ಕರ್ನಾಟಕ ಮಹಿಳಾ ಲೀಗ್ 2025–26ರ ಶೀರ್ಷಿಕೆ ಪ್ರಾಯೋಜಕರಾಗಿ ಬಿ ಎಲ್ ಕಶ್ಯಪ್
ಮಹಿಳಾ ಫುಟ್ಬಾಲ್ ಆಟಗಾರ್ತಿಯರಿಗೆ KWLನಲ್ಲಿ ಮೊದಲ ಬಾರಿಗೆ ವೈಯಕ್ತಿಕ ಪ್ರಶಸ್ತಿಗಳು ಮತ್ತು ಬಹುಮಾನದ ಹಣ ನೀಡಲಾಯಿತು. ಕಿಕ್‌ಸ್ಟಾರ್ಟ್ FC ಯ ಐಶ್ವರ್ಯ A ಅತ್ಯುತ್ತಮ ಗೋಲ್‌ಕೀಪರ್ ಎಂದು ಹೆಸರಿಸಲ್ಪಟ್ಟರೆ, ಕೆಂಪ್ FC ಯ ದುರ್ಗಾ P ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಪಡೆದರು. ಕಿಕ್‌ಸ್ಟಾರ್ಟ್ FC ಯ ಆರುಷಿ ಸಂತೋಷ್ ಅತ್ಯುತ್ತಮ ಮಿಡ್‌ಫೀಲ್ಡರ್ ಎಂದು ಗುರುತಿಸ ಲ್ಪಟ್ಟರು ಮತ್ತು ಕಿಕ್‌ಸ್ಟಾರ್ಟ್ FC ಯ ಕಾಜೋಲ್ ಡಿಸೋಜಾ KWL 2025-26 ಋತುವಿನ ಟಾಪ್ ಗೋಲ್ ಸ್ಕೋರರ್ ಪ್ರಶಸ್ತಿಯನ್ನು ಪಡೆದರು.


ಬೆಂಗಳೂರು: ಕೌಶಲ್ಯ ಮತ್ತು ಚಾಂಪಿಯನ್‌ಗಳ ಚೈತನ್ಯದ ಪ್ರದರ್ಶನದೊಂದಿಗೆ ಕರ್ನಾಟಕ ಮಹಿಳಾ ಲೀಗ್ (KWL) 2025–26 ಮುಕ್ತಾಯವಾಯಿತು. ಬಿ ಎಲ್ ಕಶ್ಯಪ್ & ಸನ್ಸ್ ಲಿಮಿಟೆಡ್ (BLK) ಶೀರ್ಷಿಕೆ ಪ್ರಾಯೋಜಕ ರಾಗಿದ್ದರು. ಪ್ರಸಕ್ತ ವರ್ಷವು ಕರ್ನಾಟಕದಲ್ಲಿ ಮಹಿಳಾ ಫುಟ್‌ಬಾಲ್‌ನ ಆರಂಭಕ್ಕೆ ನಾಂದಿ ಹಾಡಿದ್ದಲ್ಲದೇ ಹೊಸ ಪೀಳಿಗೆಯ ಕ್ರೀಡಾಪಟುಗಳು ತಮ್ಮ ಕ್ರೀಡಾ ಕನಸು ಗಳನ್ನು ಮುಂದುವರಿಸಲು ಸ್ಫೂರ್ತಿ ನೀಡಿತು.
ಈ ಹಿಂದೆ IWL ವಿಜೇತರಾಗಿದ್ದ ಕಿಕ್‌ಸ್ಟಾರ್ಟ್ FC 7 ನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು, ಮಿಸಾಕಾ ಯುನೈಟೆಡ್ FC ರನ್ನರ್-ಅಪ್ ಆಗಿ ಸ್ಥಾನ ಪಡೆಯಿತು ಮತ್ತು B L ಕಶ್ಯಪ್ ಪ್ರಾಯೋಜಕ ರಾಗಿ IWL2 ಅನ್ನು ಆಡಿದ ಮತ್ತು ಆಯೋಜಿಸಿದ್ದ ರೂಟ್ಸ್ FC ಫೇರ್ ಪ್ಲೇ ಪ್ರಶಸ್ತಿ ಗಳಿಸಿತು.
ಎಐಎಫ್‌ಎಫ್ ಅಧ್ಯಕ್ಷ ಶ್ರೀ ಕಲ್ಯಾಣ್ ಚೌಬೆ; ಶಾಸಕ ಶಾಂತಿನಗರ ಕ್ಷೇತ್ರದ ಶಾಸಕ, ಎಐಎಫ್‌ಎಫ್ ಉಪಾಧ್ಯಕ್ಷ ಮತ್ತು ಕೆಎಸ್‌ಎಫ್‌ಎ ಅಧ್ಯಕ್ಷ ಶ್ರೀ ಎನ್ ಎ ಹ್ಯಾರಿಸ್; ಎಐಎಫ್‌ಎಫ್ ಉಪ ಪ್ರಧಾನ ಕಾರ್ಯದರ್ಶಿ ಶ್ರೀ ಎಂ ಸತ್ಯನಾರಾಯಣ್ ಮತ್ತು ಕೆಎಸ್‌ಎಫ್‌ಎ ಉಪಾಧ್ಯಕ್ಷ ಶ್ರೀ ಶಕೀಲ್ ರಹಿಮಾನ್ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದನ್ನೂ ಓದಿ: Ravi Ra Kangala Column: ನಮ್ಮ ಈ ಗಣೇಶ ಸಂಘಟನಾ ಶಕ್ತಿಯ ಪ್ರತೀಕ
ಕೆಡಬ್ಲ್ಯೂಎಲ್ 2025–26 ರ ಶೀರ್ಷಿಕೆ ಪ್ರಾಯೋಜಕಿ ಬಿ ಎಲ್ ಕಶ್ಯಪ್ & ಸನ್ಸ್ ಲಿಮಿಟೆಡ್‌ನ ಯೋಜನೆಗಳು ಮತ್ತು ಕಾರ್ಯತಂತ್ರದ ನಿರ್ದೇಶಕಿ ಶ್ರೀಮತಿ ಶ್ರುತಿ ಕಶ್ಯಪ್ ಚೌಧರಿ, ಕೆಎಸ್‌ಎಫ್‌ಎ, ಬಿಡಿಎಫ್‌ಎ ಮತ್ತು ರೆಫರಿಗಳ ಸಮಿತಿಯ ಪ್ರತಿನಿಧಿಗಳು ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀಮತಿ ಶ್ರುತಿ ಕೆ. ಚೌಧರಿ ಮಾತನಾಡಿ, "ಪ್ರಾಯೋಜಕರಾಗಿ, ಬಿ ಎಲ್ ಕಶ್ಯಪ್ ಅವರು ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಮಹಿಳೆಯರು ಶ್ರೇಷ್ಠತೆ ಸಾಧಿಸಲು ಸಮಾನ ಅವಕಾಶ ಗಳ ನಮ್ಮ ಬದ್ಧತೆಯನ್ನು ಪುನರುಚ್ಚರಿಸುವ ವೇದಿಕೆ ಬೆಂಬಲಿಸಲು ಹೆಮ್ಮೆಪಡುತ್ತಾರೆ. ಬಿ ಎಲ್ ಕೆ ನಲ್ಲಿ, ನಾವು ಹೆಚ್ಚಿನದನ್ನು ನಿರ್ಮಿಸುವೆ ಎಂಬುದನ್ನು ನಂಬುತ್ತೇವೆ. ಅವಕಾಶಗಳು, ಸಮಾನತೆ ಮತ್ತು ಬಲವಾದ ಭವಿಷ್ಯ ನಿರ್ಮಿಸುತ್ತೇವೆ." ಎಂದು ಹೇಳಿದರು.
ಈ ಕ್ಷಣದ ಮೈಲಿಗಲ್ಲಾಗಿ, ಮಹಿಳಾ ಫುಟ್ಬಾಲ್ ಆಟಗಾರ್ತಿಯರಿಗೆ KWLನಲ್ಲಿ ಮೊದಲ ಬಾರಿಗೆ ವೈಯಕ್ತಿಕ ಪ್ರಶಸ್ತಿಗಳು ಮತ್ತು ಬಹುಮಾನದ ಹಣ ನೀಡಲಾಯಿತು. ಕಿಕ್‌ಸ್ಟಾರ್ಟ್ FC ಯ ಐಶ್ವರ್ಯ A ಅತ್ಯುತ್ತಮ ಗೋಲ್‌ಕೀಪರ್ ಎಂದು ಹೆಸರಿಸಲ್ಪಟ್ಟರೆ, ಕೆಂಪ್ FC ಯ ದುರ್ಗಾ P ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಪಡೆದರು. ಕಿಕ್‌ಸ್ಟಾರ್ಟ್ FC ಯ ಆರುಷಿ ಸಂತೋಷ್ ಅತ್ಯುತ್ತಮ ಮಿಡ್‌ಫೀಲ್ಡರ್ ಎಂದು ಗುರುತಿಸ ಲ್ಪಟ್ಟರು ಮತ್ತು ಕಿಕ್‌ಸ್ಟಾರ್ಟ್ FC ಯ ಕಾಜೋಲ್ ಡಿಸೋಜಾ KWL 2025-26 ಋತುವಿನ ಟಾಪ್ ಗೋಲ್ ಸ್ಕೋರರ್ ಪ್ರಶಸ್ತಿಯನ್ನು ಪಡೆದರು. ಪ್ರತಿಷ್ಠಿತ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಗೌರವವು ಮಿಸಾಕಾ ಯುನೈಟೆಡ್ FC ಯ ಸ್ಯಾನ್ಫಿಡಾ ನೊಂಗ್ರಮ್ ಅವರಿಗೆ ಸಲ್ಲುತ್ತದೆ.
ಸಿಎಸ್‌ಆರ್ ಉಪಕ್ರಮಗಳ ಮೂಲಕ, ಮಹಿಳಾ ಫುಟ್‌ಬಾಲ್‌ಗೆ ಸಬಲೀಕರಣ ನೀಡುವುದನ್ನು ಬಿ.ಎಲ್.ಕೆ ಮುಂದುವರೆಸಿದೆ. ವೈವಿಧ್ಯಮಯ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಅರ್ಹವಾದ ವೇದಿಕೆಯನ್ನು ಬಿ.ಎಲ್.ಕೆ ಒದಗಿಸುತ್ತದೆ. ಕರ್ನಾಟಕದ ಪ್ರಮುಖ ಮಹಿಳಾ ಲೀಗ್‌ಗೆ ಕ್ರೀಡೆಯ ಮೂಲಕ ವೈವಿಧ್ಯತೆ, ಸಮಾನತೆ ಮತ್ತು ಪ್ರಗತಿಯನ್ನು ಬೆಳೆಸುವ ಕಂಪನಿಯ ನಿರಂತರ ಬೆಂಬಲವು ಅದರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.