Viral Video: ಕೋಚಿಂಗ್ ಸೆಂಟರ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯನ್ನು ರಕ್ಷಿಸಿದ ಶಿಕ್ಷಕರು; ವಿಡಿಯೊ ಇಲ್ಲಿದೆ
19 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಲು ಮುಂದಾದ ಘಟನೆ ಜೈಪುರದಲ್ಲಿ ನಡೆದಿದೆ. ನೀಟ್ ಆಕಾಂಕ್ಷಿ ವಿದ್ಯಾರ್ಥಿನಿಯೊಬ್ಬಳು ತಾನು ಕೋಚಿಂಗ್ ಪಡೆಯುತ್ತಿದ್ದ ಮೂರು ಅಂತಸ್ತಿನ ಟೆರೇಸ್‌ನಿಂದ ಜಿಗಿಯಲು ಪ್ರಯತ್ನಿಸಿದ್ದಾಳೆ. ಆಕೆಯನ್ನು ಶಿಕ್ಷಕರು ರಕ್ಷಿಸಿದ್ದ ವಿಡಿಯೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

NEET Student In Jaipur Tries To Jump From Coaching Terrace -

ಜೈಪುರ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉತ್ತಮ ಉದ್ಯೋಗ ಪಡೆಯಬೇಕು ಎಂಬುದು ಅನೇಕರ ಅಭಿಲಾಶೆ. ಹೀಗಾಗಿ ನೆಟ್, ಸ್ಲೆಟ್, ಎಫ್‌ಡಿಎ, ಎಸ್‌ಡಿಎ ಹೀಗೆ ನಾನಾ ಥರದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾರೆ. ಫಲಿತಾಂಶದಲ್ಲಿ ಅನುತ್ತೀರ್ಣರಾದಾಗ ಕೆಲವರು ಹತಾಶೆಗೊಳಗಾದರೆ ಇನ್ನು ಕೆಲವು ಆಕಾಂಕ್ಷಿಗಳು ಆತ್ಮಹತ್ಯೆಯಂತಹ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಅಂತೆಯೇ 19 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಲು ಮುಂದಾದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ತಾನು ಕೋಚಿಂಗ್ ಪಡೆಯುತ್ತಿದ್ದ ಮೂರು ಅಂತಸ್ತಿನ ಕೋಚಿಂಗ್ ಸಂಸ್ಥೆಯ ಟೆರೇಸ್‌ನಿಂದ ಜಿಗಿಯಲು ಪ್ರಯತ್ನಿಸಿ ದ್ದಾಳೆ. ಆಕೆಯನ್ನು ಶಿಕ್ಷಕರು ರಕ್ಷಿಸಿದ್ದ ವಿಡಿಯೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಆಕೆಯನ್ನು ರಕ್ಷಿಸಿದ್ದ ಶಿಕ್ಷಕರ ಈ ಕಾರ್ಯವು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ.
ಆತ್ಮಹತ್ಯೆ ಪ್ರಕರಣವು ಕಳೆದ ಎರಡು-ಮೂರು ವರ್ಷಗಳಲ್ಲಿ ಹೆಚ್ಚಾಗುತ್ತಿರುವುದಕ್ಕೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಜೈಪುರದಲ್ಲಿ ಚುರುವಿನ 19 ವರ್ಷದ ವಿದ್ಯಾರ್ಥಿನಿ ಗೋಪಾಲಪುರದ ಗುರು ಕೃಪಾ ಕೋಚಿಂಗ್‌ನಲ್ಲಿ ನೀಟ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಳು ಎಂಬುದು ತಿಳಿದು ಬಂದಿದೆ. ನೀಟ್ ಆಕಾಂಕ್ಷಿಯಾಗಿದ್ದ ಆಕೆಯು ತನ್ನ ಕನಸು ಈಡೇರಲಿಲ್ಲ ಎಂಬ ಕಾರಣಕ್ಕೆ ಕೋಚಿಂಗ್ ಸಂಸ್ಥೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಬಳಿಕ ಶಿಕ್ಷಕರು ಆಕೆಯನ್ನು ರಕ್ಷಿಸಿದ್ದಾರೆ.
जयपुर के गोपालपुरा में NEET की छात्रा ने कोचिंग की बिल्डिंग से कूदकर आत्महत्या की कोशिश की, लेकिन स्टाफ की सतर्कता से समय रहते बचा लिया गया...
— य से यशस्वनी 🌸 (@YashaswaniShar3) August 30, 2025
#Jaipur pic.twitter.com/WdEyJOsJIW
ಆಗಸ್ಟ್ 29ರಂದು ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿನಿಯು ಮನನೊಂದು ಟೆರೇಸ್ ಗೋಡೆಯನ್ನು ಹತ್ತಿ ಅಲ್ಲಿಂದ ಜಿಗಿಯಲು ಪ್ರಯತ್ನಿಸಿದ್ದಾಳೆ. ಶಿಕ್ಷಕರು ಮತ್ತು ಇತರರು ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಕಟ್ಟಡದ ಕೆಳಗೆ ಸುಮಾರು ಜನರು ನಿಂತಿದ್ದ ಕಾರಣ ಆಕೆ ಕೆಳಗೆ ನೋಡುತ್ತಿದ್ದ ವೇಳೆ ಶಿಕ್ಷಕರೊಬ್ಬರು ಅವಳನ್ನು ಹಿಂದಿನಿಂದ ಹಿಡಿದು ಸುರಕ್ಷಿತವಾಗಿ ಹಿಂದಕ್ಕೆ ಎಳೆಯುವ ಮೂಲಕ ಆಕೆಯನ್ನು ರಕ್ಷಿಸಿದ್ದಾರೆ. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು. ಸದ್ಯ ಈ ಕುರಿತು ಮಹೇಶ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ:Viral Video: ಟಿಕೆಟ್ ವಿಚಾರದಲ್ಲಿ ಗಲಾಟೆ; ಪರಭಾಷಿಕನಿಗೆ ಕಪಾಳ ಮೋಕ್ಷ ಮಾಡಿದ ಬೆಂಗಳೂರಿನ ಬಸ್ ಕಂಡಕ್ಟರ್
ವಿದ್ಯಾರ್ಥಿನಿ ಕೋಚಿಂಗ್ ಪರೀಕ್ಷೆಗಳಲ್ಲಿ ಸತತವಾಗಿ ಫೇಲ್ ಆಗಿದ್ದಳು. ಆ. 29ರಂದು ಆಕೆಯ ಮನೆಯವರು ಸಂಸ್ಥೆಗೆ ಭೇಟಿ ನೀಡಿದ್ದು ಆಕೆ ಬಗ್ಗೆ ಕೋಚಿಂಗ್ ಸೆಂಟರ್‌ನಲ್ಲಿ ವಿಚಾರಿಸಿದ್ದಾರೆ. ಅವಳು ಪರೀಕ್ಷೆಯಲ್ಲಿ ಫೇಲ್ ಆದ ವಿಚಾರಕ್ಕೂ ಅಲ್ಲಿ ಮಾತುಕತೆ ನಡೆದಿದ್ದು, ಇದರಿಂದಾಗಿ ವಿದ್ಯಾರ್ಥಿನಿ ಮಾನಸಿಕ ಒತ್ತಡವನ್ನು ಅನುಭವಿಸಿದ್ದಾಳೆ. ತನ್ನಿಂದ ಈ ಪರೀಕ್ಷೆ ಎದುರಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದಳು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.