ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಏಷ್ಯಾಕಪ್‌ಗೆ ಸಂಭಾವ್ಯ ತಂಡ ಪ್ರಕಟಿಸಿದ ಬಾಂಗ್ಲಾದೇಶ

Bangladesh preliminary squad: ಈ ಸರಣಿಯು ಡಚ್ ತಂಡಕ್ಕೆ ಐತಿಹಾಸಿಕ ಕ್ಷಣವಾಗಿದೆ. ಇದು ಬಾಂಗ್ಲಾದೇಶ ವಿರುದ್ಧ ಆಡುತ್ತಿರುವ ಅವರ ಮೊದಲ ದ್ವಿಪಕ್ಷೀಯ ಟಿ20 ಪ್ರವಾಸವಾಗಿದೆ. ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನಿಟ್ಟಿನಲ್ಲಿ ನೆದರ್ಲ್ಯಾಂಡ್ಸ್ ತಂಡ ಮುಂಚಿತವಾಗಿ ಬಾಂಗ್ಲಾದೇಶಕ್ಕೆ ಬರಲಿದೆ.

ಏಷ್ಯಾಕಪ್‌ಗೆ ಸಂಭಾವ್ಯ ತಂಡ ಪ್ರಕಟಿಸಿದ ಬಾಂಗ್ಲಾದೇಶ

Abhilash BC Abhilash BC Aug 6, 2025 9:43 AM

ಢಾಕಾ: ಸೆಪ್ಟೆಂಬರ್​ 9ರಿಂದ 28ರವರೆಗೆ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್​ ಟಿ20 ಟೂರ್ನಿಗೆ(Asia Cup 2025) ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) 25 ಸದಸ್ಯರ ಸಂಭಾವ್ಯ ತಂಡವನ್ನು(Bangladesh preliminary squad) ಹೆಸರಿಸಿದೆ. ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರವರೆಗೆ ಸಿಲ್ಹೆಟ್‌ನಲ್ಲಿ ನಡೆಯಲಿರುವ ನೆದರ್ಲ್ಯಾಂಡ್ಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೂ ಇದೇ ತಂಡವನ್ನು ಪರಗಣಿಸಲಾಗಿದೆ.

ಆಗಸ್ಟ್ 6 ರಿಂದ ಮಿರ್ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫಿಟ್ನೆಸ್ ಶಿಬಿರಕ್ಕಾಗಿ ತಂಡವು ಒಟ್ಟುಗೂಡಲಿದೆ. ನಂತರ ಆಗಸ್ಟ್ 15 ರಿಂದ ಕೌಶಲ್ಯ ತರಬೇತಿ ನಡೆಯಲಿದೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ನೂರುಲ್ ಹಸನ್ ಸೋಹನ್ ಟಿ20 ತಂಡಕ್ಕೆ ಮರಳಿದ್ದಾರೆ. ಮೊಸದ್ದೇಕ್ ಹೊಸೈನ್ ಸೈಕತ್ ಅವರನ್ನು ಕೈಬಿಡಲಾಗಿದೆ.

ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಜ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಆದರೂ ಅವರ ಇತ್ತೀಚಿನ ಟ20 ಫಾರ್ಮ್ ವಿಶೇಷವಾಗಿ ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧದ ಸರಣಿಗಳಲ್ಲಿ ಕಳಪೆಯಾಗಿತ್ತು.

ಈ ಸರಣಿಯು ಡಚ್ ತಂಡಕ್ಕೆ ಐತಿಹಾಸಿಕ ಕ್ಷಣವಾಗಿದೆ. ಇದು ಬಾಂಗ್ಲಾದೇಶ ವಿರುದ್ಧ ಆಡುತ್ತಿರುವ ಅವರ ಮೊದಲ ದ್ವಿಪಕ್ಷೀಯ ಟಿ20 ಪ್ರವಾಸವಾಗಿದೆ. ಸ್ಥಳೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನಿಟ್ಟಿನಲ್ಲಿ ನೆದರ್ಲ್ಯಾಂಡ್ಸ್ ತಂಡ ಮುಂಚಿತವಾಗಿ ಬಾಂಗ್ಲಾಕ್ಕೆ ಬರಲಿದೆ.

ಇದನ್ನೂ ಓದಿ IND vs ENG: ಶುಭಮನ್‌ ಗಿಲ್‌ ಇನ್ನೂ ಕಲಿಯಬೇಕೆಂದಿದ್ದ ಕಪಿಲ್‌ ದೇವ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು!

ಏಷ್ಯಾ ಕಪ್‌ಗೆ ಬಾಂಗ್ಲಾದೇಶದ ಸಂಭಾವ್ಯ ತಂಡ

ಲಿಟ್ಟನ್ ದಾಸ್ (ನಾಯಕ), ತಂಝೀದ್ ಹಸನ್ ತಮೀಮ್, ಮೊಹಮ್ಮದ್ ನಯಿಮ್ ಶೇಖ್, ಸೌಮ್ಯ ಸರ್ಕಾರ್, ಮೊಹಮ್ಮದ್ ಪರ್ವೇಜ್ ಹೊಸೈನ್ ಎಮನ್, ತೌಹಿದ್ ಹೃದಯೋಯ್, ಜೇಕರ್ ಅಲಿ ಅನಿಕ್, ಮೆಹಿದಿ ಹಸನ್ ಮಿರಾಜ್, ಶಮೀಮ್ ಹೊಸೈನ್ ಪಟ್ವಾರಿ, ನಜ್ಮುಲ್ ಹೊಸೈನ್ ಪಟ್ವಾರಿ, ನಜ್ಮುಲ್ ಹುಸೇನ್ ತಮೀಮ್, ಶಾನ್ ಹೊಸ್ವಿರ್ ಇಸ್ಲಾಂ, ಶಾನ್ ಹೊಸ್ವಿರ್ ಇಸ್ಲಾಂ, ರಿಶಾದ್ ನಸುಮ್ ಅಹ್ಮದ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್, ತಂಝಿಮ್ ಹಸನ್ ಸಾಕಿಬ್, ಮೊಹಮ್ಮದ್ ಸೈಫುದ್ದೀನ್, ನಹಿದ್ ರಾಣಾ, ಮುಸ್ತಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ಸೈಯದ್ ಖಲೀದ್ ಅಹ್ಮದ್, ನೂರುಲ್ ಹಸನ್ ಸೋಹನ್, ಮಹಿದುಲ್ ಇಸ್ಲಾಂ ಭೂಯಾನ್ ಅಂಕನ್, ಸೈಫ್ ಹಸನ್.