Lakshmi Baramma Serial: ನಾನಿನ್ನೂ ಸಿಂಗಲ್.. ಬಾಯ್‌ಫ್ರೆಂಡ್ ಮಾಡ್ಕೊಳ್ಳೋಕೆ ಟೈಮ್ ಸಿಕ್ಕಿಲ್ಲ ಎಂದ ಭೂಮಿಕಾ
ಕೇವಲ 19ನೇ ವಯಸ್ಸಿಗೆ ಹೀರೋಯಿನ್ ಆಗಿ ಮಿಂಚಿದ ಭೂಮಿಕಾ ರಮೇಶ್ ಸದ್ಯ ವಿಶ್ವವಾಣಿ ಸ್ಪೆಷಲ್ ಯೂಟ್ಯೂಬ್ ಚಾನೆಲ್ನ ವಿಶೇಷ ಸಂದರ್ಶನದಲ್ಲಿ ಕೆಲ ವಿಚಾರ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ನಾನು ಪರ್ಸನಲ್ ಮೊಬೈಲ್ ಅಂತ ಯೂಸ್ ಮಾಡೋದೇ ಇಲ್ಲ.. ನನ್ಗೆ ಬಾಯ್ ಫ್ರೆಂಡ್ ಮಾಡೋಕೆ ಟೈಮ್ ಸಿಗಲಿಲ್ಲ ಎಂದು ಹೇಳಿದ್ದಾರೆ.

Bhoomika Ramesh Interview

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದರಲ್ಲಿ ಮುಖ್ಯ ಭೂಮಿಕೆಯಲ್ಲಿ ಲಕ್ಷ್ಮಿಯಾಗಿ ಎಲ್ಲರ ಮೆಚ್ಚುಗೆ ಪಡೆದಿರುವ ಭೂಮಿಕಾ ರಮೇಶ್ಗೆ ಕೂಡ ಸಾಕಷ್ಟು ಫ್ಯಾನ್ಸ್ ಇದ್ದಾರೆ. ರಿಯಾಲಿಟಿ ಶೋಗಳ ಮೂಲಕ ಕಿರುತೆರೆಗೆ ಬಂದ ಭೂಮಿಕಾ ನಂತರ ಸೀರಿಯಲ್ಗೆ ಬಂದರು. ಇವರ ಜರ್ನಿಯೇ ಸಾಕಷ್ಟು ವಿಭಿನ್ನವಾಗಿದೆ. ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಭಾಗ್ಯನ ತಂಗಿಯಾಗಿ ನಟಿಸುತ್ತಿದ್ದ ಲಕ್ಷ್ಮಿ ನಂತರ ಲಕ್ಷ್ಮೀ ಬಾರಮ್ಮ ಎನ್ನುವ ಸಪರೇಟ್ ಧಾರಾವಾಹಿ ಮೂಲಕ ಹೀರೋಯಿನ್ ಆದರು.
ಕೇವಲ 19ನೇ ವಯಸ್ಸಿಗೆ ಹೀರೋಯಿನ್ ಆಗಿ ಮಿಂಚಿದ ಭೂಮಿಕಾ ರಮೇಶ್ ಸದ್ಯ ವಿಶ್ವವಾಣಿ ಸ್ಪೆಷಲ್ ಯೂಟ್ಯೂಬ್ ಚಾನೆಲ್ನ ವಿಶೇಷ ಸಂದರ್ಶನದಲ್ಲಿ ಕೆಲ ವಿಚಾರ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ನಾನು ಪರ್ಸನಲ್ ಮೊಬೈಲ್ ಅಂತ ಯೂಸ್ ಮಾಡೋದೇ ಇಲ್ಲ ಎಂದು ಹೇಳಿದ್ದಾರೆ. ನನ್ಗೆ ಬಾಯ್ ಫ್ರೆಂಡ್ ಮಾಡೋಕೆ ಟೈಮ್ ಸಿಗಲಿಲ್ಲ. ಚಿಕ್ಕ ವಯಸ್ಸಿಂದಲೂ ನನಗೆ ಪರ್ಸನಲ್ ಸ್ಪೇಸ್ ಎಂಬುದೇ ಇಲ್ಲ. ಚಿಕ್ಕ ವಯಸ್ಸಿನಲ್ಲಿ ಸ್ಕೂಲ್ ಇಂದ ಬಾ.. ಡ್ಯಾನ್ಸ್ ಕ್ಲಾಸ್ಗೆ ಹೋಗು.. ಜಿಮ್ನಾಸ್ಟಿಕ್ ಕ್ಲಾಸ್ಗೆ ಹೋಗು.. ಮನೆಗೆ ಬಾ.. ಮತ್ತೆ ಬೆಳಗ್ಗೆ ಎದ್ದು ಹೋಗು.. ಇದೇ ನನ್ನ ಡೈಲಿ ರೂಟಿನ್ ಆಗಿತ್ತು ಎಂದಿದ್ದಾರೆ.
ಕಾಲೇಜಲ್ಲಿ ಇರುವಾಗ ನನಗೆ ಲಿಟಲ್ ಮಿಸ್ ಮೊನಾಲಿಸ ಅವಾರ್ಡ್ ಸಿಕ್ಕಿತು. ಅದಕ್ಕಾಗಿ ನನಗೆ ಒರಿಸ್ಸಾಗೆ ಹೋಗಬೇಕಾಗಿದ್ದರಿಂದ ಅದರ ಟ್ರೈನಿಂಗ್ನಲ್ಲೇ ಬ್ಯುಸಿ ಇದ್ದೆ. ನಾನು ಹೀಗೆನೆ ಬ್ಯುಸಿಯಾದೆ.. ಬಾಯ್ ಫ್ರೆಂಡ್ ಬಗ್ಗೆಲ್ಲ ಗಮನವೇ ಹರಿಸಿಲ್ಲ.. ಆದ್ರೆ ಆಗುತ್ತೆ ಬಿಡು ಅಂತ ಇದ್ದೆ. ಪ್ರಮೋಸಲ್ಸ್ ತುಂಬಾ ಬಂದಿದೆ. ಆದ್ರೆ ನನ್ಗೆ ಡೈರೆಕ್ಟ್ ಆಗಿ ಹೇಳೋ ಧೈರ್ಯ ಯಾರೂ ಮಾಡಿಲ್ಲ. ಯಾಕಂದ್ರೆ ಎಲ್ಲರಿಗೂ ಒಂದು ಭಯ ಇತ್ತು.. ನನ್ನ ಅಪ್ಪ ಲಾಯರ್ ಅಂತ.. ಬೇಡಪ್ಪ ಇವಳತ್ರ ಹೋಗ್ಬಾರದು ಅಂತ ಕೆಲವರಿಗೆ ಇತ್ತು ಎಂದು ಹೇಳಿದ್ದಾರೆ.
ಇಂಡೈರೆಕ್ಟ್ ಆಗಿ ಫ್ರೆಂಡ್ಸ್ ಕಡೆಯಿಂದ ಎಲ್ಲ ಪ್ರಪೋಸಲ್ ಬರ್ತಾ ಇತ್ತು. ಆದ್ರೆ ನಾನು ಅದಕ್ಕೆಲ್ಲ ಗಮನ ಕೊಡ್ತಾ ಇರಲಿಲ್ಲ. ಇವಾಗ ನನ್ಗೆ ಅದ್ರ ಬಗ್ಗೆ ಯೋಚನೆ ಇಲ್ಲ.. ಸದ್ಯ ಲೈಫ್ನಲ್ಲಿ ನನ್ಗೆ ಏನಾದ್ರು ಸಾಧನೆ ಮಾಡಬೇಕು.. ನಾನು ಸೆಟಲ್ ಆಗಿದ್ದೀನಿ ಅಂತ ನನ್ಗೆ ಅನಿಸಬೇಕು ಆ ಬಳಿಕ ಇದೆಲ್ಲ ಎಂದು ನೇರವಾಗಿ ಹೇಳಿದ್ದಾರೆ.