ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅತ್ಯಾಚಾರ ಪ್ರಕರಣ; ಆರ್‌ಸಿಬಿ ವೇಗಿ ಯಶ್ ದಯಾಳ್‌ಗೆ ಬಂಧನ ಭೀತಿ

Yash Dayal: ದಯಾಳ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸುದೇಶ್ ಬನ್ಸಾಲ್, ಅತ್ಯಾಚಾರದ ವೇಳೆ ಬಾಲಕಿ ಅಪ್ರಾಪ್ತ ವಯಸ್ಕರಾಗಿದ್ದ ಕಾರಣ, ಈ ಹಂತದಲ್ಲಿ ಕ್ರಿಕೆಟಿಗನಿಗೆ ಬಂಧನದಿಂದ ಯಾವುದೇ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ. ನ್ಯಾಯಾಲಯವು ನಗರ ಪೊಲೀಸರಿಂದ ಪ್ರಕರಣದ ದಿನಚರಿಯನ್ನು ತರಿಸಿಕೊಂಡು ಆಗಸ್ಟ್ 22 ರಂದು ಪ್ರಕರಣದ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

ಅತ್ಯಾಚಾರ ಪ್ರಕರಣ; ಆರ್‌ಸಿಬಿ ವೇಗಿ ಯಶ್ ದಯಾಳ್‌ಗೆ ಬಂಧನ ಭೀತಿ

Abhilash BC Abhilash BC Aug 7, 2025 2:31 PM

ಜೈಪುರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ(Dayal in rape case) ಎಸಗಿದ ಆರೋಪ ಎದುರಿಸುತ್ತಿರುವ 27 ವರ್ಷದ ಕ್ರಿಕೆಟಿಗ ಯಶ್ ದಯಾಳ್(Yash Dayal) ಅವರ ಬಂಧನಕ್ಕೆ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ರಾಜಸ್ತಾನ ಹೈಕೋರ್ಟ್​ ವಜಾಗೊಳಿಸಿದೆ. ಇದರಿಂದ ದಯಾಳ್‌ಗೆ ಬಂಧನ ಭೀತಿ ಎದುರಾಗಿದೆ. ಪ್ರಕರಣದಲ್ಲಿ ಅವರ ಬಂಧನಕ್ಕೆ ತಡೆ ನೀಡಲು ಅಥವಾ ಪೊಲೀಸ್ ವಿಚಾರಣೆಯನ್ನು ನಿಲ್ಲಿಸಲು ನ್ಯಾಯಾಲಯ ನಿರಾಕರಿಸಿದೆ.

ದಯಾಳ್ ಅವರ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸುದೇಶ್ ಬನ್ಸಾಲ್, ಅತ್ಯಾಚಾರದ ವೇಳೆ ಬಾಲಕಿ ಅಪ್ರಾಪ್ತ ವಯಸ್ಕರಾಗಿದ್ದ ಕಾರಣ, ಈ ಹಂತದಲ್ಲಿ ಕ್ರಿಕೆಟಿಗನಿಗೆ ಬಂಧನದಿಂದ ಯಾವುದೇ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ. ನ್ಯಾಯಾಲಯವು ನಗರ ಪೊಲೀಸರಿಂದ ಪ್ರಕರಣದ ದಿನಚರಿಯನ್ನು ತರಿಸಿಕೊಂಡು ಆಗಸ್ಟ್ 22 ರಂದು ಪ್ರಕರಣದ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

ವಿಚಾರಣೆಯ ಸಮಯದಲ್ಲಿ, ದಯಾಳ್ ಪರ ವಕೀಲ ಕುನಾಲ್ ಜೈಮನ್, ಗಾಜಿಯಾಬಾದ್‌ನಲ್ಲಿ ದಯಾಳ್‌ ವಿರುದ್ಧ ದಾಖಲಾದ ಮತ್ತೊಂದು ಪ್ರಕರಣದಲ್ಲಿ, ಅಲಹಾಬಾದ್ ಹೈಕೋರ್ಟ್ ನೀಡಿದ ತಡೆಯಾಜ್ಞೆಯನ್ನು ಉಲ್ಲೇಖಿಸಿದರು. ಆದರೆ ನ್ಯಾಯಮೂರ್ತಿ ಸುದೇಶ್ ಬನ್ಸಾಲ್ ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ.

ಉತ್ತರ ಪ್ರದೇಶದ ವೇಗದ ಬೌಲರ್ ಮತ್ತು ಪ್ರಸ್ತುತ ಐಪಿಎಲ್ ಚಾಂಪಿಯನ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸದಸ್ಯರಾಗಿರುವ ಯಶ್ ದಯಾಳ್, ಬಾಲಕಿ 17 ವರ್ಷದವಳಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊರಿಸಲಾಗಿತ್ತು. ದೂರುದಾರ ಯುವತಿಯ ವಕೀಲರ ಪ್ರಕಾರ, ಈ ಘಟನೆ ಸುಮಾರು ಎರಡು ವರ್ಷಗಳ ಹಿಂದೆ, ಆಕೆ ಅಪ್ರಾಪ್ತ ವಯಸ್ಕಳಾಗಿದ್ದಾಗ ನಡೆದಿತ್ತು. 2025ರ ಐಪಿಎಲ್ ಸಮಯದ ವೇಳೆಯೂ ದಯಾಳ್ ಬಾಲಕಿಯನ್ನು ಸೀತಾಪುರದ ಹೋಟೆಲ್‌ಗೆ ಕರೆದು ಮತ್ತೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂಗನೇರ್ ಸದರ್ ಪೊಲೀಸರು ಜುಲೈ 23 ರಂದು ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ Yash Dayal: ಆರ್‌ಸಿಬಿ ವೇಗಿ ಯಶ್ ದಯಾಳ್ ಮೇಲೆ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ