Lawrence Bishnoi: ಬೆಂಗಳೂರಿನ ಉದ್ಯಮಿಗೆ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಬೆದರಿಕೆ
Lawrence Bishnoi: ಬಿಷ್ಣೋಯಿ ಹೆಸರು ಬಳಸಿಕೊಂಡು ವ್ಯಾಪಾರಿಗೆ ಪರಿಚಿತರು ಬೆದರಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 2 ದಿನಗಳ ಹಿಂದೆ ಉದ್ಯಮಿಗೆ ಕರೆ ಮಾಡಿದ್ದ ಅಪರಿಚಿತ, ತನ್ನನ್ನು ಬಿಷ್ಣೋಯಿ ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡಿದ್ದಾನೆ.


ಬೆಂಗಳೂರು : ಬೆಂಗಳೂರಿನ (Bengaluru) ಪೀಠೋಪಕರಣ ವ್ಯಾಪಾರಿಯೊಬ್ಬರಿಗೆ (businessman) ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯಿ (Lawrence Bishnoi) ಹೆಸರಿನಲ್ಲಿ ಬೆದರಿಕೆ (Threat) ಹಾಕಲಾಗಿದೆ. ಬೆದರಿಸಿ ₹1 ಕೋಟಿ ಹಣ ವಸೂಲಿಗೆ ಕಿಡಿಗೇಡಿಗಳು ಯತ್ನಿಸಿರುವ ಘಟನೆ ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉದ್ಯಮಿ ಈ ಬಗ್ಗೆ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಿಷ್ಣೋಯಿ ಹೆಸರು ಬಳಸಿಕೊಂಡು ವ್ಯಾಪಾರಿಗೆ ಪರಿಚಿತರು ಬೆದರಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಪ್ರಕರಣದಲ್ಲಿ ಬಿಷ್ಣೋಯಿ ಹೆಸರು ಕೇಳಿ ಬಂದಿತ್ತು. 2 ದಿನಗಳ ಹಿಂದೆ ಉದ್ಯಮಿಗೆ ಕರೆ ಮಾಡಿದ್ದ ಅಪರಿಚಿತ, ತನ್ನನ್ನು ಬಿಷ್ಣೋಯಿ ಗ್ಯಾಂಗ್ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ತಮಗೆ 1 ಕೋಟಿ ಕೊಡದೆ ಹೋದರೆ ಮಗನನ್ನು ಅಪಹರಿಸುವುದಾಗಿ ಬೆದರಿಸಿದ್ದಾನೆ ಎಂದು ತಿಳಿದು ಬಂದಿದೆ.
ಸಾಲಕ್ಕೆ ಬೇಸತ್ತು ತಾಯಿ- ಮಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ
ದಾವಣಗೆರೆ: ದಾವಣಗೆರೆಯಲ್ಲಿ ಘೋರವಾದ ದುರಂತ ಸಂಭವಿಸಿದೆ. ಹರಿಹರ ಬಳಿ ಇರುವ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ರೈಲ್ವೇ ಸೇತುವೆ ಬಳಿ ತಾಯಿ- ಮಗಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳನ್ನ ಗಂಗನರಸಿ ಗ್ರಾಮದ ಸುವರ್ಣಮ್ಮ (65) ಮತ್ತು ಗೌರಮ್ಮ (45) ಎಂದು ಗುರುತಿಸಲಾಗಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆಯರಿಬ್ಬರ ರುಂಡ, ಮುಂಡ ಪ್ರತ್ಯೇಕವಾಗಿದ್ದು, ಅಂಗಾಂಗಗಳು ರಕ್ತಸಿಕ್ತವಾಗಿ ಛಿದ್ರವಾಗಿವೆ.
ಫೈನಾನ್ಸ್ ಸಾಲ ಕಟ್ಟಲಾಗದೆ ರೈಲಿಗೆ ತಲೆ ಕೊಟ್ಟು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಸುವರ್ಣಮ್ಮ ಅವರ ಪತಿ ನಿಧನರಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದು, ಮತ್ತೊಬ್ಬ ಪುತ್ರಿ ದಿವ್ಯಾಂಗರಾಗಿದ್ದರು. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Atrocity Case: ಜಾತಿ ನಿಂದನೆ ಕೇಸ್‌ಗೆ ಹೆದರಿ ಮಗ ಆತ್ಮಹತ್ಯೆ, ತಂದೆ ಹೃದಯಾಘಾತದಿಂದ ಸಾವು