ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bomb Threat: 24 ಗಂಟೆಯೊಳಗೆ ಭಟ್ಕಳ ಪಟ್ಟಣ ಸ್ಫೋಟಿಸುತ್ತೇವೆ: ಪೊಲೀಸ್‌ ಠಾಣೆಗೆ ಬಾಂಬ್‌ ಬೆದರಿಕೆ ಸಂದೇಶ

Bomb Threat: ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬಾಂಬ್‌ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್‌ ಆಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ.

24 ಗಂಟೆಯೊಳಗೆ ಭಟ್ಕಳ ಪಟ್ಟಣ ಸ್ಫೋಟಿಸುತ್ತೇವೆ: ಬಾಂಬ್‌ ಬೆದರಿಕೆ ಸಂದೇಶ

Profile Prabhakara R Jul 11, 2025 4:10 PM

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣವನ್ನು 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಬಾಂಬ್‌ ಬೆದರಿಕೆ (Bomb Threat) ಸಂದೇಶ ಕಳುಹಿಸಿರುವುದು ಕಂಡು ಬಂದಿದೆ. ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಭಟ್ಕಳ ಶಹರ ಠಾಣೆಗೆ ಬಾಂಬ್‌ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್‌ ಆಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿದೆ.

ಜು.10 ರ ಬೆಳಗ್ಗೆ 7:22 ಕ್ಕೆ ಎರಡು ಬಾರಿ ಇ-ಮೇಲ್ ಸಂದೇಶ ಕಳುಹಿಸಲಾಗಿದೆ. kannnannandik@gmail.com ನಿಂದ bhatkaltownkwr@ksp.gov.in ಭಟ್ಕಳ ಶಹರ ಠಾಣೆಯ ಮೇಲ್‌ ಐಡಿಗೆ ಸಂದೇಶ ರವಾನಿಸಲಾಗಿದೆ. ಇ-ಮೇಲ್ ಸಂದೇಶದಲ್ಲಿ ‘ವಿ ವಿಲ್ ಪ್ಲಾಂಟ್ ಬಾಂಬ್ ಇನ್ ಭಟ್ಕಳ ಟೌನ್’ ಎಂದು ಸಂದೇಶ ಕಳುಹಿಸಲಾಗಿದ್ದು, ನಂತರ ‘ಆಲ್ ದ ಬಾಂಬ್ ವಿಲ್ ಬ್ಲಾಸ್ಟ್ ಇನ್ 24 ಅವರ್ಸ್’ ಎಂದು ಸಂದೇಶ ಕಳುಹಿಸಲಾಗಿದೆ. ಈ ಕುರಿತು ಭಟ್ಕಳ ಶಹರ ಠಾಣೆಯ ಪಿಎಸ್‌ಐ ನವೀನ್ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಇಂದು ಮುಂಜಾಗ್ರತಾ ಕ್ರಮವಾಗಿ ಭಟ್ಕಳ ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಶ್ವಾನ ದಳ ಹಾಗೂ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಯಿತು. ಇದಲ್ಲದೇ, ಡ್ರೋನ್ ಕ್ಯಾಮೆರಾ ಮೂಲಕವೂ ಕಣ್ಗಾವಲಿಟ್ಟು ತಪಾಸಣೆ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಭಟ್ಕಳ ನಗರ ಸ್ಫೋಟಿಸುವ ಸಂದೇಶ ಬಂದಿದ್ದು, ಪೊಲೀಸರು ಅಲರ್ಟ್‌ ಆಗಿದ್ದು, ತಪಾಸಣೆ ಕೈಗೊಂಡಿದ್ದಾರೆ.

ಮಾಂಸಕ್ಕಾಗಿ ಗಬ್ಬದ ಹಸು ಕದ್ದು ಕಡಿದ ಅಸ್ಸಾಮಿ ಕಾರ್ಮಿಕರ ಬಂಧನ

ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಂದು ರಾಕ್ಷಸಿ ಕೃತ್ಯ ನಡೆದಿದೆ. ಚಿಕ್ಕಮಗಳೂರಿನಲ್ಲಿ (Chikkamagaluru news) ಮಾಂಸಕ್ಕಾಗಿ ಗಬ್ಬದ ಹಸುವೊಂದನ್ನು ಕದ್ದೊಯ್ದು ಕಡಿದಿರುವ (cow slaughter) ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಎಸ್ಟೇಟ್ ಒಂದರಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಮಾಂಸಕ್ಕಾಗಿ ಗಬ್ಬದ ಹಸುವನ್ನು ಕಡಿದಿದ್ದು, ಮಾಂಸವನ್ನು ಬಳಸಿಕೊಂಡಿದ್ದಾರೆ, ಬಳಿಕ ಅಂಗಾಂಗಗಳನ್ನು ಮಣ್ಣಿನಲ್ಲಿ ಹೂಳಲು ಯತ್ನಿಸಿದ್ದಾರೆ. ಈ ವೇಲೆ ಕೃತ್ಯ ಬಯಲಿಗೆ ಬಂದಿದ್ದು, ಕೃತ್ಯ ಎಸಗಿದ ಎಲ್ಲ ಕೂಲಿ ಕಾರ್ಮಿಕರನ್ನು ಬಂಧಿಸಲಾಗಿದೆ.

ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ನಿಡುವಾಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಕಲ್ ಎಸ್ಟೇಟ್‌ನಲ್ಲಿ ಘಟನೆ ನಡೆದಿದೆ. ಮಾಂಸಕ್ಕಾಗಿ ಗಬ್ಬದ ಹಸುವನ್ನೇ ಅಮಾನವೀಯವಾಗಿ ಕೊಂದಿರುವ 6 ಅಸ್ಸಾಂ ಮೂಲದ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಹಾಗೂ ಬಿಹಾರ ಮೂಲದ ಕಾರ್ಮಿಕರು ಚಿಕ್ಕಮಗಳೂರು ಹಾಗೂ ಕೊಡಗಿನ ಕಾಫಿ- ಟೀ ಎಸ್ಟೇಟ್‌ಗಳಲ್ಲಿ ತುಂಬಿಕೊಂಡಿದ್ದು, ಇವರ ನಡುವೆ ಅಪರಾಧ ಪ್ರಕರಣಗಳು ಹೆಚ್ಚು ಹೆಚ್ಚು ನಡೆಯುತ್ತಿರುವುದು ವರದಿಯಾಗಿದೆ. ಸ್ಥಳೀಯ ಜನಸಮುದಾಯಕ್ಕೂ ಇವರು ಈ ಮೂಲಕ ಆತಂಕ ತಂದೊಡ್ಡುತ್ತಿದ್ದಾರೆ ಎಂದೂ ಆರೋಪಿಸಲಾಗಿದೆ.