Bhagya Lakshmi Serial: ಶ್ರೇಷ್ಠಾ ಕೊರಳಿಗೆ ತಾಳಿ ಕಟ್ಟಲು ತಯಾರಾಗೇ ಬಿಟ್ಟ ತಾಂಡವ್: ಮದುವೆ ನಿಲ್ಲಿಸ್ತಾಳ ಭಾಗ್ಯಾ?
ತಾಂಡವ್-ಶ್ರೇಷ್ಠಾಳ ಈ ಎಲ್ಲ ಘಟನೆಯನ್ನು ಸುಂದರಕ್ಕೆ ನೋಡಿರುತ್ತಾಳೆ. ಈ ಮದುವೆ ಆಗೋದಕ್ಕೆ ನಾನು ಬಿಡೋದಿಲ್ಲ ಎಂದು ತಕ್ಷಣ ಕುಸುಮಾಗೆ ಕಾಲ್ ಮಾಡುತ್ತಾಳೆ. ಕುಸುಮಾಗೆ ಈ ವಿಚಾರ ತಿಳಿದು ಶಾಕ್ ಆಗುತ್ತಾಳೆ. ಭಾಗ್ಯಾಳಿಗೆ ಕಾಲ್ ಮಾಡಿ ವಿಷಯ ಹೇಳೋಣ ಎಂದರೆ ಅವಳು ಕಾಲ್ ರಿಸೀವ್ ಮಾಡುತ್ತಿಲ್ಲ..

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಕಥಾನಾಯಕಿ ಭಾಗ್ಯಾಳಿಗೆ ಮತ್ತಷ್ಟು ಕಷ್ಟದ ದಿನಗಳು ಬರಲಾರಂಭಿಸಿದೆ. ಅತ್ತ ಸರಿಯಾಗಿ ಕೆಲಸವೂ ಸಿಗದೆ.. ಹಣವೂ ಇಲ್ಲದೆ ಕಷ್ಟದ ದಿನಗಳನ್ನು ದೂಡುತ್ತಿರುವ ಭಾಗ್ಯಾ ಈಗ ತನ್ನ ಜೀವನದ ಬಹುದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ತಾಂಡವ್-ಶ್ರೇಷ್ಠಾ ಮದುವೆಗೆ ತಯಾರಾಗಿದ್ದಾರೆ. ಇದನ್ನು ತಿಳಿದ ಭಾಗ್ಯಾ ತನ್ನ ತಾಳಿಯನ್ನು ತೆಗೆದು ತಾಂಡವ್ ಕೈಗೆ ಕೊಟ್ಟುಬಿಟ್ಟಿದ್ದಾಳೆ. ಸ್ವತಃ ಅತ್ತೆ ಕುಸುಮಾಳೆ ತಾಳಿಯನ್ನು ತೆಗೆದುಕೊಡು ಎಂದು ಹೇಳಿದ್ದಾರೆ.
ತರಕಾರಿ ಕೊಂಡುಕೊಳ್ಳಲು ಎಂದು ಮಾರ್ಕೆಟ್ಗೆ ಬಂದ ಶ್ರೇಷ್ಠಾಗೆ ಭಾಗ್ಯಾ ಸರಿಯಾಗಿ ಅವಮಾನ ಮಾಡುತ್ತಾಳೆ, ಶ್ರೇಷ್ಠಾ ಕೆನ್ನೆಗೆ ನಾಲ್ಕು ಬಾರಿ ಬಾರಿಸುತ್ತಾಳೆ. ಇದರಿಂದ ಶ್ರೇಷ್ಠಾಗೆ ಎಲ್ಲರ ಎದುರು ಅವಮಾನವಾಗುತ್ತದೆ. ಸೀದಾ ಮನೆಗೆ ಬಂದು ತಾಂಡವ್‌ನನ್ನು ಹೊರಡಿಸಿ ಮದುವೆ ಆಗೋಣ ಎಂದು ಪಂಚೆ, ಶಲ್ಯ ಧರಿಸಿ, ಮನೆಯಿಂದ ಕರೆದುಕೊಂಡು ಹೋಗುತ್ತಾಳೆ. ಅದರಂತೆ ಇಬ್ಬರೂ ದೇವಸ್ಥಾನಕ್ಕೆ ಬರುತ್ತಾರೆ. ತಾಂಡವ್ ವಲ್ಲದ ಮನಸ್ಸಿನಲ್ಲಿರುತ್ತಾನೆ.
ತಾಂಡವ್ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ, ದಯವಿಟ್ಟು ನನ್ನನ್ನು ಮದುವೆಯಾಗು ಎಂದು ಕಾಲು ಹಿಡಿದು, ಕೈಮುಗಿದು ಕೇಳಿಕೊಂಡಿದ್ದಾಳೆ ಶ್ರೇಷ್ಠಾ. ನಿನಗಾಗಿ ಇಷ್ಟೆಲ್ಲಾ ಮಾಡಿದೆ, ನೋವು ಸಹಿಸಿದೆ, ಇನ್ನು ಕಾಯಲು ನನ್ನಿಂದ ಸಾಧ್ಯವಿಲ್ಲ ಎಂದು ತಾಂಡವ್ ಎದುರು ಕೈಮುಗಿದು ಅಳುತ್ತಾ ಹೇಳುತ್ತಾಳೆ. ನನಗೆ ಅನ್ಯಾಯ ಆಗ್ತಿದೆ.. ಇನ್ನು ಏನು ಮಾಡ್ಬೇಕು ಅಂತ ಹೇಳು, ಎಲ್ಲ ಮಾಡ್ತೀನಿ.. ಆದ್ರೆ ಈ ಮದುವೆ ಬೇಡ ಅಂತ ಮಾತ್ರ ಹೇಳ್ಬೇಡ ಎಂದಿದ್ದಾಳೆ. ಮೊದಲು ತಾಂಡವ್ ನೋ ಎಂದು ಹೇಳಿದರೂ, ನಂತರ ನೀನು ನನಗೋಸ್ಕರ ತುಂಬಾ ತ್ಯಾಗ ಮಾಡಿದ್ದೀಯ.. ನಾನು ನಿನ್ನ ಮಾತಿಗೆ ಬೆಲೆ ಕೊಡ್ತೇನೆ.. ಸರಿ, ಇವತ್ತೇ ಮದುವೆಯಾಗೋಣ ಎಂದು ಹೇಳುತ್ತಾನೆ.
ಆದರೆ, ತಾಂಡವ್-ಶ್ರೇಷ್ಠಾಳ ಈ ಎಲ್ಲ ಘಟನೆಯನ್ನು ಸುಂದರಕ್ಕೆ ನೋಡಿರುತ್ತಾಳೆ. ಈ ಮದುವೆ ಆಗೋದಕ್ಕೆ ನಾನು ಬಿಡೋದಿಲ್ಲ ಎಂದು ತಕ್ಷಣ ಕುಸುಮಾಗೆ ಕಾಲ್ ಮಾಡುತ್ತಾಳೆ. ಕುಸುಮಾಗೆ ಈ ವಿಚಾರ ತಿಳಿದು ಶಾಕ್ ಆಗುತ್ತಾಳೆ. ಭಾಗ್ಯಾಳಿಗೆ ಕಾಲ್ ಮಾಡಿ ವಿಷಯ ಹೇಳೋಣ ಎಂದರೆ ಅವಳು ಕಾಲ್ ರಿಸೀವ್ ಮಾಡುತ್ತಿಲ್ಲ.. ರೆಸಾರ್ಟ್ನಲ್ಲಿ ಜೋಕರ್ ವೇಷ ತೊಟ್ಟು ಆಕೆ ನೃತ್ಯ ಮಾಡುತ್ತಾ ಇರುತ್ತಾಳೆ. ಕೊನೆಗೆ ರೆಸಾರ್ಟ್ನಲ್ಲಿದ್ದ ಭಾಗ್ಯಾಳ ಫ್ರೆಂಡ್ ನಿಮ್ಮ ಅತ್ತೆ ಪದೆ ಪದೆ ಕಾಲ್ ಮಾಡ್ತಾ ಇದ್ದಾರೆ ಎಂದು ಹೇಳಿದಾಗ ಭಾಗ್ಯಾ ಏನು ವಿಷಯ ಎಂದು ಅತ್ತೆಗೆ ಕೇಳುತ್ತಾಳೆ.
ಕುಸುಮಾ ನಿಜ ವಿಚಾರವನ್ನು ಹೇಳುವುದಿಲ್ಲ.. ಬದಲಾಗಿ ನೀನು ತಕ್ಷಣ ದೇವಸ್ಥಾನಕ್ಕೆ ಬಾ ಎಂದು ಹೇಳಿದ್ದಾರೆ.. ಭಾಗ್ಯಾ ಏನಪ್ಪ ಎಂದು ಆತುರದಲ್ಲಿ ಬರುತ್ತಾಳೆ. ಅಲ್ಲಿ ಸುಂದರಕ್ಕ ಕಾಣಿಸುತ್ತಾರೆ.. ನೀನೇನು ಇಲ್ಲಿ?, ಅತ್ತೆ ನನ್ನನ್ನ ಇಲ್ಲಿದೆ ಬರೋಕೆ ಹೇಳಿದ್ರು.. ಏನಿದೆ ಇಲ್ಲಿ? ಎಂದು ಭಾಗ್ಯಾ ಕೇಳುತ್ತಾಳೆ. ಆಗ ಸುಂದರಕ್ಕ ತಾಂಡವ್-ಶ್ರೇಷ್ಠಾ ಮದುವೆ ತಯಾರಿಯನ್ನು ತೋರಿಸುತ್ತಾಳೆ.. ಇದನ್ನ ಕಂಡು ಭಾಗ್ಯಾಗೆ ಆಘಾತವಾಗುತ್ತದೆ. ಕಣ್ಣಲ್ಲಿ ನೀರು ಉಕ್ಕಿ ಬರುತ್ತದೆ.
ಅತ್ತ ತಾಂಡವ್, ಇಲ್ಲಿಯವರೆಗೆ ಹಲವರು ಬಂದು ನಮ್ಮ ಮದುವೆ ನಿಲ್ಲಿಸಿದ್ದಾರೆ. ಆದರೆ ಈ ಬಾರಿ ಹಾಗಾಗಲು ನಾನು ಬಿಡುವುದಿಲ್ಲ. ಮದುವೆಯಾಗಿಯೇ ಸಿದ್ಧ ಎಂದು ಹೇಳಿದ್ದಾನೆ. ಅದರಂತೆ ಇಬ್ಬರೂ ಹಸೆಮಣೆ ಏರಿದ್ದಾರೆ. ಇನ್ನೇನು ತಾಳಿ ಕಟ್ಟಬೇಕು ಎಂಬಷ್ಟರಲ್ಲಿ ಭಾಗ್ಯಾ ಹಾಗೂ ಕುಸುಮಾ ಎದುರಾಗುತ್ತಾರೆ. ಇವರನ್ನ ಕಂಡು ತಾಂಡವ್ ಶಾಕ್ ಆಗುತ್ತಾನೆ. ಆದರೆ, ಭಾಗ್ಯಾ ಈ ಬಾರಿ ಸೆಂಟಿಮೆಂಟ್ಗೆ ಕರಗಿಲ್ಲ. ಗಂಡನ ದ್ರೋಹಕ್ಕೆ ಭಾಗ್ಯ ಸ್ವಾಭಿಮಾನದ ಉತ್ತರ ಕೊಡುತ್ತಾಳೆ. ತಾಂಡವ್ ತತ್ತರಿಸಿ ಹೋಗುವಂತೆ ಅವನು ಬೆಲೆ ಕೊಡದ ತಾಳಿಯಯನ್ನು ಕುತ್ತಿಗೆಯಿಂದ ತೆಗೆಯುತ್ತಾಳೆ.
ಕಟ್ಟಿರೋ ತಾಳಿಗೆ ಗಂಡನೇ ಬೆಲೆ ಕೊಡಲಿಲ್ಲ ಅಂದ್ಮೇಲೆ, ಈ ತಾಳಿ ಭಾರ ಆಗ್ತಿದೆ, ಅತ್ತೆ ಎಂದು ಕುಸುಮಾ ಬಳಿ ಹೇಳಿದ್ದಾಳೆ. ಇವರಿಗೆ ಬೇಡದಿರೋ ಸಂಬಂಧ ನನಗೂ ಬೇಡ ಎಂದು ತನ್ನ ಅತ್ತೆಗೆ ಹೇಳುವ ಭಾಗ್ಯ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ. ಅತ್ತ ತಾಂಡವ್ ಇದನ್ನೆಲ್ಲ ಊಹಿಸಿಯೇ ಇರಲಿಲ್ಲ. ಕುಸುಮಾ ಕೂಡ ಇಂತ ಮಗ ಬೇಡ ಎಂದು ಭಾಗ್ಯಾ ಬಳಿಕ ತಾಳಿ ತೆಗೆದುಕೊಡು ಎಂದಿದ್ದಾಳೆ. ಒಟ್ಟಾರೆ ಭಾಗ್ಯ ಲಕ್ಷ್ಮೀ ಧಾರಾವಾಹಿ ಮಹಾತಿರುವು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಸಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
Lakshmi Baramma Serial: ನಾನಿನ್ನೂ ಸಿಂಗಲ್.. ಬಾಯ್‌ಫ್ರೆಂಡ್ ಮಾಡ್ಕೊಳ್ಳೋಕೆ ಟೈಮ್ ಸಿಕ್ಕಿಲ್ಲ ಎಂದ ಭೂಮಿಕಾ