Elgar Parishad Case: ಎಲ್ಗಾರ್ ಪರಿಷತ್ ಪ್ರಕರಣ;ರೋನಾ ವಿಲ್ಸನ್ ಮತ್ತು ಸುಧೀರ್ ಧಾವಳೆ ಜೈಲಿನಿಂದ ಬಿಡುಗಡೆ!
ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಗಳ ಪೈಕಿ ಕಾರ್ಯಕರ್ತರಾದ ರೋನಾ ವಿಲ್ಸನ್ ಮತ್ತು ಸಂಶೋಧಕ ಸುಧೀರ್ ಧಾವಳೆ ಶುಕ್ರವಾರ(ಜ.24) ಜೈಲಿನಿಂದ ಬಿಡುಗಡೆಯಾದರು. ಜನವರಿ 8 ರಂದು ಬಾಂಬೆ ಹೈಕೋರ್ಟ್ ಇಬ್ಬರಿಗೂ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್ 31, 2017 ರಂದು ಮಹಾರಾಷ್ಟ್ರದ ಪುಣೆಯಲ್ಲಿ ಎಲ್ಗಾರ್ ಪರಿಷತ್ತಿನ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಇಬ್ಬರನ್ನು 2018 ರಲ್ಲಿ ಬಂಧಿಸಲಾಗಿತ್ತು.

Elgar Parishad Case

ಮುಂಬೈ: ಎಲ್ಗಾರ್ ಪರಿಷತ್(Elgar Parishad) ಪ್ರಕರಣದ ಆರೋಪಿಗಳ ಪೈಕಿ ಕಾರ್ಯಕರ್ತರಾದ ರೋನಾ ವಿಲ್ಸನ್(Rona Wilson) ಮತ್ತು ಸಂಶೋಧಕ ಸುಧೀರ್ ಧಾವಳೆ(Sudhir Dhawale) ಇಂದು(ಜ.24) ಜೈಲಿನಿಂದ ಬಿಡುಗಡೆಯಾದರು. ಜನವರಿ 8 ರಂದು ಬಾಂಬೆ ಹೈಕೋರ್ಟ್(Bombay High Court) ಇಬ್ಬರಿಗೂ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್ 31, 2017 ರಂದು ಮಹಾರಾಷ್ಟ್ರದ ಪುಣೆಯಲ್ಲಿ ಎಲ್ಗಾರ್ ಪರಿಷತ್ತಿನ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಇಬ್ಬರನ್ನು 2018 ರಲ್ಲಿ ಬಂಧಿಸಲಾಗಿತ್ತು.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಭೀಮಾ ಕೋರೆಂಗಾವ್ ಕಾರ್ಯಕ್ರಮಕ್ಕೆ ಮಾವೋವಾದಿಗಳ ಬೆಂಬಲವಿದೆ ಎಂಬ ಆರೋಪ ಕೇಳಿ ಬಂದಿತ್ತು. ನಂತರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಗಿತ್ತು. ಪ್ರಕರಣದಲ್ಲಿ 16 ಮಂದಿಯನ್ನು ಬಂಧಿಸಲಾಗಿತ್ತು. ಆ ಪೈಕಿ ಹಲವರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ.
Activists Rona Wilson And Sudhir Dhawale walk out of Taloja jail after 6 years and 7 months of unjust incarceration.
— Safoora Zargar (@SafooraZargar) January 24, 2025
2424 days of denial of justice. pic.twitter.com/qQYQaQpnj9
ವಿಚಾರಣೆಯಿಲ್ಲದ ಜೈಲುವಾಸವು ಜೀವಿಸುವ ಹಕ್ಕಿನ ಉಲ್ಲಂಘನೆ: ಬಾಂಬೆ ಹೈಕೋರ್ಟ್!
ವಿಚಾರಣೆ ನಡೆಸದೆ ಆರೋಪಿಯ ಜೈಲುವಾಸವನ್ನು ದೀರ್ಘಕಾಲ ವಿಸ್ತರಿಸುವುದು ಜೀವಿಸುವ ಹಕ್ಕನ್ನು (ಸಂವಿಧಾನದ 21ನೇ ವಿಧಿ) ಉಲ್ಲಂಘಿಸುವುದಕ್ಕೆ ಸಮ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿತ್ತು.
2018ರ ಎಲ್ಗಾರ್ ಪರಿಷತ್ –ಮಾವೋವಾದಿ ನಂಟು ಪ್ರಕರಣದ ವಿಚಾರಣೆಯನ್ನು ಚುರುಕುಗೊಳಿಸುವಂತೆ ವಿಶೇಷ ನ್ಯಾಯಾಲಯವನ್ನು ಒತ್ತಾಯಿಸಿದ್ದ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ವಿಶೇಷ ನ್ಯಾಯಾಲಯವು ಒಂಬತ್ತು ತಿಂಗಳ ಒಳಗಾಗಿ ದೋಷಾರೋಪ ನಿಗದಿ ಮಾಡಬೇಕು. ಇದು ವಿಚಾರಣೆ ಆರಂಭದ ಮೊದಲ ಹಂತ ಎಂದು ಹೇಳಿತ್ತು.
ಈ ಸುದ್ದಿಯನ್ನೂ ಓದಿ:Murder Case: ಆಟೋ ಟಚ್ ಆಗಿದ್ದಕ್ಕೆ ಚಾಲಕನ ಮೇಲೆ ಹಲ್ಲೆ ನಡೆಸಿ ಕೊಲೆ, ನಾಲ್ವರು ಅರೆಸ್ಟ್
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಗಡ್ಕರಿ ಮತ್ತು ಕಮಲ್ ಖತಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಜ.8ರಂದು ಸಂಶೋಧಕ ರೋನಾ ವಿಲ್ಸನ್ ಮತ್ತು ಹೋರಾಟಗಾರ ಸುಧೀರ್ ಧಾವಳೆ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದೇ ಸಂದರ್ಭದಲ್ಲಿ ಇಬ್ಬರೂ ಆರೋಪಿಗಳು ಈಗಾಗಲೇ ಆರು ವರ್ಷ ಜೈಲು ವಾಸ ಅನುಭವಿಸಿದ್ದಾರೆ ಎಂದು ಉಲ್ಲೇಖಿಸಿತ್ತು.
2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದಿದ್ದ ಎಲ್ಗಾರ್ ಪರಿಷತ್ ಸಮ್ಮೇಳನದಲ್ಲಿ ಆರೋಪಿಗಳು ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದರ ಪರಿಣಾಮ ಮಾರನೇ ದಿನ ನಗರ ಹೊರವಲಯದ ಭೀಮಾ ಕೋರೆಗಾಂವ್ ಯುದ್ದ ಸ್ಮಾರಕದ ಬಳಿ ಹಿಂಸಾಚಾರ ನಡೆದಿತ್ತು ಎಂದು ಪೊಲೀಸರು ಆರೋಪಿಸಿದ್ದರು.