ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೀಮ್‌ ಇಂಡಿಯಾ ಆಟಗಾರರಿಗೆ ಕಠಿಣ ಮಾರ್ಗಸೂಚಿ ಹೊರಡಿಸಲು ಬಿಸಿಸಿಐ ಸಜ್ಜು!

ಭಾರತ ತಂಡದ ವಿದೇಶಿ ಪ್ರವಾಸದಲ್ಲಿ ಆಟಗಾರರು ತಮ್ಮ-ತಮ್ಮ ಕುಟುಂಬಗಳ ಜೊತೆ ಉಳಿದುಕೊಳ್ಳುವ ಸಂಬಂಧ ನಿಯಮವನ್ನು ಬದಲಿಸಲು ಬಿಸಿಸಿಐ ಸಜ್ಜಾಗಿದೆ. ಒಂದೂವರೆ ತಿಂಗಳಿಗೂ ಅಧಿಕ ಅವಧಿ ಪ್ರವಾಸವಾಗಿದ್ದರೆ ಆಟಗಾರರು 7 ದಿನಗಳ ಕಾಲ ಮಾತ್ರ ತಮ್ಮ ಕುಟುಂಬದ ಜತೆ ಇರಬಹುದೆಂದು ಹೊಸ ಮಾರ್ಗಸೂಚಿಯನ್ನು ಜಾರಿಗೆ ತರಲಿದೆ.

'ವಿದೇಶಿ ಪ್ರವಾಸದಲ್ಲಿ ಪತ್ನಿಯರ ಜತೆ ಉಳಿಯಲು ಕಡಿವಾಣ': ಆಟಗಾರರಿಗೆ ಬಿಸಿಸಿಐ ಶಾಕ್‌!

Virat Kohli-Anushka Sharma-Bumrah-Sanjana

Profile Ramesh Kote Jan 15, 2025 3:51 PM

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 1-3 ಅಂತರದಲ್ಲಿ ಸೋಲು ಅನುಭವಿಸಿದ ಕಾರಣ ಭಾರತ ತಂಡದ ಆಟಗಾರರ ವಿರುದ್ಧ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಲು ಸಜ್ಜಾಗುತ್ತಿದೆ ಎಂದು ವರದಿಯಾಗಿದೆ. ಹೊಸ ಮಾರ್ಗಸೂಚಿಯ ಪ್ರಕಾರ ಭಾರತ ತಂಡದ ಆಟಗಾರರು ಒಂದೂವರೆ ತಿಂಗಳ ಪ್ರವಾಸವಾಗಿದ್ದರೆ ಆರಂಭಿಕ ಎರಡು ವಾರಗಳ ಕಾಲ ಮಾತ್ರ ತಮ್ಮ ಕುಟುಂಬದ ಜೊತೆ ಇರಬಹುದು. ಇದರ ಜೊತೆಗೆ ಆಟಗಾರರು ತಮ್ಮ ತಂಡದ ಬಸ್‌ ಜೊತೆ ಮಾತ್ರ ಪ್ರಯಾಣ ಬೆಳೆಸಬೇಕಾಗುತ್ತದೆ.

ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ಸೋಲು ಅನುಭವಿಸಿದೆ ಹಾಗೂ ಈ ಸರಣಿಯ ವೇಳೆ ಡ್ರೆಸ್ಸಿಂಗ್‌ ರೂಂ ವಾತಾವರಣ ಕೂಡ ಅಷ್ಟೊಂದು ಉತ್ತಮವಾಗಿರಲಿಲ್ಲ. ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು ಕೂಡ ಹಠಾತ್‌ ನಿವೃತ್ತಿ ಘೋಷಿಸಿದ ಬಳಿಕ ಟೀಮ್‌ ಇಂಡಿಯಾದಲ್ಲಿನ ಸಂಗತಿಗಳು ಸ್ವಲ್ಪ ಕಠಿಣವಾಗಿವೆ. ನಾಯಕ ರೋಹಿತ್‌ ಶರ್ಮಾ ಕೂಡ ಸಿಡ್ನಿ ಟೆಸ್ಟ್‌ನಿಂದ ಹೊರಗುಳಿದಿದ್ದು ಕೂಡ ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದವು.

ಆಸ್ಟ್ರೇಲಿಯಾ ಪ್ರವಾಸದ ವೇಳೆ ವಿರಾಟ್‌ ಕೊಹ್ಲಿ ಹಾಗೂ ಜಸ್‌ಪ್ರೀತ್‌ ಬುಮ್ರಾ ತಮ್ಮ-ತಮ್ಮ ಕುಟುಂಬಗಳ ಜೊತೆ ಪ್ರತ್ಯೇಕವಾಗಿ ಪ್ರಯಾಣವನ್ನು ಮಾಡಿದ್ದರು. ಇನ್ನುಳಿದ ಆಟಗಾರರು ತಂಡದ ಬಸ್‌ನಲ್ಲಿ ಜೊತೆಯಾಗಿ ಪ್ರಯಾಣ ಮಾಡಿದ್ದರು. ಪರ್ತ್‌ ಟೆಸ್ಟ್‌ ಪಂದ್ಯದ ಗೆಲುವನ್ನು ಕೂಡ ಟೀಮ್‌ ಇಂಡಿಯಾ ಆಟಗಾರರು ಸಂಭ್ರಮಿಸಿರಲಿಲ್ಲ ಎಂದು ವರದಿಯಾಗಿತ್ತು.

ಬಿಸಿಸಿಐನ ಹೊಸ ಮಾರ್ಗಸೂಚಿಗಳ ವಿವರ

  • ಟೂರ್ನಿ ಅಥವಾ ಸರಣಿಯು 45ಕ್ಕೂ ಅಧಿಕ ದಿನಗಳನ್ನು ಒಳಗೊಂಡಿದ್ದರೆ, ಆಗ ಆರಂಭಿಕ ಎರಡು ವಾರಗಳ ಕಾಲ ಮಾತ್ರ ಆಟಗಾರರು ತಮ್ಮ ಕುಟುಂಬಗಳ ಜೊತೆ ಇರಬೇಕು.
  • ಒಂದು ವೇಳೆ ಅಲ್ಫಾವಧಿ ಪ್ರವಾಸವಾಗಿದ್ದರೆ 7 ದಿನಗಳ ಕಾಲ ಆಟಗಾರರು ತಮ್ಮ ಕುಟುಂಬದ ಜೊತೆ ಇರಬಹುದು.
  • ಪತ್ನಿಯರು ತಮ್ಮ ಪತಿಯರ ಜೊತೆ ದೀರ್ಘಾವಧಿ ಟೂರ್ನಿಯ ವೇಳೆ ಇರುವಂತಿಲ್ಲ.
  • ಕುಟುಂಬಗಳು ಕೇವಲ ಎರಡು ವಾರಗಳ ಕಾಲ ಮಾತ್ರ ಆಟಗಾರರ ಜೊತೆ ಇರಬೇಕು.
  • ಎಲ್ಲಾ ಆಟಗಾರರು ಕೂಡ ತಂಡದ ಬಸ್‌ನಲ್ಲಿಯೇ ಪ್ರಯಾಣ ಬೆಳೆಸಬೇಕಾಗುತ್ತದೆ.
  • ಗೌತಮ್‌ ಗಂಭೀರ್‌ ಅವರ ವೈಯಕ್ತಿಕ ಮ್ಯಾನೇಜರ್‌ ವಿಐಪಿ ಬಾಕ್ಸ್‌ ಅಥವಾ ತಂಡದ ಬಸ್‌ನಲ್ಲಿ ಪ್ರಯಾಣ ಬೆಳೆಸುವಂತಿಲ್ಲ ಮತ್ತು ಅವರು ಬೇರೆ ಹೋಟೆಲ್‌ನಲ್ಲಿ ಉಳಿದುಕೊಳ್ಳಬೇಕಾಗುತ್ತದೆ.
  • ಆಟಗಾರರ ಲಗೇಜ್‌ 150ಕ್ಕೂ ಅಧಿಕ ತೂಕವಿದ್ದರೆ, ಹೆಚ್ಚುವರಿ ತೂಕಕ್ಕೆ ಬಿಸಿಸಿಐ ಶುಲ್ಕವನ್ನು ಪಾವತಿಸುವುದಿಲ್ಲ ಹಾಗೂ ಆಟಗಾರರೇ ಪಾವತಿಸಬೇಕಾಗುತ್ತದೆ.

ರಿವ್ಯೂವ್‌ ಮೀಟಿಂಗ್‌ ನಡೆಸಿದ್ದ ಬಿಸಿಸಿಐ

ಆಸ್ಟ್ರೇಲಿಯಾ ಪ್ರವಾಸಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇತ್ತೀಚೆಗೆ ನಾಯಕ ರೋಹಿತ್‌ ಶರ್ಮಾ ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರೊಂದಿಗೆ ರಿವ್ಯೂವ್‌ ಮೀಟಿಂಗ್‌ ಅನ್ನು ನಡೆಸಿತ್ತು. ತಂಡದ ಕಾಂಬಿನೇಷನ್‌ಗೆ ಸಂಬಂಧಿಸಿದಂತೆ ಟೀಮ್‌ ಇಂಡಿಯಾ ಅಚ್ಚರಿ ಆಯ್ಕೆಗಳನ್ನು ತೆಗೆದುಕೊಳ್ಳಬಾರದೆಂದು ಸೂಚಿಸಿದೆ. ಏಕೆಂದರೆ ಮುಂದಿನ ಆರು ವಾರಗಳ ಅವಧಿಯಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಂತಹ ಟೂರ್ನಿಗಳು ಸಮೀಪಿಸುತ್ತಿವೆ. ಆದ್ದರಿಂದ ತ್ವರಿತ ಬದಲಾವಣೆಯಿಂದ ತಂಡದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ.