ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Super Market Tricks: ಸೂಪರ್‌ ಮಾರ್ಕೆಟ್‌ನಲ್ಲಿ ಹಾಲು, ಮೊಟ್ಟೆ, ಬ್ರೆಡ್ ಯಾಕೆ ಹಿಂಭಾಗದಲ್ಲಿ ಇಡಲಾಗುತ್ತದೆ?

Super Market Tricks: ನೀವು ದೊಡ್ಡ ಸೂಪರ್‌ಮಾರ್ಕೆಟ್‌ನಲ್ಲಿ ಶಾಪಿಂಗ್ ಮಾಡಿದ್ದರೆ, ಹಾಲು, ಮೊಟ್ಟೆ ಮತ್ತು ಬ್ರೆಡ್‍ನಂತಹ ಬೇಗ ಹಾಳಾಗುವ ವಸ್ತುಗಳನ್ನು ಹೆಚ್ಚಾಗಿ ಅಂಗಡಿಯ ಹಿಂಭಾಗದಲ್ಲಿ ಇರಿಸಲಾಗುತ್ತದೆ. ಗ್ರಾಹಕರು ಅವುಗಳನ್ನು ಸುಲಭವಾಗಿ ತೆಗೆದುಕೊಳ್ಳಬಹುದಾದ ಪ್ರವೇಶದ್ವಾರದಲ್ಲಿ ಅವುಗಳನ್ನು ಇಡುವುದಿಲ್ಲ. ಇದು ಯಾಕೆ ಎಂಬ ವಿವರ ಇಲ್ಲಿದೆ.

ಸೂಪರ್‌ ಮಾರ್ಕೆಟ್‌ನಲ್ಲಿ ಹಾಲು, ಮೊಟ್ಟೆ, ಬ್ರೆಡ್‍ ಎಲ್ಲಿರುತ್ತೆ ಗೊತ್ತೆ?

Profile pavithra Mar 16, 2025 7:00 AM

ಬೆಂಗಳೂರು: ಇಂದಿನ ದಿನಗಳಲ್ಲಿ ಸೂಪರ್‌ ಮಾರ್ಕೆಟ್‌ಗಳು (Super Market Tricks) ಜನಪ್ರಿಯವಾಗುತ್ತಿದೆ. ಮನೆಗೆ ಬೇಕಾದ ಸಾಮಗ್ರಿಗಳಿಂದ ಹಿಡಿದು ತಾಜಾ ಉತ್ಪನ್ನಗಳವರೆಗೆ ಎಲ್ಲವನ್ನೂ ಒಂದೇ ಸೂರಿನಡಿಯಲ್ಲಿ ಖರೀದಿಸಬಹುದು. ಇದರಿಂದ ಬೇರೆ ಬೇರೆ ಅಂಗಡಿಗಳಿಗೆ ತಿರುಗುವ ಅವಶ್ಯಕತೆ ಇರುವುದಿಲ್ಲ. ಆದರೆ ಕೆಲವು ದೈನಂದಿನ ಬಳಕೆಯ ವಸ್ತುಗಳಾದ ಹಾಲು, ಮೊಟ್ಟೆ ಮತ್ತು ಬ್ರೆಡ್ ಅನ್ನು ಪಡೆಯಲು ನೀವು ಇಡೀ ಸೂಪರ್‌ ಮಾರ್ಕೆಟ್‌ನಲ್ಲಿ ಬಹಳ ದೂರ ನಡೆಯಬೇಕಾಗುತ್ತದೆ ಮತ್ತು ಅವುಗಳನ್ನು ಅಂಗಡಿಯ ಹಿಂಭಾಗದಲ್ಲಿ ಇರಿಸಲಾಗುತ್ತದೆ. ತಜ್ಞರ ಪ್ರಕಾರ, ಅಂಗಡಿಗಳು ಹಾಲು, ಮೊಟ್ಟೆ ಮತ್ತು ಬ್ರೆಡ್ ಅನ್ನು ಅಂಗಡಿಯ ಹಿಂಭಾಗದಲ್ಲಿ ಏಕೆ ಇಡುತ್ತವೆ ಎಂಬುದನ್ನು ವಿವರಿಸುವ ಎರಡು ಪ್ರಮುಖ ಅಂಶಗಳಿವೆ.

ಉತ್ಪನ್ನಗಳನ್ನು ತಾಜಾ ಮತ್ತು ತಂಪಾಗಿಡಲು

ಹಾಲು ಮತ್ತು ಮೊಟ್ಟೆಗಳಂತಹ ವಸ್ತುಗಳನ್ನು ಸೂಪರ್‌ ಮಾರ್ಕೆಟ್‌ನ ಹಿಂಭಾಗದಲ್ಲಿ ಇಡಲು ಪ್ರಮುಖ ಕಾರಣವೆಂದರೆ ಅವುಗಳನ್ನು ತಾಜಾವಾಗಿಡುವುದು. ಈ ವಸ್ತುಗಳು ಬೇಗ ಹಾಳಾಗುತ್ತವೆ. ಹಾಗಾಗಿ ಅವುಗಳು ಹಾಳಾಗುವುದನ್ನು ತಡೆಯಲು ಸ್ಥಿರವಾದ, ತಂಪಾದ ತಾಪಮಾನದಲ್ಲಿ ಇಡಬೇಕು. ದೊಡ್ಡ ಅಂಗಡಿಗಳಲ್ಲಿ, ಈ ವಸ್ತುಗಳಿಗೆ ಅಗತ್ಯವಿರುವ ಮಟ್ಟಕ್ಕೆ ಇಡೀ ಅಂಗಡಿಯನ್ನು ತಂಪಾಗಿಡುವುದು ದುಬಾರಿಯಾಗಬಹುದು. ಹಾಗಾಗಿ ಅಂಗಡಿಯ ಹಿಂಭಾಗದಲ್ಲಿ ಇಂತಹ ವಸ್ತುಗಳನ್ನು ಇಟ್ಟು ಆ ಪ್ರದೇಶವನ್ನು ಮಾತ್ರ ತಂಪಾಗಿಡಲಾಗುತ್ತದೆ.

ಅಲ್ಲದೇ ಎಸಿಯಿಂದ ಬರುವ ತಂಪಾದ ಗಾಳಿ ಹಿಂಭಾಗದ ಗೋಡೆಗಳ ಕಡೆಗೆ ಹೋಗುತ್ತದೆ ಮತ್ತು ಗಾಳಿಯು ರಂಧ್ರಗಳಿಂದ ಹೊರಬಂದಾಗ, ಅದು ಅಂಗಡಿಯೊಳಗೆ ಆವರಿಸುವ ಮೊದಲು ಗೋಡೆಗಳ ವಿರುದ್ಧ ನೆಲೆಗೊಳ್ಳುತ್ತದೆ. ಹಾಗಾಗಿ ಅಂಗಡಿಯ ಹಿಂಭಾಗದ ಮೂಲೆಗಳು ಸ್ವಾಭಾವಿಕವಾಗಿ ತಂಪಾಗಿರುತ್ತವೆ. ಇದು ತಂಪಾಗಿರಬೇಕಾದ ವಸ್ತುಗಳಿಗೆ ಸೂಕ್ತ ಸ್ಥಳ ಎನಿಸಿಕೊಂಡಿದೆ.

ಹೆಚ್ಚು ಖರೀದಿಸಲು ಗ್ರಾಹಕರನ್ನು ಪ್ರೋತ್ಸಾಹಿಸುವುದು

ಅಂಗಡಿಯ ಹಿಂಭಾಗದಲ್ಲಿ ಸ್ಟೇಪಲ್ ವಸ್ತುಗಳನ್ನು ಇರಿಸಲು ಮತ್ತೊಂದು ಕಾರಣವೇನೆಂದರೆ ಗ್ರಾಹಕರನ್ನು ಹೆಚ್ಚು ವಸ್ತುಗಳನ್ನು ಖರೀದಿಸಲು ಪ್ರೋತ್ಸಾಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಹೆಚ್ಚು ವಸ್ತುಗಳನ್ನು ಖರೀದಿಸುವಂತೆ ಸೂಪರ್‌ ಮಾರ್ಕೆಟ್‌ಗಳು ವಿನ್ಯಾಸಗೊಳಿಸಲಾಗುತ್ತದೆ. ಅದಕ್ಕಾಗಿ ಅನುಸರಿಸುವ ಒಂದು ಮಾರ್ಗವೆಂದರೆ ಹಾಲು, ಬ್ರೆಡ್ ಮತ್ತು ಮೊಟ್ಟೆಗಳಂತಹ ದೈನಂದಿನ ಅಗತ್ಯ ವಸ್ತುಗಳನ್ನು ಪ್ರವೇಶ ದ್ವಾರದದಿಂದ ದೂರ ಇರಿಸುವುದು.

ಗ್ರಾಹಕರು ಅಂಗಡಿಯೊಳಗೆ ಬಂದಾಗ ಕೆಲವು ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳುವತ್ತ ಗಮಹರಿಸುತ್ತಾರೆ. ಆದರೆ ಹಾಲು ಅಥವಾ ಮೊಟ್ಟೆಗಳನ್ನು ತೆಗೆದುಕೊಳ್ಳಲು ಅವರು ಅಂಗಡಿಯ ಹಿಂಭಾಗಕ್ಕೆ ಹೋಗಬೇಕು. ಹೀಗೆ ಹೋಗುವಾಗ ಅವರ ಗಮನವನ್ನು ಸೆಳೆಯುವ ಇತರ ಉತ್ಪನ್ನಗಳನ್ನು ಅವರು ಖರೀದಿಸಬಹುದು. ಗ್ರಾಹಕರು ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಅಂಗಡಿಯ ಹಿಂಭಾಗವನ್ನು ತಲುಪುವ ಹೊತ್ತಿಗೆ, ತಿಂಡಿಗಳು ಮತ್ತು ಪಾನೀಯಗಳಿಂದ ಹಿಡಿದು ಇತರ ವಸ್ತುಗಳನ್ನು ಖರೀದಿಸುತ್ತಾರೆ.

ಈ ಸುದ್ದಿಯನ್ನೂ ಓದಿ:Smart Shopping: ಸ್ಮಾರ್ಟ್ ಆಗಿ ಶಾಪಿಂಗ್ ಮಾಡಿ, ಸುರಕ್ಷಿತವಾಗಿರಿ: ಈ ರಜಾದಿನಗಳಲ್ಲಿ ನಿಮ್ಮ ಜೇಬು ರಕ್ಷಿಸಲು ವೀಸಾ ನೀಡುವ 5 ಸಲಹೆಗಳು

ಈ ತಂತ್ರವು ದಾರಿಯುದ್ದಕ್ಕೂ ಕಂಡುಬರುವ ಕೆಲವು ಹೆಚ್ಚುವರಿ ವಸ್ತುಗಳನ್ನು ಪಡೆದುಕೊಳ್ಳಲು ಗ್ರಾಹಕರನ್ನು ಪ್ರೇರೇಪಿಸುತ್ತದೆ. ಅಷ್ಟೇ ಅಲ್ಲದೇ ನೀವು ಚೆಕ್ ಔಟ್ ಕೌಂಟರ್‌ ಹೋಗುವ ಮೊದಲು ಹೆಚ್ಚಿನ ಖರೀದಿಗಳನ್ನು ಮಾಡಲು ಸೂಪರ್ ಮಾರ್ಕೆಟ್‍ಗಳು ನಿಮಗೆ ಮಾರ್ಗದರ್ಶನ ನೀಡುತ್ತವೆ.