ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro: ನಮ್ಮ ಮೆಟ್ರೋ ಆರೆಂಜ್‌ ಲೈನ್‌​ಗಾಗಿ 6500 ಮರ ಕಡಿಯಲು ಮುಂದಾದ ಬಿಎಂಆರ್‌ಸಿಎಲ್‌

Orange Line: ಮೆಟ್ರೋ ಮೂರನೇ ಹಂತವು ಒಟ್ಟು 44.65 ಕಿ.ಮೀ ಉದ್ದವಿರುವ ಎರಡು ಮೆಟ್ರೋ ಮಾರ್ಗಗಳನ್ನು ಹೊಂದಿರಲಿದೆ. 15,611 ಕೋಟಿ ರೂ. ವೆಚ್ಚದಲ್ಲಿ ಎರಡು ಮಾರ್ಗಗಳ ಕಾಮಗಾರಿ ನಡೆಯಲಿದೆ. ಮರಗಳನ್ನು ಕಡಿಯುವ ಬಗ್ಗೆ ಪರಿಸರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋ ಆರೆಂಜ್‌ ಲೈನ್‌​ಗೆ 6500 ಮರ ಕಡಿಯಲು ಮುಂದಾದ ಬಿಎಂಆರ್‌ಸಿಎಲ್‌

ಹರೀಶ್‌ ಕೇರ ಹರೀಶ್‌ ಕೇರ Aug 19, 2025 7:56 AM

ಬೆಂಗಳೂರು: ಮತ್ತೆ ನಗರದಲ್ಲಿರುವ ಸಾವಿರಾರು ಮರಗಳನ್ನು ಕಡಿಯಲು ಬಿಎಂಆರ್​​ಸಿಎಲ್ (BMRCL) ಮುಂದಾಗಿದೆ. ನಮ್ಮ ಮೆಟ್ರೋ (Namma Metro) ಮೂರನೇ ಹಂತದ (Metro Phase 3) ಯೋಜನೆಗಾಗಿ ಬರೋಬ್ಬರಿ 6500 ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ತಿರ್ಮಾನ ಮಾಡಲಾಗಿದೆ. 1ನೇ ಕಾರಿಡಾರ್​​ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿಲೋ ಮೀಟರ್​ ಮಾರ್ಗದಲ್ಲಿ 21 ನಿಲ್ದಾಣಗಳು ಇರಲಿವೆ. 2ನೇ ಕಾರಿಡಾರ್​​ ಹೊಸಹಳ್ಳಿಯಿಂದ ಕಡಬಗೆರೆಯ ವರೆಗೂ ಇರಲಿದ್ದು, 12.50 ಕಿಲೋ ಮೀಟರ್ ಇರಲಿದೆ. ಇದರಲ್ಲಿ 9 ನಿಲ್ದಾಣಗಳು ಇರಲಿವೆ.

ಮೆಟ್ರೋ ಮೂರನೇ ಹಂತವು ಒಟ್ಟು 44.65 ಕಿ.ಮೀ ಉದ್ದವಿರುವ ಎರಡು ಮೆಟ್ರೋ ಮಾರ್ಗಗಳನ್ನು ಹೊಂದಿರಲಿದೆ. 15,611 ಕೋಟಿ ರೂ. ವೆಚ್ಚದಲ್ಲಿ ಎರಡು ಮಾರ್ಗಗಳ ಕಾಮಗಾರಿ ನಡೆಯಲಿದೆ. ಮರಗಳನ್ನು ಕಡಿಯುವ ಬಗ್ಗೆ ಪರಿಸರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಮ್ಮ ಮೆಟ್ರೋ ಅಧಿಕಾರಿಗಳು ಪರಿಸರ ಹೋರಾಟಗಾರರ ಸಭೆ ಕರೆದು ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ನೂರಾರು ಹೋರಾಟಗಾರರು ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

11 ಸಾವಿರ ಮರಗಳಿಗೆ ಕೊಡಲಿಗೆ ಸಿದ್ಧತೆ ಮಾಡಿದ್ದ ಬಿಎಂಆರ್​ಸಿಎಲ್

ಈ ಹಿಂದೆ ಕಿತ್ತಳೆ ಮಾರ್ಗದ ಕಾಮಗಾರಿಗಾಗಿ 11 ಸಾವಿರ ಮರಗಳನ್ನು ಕಡಿಯಲು ಸಿದ್ಧತೆ ಮಾಡಿಕೊಂಡಿದ್ದ ಬಿಎಂಆರ್​​ಸಿಎಲ್, ಪರಿಸರ ಹೋರಾಟಗಾರರಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣ ಸಂಖ್ಯೆ ಕಡಿತಗೊಳಿಸಿತ್ತು. ಇದೀಗ 6500 ಮರಗಳನ್ನು ಕಡಿಯಲು ತೀರ್ಮಾನ ಮಾಡಲಾಗಿದೆ. ನಗರದಲ್ಲಿ ಈಗಲೇ ಜನರಿಗೆ ಉಸಿರಾಡಲು ಶುದ್ಧವಾದ ಗಾಳಿ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಮತ್ತೆ ಮತ್ತೆ ಮರಗಳನ್ನು ನಾಶ ಮಾಡುತ್ತಾ ಹೋದರೆ, ಬೆಂಗಳೂರು ಮತ್ತೊಂದು ದೆಹಲಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tejaswi Surya: ಹಳದಿ ಮೆಟ್ರೋದಲ್ಲಿ ಪ್ರಯಾಣಿಸಿದ ತೇಜಸ್ವಿ ಸೂರ್ಯ, ಫಸ್ಟ್‌ ಡೇ ಫಸ್ಟ್‌ ಶೋ ಹೌಸ್‌ಫುಲ್‌ ಎಂದ ಸಂಸದ