Demand for Fish: ಮೀನು, ಮಟನ್ ಗೆ ಬೇಡಿಕೆ
ಕೋಳಿ, ಮಟನ್ ಸಹವಾಸವೇ ಬೇಡ ಎಂದು ಮೀನು ಸೇವಿಸುವತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೀಗಾಗಿ ಮೀನಿನ ಬೆಲೆ ದಿಢೀರ್ ಏರಿಕೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಮೀನಿನ ಬೆಲೆ ಶೇ.30 ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಿರುವುದು ಮೊದಲ ಕಾರಣವಾದರೆ, ಮೀನುಗಾರಿಕೆ ಕುಸಿತ ಕಂಡಿರುವುದು ಪ್ರಮುಖ ಇನ್ನೊಂದು ಕಾರಣವಾಗಿದೆ.


ಹೂವಪ್ಪ ಐ. ಹೆಚ್ ಬೆಂಗಳೂರು
ಬೇಡಿಕೆಗೆ ತಕ್ಕಷ್ಟು ಮೀನು ಪೂರೈಕೆ ಇಲ್ಲ
ಮೊಟ್ಟೆ, ಚಿಕನ್ ಬೇಡಿಕೆ ಕುಸಿತ
ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಕಾಡುತ್ತಿದೆ. ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ದಲ್ಲಿ ಹಕ್ಕಿ ಜ್ವರ ಭೀತಿ ಇನ್ನೂ ದೂರವಾಗಿಲ್ಲ. ಈ ಹಿನ್ನೆಲೆಯಲ್ಲಿ ದಿನದಿಂದಲೇ ಕೋಳಿ ಮಾಂಸಕ್ಕೆ ಮತ್ತು ಮೊಟ್ಟೆಗೆ ಬೇಡಿಕೆ ಕುಸಿದಿದೆ. ರೆಸ್ಟೋರೆಂಟ್‌ಗಳಲ್ಲದೆ ಮನೆಗಳಲ್ಲೂ ಚಿಕನ್ ತಯಾರಿಸುವವರ ಸಂಖ್ಯೆ ಕಡಿಮೆಯಾಗಿದೆ. ಅತ್ತ ಕೋಳಿ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ಇತ್ತ ಮಟನ್ ಗೆ ಬೇಡಿಕೆ ಹೆಚ್ಚಳವಾಗಿದೆ. ಕುರಿ-ಮೇಕೆ ಮಾಂಸದ ಬೆಲೆ ರು. 750 ಇದ್ದ ದರ ಈಗ ರು.800 ರೂ. ಗಡಿ ದಾಟಿದ್ದು, ತುಸು ದುಬಾರಿಯಾಗಿದೆ.
ಮೀನಿಗೆ ಬೇಡಿಕೆ: ಕೋಳಿ, ಮಟನ್ ಸಹವಾಸವೇ ಬೇಡ ಎಂದು ಮೀನು ಸೇವಿಸುವತ್ತ ತಮ್ಮ ಚಿತ್ತ ಹರಿಸಿದ್ದಾರೆ. ಹೀಗಾಗಿ ಮೀನಿನ ಬೆಲೆ ದಿಢೀರ್ ಏರಿಕೆಗೆ ಕಾರಣವಾಗಿದೆ. ಬೆಂಗ ಳೂರಿನಲ್ಲಿ ಮೀನಿನ ಬೆಲೆ ಶೇ.30ರಷ್ಟು ಹೆಚ್ಚಳವಾಗಿದೆ. ಬೇಡಿಕೆ ಹೆಚ್ಚಿರುವುದು ಮೊದಲ ಕಾರಣ ವಾದರೆ, ಮೀನುಗಾರಿಕೆ ಕುಸಿತ ಕಂಡಿರುವುದು ಪ್ರಮುಖ ಇನ್ನೊಂದು ಕಾರಣವಾಗಿದೆ.
ಇದನ್ನೂ ಓದಿ: Super Market Tricks: ಸೂಪರ್ ಮಾರ್ಕೆಟ್‌ನಲ್ಲಿ ಹಾಲು, ಮೊಟ್ಟೆ, ಬ್ರೆಡ್ ಯಾಕೆ ಹಿಂಭಾಗದಲ್ಲಿ ಇಡಲಾಗುತ್ತದೆ?
ಬೇಡಿಕೆಗೆ ತಕ್ಕಷ್ಟು ಮೀನು ಪೂರೈಕೆ ಆಗದಿರುವುದರಿಂದ ಮೀನಿನ ಬೆಲೆ ಹೆಚ್ಚಳಕ್ಕೆ ಇದು ಕೂಡಾ ಕಾರಣವಾಗಿದೆ ಎನ್ನುತ್ತಾರೆ ಶಿವಾಜಿನಗರ ರಸಲ್ ಮಾರುಕಟ್ಟೆ ಮೀನು ವ್ಯಾಪಾರಿ ಕರೀಂ ಸಬ್.
ಬೆಂಗಳೂರಿನಲ್ಲಿ ರಸೆಲ್ ಮಾರುಕಟ್ಟೆ ಮತ್ತು ಕೆ. ಆರ್. ಮಾರುಕಟ್ಟೆ ಪ್ರಮುಖ ಮೀನು ಮಾರಾಟದ ಮಾರುಕಟ್ಟೆಯಾಗಿದ್ದು, ಇಲ್ಲಿಗೆ ಕಳೆದ ಒಂದು ವಾರದಿಂದ ಮೀನು ಸರಬ ರಾಜು ಕಡಿಮೆಯಾಗಿದೆ. ಈ ಮಾರುಕಟ್ಟೆಗೆ ಮಂಗಳೂರು ಮಾತ್ರವಲ್ಲದೆ ಕೇರಳ, ತಮಿಳು ನಾಡು ಮತ್ತು ಆಂಧ್ರಪ್ರದೇಶದಿಂದಲೂ ಮೀನು ಪೂರೈಕೆಯಾಗುತ್ತಿತ್ತು. ಆದರೆ ಇದೀಗ ಸರಬರಾಜಿನಲ್ಲಿ ಕುಂಠಿತವಾಗಿದೆ.
ಬೇಸಿಗೆ ಹೆಚ್ಚಾಗಿರುವ ಮತ್ತು ಈ ವರ್ಷ ತಾಪಮಾನ ಹೆಚ್ಚಿರುವುದರಿಂದ ಮೀನುಗಾರಿಕೆಗೆ ಹೊಡೆತ ಬಿದ್ದಿದೆ, ಹಾಗಾಗಿ ಮೀನು ಬೆಲೆ ಏರುತ್ತಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗು ತ್ತಿಲ್ಲ ಎಂದು ಮಾರಾಟಗಾರರೊಬ್ಬರು ಹೇಳುತ್ತಾರೆ. ಇನ್ನು ಮೊಟ್ಟೆಗಳ ದಾಸ್ತಾನು ಮಾರು ಕಟ್ಟೆಯಲ್ಲಿ ಲಭ್ಯವಿದ್ದು, ಹಕ್ಕಿ ಜ್ವರ ಆತಂಕದಿಂದ ಜನ ಸೇವನೆಗೆ ಹಿಂದೇಟು ಹಾಕುತ್ತಿ ದ್ದಾರೆ. ಜತೆಗೆ ಬೇಸಿಗೆ ಆರಂಭವಾಗಿದ್ದು, ಜನ ಉಷ್ಣ ಎಂದು ಸೇವನೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಅಲ್ಲದೇ, ತಾಪಮಾನ ಹೆಚ್ಚಿರುವುದರಿಂದ ಮೊಟ್ಟೆ ಬೇಗ ಕೆಟ್ಟು ಹೋಗುತ್ತವೆ. ಹೀಗಾಗಿ, ದಾಸ್ತನು ಇಡಲು ಆಗುವುದಿಲ್ಲ ಮೊಟ್ಟೆ ದರ ಇಳಿಕೆಯಾಗಿದೆ ಎನ್ನುಲಾಗುತ್ತಿದೆ.
ಮೊಟ್ಟೆ ಎಷ್ಟು ಇಳಿಕೆ: ಮೊಟ್ಟೆ ದರವು ಹೋಲ್‌ಸೇಲ್ ದರ ಮಳಿಗೆಯಲ್ಲಿ 4.35 ರು. ಇದೆ. 12 ಕ್ಕೆ 60 ರು ಆದರೆ, ಸಾಮಾನ್ಯ ಅಂಗಡಿಗಳಲ್ಲಿ 5. ರು. ನಿಂದ 5.50 ರು.ಇದೆ. ಇನ್ನು ಜನವರಿಯಲ್ಲಿ 6.50 7 ರು.ಇದ್ದ ಮೊಟ್ಟೆ ದರ ಸದ್ಯ ಹೆಚ್ಚು ಕಡಿಮೆಯಾಗಿರುವುದು ನಿತ್ಯ ಮೊಟ್ಟೆ ಸೇವಿಸುವವರಿಗೆ ಸಮಾಧಾನ ತಂದಿದೆ.