗಿ ಆಟಬಲ್ಲ ಸಾಮರ್ಥ್ಯವನ್ನು ಹೊಂದಿರುವ ಇಶಾನ್ ಕಿಶನ್, ಮುಂಬೈ ಇಂಡಿಯನ್ಸ್ ಪರ ಸಾಕಷ್ಟು ಮ್ಯಾಚ್ ವಿನ್ನಿಂಗ್ ಪ್ರದರ್ಶನಗಳನ್ನು ತೋರಿದ್ದಾರೆ. ಇದರ ಹೊರತಾಗಿಯೂ ಅವರನ್ನು ಉಳಿಸಿಕೊಳ್ಳುವಲ್ಲಿ ಐದು ಬಾರಿ ಚಾಂಪಿಯನ್ಸ್ ಮನಸು ಮಾಡಿರಲಿಲ್ಲ. ಆದರೆ, 2025ರ ಐಪಿಎಲ್ ಟೂರ್ನಿಯ ಮೊದಲನೇ ಪಂದ್ಯದಲ್ಲಿ ಇಶಾನ್ ಕಿಶಾನ್, ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಏನೆಂಬುದನ್ನು ಸಾಬೀತುಪಡಿಸಿದ್ದಾರೆ. ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಇಶಾನ್ ಕಿಶನ್ ಆಡಿದ್ದ 47 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 106 ರನ್‌ಗಳನ್ನು ಸಿಡಿಸಿದ್ದರು. ಇವರು 225.53ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ್ದ ಎಲ್ಲರ ಗಮನ ಸೆಳಯಿತು.
IPL 2025: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ! ವಿಡಿಯೊ
ಈ 3 ಕಾರಣಗಳಿಂದ ಇಶಾನ್ ಕಿಶನ್‌ರನ್ನು ಕೈ ಬಿಟ್ಟು ತಪ್ಪು ಮಾಡಿದ ಮುಂಬೈ ಇಂಡಿಯನ್ಸ್
1. 2025ರ ಐಪಿಎಲ್ ಮೊದಲ ಪಂದ್ಯದಲ್ಲಿ ಸ್ಪೋಟಕ ಶತಕ
2025ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಇಶಾನ್ ಕಿಶನ್ ಸ್ಪೋಟಕ ಪದಾರ್ಪಣೆ ಮಾಡಿದ್ದಾರೆ. ಭಾನುವಾರ ನಡೆದಿದ್ದ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌ಮನ್ ಸ್ಪೋಟಕ ಶತಕವನ್ನು ಬಾರಿಸಿದ್ದರು. ಆ ಮೂಲಕ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ಭರ್ಜರಿ ಶುಭಾರಂಭವನ್ನು ಕಂಡಿದ್ದಾರೆ.
47 ಎಸೆತಗಳಲ್ಲಿ ಆಡಿದ ಕಿಶನ್, 6 ಸಿಕ್ಸರ್ ಮತ್ತು 11 ಬೌಂಡರಿಗಳೊಂದಿಗೆ ಅಜೇಯ 106 ರನ್‌ಗಳನ್ನು ಬಾರಿಸಿದರು. ಇವರ ಶತಕದ ಬಲದಿಂದ ಎಸ್‌ಆರ್‌ಎಚ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 286 ರನ್‌ಗಳನ್ನು ಕಲೆ ಹಾಕಿತ್ತು. ತಮ್ಮ ಸ್ಪೋಟಕ ಶತಕದ ಮೂಲಕ ಇಶಾನ್ ಕಿಶನ್, ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಬಲವಾದ ಸಂದೇಶವನ್ನು ರವಾನಿಸಿದರು.
Take a bow Ishan Kishan. What a real superstar he is, took a break and scoring runs now for fun. His maiden IPL hundred today.
— Gaurav Gulati (@gulatiLFC) March 23, 2025
pic.twitter.com/M6Q5OPuI6y
2. ಮುಂಬೈ ತಂಡದ ಸಮತೋಲನದ ಮೇಲೆ ಪರಿಣಾಮ
ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವಿಭಾಗದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಹಾಗೂ ಇನಿಂಗ್ಸ್‌ನಲ್ಲಿ ಆಂಕರ್ ಪಾತ್ರ ನಿರ್ವಹಿಸಬಲ್ಲ ಇಶಾನ್ ಕಿಶನ್ ಅವರ ಅನುಪಸ್ಥತಿಯು ಮುಂಬೈ ಇಂಡಿಯನ್ಸ್‌ಗೆ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಸಮತೋಲನಗೊಳಿಸಬಲ್ಲ ಪ್ರಮುಖ ಆಟಗಾರನ ಕೊರತೆಯನ್ನುಂಟುಮಾಡಿದೆ. ವೇಗವಾಗಿ ರನ್ ಗಳಿಸಬಲ್ಲ ಹಾಗೂ ಜೊತೆಯಾಟವನ್ನು ರೂಪಿಸಬಲ್ಲ ಆಟವನ್ನು ಎಡಗೈ ಬ್ಯಾಟ್ಸ್‌ಮನ್ ಕರಗತ ಮಾಡಿಕೊಂಡಿದ್ದಾರೆ. ಆದರೆ, ಮುಂಬೈ ಇತ್ತೀಚಿನ ಆವೃತ್ತಿಗಳಲ್ಲಿ ವಿಭಾಗದಲ್ಲಿ ವೈಫಲ್ಯ ಅನುಭವಿಸಿದೆ. ಅದರಲ್ಲಿಯೂ ಕಿಶನ್ ಅವರನ್ನು ಕೈ ಬಿಟ್ಟ ಬಳಿಕ ಮುಂಬೈ ಈ ವಿಷಯದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ.
Pocket Dynamo has arrived 🔥🔥
— SunRisers Hyderabad (@SunRisers) March 23, 2025
Ishan Kishan | #PlayWithFire | #SRHvRR | #TATAIPL2025 pic.twitter.com/LYLnmUQ6Lz
3. ಬಿಸಿಸಿಐ ಆಯ್ಕೆ ಸಮಿತಿಗೆ ಸಂದೇಶ ರವಾನಿಸಿ ಇಶಾನ್ ಕಿಶನ್
ಕಳೆದ ವರ್ಷ ದೇಶಿ ಕ್ರಿಕೆಟ್‌ನಲ್ಲಿ ಆಡಿಲ್ಲವೆಂಬ ಒಂದೇ ಒಂದು ಕಾರಣದಿಂದ ಇಶಾನ್ ಕಿಶನ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಪರಿಗಣಿಸಿರಲಿಲ್ಲ. ಆದರೆ, 2025ರ ಐಪಿಎಲ್ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಎಡಗೈ ಬ್ಯಾಟರ್ ಬಿಸಿಸಿಐ ಸೆಲೆಕ್ಟರ್ಸ್‌ಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲದೆ ಆಯ್ಕೆದಾರರಿಗೆ ಎಸ್‌ಆರ್‌ಎಚ್ ಬ್ಯಾಟ್ಸ್‌ಮನ್ ಒತ್ತಡ ಹಾಕಿದ್ದಾರೆ. ಇದೇ ರೀತಿಯ ಪ್ರದರ್ಶನವನ್ನು ಅವರು ಟೂರ್ನಿಯುದ್ದಕ್ಕೂ ಉಳಿಸಿಕೊಂಡರೆ, ಅವರು ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್ ಮಾಡಬಹುದು.