ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಮಾಜಿ ಶಾಸಕ ಎನ್.ಸಂಪಂಗಿರವರ ಹೆಸರನ್ನು ಚಿತ್ರಾವತಿ ಜಲಾಶಯಕ್ಕೆ ನಾಮಕರಣ ಮಾಡಬೇಕು : ಬಿ.ನಾರಾಯಣಸ್ವಾಮಿ ಒತ್ತಾಯ

ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳಾದ ಆರ್.ಎಲ್.ಜಾಲಪ್ಪ, ಕೆ.ಹೆಚ್.ಮುನಿಯಪ್ಪ, ವಿ.ಮುನಿಯಪ್ಪರವರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರ ಸಹಕಾರದೊಂದಿಗೆ ಅಂದಿನ ಶಾಸಕ ಎನ್.ಸಂಪಂಗಿರವರ ಹೋರಾಟದ ಪ್ರತಿಫಲದಿಂದ ಬಾಗೇ ಪಲ್ಲಿಯ ಪರಗೋಡು ಗ್ರಾಮದ ಬಳಿ ಚಿತ್ರಾವತಿ ಅಣೆಕಟ್ಟು ನಿರ್ಮಾಣಗೊಂಡಿರುವ ವಿಷಯ ಕ್ಷೇತ್ರದ ಎಲ್ಲರಿಗೂ ತಿಳಿದಂತಹ ಸತ್ಯದ ವಿಚಾರವಾಗಿದೆ.

ಎನ್.ಸಂಪಂಗಿರವರ ಹೆಸರನ್ನು ಚಿತ್ರಾವತಿ ಜಲಾಶಯಕ್ಕೆ ನಾಮಕರಣ ಮಾಡಬೇಕು

ಮಾಜಿ ಶಾಸಕ ಎನ್.ಸಂಪಂಗಿಯವರ ಹೆಸರನ್ನು ಚಿತ್ರಾವತಿ ಜಲಾಶಯಕ್ಕೆ ನಾಮಕರಣ ಮಾಡಬೇಕು  ಎಂದು  ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಬಿ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

Ashok Nayak Ashok Nayak Aug 7, 2025 12:29 PM

ಬಾಗೇಪಲ್ಲಿ: ಆಂಧ್ರಪ್ರದೇಶದ ಸಂಸದರ, ಸಚಿವರ, ಶಾಸಕರ ವಿರೋಧದ ನಡುವೆಯೂ ಚಿತ್ರಾವತಿ ಅಣೆಕಟ್ಟು ನಿರ್ಮಾಣಕ್ಕೆ ಅಡಿಪಾಯ ಹಾಕಿ ಪ್ಲೋರೋಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಗೇ ಪಲ್ಲಿ, ಗುಡಿಬಂಡೆ ತಾಲೂಕು ಜನತೆಗೆ ಶುದ್ದ ಕುಡಿಯುವ ನೀರು ನೀಡಿರುವ ಮಾಜಿ ಶಾಸಕ ಎನ್.ಸಂಪಂಗಿರವರ ಹೆಸರನ್ನೆ ಚಿತ್ರಾವತಿ ಜಲಾಶಯಕ್ಕೆ ನಾಮಕರಣ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಮಾಸನಪಲ್ಲಿ ಬಿ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ಮಾಜಿ ಶಾಸಕ ಎನ್.ಸಂಪಂಗಿ ಅಭಿಮಾನಿಗಳ ಬಳಗವತಿಯಿಂದ ಪತ್ರಿಕಾಗೋಷ್ಠಿ ಅಯೋಜಿಸಿ ರಾಜ್ಯ ಸರ್ಕಾರ ಚಿತ್ರಾವತಿ ಅಣೆಕಟ್ಟು ಹೆಸರು ಬದಲಿಸುವುದಾದರೇ ಮಾಜಿ ಶಾಸಕ ಎನ್.ಸಂಪಂಗಿ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಮಾತನಾಡಿದರು.

ಇದನ್ನೂ ಓದಿ: Chikkaballapur News: ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರತಿನಿಧಿಗಳಾದ ಆರ್.ಎಲ್.ಜಾಲಪ್ಪ, ಕೆ.ಹೆಚ್.ಮುನಿಯಪ್ಪ, ವಿ.ಮುನಿಯಪ್ಪರವರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರ ಸಹಕಾರದೊಂದಿಗೆ ಅಂದಿನ ಶಾಸಕ ಎನ್.ಸಂಪಂಗಿರವರ ಹೋರಾಟದ ಪ್ರತಿಫಲದಿಂದ ಬಾಗೇ ಪಲ್ಲಿಯ ಪರಗೋಡು ಗ್ರಾಮದ ಬಳಿ ಚಿತ್ರಾವತಿ ಅಣೆಕಟ್ಟು ನಿರ್ಮಾಣಗೊಂಡಿರುವ ವಿಷಯ ಕ್ಷೇತ್ರದ ಎಲ್ಲರಿಗೂ ತಿಳಿದಂತಹ ಸತ್ಯದ ವಿಚಾರವಾಗಿದೆ. ಅದರೆ ಸಿಪಿಐ(ಎಂ)ನ ಕೆಲ ಮುಖಂಡರು ಅಣೆಕಟ್ಟು ನಿರ್ಮಾಣ ವಿಚಾರದಲ್ಲಿ ಮೂಲ ಇತಿಹಾಸವನ್ನೆ ಮರೆ ಮಾಚುವ ಕೆಲಸಕ್ಕೆ ಮುಂದಾಗಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಚಿತ್ರಾವತಿ ಅಣೆಕಟ್ಟು ನಿರ್ಮಾಣ ವಿಚಾರದಿಂದ ಹಿಡಿದು ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಕೊಡುಗೆ ಅಪಾರವಾದದ್ದು, ಅದರೆ ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಮಾಜಿ ಶಾಸಕ ಎನ್.ಸಂಪಂಗಿರವರ ಕೊಡುಗೆ ಅಷ್ಟೇ ಇದೆ ಎಂಬುದನ್ನು ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶಕ್ಕಾಗಿ ಈ ಪತ್ರಿಕಾಗೋಷ್ಠಿ ಅಯೋಜಿಸಲಾಗಿದೆ.

1998ರಲ್ಲಿ ನಮ್ಮ ನಾಯಕರಾದ ಎನ್. ಸಂಪAಗಿ ಅವರು ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾದ ಸಮಯದಲ್ಲಿ ಪ್ಲೋರೋಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಈ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ನೀಡುವ ಸಂಕಲ್ಪ ಮಾಡಿ ಭಾರತ ಸರ್ಕಾರದ ಅಂದಿನ ರಾಷ್ಟ್ರಪತಿ ಎ.ಪಿ.ಜೆ ಅಬುಲ್ದ್ ಕಲಾಂರನ್ನು ಭೇಟಿ ಮಾಡಿದ್ದಲ್ಲದೆ, ಪ್ಲೋರೋಸಿಸ್ ಸಮಸ್ಯೆಯುಳ್ಳ ಮಕ್ಕಳನ್ನು ದೆಹಲಿಗೆ ಕರೆದೊಯ್ದು ಬಾಗೇಪಲ್ಲಿ ಕ್ಷೇತ್ರದಲ್ಲಿ ತಾಂಡವಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿವರಿಸಿದರು. ಆ ಮೂಲಕ ಚಿತ್ರಾವತಿ ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ (ಎನ್‌ಒಸಿ)ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದು, ಯೋಜನೆ ಬಗ್ಗೆ ರಾಜ್ಯ ಸರ್ಕಾರದ ಸಚಿವರರೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಚಿತ್ರಾವತಿ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ಪಡೆದರು ಎಂದರು.

ಆದರೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸುವ ವೇಳೆ ಆಂಧ್ರಪ್ರದೇಶದ ಸಚಿವರು, ಸಂಸದರು, ಶಾಸಕರು ಅಣೆಕಟ್ಟು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾದರೂ ಯಾವುದೇ ಬೆದರಿಕೆಗಳಿಗೆ ಜಗ್ಗದೆ ಅಣೆಕಟ್ಟು ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಚಿತ್ರಾವತಿ ಅಣೆಕಟ್ಟು ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿರುವ ಮಾಜಿ ಶಾಸಕ ಎನ್.ಸಂಪAಗಿ ಹೆಸರನ್ನು ಅಣೆಕಟ್ಟಿಗೆ ನಾಮಕರಣ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕೆಂದು ಎನ್.ಸಂಪಂಗಿ ಅಭಿಮಾನಿ ಬಳಗದ ವತಿಯಿಂದ ಒತ್ತಾಯಿಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ನಾರಾಯಣ, ಮಾಜಿ ಶಾಸಕ ಎನ್.ಸಂಪAಗಿ ಅಭಿಮಾನಿ ಬಳಗದವರಾದ ರಾಮಚಂಧ್ರ, ಗಂಗಿರೆಡ್ಡಿ, ಕೆ.ವಿ.ರಾಧಕೃಷ್ಣ, ಲಕ್ಷ್ಮಿನಾರಾಯಣಪ್ಪ, ಚಲಪತಿ, ಕೆ.ಗಂಗಿರೆಡ್ಡಿ, ರಮೇಶ ಮತ್ತಿತರರು ಇದ್ದರು.