Champions Trophy: 19000 ರನ್ ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ಕೇನ್ ವಿಲಿಯಮ್ಸನ್!
Kane Williamson fastest 19000: ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 19000 ರನ್‌ಗಳನ್ನು ಗಳಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಇವರು ಈ ಮೈಲುಗಲ್ಲು ತಲುಪಿದರು.

19000 ರನ್ ಪೂರ್ಣಗೊಳಿಸಿದ ಕೇನ್ ವಿಲಿಯಮ್ಸನ್.

ಲಾಹೋರ್: ದಕ್ಷಿಣ ಆಫ್ರಿಕಾ ವಿರುದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಶತಕವನ್ನು ಸಿಡಿಸಿದರು. ಆ ಮೂಲಕ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 19000 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ. ಬುಧವಾರದ ಪಂದ್ಯದಲಿ ಕಿವೀಸ್ ಇನಿಂಗ್ಸ್‌ನ 20ನೇ ಓವರ್‌ನಲ್ಲಿ ಮಾರ್ಕೊ ಯೆನ್ಸನ್ ಎಸೆತದಲ್ಲಿ ಸಿಂಗಲ್ ರನ್ ಪಡೆಯುವ ಮೂಲಕ ಇವರು ಈ ಸಾಧನೆಗೆ ಭಾಜನರಾದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ನಾಲ್ಕನೇ ಎನಿಸಿಕೊಂಡಿದ್ದಾರೆ. ಇವರು 19000 ರನ್‌ಗಳನ್ನು ಪೂರ್ಣಗೊಳಿಸಲು 440 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇವರು 399 ಇನಿಂಗ್ಸ್‌ಗಳಿಂದ 19000 ರನ್‌ಗಳನ್ನು ಪೂರ್ಣಗೊಳಿಸಿದ್ದರು. ಎರಡನೇ ಸ್ಥಾನದಲ್ಲಿ ಸಚಿನ್ ತೆಂಡೂಲ್ಕರ್ (432 ಇನಿಂಗ್ಸ್‌ಗಳು), ಮೂರನೇ ಸ್ಥಾನದಲ್ಲಿ (433 ಇನಿಂಗ್ಸ್‌ಗಳು) ಇದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೇರಬಲ್ಲ ಎರಡು ತಂಡಗಳನ್ನು ಆರಿಸಿದ ಮೈಕಲ್ ಕ್ಲಾರ್ಕ್!
ವಿಶ್ವದ 16ನೇ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 19000 ರನ್‌ಗಳನ್ನು ಗಳಿಸಿದ ವಿಶ್ವದ 16ನೇ ಆಟಗಾರ ಹಾಗೂ ನ್ಯೂಜಿಲೆಂಡ್ ತಂಡದ ಮೊದಲ ಆಟಗಾರ ಎಂಬ ಕೀರ್ತಿಗೆ ಕೇನ್ ವಿಲಿಯಮ್ಸನ್ ಭಾಜನರಾಗಿದ್ದಾರೆ. ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಅವರು ಆಡಿದ 94 ಎಸೆತಗಳಲ್ಲಿ 102 ರನ್ ಗಳಿಸಿ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ನ್ಯೂಜಿಲೆಂಡ್ ತಂಡ, 50 ಓವರ್‌ಗಳಿಗೆ 6 ವಿಕೆಟ್‌ಗೆ 362 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದರು.
ನ್ಯೂಜಿಲೆಂಡ್ ತಂಡಕ್ಕೆ ಪ್ರಮುಖ ಬ್ಯಾಟ್ಸ್‌ಮನ್ ಆಗಿರುವ ಕೇನ್ ವಿಲಿಯಮ್ಸನ್ 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇವರ 19000 ರನ್‌ಗಳಲ್ಲಿ 47 ಶತಕಗಳು ಹಾಗೂ 152 ಅರ್ಧಶತಕಗಳಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ 9276 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 33 ಶತಕಗಳು ಹಾಗೂ 37 ಅರ್ಧಶತಕಗಳನ್ನು ಒಳಗೊಂಡಿವೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 163 ಇನಿಂಗ್ಸ್‌ಗಳಿಂದ 7100 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 14 ಶತಕಗಳು ಮತ್ತು 47 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು 90 ಟಿ20ಐ ಇನಿಂಗ್ಸ್‌ಗಳಿಂದ 2575 ರನ್‌ಗಳನ್ನು ಸಿಡಿಸಿದ್ದಾರೆ.
All class 👌
— ICC (@ICC) March 5, 2025
Kane Williamson steps up with a 💯 as New Zealand keep adding the runs in Lahore 💥#ChampionsTrophy #SAvNZ ✍️: https://t.co/dGzPWxoavO pic.twitter.com/hGywiN5XSb
ವೇಗವಾಗಿ 19000 ರನ್ ಗಳಿಸಿದ ಬ್ಯಾಟರ್ಸ್
- ವಿರಾಟ್ ಕೊಹ್ಲಿ (ಭಾರತ) - 399 ಇನಿಂಗ್ಸ್
- ಸಚಿನ್ ತೆಂಡೂಲ್ಕರ್ (ಭಾರತ) - 432 ಇನಿಂಗ್ಸ್
- ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) - 433 ಇನಿಂಗ್ಸ್
- ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) - 440 ಇನಿಂಗ್ಸ್
- ಜೋ ರೂಟ್ (ಇಂಗ್ಲೆಂಡ್) - 444 ಇನಿಂಗ್ಸ್
- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 444 ಇನಿಂಗ್ಸ್
Successive 50s for Kane Williamson. His partnership with Rachin Ravindra has passed the century mark in Lahore. Watch play LIVE in NZ on @skysportnz 📺 LIVE scoring | https://t.co/jkQGB3JgSe 📲 #ChampionsTrophy #CricketNation pic.twitter.com/7edhLlKHWe
— BLACKCAPS (@BLACKCAPS) March 5, 2025
ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
- ಕೇನ್ ವಿಲಿಯಮ್ಸನ್ – 19,000*
- ರಾಸ್ ಟೇಲರ್ – 18,199
- ಸ್ಟೀಫನ್ ಫ್ಲೆಮಿಂಗ್ – 15,289
- ಬ್ರೆಂಡನ್ ಮೆಕಲಮ್ – 14,676
- ಮಾರ್ಟಿನ್ ಗುಪ್ಟಿಲ್ – 13,463