#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Champions Trophy ಗೆಲ್ಲಬೇಕೆಂದರೆ ಈ ಇಬ್ಬರೂ ಮಿಂಚಬೇಕೆಂದ ಮೊಹಮ್ಮದ್‌ ಕೈಫ್‌!

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲಬೇಕೆಂದರೆ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಮಿಂಚಬೇಕು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ವಿರಾಟ್‌ ಕೊಹ್ಲಿ-ರೋಹಿತ್‌ ಶರ್ಮಾ ಫಾರ್ಮ್‌ ಮುಖ್ಯ: ಮೊಹಮ್ಮದ್‌ ಕೈಫ್‌!

Virat Kohli, Rohit Sharma's form important for India to win in Dubai- Kaif

Profile Ramesh Kote Jan 22, 2025 4:51 PM

ನವದೆಹಲಿ: ಮುಂಬರುವ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ (Champions Trophy) ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್‌ ಆಗಬೇಕೆಂದರೆ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರ ಫಾರ್ಮ್‌ ತುಂಬಾ ಮುಖ್ಯವಾಗುತ್ತದೆ ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅವರ ವೈಫಲ್ಯವನ್ನು ನೀವು ಪರಿಗಣಿಸಬೇಡಿ, ಅವರು ಈ ಮಹತ್ವದ ಟೂರ್ನಿಯಲ್ಲಿ ಫಾರ್ಮ್‌ಗೆ ಕಮ್‌ಬ್ಯಾಕ್‌ ಮಾಡಲಿದ್ದಾರೆಂದು ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಮೊಹಮ್ಮದ್‌ ಕೈಫ್‌, ಭಾರತ ತಂಡದ ಏಕದಿನ ಕ್ರಿಕೆಟ್‌ ಯಶಸ್ಸಿನಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಯ ಕೊಡುಗೆ ಇದೆ. 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅವರು ತೋರಿದ್ದ ಪ್ರದರ್ಶನವೇ ಇದಕ್ಕೆ ಸಾಕ್ಷಿ. ಇದೀಗ ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿದ್ದರೂ ಈ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಮೊಹಮ್ಮದ್‌ ಕೈಫ್‌ ಬೆಂಬಲಿಸಿದ್ದಾರೆ. ಅನುಭವದ ಆಧಾರದ ಮೇಲೆ ಅವರು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

BCCI vs PCB: ನಾಯಕ ರೋಹಿತ್ ಪಾಕಿಸ್ತಾನ ಪ್ರಯಾಣಕ್ಕೂ ಬಿಸಿಸಿಐ ನಿರ್ಬಂಧ!

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಕೈಫ್‌ ಬೆಂಬಲ

"ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅಗತ್ಯವಿದೆ. ಇವರಲ್ಲಿ ಒಬ್ಬರಿಗೆ 37 ವರ್ಷ ವಯಸ್ಸು ಹಾಗೂ ಇನ್ನೊಬ್ಬರಿಗೆ 36 ವರ್ಷ ವಯಸ್ಸು. ಅವರು ದೀರ್ಘಾವಧಿ ಕ್ರಿಕೆಟ್‌ ಆಡುವುದಿಲ್ಲ. ಅವರು ಯಾವುದೇ ಸ್ವರೂಪದಲ್ಲಿ ಆಡಿದರೂ ಅವರಿಗೆ ನಾವು ಬೆಂಬಲ ವ್ಯಕ್ತಪಡಿಸಬೇಕಾಗಿದೆ. ಏಕೆಂದರೆ ಅವರು ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಶ್ರೇಷ್ಠ ಆಟಗಾರರಾಗಿದ್ದಾರೆ," ಎಂದು ಮೊಹಮ್ಮದ್‌ ಕೈಫ್‌ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

"ಅವರು ಕೊಡುಗೆಯನ್ನು ನೀಡುತ್ತಾರೆ. ದುಬೈನಲ್ಲಿ ನಾವು ಪಂದ್ಯಗಳನ್ನು ಗೆಲ್ಲಬೇಕೆಂದರೆ, ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಬೇಕಾಗುತ್ತದೆ. ಆರಂಭದಲ್ಲಿ ರೋಹಿತ್‌ ಶರ್ಮಾ ಸ್ಪೋಟಕ ಬ್ಯಾಟಿಂಗ್‌ ಮೂಲಕ ಭರ್ಜರಿ ಆರಂಭ ತಂದುಕೊಟ್ಟರೆ, ವಿರಾಟ್‌ ಕೊಹ್ಲಿ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ರನ್‌ಗಳನ್ನು ಗಳಿಸುತ್ತಾರೆ. ಹಾಗಾಗಿ ಅವರಿಗೆ ನೀವು ಪ್ರೀತಿಯನ್ನು ನೀಡುವುದು ಅಗತ್ಯವಿದೆ," ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.



ಆಸ್ಟ್ರೇಲಿಯಾದಲ್ಲಿ ಎಡವಿದ್ದ ವಿರಾಟ್‌ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ ಹೊರತಾಗಿಯೂ ವಿರಾಟ್‌ ಕೊಹ್ಲಿ ಇನ್ನುಳಿದ ಪಂದ್ಯದಳಲ್ಲಿ ತಮ್ಮ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದರು. ಆಡಿದ್ದ 5 ಟೆಸ್ಟ್‌ ಪಂದ್ಯಗಳಿಂದ ವಿರಾಟ್‌ ಕೊಹ್ಲಿ 195 ರನ್‌ ಗಳಿಗೆ ಸೀಮಿತರಾಗಿದ್ದರು. 10 ಬಾರಿ ವಿಕೆಟ್‌ ಒಪ್ಪಿಸಿದ ಪೈಕಿ ಎಂಟು ಬಾರಿ ಆಫ್‌ ಸ್ಟಂಪ್‌ ಹೊರಗಡೆ ಎಸೆತಗಳನ್ನು ಆಡಲು ಹೋಗಿ ವಿಕೆಟ್‌ ಕೀಪರ್‌ ಹಾಗೂ ಸ್ಲಿಪ್‌ನಲ್ಲಿ ಕ್ಯಾಚ್‌ ಅನ್ನು ಕೊಟ್ಟಿದ್ದರು.

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿನ ವಿರಾಟ್‌ ಕೊಹ್ಲಿಯ ಪ್ರದರ್ಶನದ ಆಧಾರದ ಮೇಲೆ ಅವರ ಕಮ್‌ಬ್ಯಾಕ್‌ ಅನ್ನು ನಾವು ನಿರ್ಧರಿಸಬಹುದು. ಕಳೆದ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಆಡಿದ್ದ 11 ಪಂದ್ಯಗಳಿಂದ 95.62ರ ಸರಾಸರಿಯಲ್ಲಿ 765 ರನ್‌ಗಳನ್ನು ಕಲೆ ಹಾಕಿದ್ದರು.