ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs NZ: ಡ್ಯಾರಿಲ್‌-ಬ್ರೆಸ್‌ವೆಲ್‌ ಫಿಫ್ಟಿ, ಭಾರತಕ್ಕೆ 252 ರನ್‌ ಸ್ಪರ್ಧಾತ್ಮಕ ಗುರಿ ನೀಡಿದ ಕಿವೀಸ್‌!

IND vs NZ Final match Innings Break: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಯುಇಎಯ ದುಬೈ ಇಂಟರ್‌ನ್ಯಾನಷಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ, ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 251 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 252 ರನ್‌ಗಳ ಗುರಿಯನ್ನು ನೀಡಿತು.

IND vs NZ: ಭಾರತ ತಂಡಕ್ಕೆ 252  ರನ್‌ಗಳ ಗುರಿಯನ್ನು ನೀಡಿದ ನ್ಯೂಜಿಲೆಂಡ್‌!

ನ್ಯೂಜಿಲೆಂಡ್‌ ತಂಡದ ಪರ ಡ್ಯಾರಿಲ್‌ ಮಿಚೆಲ್‌ ಅರ್ಧಶತಕವನ್ನು ಸಿಡಿಸಿ ಸಂಭ್ರಮಿಸಿದರು.

Profile Ramesh Kote Mar 9, 2025 6:36 PM

ದುಬೈ: ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ (Champions Trophy 2025 Final) ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ (IND vs NZ) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 251 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 252 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತು. ನ್ಯೂಜಿಲೆಂಡ್‌ ತಂಡದ ಪರ ಡ್ಯಾರಿಲ್‌ ಮಿಚೆಲ್‌ ಹಾಗೂ ಮೈಕಲ್‌ ಬ್ರೇಸ್‌ವೆಲ್‌ ತಲಾ ಅರ್ಧಶತಕಗಳನ್ನು ಸಿಡಿಸಿದರು.

ಈ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲೆಂಡ್‌ ತಂಡದ ನಾಯಕ ಮಿಚಲೆ ಸ್ಯಾಂಟ್ನರ್‌ ಅವರ ಯೋಜನೆ 8ನೇ ಓವರ್‌ವರೆಗೂ ಚೆನ್ನಾಗಿಯೇ ಇತ್ತು. ಓಪನರ್ಸ್‌ ವಿಲ್‌ ಯಂಗ್‌ (15) ಹಾಗೂ ರಚಿನ್‌ ರವೀಂದ್ರ ಮುರಿಯದ ಮೊದಲನೇ ವಿಕೆಟ್‌ಗೆ 57 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಕಿವೀಸ್‌ಗೆ ಭರ್ಜರಿ ಆರಂಭವನ್ನು ತಂದುಕೊಟ್ಟರು. ಈ ವೇಳೆ ಮೊಹಮ್ಮದ್‌ ಶಮಿ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ಅನ್ನು ಈ ಇಬ್ಬರೂ ಮೆಟ್ಟಿ ನಿಂತಿದ್ದರು.

IND vs NZ: ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯ ಕಳೆದುಕೊಂಡಿದ್ದಕ್ಕೆ ಕಣ್ಣೀರಿಟ್ಟ ಮ್ಯಾಟ್‌ ಹೆನ್ರಿ! ವಿಡಿಯೊ

ಭಾರತಕ್ಕೆ ಟರ್ನಿಂಗ್‌ ಪಾಯಿಂಟ್‌ ತಂದುಕೊಟ್ಟ ಕುಲ್ದೀಪ್‌

ಒಂದು ಹಂತದಲ್ಲಿ ಉತ್ತಮ ಆರಂಭ ಪಡೆದಿದ್ದ ನ್ಯೂಜಿಲೆಂಡ್‌ ತಂಡ, ದೊಡ್ಡ ಮೊತ್ತವನ್ನು ಕಲೆ ಹಾಕಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ. ವರುಣ್‌ ಚಕ್ರವರ್ತಿ ಎಂಟನೇ ಓವರ್‌ನಲ್ಲಿ ವಿಲ್‌ ಯಂಗ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು. ನಂತರ 11ನೇ ಓವರ್‌ನಲ್ಲಿ ಬಂದ ಕುಲ್ದೀಪ್‌ ಯಾದವ್‌ ತನ್ನ ಮೊದಲನೇ ಎಸೆತದಲ್ಲಿ 37 ರನ್‌ ಗಳಿಸಿ ಗಟ್ಟಿಯಾಗಿ ನಿಂತಿದ್ದ ರಚಿನ್‌ ರವೀಂದ್ರ ಅವರನ್ನು ತಮ್ಮ ಗೂಗ್ಲಿ ಮೂಲಕ ಬೌಲ್ಡ್‌ ಮಾಡಿದರು. ನಂತರ ತಮ್ಮ ಎರಡನೇ ಓವರ್‌ನಲ್ಲಿ ಅಪಾಯಕಾರಿ ಕೇನ್‌ ವಿಲಿಯಮ್ಸನ್‌ ಅವರನ್ನು ಪೆವಿಲಿಯನ್‌ ಹಾದಿ ತೋರಿಸಿದರು. ಆ ಮೂಲಕ 75 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.



ಡ್ಯಾರಿಲ್‌ ಮಿಚೆಲ್‌-ಮೈಕಲ್‌ ಅರ್ಧಶತಕ

14 ರನ್‌ ಗಳಿಸಿ ಆಡುತ್ತಿದ್ದ ಟಾಮ್‌ ಲೇಥಮ್‌ ಅವರನ್ನು ರವೀಂದ್ರ ಜಡೇಜಾ ಔಟ್‌ ಮಾಡಿದರು. ನಂತರ ಐದನೇ ವಿಕೆಟ್‌ಗೆ ಜೊತೆಯಾದ ಮೈಕಲ್‌ ಬ್ರೇಸ್‌ವೆಲ್‌ ಮತ್ತು ಡ್ಯಾರಿಲ್‌ ಮಿಚೆಲ್‌ ಸನ್ನಿವೇಶವನ್ನು ಅರಿತುಕೊಂಡು ತಾಳ್ಮೆಯ ಆಟವನ್ನು ಪ್ರದರ್ಶಿಸಿದರು. ಅದರಲ್ಲಿಯೂ ವಿಶೇಷವಾಗಿ ಡ್ಯಾರಿಲ್‌ ಮಿಚೆಲ್‌ 101 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 63 ರನ್‌ಗಳನ್ನು ಗಳಿಸಿ ಮೊಹಮ್ಮದ್‌ ಶಮಿ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಮಿಚೆಲ್‌ ವಿಕೆಟ್‌ ಒಪ್ಪಿಸಿದ ಬಳಿಕ ಕೊನೆಯವರೆಗೂ ಬ್ಯಾಟ್‌ ಮಾಡಿದ ಮೈಕಲ್‌ ಬ್ರೇಸ್‌ವೆಲ್‌, ಕೇವಲ 40 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ ಅಜೇಯ 53 ರನ್‌ಗಳನ್ನು ದಾಖಲಿಸಿದರು ಹಾಗೂ ಕಿವೀಸ್‌ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಇದಕ್ಕೂ ಮುನ್ನ ಇವರು 34 ರನ್‌ ಗಳಿಸಿ ಗ್ಲೆನ್‌ ಫಿಲಿಪ್ಸ್‌ ಜೊತೆ 53 ರನ್‌ಗಳ ಜೊತೆಯಾಟವನ್ನು ಆಡಿದರು.



ಭಾರತದ ಪರ ಮಿಂಚಿದ ಸ್ಪಿನ್ನರ್ಸ್‌

ಭಾರತ ತಂಡದ ಪರ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್‌ ಪಾಂಡ್ಯ ದುಬಾರಿಯಾದರು. ಆದರೆ, ಸ್ಪಿನ್ನರ್‌ಗಳು ಗಮನಾರ್ಹ ಪ್ರದರ್ಶನವನ್ನು ತೋರಿದರು. ವರುಣ್‌ ಚಕ್ರವರ್ತಿ 45 ರನ್‌ ನೀಡಿ 2 ವಿಕೆಟ್‌ ಕಿತ್ತರೆ, ಕುಲ್ದೀಪ್‌ ಯಾದವ್‌ 40 ರನ್‌ ನೀಡಿ ಎರಡು ವಿಕೆಟ್‌ ಪಡೆದರು. ಇನ್ನು ರವೀಂದ್ರ ಜಡೇಜಾ 10 ಓವರ್‌ಗಳಿಗೆ ಕೇವಲ 30 ರನ್‌ ನೀಡಿ 3 ವಿಕೆಟ್‌ ಪಡೆದರು.

ಸ್ಕೋರ್‌ ವಿವರ

ನ್ಯೂಜಿಲೆಂಡ್‌: 50 ಓವರ್‌ಗಳಿಗೆ 251-7 (ಡ್ಯಾರಿಲ್‌ ಮಿಚೆಲ್‌ 63, ಮೈಕಲ್‌ ಬ್ರೇಸ್‌ವೆಲ್‌ 53, ರಚಿನ್‌ ರವೀಂದ್ರ 37, ಗ್ಲೆನ್‌ ಫಿಲಿಪ್ಸ್‌ 34; ಕುಲ್ದೀಪ್‌ ಯಾದವ್‌ 40ಕ್ಕೆ 2, ವರುಣ್‌ ಚಕ್ರವರ್ತಿ45ಕ್ಕೆ 2)